For Quick Alerts
  ALLOW NOTIFICATIONS  
  For Daily Alerts

  'ಹಂಬಲ್ ಪೊಲಿಟಿಷಿಯನ್'ಗೆ ವಿಮರ್ಶಕರು ಕೊಟ್ಟ ಮತ ಎಷ್ಟು?

  By Naveen
  |

  'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಸಿನಿಮಾ ನಿನ್ನೆ ರಾಜ್ಯಾದಂತ್ಯ ರಿಲೀಸ್ ಆಗಿದೆ. ಇಷ್ಟು ದಿನ ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳು ಅಂತು ಸಿನಿಮಾ ನೋಡಿದರೆ. ಕೆಲವರಿಗೆ ಸಿನಿಮಾ ಇಷ್ಟ ಆಗಿದ್ದರೆ ಇನ್ನೂ ಕೆಲವರಿಗೆ ಹಂಬಲ್ ಪೊಲಿಟಿಷಿಯನ್ ಸ್ವಲ್ಪ ಕಿರಿಕಿರಿ ಎನಿಸಿದೆ. ಈ ಸಿನಿಮಾ ರಾಜಕೀಯ ವ್ಯವಸ್ಥೆಯ ಬಗ್ಗೆ ಇದೆ. ಹಾಗಂತ ಇಲ್ಲಿ ಉಪದೇಶ ಮಾಡಿಲ್ಲ. ಇದು ಪಕ್ಕಾ ಕಾಮಿಡಿ ಸಿನಿಮಾವಾಗಿದೆ. ಡ್ಯಾನಿಶ್ ಸೇಠ್ ನೋಡಿ ಇಷ್ಟ ಪಡುವವರಿಗೆ ಸಿನಿಮಾ ಪಕ್ಕಾ ಇಷ್ಟ ಆಗುತ್ತದೆ

  ಇನ್ನು 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಸಿನಿಮಾವನ್ನು ವಿಮರ್ಶಕರು ಕೂಡ ನೋಡಿದ್ದಾರೆ. ಗಾಂಧಿನಗರದ ಸಿನಿಮಾ ಸೂತ್ರವನ್ನು ಬಿಟ್ಟು ಮಾಡಿರುವ ಈ ಸಿನಿಮಾ ನೋಡಿ ವಿಮರ್ಶಕರು ಅದರ ಸರಿ ತಪ್ಪು ಹೇಳಿದ್ದಾರೆ.

  ಅಂದಹಾಗೆ, 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಸಿನಿಮಾದ ಬಗ್ಗೆ ಕನ್ನಡದ ಜನಪ್ರಿಯ ಪ್ರತ್ರಿಕೆಗಳಲ್ಲಿ ಬಂದಿರುವ ವಿಮರ್ಶೆ ಮುಂದಿದೆ ಓದಿ...

  ನೊಗ್ ರಾಜನ ತಂತ್ರ-ಕುತಂತ್ರ : ಉದಯವಾಣಿ

  ನೊಗ್ ರಾಜನ ತಂತ್ರ-ಕುತಂತ್ರ : ಉದಯವಾಣಿ

  ''ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್‌' ಚಿತ್ರ ಹೆಸರಿಗೆ ತಕ್ಕಂತೆ ರಾಜಕೀಯ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಹೊಂದಿದೆ. ರಾಜಕೀಯ, ರಾಜಕಾರಣಿಗಳನ್ನು ವಿಡಂಬಣೆ ಮಾಡುತ್ತಾ ಸಾಗುವ ಈ ಸಿನಿಮಾದಲ್ಲಿ ನಿಮಗೆ ಮನರಂಜನೆಗೇನೂ ಕೊರತೆಯಿಲ್ಲ. ಇಡೀ ಸಿನಿಮಾವನ್ನು ಕಾಮಿಡಿ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಮೂಲಕ ಸಿಕ್ಕಾಪಟ್ಟೆ ಸೀರಿಯಸ್ ಸಿನಿಮಾ ಎಂಬ ಮಾತಿನಿಂದ ನೊಗ್ ರಾಜ್‌ನನ್ನು ಮುಕ್ತವಾಗಿಸಿದ್ದಾರೆ. ಈಗಾಗಲೇ ರಾಜಕೀಯ, ಭ್ರಷ್ಟ ರಾಜಕಾರಣಿಗಳನ್ನು ವಿಡಂಬಣೆ ಮಾಡುವ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಆದರೆ, "ನೊಗ್ ರಾಜ್‌'ನ ಕಥೆಯಲ್ಲಿ ರಾಜಕೀಯ ವಿಡಂಬಣೆ ಇದ್ದರೂ ನಿರ್ದೇಶಕರು ಅದನ್ನು ತಮ್ಮದೇ ಶೈಲಿಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಆ ಮಟ್ಟಿಗೆ ಇದು ಹೊಸ ಪ್ರಯತ್ನ ಎನ್ನಬಹುದು. ಚಿತ್ರದಲ್ಲಿ ಒಂದಷ್ಟು ದೃಶ್ಯಗಳಿಗೆ ಕತ್ತರಿ, ಹಾಕಿ ಟ್ರಿಮ್ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಚಿತ್ರದ ಸಂಭಾಷಣೆ ಚುರುಕಾಗಿದೆ. ನೊಗ್ ರಾಜ್‌ ಮ್ಯಾನರಿಸಂಗೆ ಆ ಸಂಭಾಷಣೆ ಹೊಂದಿಕೊಂಡಿದೆ. ನೊಗ್ ‌ರಾಜ್‌ ಪಾತ್ರವನ್ನು ಅವರು ಅಕ್ಷರಶಃ ಜೀವಿಸಿದ್ದಾರೆ. ಅವರ ಮಾತಿನ ಶೈಲಿ, ಮ್ಯಾನರಿಸಂ ಎಲ್ಲವೂ ಪಾತ್ರಕ್ಕೆ ಹೊಂದಿಕೊಂಡಿದೆ.'' - ರವಿಪ್ರಕಾಶ್ ರೈ.

  ಹಂಬಲ್ ಅಷ್ಟೇ ಅಲ್ಲ, ಎಂಟರ್‌ಟೇನರ್ ಕೂಡ : ವಿಜಯ ಕರ್ನಾಟಕ

  ಹಂಬಲ್ ಅಷ್ಟೇ ಅಲ್ಲ, ಎಂಟರ್‌ಟೇನರ್ ಕೂಡ : ವಿಜಯ ಕರ್ನಾಟಕ

  ''ಹಾಯ್‌ ಯಂಗ್ ಲೇಡಿ. ನಂಗೆ ವೋಟ್ ಮಾಡಿ .. ಇಂಥ ಡೈಲಾಗ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಹವಾ ಎಬ್ಬಿಸಿದ್ದ ಹಂಬಲ್ ಪೊಲಿಟಿಷಿಯನ್ ಈ ವಾರ ರಂಜಿಸಲು ಥಿಯೇಟರ್‌ಗಳಿಗೆ ಬಂದಿದ್ದಾನೆ. ಸಿನಿಮಾ ಮೂಲಕ ಸಂದೇಶ ಹೇಳಿದರೆ ಜನ ಸ್ವಲ್ಪ ಫಾಸ್ಟಾಗಿ ರಿಸೀವ್ ಮಾಡಿಕೊಳ್ಳುತ್ತಾರೆ ಎಂಬ ಮಾತಿದೆ. ಅದು ಹಂಬಲ್ ಪೊಲಿಟಿಷಿಯನ್ ನೊಗರಾಜ್ ಚಿತ್ರದಲ್ಲಿ ವರ್ಕ್‌ ಆಗಿದೆ. ನೊಗರಾಜ್ ಎಂಬ ಪರಮ ಭ್ರಷ್ಟ ಪಾಲಿಕೆ ಸದಸ್ಯನೊಬ್ಬ ಶಾಸಕನಾಗಲು ಮಾಡುವ ಸ್ಕ್ಯಾಮ್ ಗಳೇ ಈ ಚಿತ್ರದ ಜೀವಾಳ. ರಾಜಕಾರಣಿಗಳು ಹೇಗೆ ಹಗರಣಗಳನ್ನು ಮಾಡುತ್ತಾರೆ? ಅದರಿಂದ ಹೇಗೆ ಹಣ ಗಳಿಸುತ್ತಾರೆ? ಎಂಬುದನ್ನು ಇಲ್ಲಿ ಸಿಂಪಲ್‌ ಆಗಿ ತೋರಿಸಲಾಗಿದೆ. ದಾನಿಶ್ ಸೇಠ್ ತಮ್ಮ ಚಿತ್ರ-ವಿಚಿತ್ರ ಮ್ಯಾನರಿಸಂಗಳಿಂದ ನಗಿಸುತ್ತಾರೆ. ಇಡೀ ಚಿತ್ರದಲ್ಲಿ ಜನರನ್ನು ನಗಿಸುತ್ತಲೇ ದಾನಿಶ್ ಕೊನೆಯಲ್ಲಿ ಒಳ್ಳೆ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ. ಇಡೀ ಸಿನಿಮಾವನ್ನು ದಾನಿಶ್ ತಮ್ಮ ಹೆಗಲ ಮೇಲೆ ಹೊತ್ತು ಜನರನ್ನು ತಮ್ಮ ಮಾತು ಹಾಗೂ ಆಂಗಿಕ ಅಭಿನಯದಿಂದ ಕಟ್ಟಿ ಹಾಕುತ್ತಾರೆ. ಮನರಂಜನೆ ಬೇಕು ಎನ್ನುವ ಪ್ರೇಕ್ಷಕರಿಗೆ ನೊಗರಾಜ್ ಟಾನಿಕ್ ನಂತಿದೆ.'' - ಹರೀಶ್ ಬಸವರಾಜ್

  ವಿಮರ್ಶೆ : 'ಸ್ಕ್ಯಾಮ್ ರಾಜ'ನ ಆಟ ಸಿಕ್ಕಾಪಟ್ಟೆ ಮಜಾ.. ಸ್ವಲ್ಪ ಕಿರಿಕಿರಿ..ವಿಮರ್ಶೆ : 'ಸ್ಕ್ಯಾಮ್ ರಾಜ'ನ ಆಟ ಸಿಕ್ಕಾಪಟ್ಟೆ ಮಜಾ.. ಸ್ವಲ್ಪ ಕಿರಿಕಿರಿ..

  ಪರಮಧೂರ್ತನ ಹುಸಿವಿನಯದ ಮೂಲಕ ರಾಜಕೀಯ ಸಂದೇಶ - ಕನ್ನಡಪ್ರಭ

  ಪರಮಧೂರ್ತನ ಹುಸಿವಿನಯದ ಮೂಲಕ ರಾಜಕೀಯ ಸಂದೇಶ - ಕನ್ನಡಪ್ರಭ

  ''ಮೇಕ್ ಮನಿ ಶೇರ್ ಮನಿ ಇದು ಹಂಬಲ್ ಪೊಲಿಟಿಷಿಯನ್ ಸ್ಟ್ರಾಟಜಿ. ಸಿನಿಮಾವನ್ನು ಕಟ್ಟಿಕೊಡುವ ಕ್ರಿಯೆಯಲ್ಲಿ ರಾಜಕೀಯ ವಿಡಂಬನೆಯೂ ಒಂದು ಸೂತ್ರ. ಅಲ್ಲಿ ಭೋದನೆಗಿಂತ ವ್ಯಂಗ್ಯ, ತಮಾಷೆ, ಹರಟೆ, ತರಾಟೆಯೇ ಅದರ ಪ್ರಮುಖ ಧಾರೆ. ಅಂತಹದ್ದೇ ಒಂದು ಸಿನಿಮಾ ಹಂಬಲ್ ಪೊಲಿಟಿಷಿಯನ್ ನೊಗರಾಜ್. ನೋಡುಗನಿಗೆ ಆಗಾಗ ನಗು ತರಿಸುವ ನೊಗರಾಜ್ ಭಾಷೆ, ವಕ್ರ ವಕ್ರ ಶೈಲಿ, ತುಂಟಾಟ ಇಂಗ್ಲೀಷ್ ಕನ್ನಡ ಎರಡು ಬಲ್ಲವರಿಗೆ ಕಚಗುಳಿ ಇಡುತ್ತೆ. ಆ ಮಟ್ಟಿಗೆ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಹೆಸರಿಗೆ ತಕ್ಕಂತೆ ಅರ್ಬನ್ ಆಡಿಯನ್ಸ್ ವಿದೂಷಕ.'' - ದೇಶಾದ್ರಿ ಹೊಸ್ಮನೆ

  ಟ್ವಿಟ್ಟರ್ ವಿಮರ್ಶೆ: 'ಹಂಬಲ್ ಪೊಲಿಟಿಷಿಯನ್' ನೋಡಿದ ಜನ ಫುಲ್ ಖುಷ್ಟ್ವಿಟ್ಟರ್ ವಿಮರ್ಶೆ: 'ಹಂಬಲ್ ಪೊಲಿಟಿಷಿಯನ್' ನೋಡಿದ ಜನ ಫುಲ್ ಖುಷ್

  Nograj good for voters, right in time for polls - The New Indian Express

  Nograj good for voters, right in time for polls - The New Indian Express

  A Kanglish film, which is weaved as a political satire, involves a Corporator, Nograj (Danish Sait), who often insists that he is addressed as ‘humble'. Saad Khan brings a series of gags involving Danish Sait, without making it boring, through his political satire, and keeping character Nograj in forefront. His approach to spread awareness amongst people, and decide on who they choose as their leader is commendable.

  Danish Sait never fails to draw the audience, irrespective of where and how he plans to entertain. What is appealing is that he remains true to the character of Nograj - a sketch people have always adored. Here is an actor with whom one can find humour in the midst of serious issues, and he tackles it very well. His dialogues are inventive and his some of his signature Kanglish words sounds fresh, irrespective how many ever times, he repeats. - A. Sharadhaa

  English summary
  Read Actor Danish Sait starrer kannada movie 'Humble Politician Nograj' critics review. The movie is a decent comedy entertainer and it revolves around a corrupt politician.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X