I Love You Review : ಒಂದೇ ಒಂದು ಸಂದೇಶ, ಬಾಕಿ ಏನಿಲ್ಲ ವಿಶೇಷ

''ಲವರ್ ಗಿಂತ ಹೆಂಡತಿ ಮುಖ್ಯ.. ನಾವು ಪ್ರೀತಿಸೋ ಲವರ್ ಗೆ ಐ ಲವ್ ಯೂ ಹೇಳುವ ಬದಲು, ನಮ್ಮನ್ನು ಪ್ರೀತಿಸೋ ಹೆಂಡತಿಗೆ ಐ ಲವ್ ಯೂ ಹೇಳಬೇಕು'' ಇದು ಐ ಲವ್ ಯು ಸಿನಿಮಾದಲ್ಲಿ ಸಿಗುವ ಸಂದೇಶ. ಈ ಸಂದೇಶವೆನೋ ಉತ್ತಮವಾಗಿದೆ. ಆದರೆ, ಈ ಒಂದು ಮೇಸೆಜ್ ಕೇಳಲು 2 ಗಂಟೆ 2 ನಿಮಿಷ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಕಷ್ಟಪಟ್ಟು ಕೂರಬೇಕು.

Rating:
2.5/5
Star Cast: ಉಪೇಂದ್ರ, ರಚಿತಾ ರಾಮ್, ಸೋನು ಗೌಡ
Director: ಆರ್ ಚಂದ್ರು

ಎ + ಉಪೇಂದ್ರ = ಐ ಲವ್ ಯು

ಎ + ಉಪೇಂದ್ರ = ಐ ಲವ್ ಯು

'ಎ + ಉಪೇಂದ್ರ = ಐ ಲವ್ ಯು ಎಂದು' ಪೋಸ್ಟರ್ ನಲ್ಲಿ ನಿರ್ದೇಶಕ ಚಂದ್ರು ಹಾಕಿದ್ದರು. ಅದೇ ರೀತಿಯೇ ಸಿನಿಮಾ 'ಎ' ಮತ್ತು 'ಉಪೇಂದ್ರ' ಸಿನಿಮಾಗಳ ಮಿಶ್ರಣ. ಸಿನಿಮಾ ನೋಡುತ್ತಿದ್ದರೆ, ಉಪೇಂದ್ರ ಅವರ ಹಿಂದಿನ ಸಿನಿಮಾಗಳು ಬಂದು ಹೋಗುತ್ತದೆ. ಉಪ್ಪಿಯ ಹಳೆಯ ಚಿತ್ರಗಳ ಕಥೆಯನ್ನು ಮಿಕ್ಸ್ ಮಾಡಿ, ಅವರಿಗೇ ಕಥೆ ಹೇಳಿ, ಸಿನಿಮಾ ಮಾಡುವುದರಲ್ಲಿ ಚಂದ್ರು ಯಶಸ್ವಿಯಾಗಿದ್ದಾರೆ.

ರಿಯಲ್ ಪ್ರೇಮ ಪಾಠ ಮಾಡಲು ಹೊರಡುವ ಸಂತೋಷ್

ರಿಯಲ್ ಪ್ರೇಮ ಪಾಠ ಮಾಡಲು ಹೊರಡುವ ಸಂತೋಷ್

ಪ್ರೀತಿ, ಪ್ರೇಮ ಪುಸ್ತಕದ ಬದನೇಕಾಯಿ ಎನ್ನುವ ಸಂತೋಷ್ (ಉಪೇಂದ್ರ) ಒಂದು ಕಡೆ. ಪ್ರೀತಿಯನ್ನು ಅರ್ಥ ಮಾಡಿಕೊಂಡು ಅದರ ಮೇಲೆ ಪಿ ಹೆಚ್ ಡಿ ಪಡೆಯಬೇಕು ಎನ್ನುವ ಧಾರ್ಮಿಕಾ (ರಚಿತಾ ರಾಮ್) ಮತ್ತೊಂದು ಕಡೆ. ಪ್ರೀತಿಗೆ ವಿಭಿನ್ನ ವ್ಯಾಖ್ಯಾನ ನೀಡುವ ಸಂತೋಷ್ ನನ್ನು ಧಾರ್ಮಿಕಾ ಪರಿಚಯ ಮಾಡಿಕೊಂಡು ಅವನಿಂದ ಪ್ರೀತಿಯ ಅರ್ಥ ತಿಳಿದುಕೊಳ್ಳಲು ಮುಂದಾಗುತ್ತಾಳೆ. ಇಲ್ಲಿಂದ ಇವರಿಬ್ಬರ ಕಥೆ ಶುರು ಆಗುತ್ತದೆ.

ಪಾಠ ಮಾಡಲು ಹೋದವನೇ ಪಾಠ ಕಲಿಯುತ್ತಾನೆ

ಪಾಠ ಮಾಡಲು ಹೋದವನೇ ಪಾಠ ಕಲಿಯುತ್ತಾನೆ

ಧಾರ್ಮಿಕಾಗೆ ಪ್ರೀತಿ ಪಾಠ ಮಾಡಲು ಹೋಗುವ ಸಂತೋಷ್ ತಾನೇ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ, ಧಾರ್ಮಿಕಾ ಆತನಿಗೆ ಕೈ ಕೊಡುತ್ತಾಳೆ. ಪಾಠ ಮಾಡಲು ಬಂದವನೇ ಪಾಠ ಕಲಿಯುತ್ತಾನೆ. ಲವ್ ಗಿಂತ ಲೈಫ್ ಹೆಚ್ಚು ಎಂದು ದೊಡ್ಡ ಶ್ರೀಮಂತ ಆಗುತ್ತಾನೆ. ಬೇರೆ ಮದುವೆ ಆಗುತ್ತಾನೆ. ಆದರೆ, ಆತ ಸಂತೋಷವಾಗಿ ಇರಲ್ಲ. ಹೀಗಿರುವಾಗ ಆತನಿಗೆ ಮತ್ತೆ ತನ್ನ ಲವರ್ ಅನ್ನು ಭೇಟಿ ಮಾಡುವ ಸಂದರ್ಭ ಬರುತ್ತದೆ. ಆಗ ಏನಾಗುತ್ತದೆ?, ಯಾಕೆ ಆತನ ಲೈಫ್ ಗೆ ಆಕೆ ಮತ್ತೆ ಎಂಟ್ರಿ ಕೊಡುತ್ತಾಳೆ ಎನ್ನುವುದಕ್ಕೆ ಉತ್ತರ ಚಿತ್ರದಲ್ಲಿದೆ.

ಉಪೇಂದ್ರ, ರಚಿತಾ, ಇತರರು

ಉಪೇಂದ್ರ, ರಚಿತಾ, ಇತರರು

ಉಪೇಂದ್ರ ಸಿನಿಮಾದಲ್ಲಿ ಲುಕ್ ಇಷ್ಟ ಆಗುತ್ತದೆ. ಇದು ಪಕ್ಕಾ ಅವರ ಸ್ಟೈಲ್ ಸಿನಿಮಾ. ಕೆಲವು ದೃಶ್ಯಗಳು, ಪಂಚಿಂಗ್ ಡೈಲಾಗ್ ಗಳು ಚೆನ್ನಾಗಿದೆ. ಇಡೀ ಚಿತ್ರದಲ್ಲಿ ಗೌರಮ್ಮನಾಗಿರುವ ರಚಿತಾ ಒಂದು ಹಾಡಿನಲ್ಲಿ ಗ್ಲಾಮರ್ ತೋರಿಸಿದ್ದಾರೆ. ಸೋನು ಗೌಡ ಉಪ್ಪಿ ಹೆಂಡತಿ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಹೊನ್ನವಳ್ಳಿ ಕೃಷ್ಣ, ಪಿಡಿ ಸತೀಶ್ ಹೀಗೆ ಎಲ್ಲ ಪಾತ್ರಗಳ ನಟನೆ ಸಿನಿಮಾದ ಉತ್ತಮವಾಗಿವೆ.

ಅರ್ಥವಿಲ್ಲದ ಫೈಟ್ ಗಳು, ಅಂದವಿಲ್ಲದ ಹಾಡುಗಳು

ಅರ್ಥವಿಲ್ಲದ ಫೈಟ್ ಗಳು, ಅಂದವಿಲ್ಲದ ಹಾಡುಗಳು

ಚಿತ್ರದಲ್ಲಿ ಮೂರು ಫೈಟ್ ಗಳು ಇವೆ, ಅದು ಯಾಕೆ ಬರುತ್ತದೆ ಅಂತಲೇ ಅರ್ಥ ಆಗಲ್ಲ. ಮೂರನೇ ಫೈಟ್ ಅಂತು ದೇವರಿಗೆ ಗೊತ್ತು. ರೌಡಿಗಳು ಹುಡುಗಿಯನ್ನು ರೇಗಿಸುವುದು.. ಹೀರೋ ಬಂದು ಫೈಟ್ ಮಾಡುವುದು ಇದೆಲ್ಲ ಎಷ್ಟು ಸಿನಿಮಾದಲ್ಲಿ ನೋಡಿಲ್ಲ. ಇನ್ನು ಹಾಡುಗಳಾದರೂ ಚೆನ್ನಾಗಿ ಇದೆಯೇ..? ಅಲ್ಲೂ ಕೂಡ ನಿರಾಸೆ.

ಸಿನಿಮಾ ಮೇಲೆ ಏಳುವುದೇ ಇಲ್ಲ

ಸಿನಿಮಾ ಮೇಲೆ ಏಳುವುದೇ ಇಲ್ಲ

ಸಿನಿಮಾ ಶುರುವಾಗಿ ಅರ್ಥ ಗಂಟೆ ಆಗುತ್ತೆ.. ಒಂದು ಗಂಟೆ ಆಗುತ್ತೆ... ಸಿನಿಮಾ ಮೇಲೆ ಏಳುವುದೇ ಇಲ್ಲ. ಪ್ರೀತಿ, ಪ್ರೇಮ ಇದೆಲ್ಲ ಸುಳ್ಳು ಎನ್ನುವ ಸಂತೋಷ್ ಇದ್ದಕ್ಕಿದ್ದ ಹಾಗೆ ಬದಲಾಗುವುದು ಸೇರಿದಂತೆ ಅನೇಕ ದೃಶ್ಯಗಳು ಅಷ್ಟೊಂದು ಸುಲಭವಾಗಿ ಒಪ್ಪಿಕೊಳ್ಳಲು ಆಗಲ್ಲ. ಈ ಹಿಂದೆ ಲವ್ ಸ್ಟೋರಿ ಮಾಡಿ ಗೆದ್ದರೂ ಚಂದ್ರು ಇಲ್ಲಿ ನಿರೀಕ್ಷೆಗಳನ್ನು ಸುಳ್ಳು ಮಾಡಿದ್ದಾರೆ.

ಫ್ಯಾಮಿಲಿ ಸಮೇತ ಯಾಕೆ ನೋಡಬೇಕು ?

ಫ್ಯಾಮಿಲಿ ಸಮೇತ ಯಾಕೆ ನೋಡಬೇಕು ?

ಸಿನಿಮಾದ ಪೋಸ್ಟರ್ ಮೇಲೆ ಕಡ್ಡಾಯವಾಗಿ ಕುಟುಂಬ ಸಮೇತವಾಗಿ ಬನ್ನಿ ಎಂದು ಬರೆದಿದ್ದಾರೆ. ಆದರೆ, ಈ ಚಿತ್ರವನ್ನು ಯಾಕೆ ಫ್ಯಾಮಿಲಿ ಬಂದು ನೋಡಬೇಕೋ ಗೊತ್ತಿಲ್ಲ. ಡಬಲ್ ಮಿನಿಂಗ್ ಡೈಲಾಗ್, ಮುಜುಗರದ ದೃಶ್ಯ ಹೆಚ್ಚಿದೆ. ಒಂದೇ ಒಂದು ಸಂದೇಶ ಬಿಟ್ಟರೆ ಸಿನಿಮಾದಲ್ಲಿ ಕುಟುಂಬಕ್ಕೆ ಇಷ್ಟ ಆಗುವ ಯಾವ ಅಂಶಗಳು ಇಲ್ಲ.

ಇದು ಯಾವ ಕಾಲದ ಸಿನಿಮಾ?

ಇದು ಯಾವ ಕಾಲದ ಸಿನಿಮಾ?

'ಐ ಲವ್ ಯು' ಸಿನಿಮಾ ನೋಡಿ ಬಂದ ಮೇಲೆ ' ಇದು ಯಾವ ಕಾಲದ ಸಿನಿಮಾ..' ಎನ್ನುವ ಅನುಮಾನ ಬರುತ್ತದೆ. ಉಪೇಂದ್ರ ಅವರ ಹಿಂದಿನ ಸಿನಿಮಾಗಳ ಮಿಶ್ರಣ, ಹಳೆ ಶೈಲಿಯ ಫೈಟ್, ಮೋಸ ಮಾಡುವ ಹುಡುಗಿ, ಲವ್ ಗಿಂತ ಲೈಫ್ ಹೆಚ್ಚು ಎನ್ನುವ ಹುಡುಗ.. ಇದೆಲ್ಲ ಎಲ್ಲರೂ ಒಂದಲ್ಲ ಒಂದು ಸಿನಿಮಾದಲ್ಲಿ ನೋಡಿಕೊಂಡು ಬಂದಿದ್ದೇವೆ. ಸೋ, ಮತ್ತೆ ಇಲ್ಲಿ ಯಾಕೆ ನೋಡಬೇಕು ಹೇಳಿ. ಒಂದು ಸಾಲಿನಲ್ಲಿ ಹೇಳಬೇಕು ಅಂದರೆ ''ಸಿನಿಮಾದ ವಿಶೇಷ.. ಒಂದೇ ಒಂದು ಸಂದೇಶ''.

More from Filmibeat

English summary
Real star Upendra and Rachita Ram starring 'I Love You' kannada movie review. 'I Love You' has a different love story and it is pakka Uppi style of movie. The movie is directed by R Chandru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X