Idli Kadai Twitter Review : ಧನುಷ್ ಮಾಡಿರುವ ಇಡ್ಲಿ ರುಚಿ ಆಗಿದೆಯಾ ? ಹಳಸಿದೆಯಾ ? ಕಾಂತಾರ ಮುಂದೆ ನಿಲ್ಲುತ್ತಾ ?

ಜನಸಾಮಾನ್ಯರನ್ನು ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನ ಮೊದಲಿಂದ ಮಾಡಿಕೊಂಡು ಬಂದವರು ಧನುಷ್. ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ನಟ. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನು ಕೂಡ ಹೊಂದಿರುವ ಧನುಷ್, ಬೇರೆ ಸೂಪರ್ ಸ್ಟಾರ್ ಗಳು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದವರು. ರಾಷ್ಟ್ರ ಪ್ರಶಸ್ತಿಯನ್ನೂ ಕೂಡ ಮುಡಿಗೇರಿಸಿಕೊಂಡವರು.

ಇಂಥಾ ಧನುಷ್ ಇದೀಗ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಕಳೆದ 7 ವರ್ಷಗಳಲ್ಲಿ 2 ಚಿತ್ರಗಳನ್ನು ನಿರ್ದೇಶಿಸಿರುವ ಧನುಷ್ ಈಗ ತಮ್ಮ ಮೂರನೇ ನಿರ್ದೇಶನದ ಚಿತ್ರ ''ಇಡ್ಲಿ ಕಡೇ''ಯನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ. ಗೆಲ್ಲುವ ಭರವಸೆಯಲ್ಲಿ ಕೂಡ ಇದ್ದಾರೆ. ಹಾಗಿದ್ದರೆ ಇಡ್ಲಿ ಕಡೇ ಹೇಗಿದೆ..? ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ಚಿತ್ರ ನೋಡಿದ ಪ್ರೇಕ್ಷಕರು ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ

Idli Kadai  Verdict  Dhanush s Emotional Win vs  The Predictable Plot   Is It Worth Your Ticket

ಫ್ಯಾಮಿಲಿ ಎಂಟರಟೇನರ್

ಸಂಪೂರ್ಣ ಕುಟುಂಬ ನೋಡುವಂತಹ ಪರಿಪೂರ್ಣ ಮನರಂಜನೆಯ ಚಿತ್ರ. ಸರಳ ಕಥೆ ಮತ್ತು ಚಿತ್ರಕಥೆ ಇದ್ದರೂ ಕೂಡ ನಿರ್ದೇಶನ ಧನುಷ್ ಅವರ ಭಾವನೆ + ಹಾಸ್ಯ + ಪ್ರೀತಿ + ಆಕ್ಷನ್ ನ ಪರಿಪೂರ್ಣ ಮಿಶ್ರಣದೊಂದಿಗೆ ರುಚಿಕರವಾದ ಇಡ್ಲಿ ನೀಡಿದ್ದಾರೆ.

ಮನಸಿಗೆ ಕನೆಕ್ಟ್ ಆದ ಚಿತ್ರ

ಇಡ್ಲಿ ಕಡೈ ನನ್ನ ಹೃದಯಕ್ಕೆ ಬಹುಬೇಗ ಕನೆಕ್ಟ್ ಆಯ್ತು. ದ್ವೀತಿಯಾರ್ಧದಲ್ಲಿ ಬರುವ ಗರುಡದ ದೃಶ್ಯ ರೋಮಾಂಚನಕಾರಿ. ಮುರುಗನ್‌ನ ಇಡ್ಲಿ ಕಡೈ ಸುತ್ತ ಇಡೀ ಚಿತ್ರ ಸುತ್ತುತ್ತೆ. ನಿರ್ದೇಶಕನಾಗಿ ಮತ್ತು ನಟನಾಗಿ ಧನುಷ್ ಗೆದ್ದಿದ್ದಾರೆ. ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಅಹಿಂಸೆ.. ಅಲ್ಲಿ ಬೇರೂರಿವ ಸಂಸ್ಕ್ರತಿ.. ಹೆತ್ತವರ ಮೇಲಿನ ಪ್ರೀತಿ ಎಲ್ಲವನ್ನೂ ಚೆನ್ನಾಗಿ ತೋರಿಸಲಾಗಿದೆ. ಎಲ್ಲರೂ ನೋಡಲೇಬೇಕಾದ ಚಿತ್ರ.

ಸರಳ ಕಥೆ ಆದರೆ

ಇಡ್ಲಿ ಕಡೈ ಕಥೆ ಸರಳವಾಗಿದೆ. ಆದರೆ ಇಲ್ಲಿ ಭಾವನೆಗಳು ಹೇರಳವಾಗಿವೆ. ಹೃದಯಕ್ಕೆ ನಾಟುವ ಸುಂದರವಾಗಿ ನಿರ್ಮಾಣ ಮಾಡಲಾದ ಚಿತ್ರ ಇದು. ಪ್ರಾಮಾಣಿಕ ಪ್ರಯತ್ನ. ಈ ಪ್ರಯತ್ನವೇ ಈ ಚಿತ್ರದ ಶಕ್ತಿ. ಧನುಷ್ ಗೆದ್ದಿದ್ದಾರೆ.

ಮೊದಲಾರ್ಧ ನಿಧಾನ

ನೋಡಿದವರ ಹೃದಯಗಳನ್ನು ಮುಟ್ಟಿದ ಚಿತ್ರ! ಸರಳ ಕಥೆ, ಆದರೆ ಭಾವನೆಗಳಿಂದ ತುಂಬಿರುವ ಪರಿಪೂರ್ಣ ಕೌಟುಂಬಿಕ ಚಿತ್ರ. ಧನುಷ್ ಅವರ ಅಭಿನಯ ಅದ್ಭುತ. ಕೆಲವು ದೃಶ್ಯಗಳು ನಿಮ್ಮ ಕಣ್ಣಲ್ಲಿ ನೀರು ತರಿಸುತ್ತವೆ. ಕುಟುಂಬದ ಬಾಂಧವ್ಯ, ನಡೆಯುವ ಜಗಳ, ಮನೆಯಲ್ಲಿನ ನಗು, ಎಲ್ಲವೂ ಸಹಜವೆನಿಸುತ್ತದೆ. ಜಿ.ವಿ. ಪ್ರಕಾಶ್ ಅವರ ಸಂಗೀತ ಚಿತ್ರವನ್ನು ಇನ್ನೂ ಚೆಂದವಾಗಿಸಿದೆ. ಮೊದಲಾರ್ಧ ಸ್ವಲ್ಪ ನಿಧಾನವೆಂಬ ಭಾವನೆ ಬರಬಹುದು. ಆದರೆ ದ್ವಿತೀಯಾರ್ಧದಲ್ಲಿರುವ ಭಾವನೆಗಳು ಕಾಡುತ್ತವೆ. ಮೋಡಿ ಮಾಡುತ್ತವೆ.

ರೇಟಿಂಗ್: ⭐⭐⭐⭐⭐☆ (4/5)
ಕೌಟುಂಬಿಕ ಚಿತ್ರಗಳನ್ನು ನೋಡುವವರು ನೋಡಲೇಬೇಕಾದ ಚಿತ್ರ!

ಸುಂದರ ಹೃದಯ ಸ್ಪರ್ಶಿ

ಇಡ್ಲಿಕಡೈ - ಸುಂದರ ಮತ್ತು ಹೃದಯಸ್ಪರ್ಶಿ ಚಿತ್ರ..ನಿರ್ದೇಶಕ ಧನುಷ್ ಸರಳವಾದ ಕತೆಯನ್ನು ಅತ್ಯಂತ ಪ್ರಭಾವಶಾಲಿ ಆಗಿ ಹೇಳಿದ್ದಾರೆ. ಭಾವನಾತ್ಮಕವಾದ ಕುಟುಂಬ ಸಮೇತ ನೋಡುವಂತಹ ಚಿತ್ರ. ಹಿನ್ನೆಲೆ ಸಂಗೀತ ಅದ್ಭುತವಾಗಿದೆ.

ಹೀಗೆ ಹಲವರು ''ಇಡ್ಲಿ ಕಡೈ'' ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ. ಹಾಗಂಥ ಎಲ್ಲರಿಗೆ ಈ ಚಿತ್ರ ಇಷ್ಟವಾಗಿದೆ ಅಂತೇನೂ ಇಲ್ಲ. ಚಿತ್ರ ನೋಡಿದ ಇನ್ನೂ ಕೆಲವರು ಚಿತ್ರದ ಕುರಿತು ನೆಗೆಟಿವ್ ಮಾತುಗಳನ್ನಾಡಿದ್ದಾರೆ. ಆರಾಮಾಗಿ ಊಹಿಸಿಕೊಂಡು ಹೋಗಬಹುದಾದ ಕಥೆ ಎಂದು ಹೇಳಿದ್ದಾರೆ. ತುಂಬಾ ನಿಧಾನವಾದ ಚಿತ್ರ, ತಾಳ್ಮೆ ಬೇಡುವಂತಹ ಸಿನಿಮಾ ಎಂದು ಕೂಡ ಹೇಳಿರುವ ಹಲವರು ನಿತ್ಯಾ ಮೆನನ್ ಅವರ ಅಭಿನಯದ ಕುರಿತು ಕೂಡ ಅಪಸ್ವರ ತೆಗೆದಿದ್ದಾರೆ.

ಸದ್ಯ ಇಂದು (ಅಕ್ಟೋಬರ್ 1 ) ಚಿತ್ರ ಬಿಡುಗಡೆಯಾಗಿದ್ದು ಉತ್ತಮವಾದ ಗಳಿಕೆ ಮಾಡುವ ಸಾಧ್ಯತೆ ಇದೆ. ನಾಳೆ ( ಅಕ್ಟೋಬರ್ 2) ''ಕಾಂತಾರ'' ತೆರೆಗೆ ಬರಲಿದೆ. ''ಕಾಂತಾರ'' ಮುಂದೆ ''ಇಡ್ಲಿ ಕಡೈ'' ನಿಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Dhanush's 'Idli Kadai' is hailed as a 'perfect family entertainer' for its deep emotion. Read why some fans are disappointed and whether this rooted drama is a must-watch.
Read more about: dhanush kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X