India v/s England Review: ಆಕೆ ಅಕ್ಷಾಂಶ.. ಅವನು ರೇಖಾಂಶ..

ದೇಶ ವಿದೇಶ.. ಅಲ್ಲಿನ ಸಂಸ್ಕೃತಿ.. ಅಲ್ಲಿನ ಇತಿಹಾಸ.. ಫಾರಿನ್ ಕಟ್ಟಡಗಳು.. ಹಳ್ಳಿ ಹಳ್ಳಗಳು.. ನಮ್ಮ ಮಣ್ಣಿನ ಮಹತ್ವ.. ಭಾರತೀಯತೆ.. ಮಧುರ ಪ್ರೀತಿ.. ವಿರಹ.. ಮನ ತುಂಬೋ ಭಾವನೆಗಳು..

ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾ ಎಂದ ಕೂಡಲೇ ಈ ಎಲ್ಲ ಅಂಶಗಳನ್ನು ಪ್ರೇಕ್ಷಕ ಬಯಸುತ್ತಾನೆ. ಅದೇ ರೀತಿ 'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದಲ್ಲಿಯೂ ಈ ಅಂಶಗಳು ಇವೆ. ಹೀಗಾಗಿ ಇದು ಪಕ್ಕಾ ನಾಗತಿಹಳ್ಳಿ ಚಂದ್ರಶೇಖರ್ ಶೈಲಿಯ ಸಿನಿಮಾ.

Rating:
3.0/5
Star Cast: ವಸಿಷ್ಟ ಸಿಂಹ, ಮಾನ್ವಿತಾ ಕಾಮತ್
Director: ನಾಗತಿಹಳ್ಳಿ ಚಂದ್ರಶೇಖರ್

ಇಂಡಿಯಾ ಗ್ರೇಟಾ.. ಇಂಗ್ಲೆಂಡ್ ಗ್ರೇಟಾ..

ಇಂಡಿಯಾ ಗ್ರೇಟಾ.. ಇಂಗ್ಲೆಂಡ್ ಗ್ರೇಟಾ..

ವಿದೇಶದಿಂದ ಭಾರತ ನೋಡಲು ಬರುವ ನಾಯಕ ಕಾನಿಷ್ (ವಸಿಷ್ಟ ಸಿಂಹ). ಆತನಿಗೆ ಭಾರತ ತೋರಿಸುವ ಹುಡುಗಿ ಮೈದಿನಿ (ಮಾನ್ವಿತಾ). ನಾಯಕಿ ಇಂಡಿಯಾ ಗ್ರೇಟ್ ಅಂದ್ರೆ.. ನಾಯಕ ಇಂಗ್ಲೆಂಡ್ ಗ್ರೇಟ್ ಎನ್ನುತ್ತಾನೆ. ಇಬ್ಬರ ವಾದ.. ವಿವಾದ.. ಚರ್ಚೆ, ಜಗಳ ಇಡೀ ಸಿನಿಮಾದಲ್ಲಿ ತುಂಬಿಕೊಂಡಿದೆ. ಈ ಎರಡು ಪಾತ್ರಗಳು ಎರಡು ದೇಶಗಳನ್ನು ಪ್ರತಿನಿಧಿಸುತ್ತಾರೆ.

ಎರಡು ಟ್ರಾಕ್ ನಲ್ಲಿ ಕಥೆ ಸಾಗುತ್ತದೆ

ಎರಡು ಟ್ರಾಕ್ ನಲ್ಲಿ ಕಥೆ ಸಾಗುತ್ತದೆ

ಇತ್ತ ಭಾರತ ನೋಡಲು ಬರುವ ನಾಯಕನ ಕಥೆ ಇದೆ. ಅತ್ತ ಡೈಮಾಂಡ್ ಕದಿಯುವ ಕದೀಮರ ಕಥೆ ಇದೆ. ಇಲ್ಲಿ ಪ್ರೀತಿ ಪ್ರೇಮ ಪಾತ್ರಗಳ ಜೊತೆಗೆ ಇದ್ದರೆ, ಅಲ್ಲಿ ಮೋಸ ದೇಶ ದ್ರೋಹ ಪಾತ್ರಗಳಲ್ಲಿ ಇವೆ. ಈ ಎರಡು ಬೇರೆ ಬೇರೆ ಟ್ರಾಕ್ ಗಳು ಒಂದು ಸಮಯದಲ್ಲಿ ಒಂದು ಕಡೆ ಸೇರುತ್ತದೆ. ಅಲ್ಲಿಂದ ಸಿನಿಮಾಗೆ ಸಸ್ಪೆನ್ಸ್ ಶುರುವಾಗುತ್ತದೆ.

ಒಳ್ಳೆಯ ಸಂಭಾಷಣೆಗಳು

ಒಳ್ಳೆಯ ಸಂಭಾಷಣೆಗಳು

ಡೈಲಾಗ್ ಎಂದ ಕೂಡಲೇ ಹೀರೋ ಬಿಲ್ಡಪ್ ಡೈಲಾಗ್ ಗಳೇ ತುಂಬಿಕೊಂಡಿರುತ್ತದೆ. ಆದರೆ, ಇಲ್ಲಿ ಪ್ರತಿ ಸಂಭಾಷಣೆಯೂ ಅರ್ಥಪೂರ್ಣವಾಗಿದೆ. ಸಿನಿಮಾ ನೋಡುವವರಿಗೆ ಒಂದಷ್ಟು ಮಾಹಿತಿಯನ್ನು ನೀಡುತ್ತದೆ. ಅಂತಹ ಸಂಭಾಷಣೆಗಳನ್ನು ನಾಯಕ ಮತ್ತು ನಾಯಕಿ ಇಬ್ಬರು ಚೆನ್ನಾಗಿ ಒಪ್ಪಿಸಿದ್ದಾರೆ.

ಸ್ಟೈಲಿಷ್ ಹೀರೋ.. ಕ್ಯೂಟ್ ಹೀರೋಯಿನ್

ಸ್ಟೈಲಿಷ್ ಹೀರೋ.. ಕ್ಯೂಟ್ ಹೀರೋಯಿನ್

ಯಾವಾಗಲೂ ವಿಲನ್ ಆಗಿ ಅಬ್ಬರಿಸುತ್ತಿದ್ದ ವಸಿಷ್ಟ, ಇಲ್ಲಿ ಸ್ಟೈಲಿಷ್ ನಾಯಕನಾಗಿದ್ದಾರೆ. ವಸಿಷ್ಟ ನಾಯಕನಾಗಿ ಚೆನ್ನಾಗಿ ನಟಿಸಿದ್ದಾರೆ. ಫೈಟ್, ಡ್ಯಾನ್ಸ್ ಎಲ್ಲವೂ ಅವರಿಗೆ ಇದೆ. ಮಾನ್ವಿತಾ ಕ್ಯೂಟ್ ಆಗಿ ಕಾಣುತ್ತಾರೆ. ಭಾರತಾಭೆಯ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಸುಮಲತಾ ಅನುಭವಿ ನಟನೆ ಚಿತ್ರಕ್ಕೆ ಸಹಾಯ ಮಾಡಿದೆ.

ಕಿರಿಕಿರಿ ಎನಿಸುವ ಅಂಶಗಳು

ಕಿರಿಕಿರಿ ಎನಿಸುವ ಅಂಶಗಳು

ನಿರ್ದೇಶಕ ಶಿವಮಣಿ ವಿಲನ್ ಆಗಿದ್ದಾರೆ. ಗಿರಿರಾಜ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಒಂದು ಪಾತ್ರದಲ್ಲಿ ಬಂದು ಹೋಗುತ್ತಾರೆ. ಸಿನಿಮಾದಲ್ಲಿ ಕೆಲವು ಸಹ ಕಲಾವಿದರ ನಟನೆ ಕಿರಿಕಿರಿ ಉಂಟು ಮಾಡುತ್ತದೆ. ನಗಿಸಲು ಪ್ರಯತ್ನಿಸುವ ಸಾಧು ಕೋಕಿಲ ದೃಶ್ಯಗಳು ಹೆಚ್ಚಾಯ್ತು ಅನಿಸುತ್ತದೆ.

ಸಾಧಾರಣ ಹಾಡುಗಳು

ಸಾಧಾರಣ ಹಾಡುಗಳು

ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾಗಳಲ್ಲಿ ಹಾಡುಗಳಿಗೆ ವಿಶೇಷ ಸ್ಥಾನ ಇರುತ್ತದೆ. ಅವರ ಅನೇಕ ಸಿನಿಮಾಗಳ ಹಾಡುಗಳು ಇಂದಿಗೂ ಜೀವಂತ. ಆದರೆ, ಈ ಸಿನಿಮಾದ ಹಾಡುಗಳು ಅಷ್ಟೊಂದು ಹತ್ತಿರ ಆಗುವುದಿಲ್ಲ. ದೃಶ್ಯಗಳ ಜೊತೆಗೆ ನೋಡುವಾಗ ಓಕೆ ಓಕೆ ಎನಿಸುವ ಹಾಡುಗಳು ಆಮೇಲೆ ನೆನಪಿನಲ್ಲಿ ಇರುವುದಿಲ್ಲ.

ಕೆಲವು ಕಡೆ ಬೋರ್ ಹೊಡೆಸುವ ಪಾಠ

ಕೆಲವು ಕಡೆ ಬೋರ್ ಹೊಡೆಸುವ ಪಾಠ

ಸಿನಿಮಾದ ಮೊದಲಾರ್ಧ ಹಾಗೂ ದ್ವಿತೀಯಾರ್ಧ ಎರಡೂ ಭಾಗಗಳಲ್ಲಿ ಕೆಲವು ಅಂಶಗಳು ನೋಡುಗರಿಗೆ ಬೇಸರ ಎನಿಸುತ್ತದೆ. ಇಡೀ ಸಿನಿಮಾದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಿ ತಪ್ಪುಗಳೆ ಚಿತ್ರದಲ್ಲಿ ತುಂಬಿಕೊಂಡಿದೆ. ಡೈಮಾಂಡ್ ಕಳ್ಳತನದ ದೃಶ್ಯಗಳು ಕೂಡ ಪರಿಣಾಮಕಾರಿಗಾಗಿಲ್ಲ. ಮೇಷ್ಟ್ರು ಮಾಡಿದ ಪಾಠ ಕೆಲವು ಕಡೆ ಬೋರ್ ಅನಿಸುತ್ತದೆ.

ಫ್ಯಾಮಿಲಿ ಸಿನಿಮಾ

ಫ್ಯಾಮಿಲಿ ಸಿನಿಮಾ

''ಇಂಡಿಯಾ ದೊಡ್ಡ ದೇಶ ಆದರೆ ಅಲ್ಲಿ ಪುಟ್ಟದಾಗಿ ಬದುಕುತ್ತಾರೆ, ಇಂಗ್ಲೆಂಡ್ ಪುಟ್ಟ ದೇಶ ಆದರೆ ಅಲ್ಲಿ ದೊಡ್ಡದಾಗಿ ಬದುಕುತ್ತಾರೆ.'' ಇದು ನಾಯಕಿ ಹೇಳುವ ಸಂಭಾಷಣೆ ಇದೇ ರೀತಿ ಎರಡು ದೇಶದ ಹೋಲಿಕೆ ಸಿನಿಮಾದ ನಿರೂಪಣೆ. ನಾಗತಿಹಳ್ಳಿ ಚಂದ್ರಶೇಖರ್ ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಗುತ್ತದೆ. ಇದೊಂದು ಶುದ್ಧ ಫ್ಯಾಮಿಲಿ ಸಿನಿಮಾ.

More from Filmibeat

English summary
India vs England kannada movie review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X