twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: 'ಇರುವುದೆಲ್ಲವ ಬಿಟ್ಟು' ಸಂಬಂಧಗಳೆಡೆಗೆ ತುಡಿವುದೇ ಜೀವನ

    |

    Recommended Video

    ಹೇಗಿದೆ ಇರುವುದೆಲ್ಲವ ಬಿಟ್ಟು ಸಿನಿಮಾ..? | Filmibeat Kannada

    Rating:
    4.0/5
    Star Cast: ಮೇಘನಾ ರಾಜ್, ತಿಲಕ್ ಶೇಖರ್, ಶ್ರೀ ಮಹಾದೇವ್
    Director: ಕಾಂತರಾಜ್ ಕಾನ್ನಲ್ಲಿ

    'ಇರುವುದೆಲ್ಲವ ಬಿಟ್ಟು' ಸಿನಿಮಾ ಖಂಡಿತ ನಿರಾಸೆ ಮಾಡುವುದಿಲ್ಲ. ಸ್ವಾಭಿಮಾನ ಎಲ್ಲರಿಗೂ ಇರಬೇಕು. ಆದರೆ 'ಸಂಬಂಧಗಳಿಗಿಂತ ಸ್ವಾಭಿಮಾನ ದೊಡ್ಡದಲ್ಲ' ಎಂಬ ಸತ್ಯವನ್ನು ಈ ಸಿನಿಮಾ ಹೇಳುತ್ತದೆ. ಇದು ಭಾವನೆಗಳ ಮೇಲೆ ನಿಂತಿರುವ ಸಿನಿಮಾ.

    ಕೆಲಸ, ಹಣ, ಹೆಸರಿನ ಹಿಂದೆ ಓಡುವ ಪೂರ್ವಿ

    ಕೆಲಸ, ಹಣ, ಹೆಸರಿನ ಹಿಂದೆ ಓಡುವ ಪೂರ್ವಿ

    ಪೂರ್ವಿ (ಮೇಘನಾ ರಾಜ್) ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಕೆಲಸ, ಹಣ, ಹೆಸರಿನ ಹಿಂದೆ ಓಡುವ ಪೂರ್ವಿಗೆ ರಾಯಲ್ ಲೈಫ್ ಲೀಡ್ ಮಾಡಬೇಕು ಎಂಬ ಗುರಿ ಇರುತ್ತದೆ. ಆಫೀಸ್ ನಲ್ಲಿ ಬೇರೆಯವರಿಂದ ಆರ್ಡರ್ ಮಾಡಿಸಿಕೊಳ್ಳುತ್ತಿದ್ದ ಜಾಗದಲ್ಲಿ ಇದ್ದ ಪೂರ್ವಿ ತಾನೇ ಆರ್ಡರ್ ಮಾಡುವ ಸ್ಥಾನಕ್ಕೆ ಹೋಗಬೇಕು ಎಂಬ ಬಯಕೆ ಇಟ್ಟುಕೊಂಡಿತ್ತಾಳೆ. ಅದೇ ರೀತಿ ತನ್ನ ಗುರಿ ಸಾಧಿಸುತ್ತಾಳೆ.

    ಮದುವೆ ಬಳಿಕ ಮೇಘನಾ ರಾಜ್ ಗೆ ಎದುರಾದ ಮೊದಲ ಚಾಲೆಂಜ್ ಮದುವೆ ಬಳಿಕ ಮೇಘನಾ ರಾಜ್ ಗೆ ಎದುರಾದ ಮೊದಲ ಚಾಲೆಂಜ್

    ದೇವ್ - ಪೂರ್ವಿ ಪ್ರಣಯ

    ದೇವ್ - ಪೂರ್ವಿ ಪ್ರಣಯ

    ಆಫೀಸ್ ನಲ್ಲಿ ತನ್ನ ಜೊತೆಗೆ ಕೆಲಸ ಮಾಡುವ ದೇವ್ (ತಿಲಕ್) ಹಾಗೂ ಪೂರ್ವಿ ನಡುವೆ ಪ್ರೀತಿ ಪ್ರೇಮ ಪ್ರಣಯ ಶುರು ಆಗುತ್ತದೆ. ಊರಿನಲ್ಲಿರುವ ಪೂರ್ವಿ ತಂದೆಗೆ ಈ ವಿಷಯ ತಿಳಿಯುತ್ತದೆ. ಅಲ್ಲಿಂದ ತಂದೆ - ಮಗಳ ನಡುವೆ ಅಂತರ ಶುರು ಆಗುತ್ತದೆ. ಅದು ಯಾವ ಮಟ್ಟಕ್ಕೆ ಅಂದರೆ, ಪೂರ್ವಿ ತನ್ನ ಪಾಲಿಗೆ ಸತ್ತಳು ಎಂದೇ ಆ ತಂದೆ ನಿರ್ಧಾರ ಮಾಡುತ್ತಾರೆ. ಪ್ರೊಫೆಶನಲ್ ಆಗಿ ಎತ್ತರಕ್ಕೆ ಬಳೆಯುವ ಪೂರ್ವಿ, ಪರ್ಸನಲ್ ಆಗಿ ಕುಗ್ಗುತ್ತಿರುತ್ತಾಳೆ.

    ಒಂದಾಗುತ್ತಾರ ತಂದೆ, ಮಗಳು?

    ಒಂದಾಗುತ್ತಾರ ತಂದೆ, ಮಗಳು?

    ಚಿತ್ರದಲ್ಲಿ ತಂದೆ ಮಗಳ ಸಂಬಂಧವನ್ನು ಅದ್ಭುತವಾಗಿ ತೋರಿಸಿದ್ದಾರೆ. ಸಿನಿಮಾ ನೋಡುವರಿಗೆ ಕ್ರೈಮ್ಯಾಕ್ಸ್ ವರೆಗೆ ತಂದೆ - ಮಗಳು ಒಂದಾಗುತ್ತಾರ ಇಲ್ವಾ ಎನ್ನುವ ಕುತೂಹಲ ಇರುತ್ತದೆ. ತಮ್ಮ 'ಇಗೋ' ಬಿಟ್ಟು ತಂದೆ - ಮಗಳು ಸಂಬಂಧಗಳಿಗೆ ಬೆಲೆ ನೀಡುತ್ತಾರಾ ಎಂಬುದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು.

    ಗೊಂಬೆಗೂ ಜೀವ ನೀಡುವ ಆಕಾಶ್

    ಗೊಂಬೆಗೂ ಜೀವ ನೀಡುವ ಆಕಾಶ್

    ದೇವ್ ಹಾಗೂ ತಂದೆ, ತಾಯಿಯನ್ನು ದೂರ ಮಾಡಿಕೊಂಡ ಪೂರ್ತಿಗೆ ಆಕಸ್ಮಿಕವಾಗಿ ಆಕಾಶ್ (ಶ್ರೀ ಮಹದೇವ್) ಪರಿಚಯ ಆಗುತ್ತದೆ. ಯಾವಾಗಲೂ ಗೊಂಬೆಗಳ ಜೊತೆಗೆ ಇರುವ ಆಕಾಶ್ ಅದಕ್ಕೂ ಜೀವ ನೀಡುವ ಹುಡುಗ. ಆತನ ಜೊತೆಗೆ ಸೇರಿದ ಮೇಲೆ ಪೂರ್ವಿ ಬದುಕಿನಲ್ಲಿ ಮತ್ತೊಮ್ಮೆ ಖುಷಿ ಸಿಗುತ್ತದೆ.

    ನಾಲ್ಕು ಭಾವನೆಗಳು, ಒಂದೇ ಬದುಕು

    ನಾಲ್ಕು ಭಾವನೆಗಳು, ಒಂದೇ ಬದುಕು

    ಹೀಗಿದ್ದ ಪೂರ್ವಿಗೆ ಕೆಲಸ, ಗುರಿ, ಹೆಸರು, ಹಣಕ್ಕಿಂತ ಸಂಬಂಧ ದೊಡ್ಡದು ಎಂದು ತಿಳಿಯುತ್ತದೆ. ಒಂದು ಬದುಕಿನಲ್ಲಿ ತಂದೆ, ದೇವ್, ಆಕಾಶ್, ಪೂರ್ವಿ ಈ ನಾಲ್ಕು ಭಾವನೆಗಳು ಇರುತ್ತದೆ. ಇದರಲ್ಲಿ ಪೂರ್ವಿ ಯಾರ ಭಾವನೆ ಜೊತೆಗೆ ಬೆರೆತು ಹೋಗುತ್ತಾಳೆ ಎನ್ನುವುದು ಚಿತ್ರದ ಹೈಲೈಟ್.

    ಯಾರು ಊಹೆ ಮಾಡಿರದ ಅಂಶ

    ಯಾರು ಊಹೆ ಮಾಡಿರದ ಅಂಶ

    ಸಿನಿಮಾ ನೋಡುತ್ತ ಕುಳಿತವರಿಗೆ ಮೊದಲಾರ್ಥದ ಒಂದು ಸನ್ನಿವೇಶದಲ್ಲಿ ಥ್ರಿಲ್ ಸಿಗುತ್ತದೆ. ಪೂರ್ವಿ ಪಾತ್ರದ ಬಗ್ಗೆ ಇದ್ದ ನಮ್ಮ ಊಹೆ ಉಲ್ಟಾ ಆಗುತ್ತದೆ. ಆ ಮುಖ್ಯ ಸನ್ನಿವೇಶವನ್ನು ಸಿನಿಮಾದಲ್ಲಿ ನೋಡಿದರೇನೇ ಮಜಾ

    ನೈಜ ನಟನೆ, ಮಾತನಾಡುತ್ತೆ ಭಾವನೆ

    ನೈಜ ನಟನೆ, ಮಾತನಾಡುತ್ತೆ ಭಾವನೆ

    ಮೇಘನಾ ರಾಜ್, ತಿಲಕ್, ಶ್ರೀ ಮಹದೇವ್, ಅಚ್ಚುತ್ ಕುಮಾರ್ ಹೀಗೆ ಚಿತ್ರದ ಪ್ರತಿ ಪಾತ್ರಗಳು ನೈಜವಾಗಿದ್ದು, ನೋಡುತ್ತಿದ್ದ ಹಾಗೆ ಹತ್ತಿರ ಆಗುತ್ತವೆ. ಕೆಲವು ದೃಶ್ಯಗಳಲ್ಲಿ ಕಲಾವಿದರು ಮೌನವಾಗಿದ್ದರೂ, ಅವರ ಭಾವನೆಗಳು ಮಾತನಾಡುತ್ತವೆ.

    ಸಂಗೀತ, ಕ್ಯಾಮರಾ, ಸಂಭಾಷಣೆ

    ಸಂಗೀತ, ಕ್ಯಾಮರಾ, ಸಂಭಾಷಣೆ

    ನಾಲ್ಕು ಮುದ್ದಾದ ಹಾಡುಗಳು, ಅಲ್ಲಲ್ಲಿ ಬರುವ ಬೀಟ್ ಸಾಂಗ್ ಗಳು ಸಿನಿಮಾಗೆ ಜೀವ ತುಂಬಿವೆ. ಹಿನ್ನಲೆ ಸಂಗೀತ ಪ್ರತಿ ದೃಶ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗುವಂತೆ ಮಾಡಿದೆ. ಇನ್ನು ಕ್ಯಾಮರಾ ವರ್ಕ್ ಬಗ್ಗೆ ಕೊಂಕು ತೆಗೆಯುವ ಹಾಕಿಲ್ಲ. ಅನೇಕ ಸಂಭಾಷಣೆಗಳು ತುಂಬ ಚೆನ್ನಾಗಿವೆ.

    ನಿರ್ದೇಶಕರ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ

    ನಿರ್ದೇಶಕರ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ

    ನಿರ್ದೇಶಕ ಕಾಂತ ಕನ್ನಲ್ಲಿ ಶ್ರಮ ಪ್ರತಿ ದೃಶ್ಯದಲ್ಲಿ ಕಾಣಿಸುತ್ತದೆ. ಸಾಕಷ್ಟು ಕಾಳಜಿ ತೆಗೆದುಕೊಂಡು ಪ್ರೀತಿಯಿಂದ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಇನ್ನು ಇಂದು ಬೆಳಗ್ಗೆ ಚಿತ್ರಮಂದಿರದಲ್ಲಿ ಫಸ್ಟ್ ಶೋ ಮುಗಿದ ಮೇಲೆ ಅವರ ಕಣ್ಣಿನಲ್ಲಿ ಒಂದು ಸಾರ್ಥಕ ಭಾವ ಇತ್ತು.

    ಇಲ್ಲಗಳ ನಡುವೆ ಎಲ್ಲ ಇದೆ

    ಇಲ್ಲಗಳ ನಡುವೆ ಎಲ್ಲ ಇದೆ

    ಸಿನಿಮಾದಲ್ಲಿ ಆಕ್ಷನ್, ಕಾಮಿಡಿ ನಟರು, ಐಟಂ ಸಾಂಗ್, ಬಿಲ್ಡಪ್ ಡೈಲಾಗ್ ಯಾವುದು ಇಲ್ಲ. ಈ ಎಲ್ಲ ಇಲ್ಲಗಳ ನಡುವೆ ಸಿನಿಮಾದಲ್ಲಿ ಒಂದು ಜೀವ ಇದೆ. ಸಂಬಂಧ ಹಾಗೂ ಭಾವನೆಗಳೆ ಹೀರೋ ಹೀರೋಯಿನ್ ಆಗಿರುವ ಈ ಚಿತ್ರವನ್ನು ನೀವು ನೋಡಿ.

    {document1}

    English summary
    Actress Meghana Raj and Tilak Shekar starring 'Iruvudellava Bittu Iruve Bittukolluvude Jeevana' kannada movie review. The movie released today (September 21st).
    Friday, September 21, 2018, 18:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X