»   » ವಿಮರ್ಶೆ: ಸಂಗೀತ ಸಾಹಸಮಯ 'ಜಗ್ಗಾ ಜಾಸೂಸ್'ನಲ್ಲಿ ಮ್ಯಾಜಿಕ್ ಮಾಡಿದ ರಣ್ಬೀರ್

ವಿಮರ್ಶೆ: ಸಂಗೀತ ಸಾಹಸಮಯ 'ಜಗ್ಗಾ ಜಾಸೂಸ್'ನಲ್ಲಿ ಮ್ಯಾಜಿಕ್ ಮಾಡಿದ ರಣ್ಬೀರ್

Posted By:
Subscribe to Filmibeat Kannada

ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜಗ್ಗಾ ಜಾಸೂಸ್' ಇಂದು ಬಿಡುಗಡೆ ಆಗಿದೆ. ಮಾಜಿ ಪ್ರೇಮಿಗಳು ಒಟ್ಟಿಗೆ ತೆರೆಮೇಲೆ ಬರುತ್ತಿದ್ದಾರೆ ಎಂಬ ಕುತೂಹಲದಲ್ಲಿ ಈ ಚಿತ್ರದ ಬಗ್ಗೆ ಬಿಟೌನಿಗರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಚಿತ್ರದ ಬಗೆಗಿನ ಕ್ಯೂರಿಯಾಸಿಟಿಗೆ ಇಂದು ಕೊನೆಗೂ ಬ್ರೇಕ್ ಬಿದ್ದಿದೆ. ಚಿತ್ರದ ಕಂಪ್ಲೀಟ್ ವಿಮರ್ಶೆ ಈ ಕೆಳಗಿನಂತಿದೆ.

ಚಿತ್ರ: 'ಜಗ್ಗಾ ಜಾಸೂಸ್'
ನಿರ್ಮಾಣ: ಸಿದ್ಧಾರ್ಥ್ ರಾಯ್ ಕಪೂರ್, ಅನುರಾಗ್ ಬಸು, ರಣಬಿರ್ ಕಪೂರ್,
ನಿರ್ದೇಶನ: ಅನುರಾಗ್ ಬಸು
ಸಂಗೀತ: ಪ್ರೀತಮ್
ತಾರಾಬಳಗ: ರಣಬೀರ್ ಕಪೂರ್, ಕತ್ರಿನಾ ಕೈಫ್, ಸಯನಿ ಗುಪ್ತಾ ಮತ್ತು ಇತರರು
ಬಿಡುಗಡೆ: ಜುಲೈ 14, 2017

ಚಿತ್ರಕಥೆ

ಕಳೆದುಹೋದ ತಂದೆಗಾಗಿ ಹುಡುಕುತ್ತಾ ಅಜಾಗರೂಕತೆಯಿಂದ ಕಾನೂನು ಬಾಹಿರವಾದ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ತೊಡಗಿಕೊಳ್ಳುವ, ಬಗೆಹರಿಸಲು ಅಸಾಧ್ಯವಾದ ಸಮಸ್ಯೆಯಲ್ಲಿ ಸಿಲುಕುವ ವ್ಯಕ್ತಿಯ ಕಥೆಯೇ 'ಜಗ್ಗಾ ಜಸೂಸ್'.

'ಜಗ್ಗಾ ಜಸೂಸ್'

ಆಸ್ಪತ್ರೆಯಲ್ಲಿ ಬೆಳೆಯುವ ಅನಾಥ ಹುಡುಗ ಜಗ್ಗಾ, ಅಲ್ಲಿಗೆ ಕಾಲು ಕಳೆದುಕೊಂಡು ಬರುವ ಒಬ್ಬ ವ್ಯಕ್ತಿಯಿಂದ ದತ್ತು ಪುತ್ರನಾಗಿ ಅವನ ಜೊತೆ ಹೋಗುತ್ತಾನೆ. ಆತ ಯಾರು ಎಂಬುದೇ ಒಂದು ಸಸ್ಪೆನ್ಸ್. ಸ್ವಲ್ಪ ದಿನಗಳ ನಂತರ ಜಗ್ಗಾ ನನ್ನು ಆ ವ್ಯಕ್ತಿ ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾನೆ. ನಂತರ ಕಾಣೆಯಾದ ತಂದೆಯನ್ನು ಹುಡುಕುವ ಜಗ್ಗಾ ಬಗೆಹರಿಸಲಾಗದ ಸಮಸ್ಯೆಯಲ್ಲಿ ಸಿಲುಕುತ್ತಾನೆ. ಇನ್ನೂ ಚಿತ್ರದಲ್ಲಿ ಜಗ್ಗನ ಕಥೆಯನ್ನು ಶಾಲಾ ಮಕ್ಕಳಿಗೆ ಹೇಳುವ ಶ್ರುತಿ ಎಂಬಾಕೆಯದ್ದು ಯಾವ ಪಾತ್ರ? ಜಗ್ಗಾ ತಂದೆ ಎಲ್ಲಿ ಹೋದರು? ಅವರು ಬದುಕಿದ್ದಾರೆಯೇ? ಚಿತ್ರ ಮುಂದೇನಾಗುತ್ತದೆ ಎಂಬುದೇ ಚಿತ್ರದಲ್ಲಿಯ ಕುತೂಹಲಕಾರಿ ವಿಷಯ.

ರಣಬೀರ್ ಕಪೂರ್ ಮತ್ತು ಕತ್ರಿನಾ ಅಭಿನಯ

'ಜಗ್ಗಾ' ಪಾತ್ರದಲ್ಲಿ ರಣಬೀರ್ ಕಪೂರ್ ನಟನ ರತ್ನನಾಗಿ ಅಭಿನಯಿಸಿದ್ದಾರೆ. ಶೃತಿಯಾಗಿ ಕತ್ರಿನಾ ಕೈಫ್ ಸ್ಕೂಲ್ ಟೀಚರ್ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದು, ಅವರದ್ದು ಡೀಸೆಂಟ್ ಜಾಬ್ ಎನ್ನಬಹುದು.

ಇತರರು

ಖಳ ನಟನ ಪಾತ್ರದಲ್ಲಿ ಸೌರಭ್ ಶುಕ್ಲ ಪಾತ್ರ ಹೆಚ್ಚು ಗಮನ ಸೆಳೆಯುತ್ತದೆ. ಇನ್ನು ಪ್ರೊ.ಬಾಗ್ಚಿ ಪಾತ್ರದಲ್ಲಿ Saswata Chatterjee ಅಭಿನಯ ಎಕ್ಸಲೆಂಟ್. ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ನಿರ್ದೇಶನ-ಛಾಯಾಗ್ರಹಣ-ತಾಂತ್ರಿಕತೆ

ಅನುರಾಗ್ ಬಸು ತಮ್ಮ ನಿರ್ದೇಶನದಲ್ಲಿ ಒಂದು ಸಂಗೀತ ಸಾಹಸಮಯ ಪ್ರಯಾಣಕ್ಕೆ ಕರೆದೊಯ್ಯುತ್ತಾರೆ. ಚಿತ್ರ ಆರಂಭದಿಂದ ಹಿಡಿದು ಅಂತ್ಯದವರೆಗೂ ಪ್ರೇಕ್ಷಕರನ್ನು ಕುತೂಹಲದಿಂದ ನೋಡಿಸಿಕೊಳ್ಳುತ್ತದೆ. ಒಂದು ಅನನ್ಯ ಚಿತ್ರಕಥೆಯು ಹೌದು. ಆದರೆ ಸಂಕಲನದಲ್ಲಿ ಇನ್ನಷ್ಟು ಚುರುಕುತನ ಬೇಕಿತ್ತು. ಎಸ್ ರವಿ ವರ್ಮನ್ ಕ್ಯಾಮೆರಾ ಕೈಚಳಕ ಉತ್ತಮವಾಗಿದೆ. ವಿಸ್ಯುವಲ್ ಎಫೆಕ್ಟ್ ಅತಿಯಾದ ಶ್ರೀಮಂತಿಕೆ ಹೊಂದಿದೆ.

ಸಂಗೀತ

ಪ್ರೀತಮ್ ಸಂಭಾಷಣೆಗೆ ಹಾಡಿನ ರೂಪ ಕೊಡುವಲ್ಲಿ ತಮ್ಮ ಸಂಗೀತದ ಮೂಲಕ ಚಿತ್ರವನ್ನು ಉನ್ನತ ಹಂತಕ್ಕೇ ಕರೆದುಕೊಂಡು ಹೋಗಿದ್ದಾರೆ. ಚಿತ್ರದ ಒಂದು ಸೀನ್ ನಲ್ಲಿ ಸಂಗೀತವು ಸತ್ಯಜಿತ್ ರೇ ಅವರ ಐಕಾನಿಕ್ ಡಿಟೆಕ್ಟಿವ್ ಸಿನಿಮಾ 'ಸೋನಾರ್ ಕೆಲ್ಲಾ' ರೀತಿ ಸೌಂಡ್ ಮಾಡಿದೆ. 'Galti Se Mistake', 'Khaana Khaake' ಎರಡು ಹಾಡುಗಳು ಗುನುಗುತ್ತವೆ.

ಫೈನಲ್ ಸ್ಟೇಟ್‌ಮೆಂಟ್

ಚಿತ್ರ ಫ್ರೆಶ್ ಮತ್ತು ಕುತೂಹಲಕಾರಿ ಕತೆಯನ್ನು ಹೊಂದಿದೆ. ಉತ್ತಮ ಮ್ಯೂಸಿಕ್ ನಿಂದ ಸದ್ದು ಮಾಡುವ ಈ ಚಿತ್ರದಲ್ಲಿ ರಣಬೀರ್ ಅಭಿನಯ ಸೂಪರ್ ಆಗಿದ್ದು, ಚಿತ್ರವನ್ನು ಈ ವೀಕೆಂಡ್‌ಗೆ ಮಿಸ್ ಮಾಡದೇ ನೋಡಬಹುದು.

English summary
Ranbir Kapoor and Katrina Kaif starrer Hindi Movie 'Jagga Jasoos' has hit the screens today(July 14). 'Jagga Jasoos' movie review is here..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada