twitter
    For Quick Alerts
    ALLOW NOTIFICATIONS  
    For Daily Alerts

    ಭಾವನೆಗಳಿಂದ ಕಟ್ಟಿಹಾಕುವ 'ಪ್ರೀಮಿಯರ್ ಪದ್ಮಿನಿ'ಗೆ ವಿಮರ್ಶಕರು ಖುಷ್

    |

    8ಎಂಎಂ ಸಿನಿಮಾದ ಬಳಿಕ ನಟ ಜಗ್ಗೇಶ್ ಮಾಡಿರುವ ಹೊಸದೊಂದು ಪಾತ್ರ. ಜಗ್ಗೇಶ್ ಶೈಲಿಯ ಸಿನಿಮಾಗಳನ್ನ ಮೀರಿದ ಚಿತ್ರವಿದು. ಈ ಚಿತ್ರದಲ್ಲಿ ಸಂಪೂರ್ಣವಾಗಿ ಹೊಸ ರೀತಿಯ ಜಗ್ಗೇಶ್ ನೋಡಬಹುದು ಎಂದು ಹೇಳಲಾಗುತ್ತಿದ್ದ ಚಿತ್ರ ಪ್ರೀಮಿಯರ್ ಪದ್ಮಿನಿ. ಹೇಳಿದಂತೆ ಇದು ಜಗ್ಗೇಶ್ ಅವರನ್ನ ಹೊಸ ರೀತಿಯಲ್ಲಿ ಕಾಣಬಹುದಾದ ಚಿತ್ರವಿದು.

    ನಿನ್ನೆಯಷ್ಟೇ ಪ್ರೀಮಿಯರ್ ಪದ್ಮಿನಿ ಸಿನಿಮಾ ತೆರೆಕಂಡಿದೆ. ಭಾವನಾತ್ಮಕ ಮನರಂಜನೆ ಮೂಲಕ ಮನಸ್ಸು ಮುಟ್ಟುವ ಪ್ರೀಮಿಯರ್ ಪದ್ಮಿನಿ ಒಂದು ಕ್ಲಾಸ್ ಸಿನಿಮಾ. ಯಾವುದೇ ಅತಿರೇಕ ಅಬ್ಬರ, ರಂಜನೆ, ಸದ್ದು ಮಾಡದ ಅಪ್ಪಟ ಕೌಟುಂಬಿಕ ಚಿತ್ರ.

    Premier padmini reveiw: ಬಂಧ-ಅನುಬಂಧಗಳ ಭಾವನಾತ್ಮಕ ಮಿಶ್ರಣ Premier padmini reveiw: ಬಂಧ-ಅನುಬಂಧಗಳ ಭಾವನಾತ್ಮಕ ಮಿಶ್ರಣ

    ಈ ಸಿನಿಮಾ ನೋಡಿದ ಪ್ರೇಕ್ಷಕರು ಜಗ್ಗೇಶ್ ಮತ್ತು ತಂಡಕ್ಕೆ ಚಪ್ಪಾಳೆ ಹೊಡೆದಿದ್ದಾರೆ. ಅದೇ ರೀತಿ ಕನ್ನಡ ಚಿತ್ರ ವಿರ್ಮಶಕರು ಕೂಡ ಪ್ರೀಮಿಯರ್ ಪದ್ಮಿನಿಗೆ ಫಿದಾ ಆಗಿದ್ದಾರೆ. ಕರ್ನಾಟಕದ ಖ್ಯಾತ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಪ್ರೀಮಿಯರ್ ಪದ್ಮಿನಿ ಚಿತ್ರದ ವಿಮರ್ಶೆಯ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ.....

    ಸಂಬಂಧಗಳ ಸರಿ-ತಪ್ಪಿನ ಅವಲೋಕನ

    ಸಂಬಂಧಗಳ ಸರಿ-ತಪ್ಪಿನ ಅವಲೋಕನ

    ''ಸಂಬಂಧ ಎಂಬುದು ಜಗತ್ತಿನಲ್ಲಿ ಬೇರೆಲ್ಲಕ್ಕಿಂತಲೂ ಸೂಕ್ಷ್ಮವಾದದ್ದು. ಅದನ್ನು ನಿಭಾಯಿಸುವಲ್ಲಿ ಮನುಷ್ಯ ಕೊಂಚ ಎಡವಿದರೂ ಸಾಕು, ಎಲ್ಲವೂ ತಲೆಕೆಳಗಾಗಿಬಿಡುತ್ತವೆ. ಗಂಡ-ಹೆಂಡತಿ, ತಾಯಿ-ಮಗ, ತಂದೆ-ಮಗಳು, ಗೆಳೆಯ-ಗೆಳತಿ, ಮಾಲಿಕ-ಕಾರ್ವಿುಕ, ಅಕ್ಕ-ತಮ್ಮ ಹೀಗೆ ಒಂದಷ್ಟು ಸಂಬಂಧಗಳನ್ನು ಒಂದೇ ಕಥೆಯೊಳಗೆ ಬೆಸೆದು, ಪ್ರೇಕ್ಷಕರಿಗೆ ಭಾವುಕ ಅನುಭವ ನೀಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಮೇಶ್ ಇಂದಿರಾ. ಒಟ್ಟಾರೆ ಕಥೆಯಲ್ಲಿ ಹೊಸತನ ಕಾಣಿಸುವುದಿಲ್ಲ. ಆದರೆ ಅದನ್ನು ನಿರೂಪಿಸುವಲ್ಲಿ ನಿರ್ದೇಶಕರು ಆಯ್ದುಕೊಂಡ ವಿಧಾನ ನೋಡುಗರ ಗಮನ ಸೆಳೆಯುತ್ತದೆ'' - ವಿಜಯವಾಣಿ

    ಭಾವ ಬಣ್ಣದ ಸಮ್ಮಿಶ್ರಣ

    ಭಾವ ಬಣ್ಣದ ಸಮ್ಮಿಶ್ರಣ

    ''ಚಿತ್‌, ಚಿತ್ತಾರಗಳ ಒಟ್ಟು ಗುಚ್ಛವೇ ಬದುಕು. ಈ ಬದುಕಿನ ಹಸಣಕ್ಕೆ ತೀರಾ ತಲೆ ಕೆಡಿಸಿಕೊಳ್ಳದೇ, ಬಂದಂತೆ ಬದುಕಿ ಬಿಡಿ ಎಂಬ ಸಾರ್ವತ್ರಿಕ ಸತ್ಯದೊಂದಿಗೆ ತೆರೆ ಕಂಡಿದೆ ಪ್ರೀಮಿಯರ್ ‌ ಪದ್ಮಿನಿ ಸಿನಿಮಾ. ಹಾಗಂತ ಈ ಚಿತ್ರದಲ್ಲಿ ಎಲ್ಲಿಯೂ ಬೋಧನೆ ಇಲ್ಲ. ಹೀಗೆಯೇ ಬದುಕಿ ಎಂಬ ಪ್ರವಚನವಿಲ್ಲ. ರಂಜಿಸಲು ಹಾಕಿಕೊಂಡ ಚೌಕಟ್ಟಿಲ್ಲ. ಎರಡು ತಲೆಮಾರಿನ ಜೀವನ ಶೈಲಿಯನ್ನು ಆಧುನಿಕ ಪ್ರಪಂಚಕ್ಕೆ ತೆರೆದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಮೇಶ್‌ ಇಂದಿರಾ. ಚೊಚ್ಚಲು ಸಿನಿಮಾದಲ್ಲೇ ನಿದೇಶಕರು ಕಥೆ ಹೇಳುವ ಶೈಲಿಯಲ್ಲಿ ಸಿಕ್ಸರ್ ‌ಬಾರಿಸಿದ್ದಾರೆ'' - ವಿಜಯ ಕರ್ನಾಟಕ

    ಭಾವ ಜಗತ್ತಿನೊಳಗೊಂದು ಸುಖಕರ ಪಯಣ

    ಭಾವ ಜಗತ್ತಿನೊಳಗೊಂದು ಸುಖಕರ ಪಯಣ

    ''ಸಿಹಿ-ಕಹಿಯ ನೂರಾರು ನೆನಪುಗಳ ಗುತ್ಛವಿದೆ. ನಗು, ಅಳು, ಭಾವುಕತೆ ಈ ಎಲ್ಲವೂ ಆ ಪ್ರೀಮಿಯರ್ ‌ ಪದ್ಮಿನಿ ಕಾರಲ್ಲಿದೆ! ಒಂದೇ ಮಾತಲ್ಲಿ ಹೇಳುವುದಾದರೆ, ಇದೊಂದು ಆಪ್ತವೆನಿಸುವ, ಎದೆಭಾರವಾಗಿಸುವ ಮತ್ತು ಸೂಕ್ಷ್ಮಗ್ರಹಿಕೆಯ ಒಂದು ಕೌಟುಂಬಿಕ ಚಿತ್ರ. ಜಗ್ಗೇಶ್‌ ಅವರ ಚಿತ್ರಗಳು ಹೀಗೇ ಇರುತ್ತವೆ, ಹೀಗೇ ಇರಬೇಕು ಅಂದುಕೊಳ್ಳುವ ಮಂದಿಗೆ, "ಪದ್ಮಿನಿ' ಬೇರೆಯದ್ದೇ ಚಿತ್ರಣವನ್ನು ಕಟ್ಟಿಕೊಡುತ್ತದೆ. ನಗುವಲ್ಲೂ ಅಳುವಿದೆ, ಅಸಹಾಯಕತೆಯ ನೋವೂ ತುಂಬಿದೆ. ಬದುಕಿನ ಅರ್ಥ ಏನೆಂಬುದರ ಜೊತೆಗೆ ಸಂಬಂಧಗಳು ಹೇಗೆಲ್ಲಾ ಬೆಸೆದುಕೊಳ್ಳುತ್ತವೆ ಎಂಬುದನ್ನು ಮನಮುಟ್ಟುವ ರೀತಿ ಕಟ್ಟಿಕೊಟ್ಟಿರುವ ನಿರ್ದೇಶಕರ ಪ್ರಯತ್ನ ಇಲ್ಲಿ ಸಾರ್ಥಕ. ಇದು ಒಂದೇ ವರ್ಗಕ್ಕೆ ಸೀಮಿತವಾದ ಸಿನಿಮಾವಲ್ಲ. ಮಕ್ಕಳು ಮತ್ತು ಪೋಷಕರು ಒಟ್ಟಿಗೆ ಕುಳಿತು ನೋಡುವಂತಹ ಯಾವುದೇ ಮುಜುಗರ ಪಡದಂತಹ ಚಿತ್ರ ಎಂಬುದಕ್ಕೆ ಚಿತ್ರದೊಳಗಿನ ಸಾರ ಸಾಕ್ಷಿ'' - ಉದಯವಾಣಿ

    ಹಿತವಾಗಿ ತಾಕುವ ಬೆರಳಿನಂತೆ

    ಹಿತವಾಗಿ ತಾಕುವ ಬೆರಳಿನಂತೆ

    ''ವಿಫಲ ದಾಂಪತ್ಯ, ಕೈಗೆ ಸಿಗದ ಮಗ, ಕೊನೆಗೆ ಅದೇ ಮಗನ ಸಾವು. ಇವೆಲ್ಲ ಈ ಚಿತ್ರದ ಕಥೆಯ ಎಳೆಗಳು. ಈ ಎಳೆಗಳನ್ನು ಒಂದೆಡೆ ತಂದು, ಎಲ್ಲವೂ ಮುಗಿಯಿತು ಎಂದು ಭಾವಿಸದ ನಂತರವೂ ಇನ್ನೇನೂ ತೆರೆದುಕೊಳ್ಳುತ್ತದೆ ಎಂಬುದುನ್ನು ಹೇಳುವುದು ಪ್ರೀಮಿಯರ್ ಪದ್ಮಿನಿ. ಮಧ್ಯಮ ವಯಸ್ಸಿನ, ಮಧ್ಯಮ ಅಥವಾ ಮೇಲ್ಮಧ್ಯಮ ವರ್ಗದವರ ಮನಸ್ಸನ್ನು ಬೆರಳಿನಿಂದ ಹಿತವಾಗಿ ತಾಕುವ ಭಾವುಕ ಅಂಶಗಳಿರುವ ಸುಂದರು ಸಿನಿಮಾ ಕೂಡ ಹೌದು'' - ಪ್ರಜಾವಾಣಿ

    Bangalore mirror

    Bangalore mirror

    ''Premier Padmini is as close to perfection a film can get. It is almost impossible to point out a mistake in this intimate story packed with characters so real, they make a indelible imprint on the mind. This is one of those rare films where every technical aspect fits to perfection. There are hardly any songs; a few bits matching the mood. The film is a shade shorter than two hours, long enough to convey the story and short enough to make the desired impact'' - Bangalore mirror

    English summary
    Kannada actor jaggesh, madhubala, sudarani, hitha chandarshekar starrer premier padmini has released yesterday (april 26th). its complete family entertainer and cool. here is the critics reveiw of movie.
    Saturday, April 27, 2019, 12:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X