Jailer First Half Review: ಶಿವಣ್ಣನ ಕನ್ನಡ ಡೈಲಾಗ್, ರೋಚಕ ಮಧ್ಯಂತರ; ಹೇಗಿದೆ ರಜನಿ 'ಜೈಲರ್' ಫಸ್ಟ್ ಹಾಫ್?

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನೆಲ್ಸನ್ ಕುಮಾರ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಸಿನಿಮಾ ಜೈಲರ್ ಇಂದು ( ಆಗಸ್ಟ್ 10 ) ಬಿಡುಗಡೆಗೊಂಡಿದ್ದು, ಸೂರ್ಯ ಉದಯಿಸುವ ಮುನ್ನವೇ ಚಿತ್ರದ ಪ್ರದರ್ಶನ ಹಲವೆಡೆ ಆರಂಭಗೊಂಡಿದೆ. ಸದ್ಯ ಚಿತ್ರದ ಮೊದಲಾರ್ಧ ಮುಕ್ತಾಯಗೊಂಡಿದ್ದು, ಮೊದಲ ಭಾಗದ ವಿಮರ್ಶೆ ಹೊರಬಿದ್ದಿದೆ.

jailer-first-half-review

168 ನಿಮಿಷಗಳ ಜೈಲರ್ ಸಿನಿಮಾ ಖಳನಾಯಕ ವರ್ಮಾ ಅಬ್ಬರದ ಮೂಲಕ ಆರಂಭವಾಗಲಿದ್ದು, ರಜನಿಕಾಂತ್ ದೇವರ ಮನೆಯಲ್ಲಿ ಪೂಜೆ ಮಾಡುವ ಕಾಮನ್ ಮ್ಯಾನ್ ಆಗಿ ಸಿಂಪಲ್ ಎಂಟ್ರಿ ನೀಡಿದ್ದು, ಚಿತ್ರದ ಮಧ್ಯಂತರ ಬರುವ ವೇಳೆಗೆ ತನ್ನ ಮತ್ತೊಂದು ಮುಖ ದರ್ಶನ ಮಾಡಿಸಿ ರೋಚಕತೆ ಹುಟ್ಟಿಸಿದ್ದಾರೆ.

ಹೀಗೆ ದೇವರ ಮನೆಯಲ್ಲಿ ಪೂಜೆ ಮಾಡುತ್ತಾ ಎಂಟ್ರಿ ನೀಡುವ ಮುತ್ತುವೇಲ್ ಬಹಳ ಸಿಂಪಲ್ ವ್ಯಕ್ತಿ. ಮಡದಿ, ಮಗ, ಸೊಸೆ ಹಾಗೂ ಮೊಮ್ಮಗನ ಜತೆ ಸರಳ ಸುಖ ಸಂಸಾರ ನಡೆಸುವ ಕಾಮನ್ ಮ್ಯಾನ್. ಮುತ್ತುವೇಲ್ ಮಗ ಅರ್ಜುನ್ ಪೊಲೀಸ್ ಅಧಿಕಾರಿಯಾಗಿದ್ದು, ಪ್ರಕರಣವೊಂದನ್ನು ಭೇದಿಸಲು ಹೋಗಿ ಕಣ್ಮರೆಯಾಗ್ತಾನೆ. ಹೀಗೆ ಕಣ್ಮರೆಯಾಗುವ ಮಗನನ್ನು ಹುಡುಕಲು ನಾಯಕ ಮುತ್ತುವೇಲ್ ಮುಂದಾಗಲಿದ್ದು, ಈ ಕಾರ್ಯದಲ್ಲಿ ನರಸಿಂಹ ಪಾತ್ರಧಾರಿ ಶಿವರಾಜ್‌ಕುಮಾರ್ ಎಂಟ್ರಿಯಾಗಲಿದೆ.

ಕನ್ನಡದಲ್ಲಿಯೇ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಡುವ ಶಿವರಾಜ್‌ಕುಮಾರ್ ಮಂಡ್ಯ ಮೂಲದ ಗ್ಯಾಂಗ್‌ಸ್ಟರ್ ಆಗಿದ್ದು, ಮೊದಲಾರ್ಧದ ಮೂರು ದೃಶ್ಯಗಳಲ್ಲಿ ದರ್ಶನ ನೀಡಿದ್ದಾರೆ. ಶಿವಣ್ಣ ನಾಯಕನಿಗೆ ತನ್ನ ಮಗನನ್ನು ಹುಡುಕಲು ಸಹಾಯ ಮಾಡಲಿದ್ದು, ನಾಯಕನಿಗೂ ಶಿವಣ್ಣ ನಿರ್ವಹಿಸಿರುವ ಪಾತ್ರಕ್ಕೂ ಯಾವ ರೀತಿಯ ನಂಟು ಎಂಬುದು ದ್ವಿತೀಯಾರ್ಧದಲ್ಲಿ ರಿವೀಲ್ ಆಗಬೇಕಿದೆ.

ಮಗನನ್ನು ಕಳೆದುಕೊಂಡು ಆತನನ್ನು ಹುಡುಕುವ ಯತ್ನದಲ್ಲಿರುವ ನಾಯಕ ಮಧ್ಯಂತರಕ್ಕೆ ಸರಿಯಾಗಿ ತನ್ನ ಇನ್ನೊಂದು ಮುಖದ ದರ್ಶನ ಮಾಡಿಸಲಿದ್ದು, ಮಗ ಕಣ್ಮರೆಯಾಗಲು ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗ್ತಾನೆ. ಇಂಟರ್‌ವೆಲ್‌ಗೂ ಮುನ್ನ ವರ್ಮಾ ಹಾಗೂ ಮುತ್ತುವೇಲ್ ಏಟು ಎದಿರೇಟಿನ ದೃಶ್ಯವಿದ್ದು, ಸೆಕೆಂಡ್ ಹಾಫ್‌ನಲ್ಲಿ ಅಸಲಿ ಕಥೆ ಆರಂಭವಾಗಲಿದೆ. ಚಿತ್ರದ ಮೊದಲಾರ್ಧದ ತುಂಬಾ ಕಾಮಿಡಿ ಮಾಡುತ್ತಾ, ಸೌಮ್ಯ ಸ್ವಭಾವದ ವ್ಯಕ್ತಿ ಎನಿಸಿಕೊಂಡಿದ್ದ ನಾಯಕ ಮಧ್ಯಂತರದ ಸಮಯಕ್ಕೆ ತನ್ನ ಮತ್ತೊಂದು ಮುಖ ದರ್ಶನ ಮಾಡಿಸಿದ್ದು, ಟೈಗರ್ ಮುತ್ತುವೇಲ್ ಯಾರು ಎಂಬುದು ದ್ವಿತೀಯಾರ್ಧದಲ್ಲಿ ರಿವೀಲ್ ಆಗಲಿದೆ.

ಜೈಲರ್ ಮುತ್ತುವೇಲ್ ಯಾರು, ಆತ ಯಾಕೆ ಇಷ್ಟು ಸರಳ ಜೀವನ ನಡೆಸುತ್ತಿದ್ದಾನೆ ಎಂಬ ಪ್ರಶ್ನೆಗಳಿಗೆಲ್ಲಾ ದ್ವಿತೀಯಾರ್ಧ ಉತ್ತರಿಸಲಿದ್ದು, ಮೊದಲಾರ್ಧದಲ್ಲಿ ಕಾಣಿಸಿಕೊಳ್ಳದ ಜಾಕಿ ಶ್ರಾಫ್ ಹಾಗೂ ಮೋಹನ್ ಲಾಲ್ ಎಂಟ್ರಿ ಸಹ ದ್ವಿತೀಯಾರ್ಧದಲ್ಲಿ ಆಗಲಿದೆ. ಇನ್ನು ನಿರ್ದೇಶಕ ನೆಲ್ಸನ್ ಮೊದಲಾರ್ಧದಲ್ಲಿ ಪ್ರೇಕ್ಷಕರಿಗೆ ಒಳ್ಳೆಯ ಕಾಮಿಡಿ ದೃಶ್ಯಗಳ ಮನರಂಜನೆಯ ರಸದೌತಣವನ್ನು ಬಡಿಸಿದ್ದು, ಅಚ್ಚುಕಟ್ಟಾಗಿ ಕಟ್ಟುಕೊಟ್ಟಿದ್ದಾರೆ. ಎಂದಿನಂತೆ ಅನಿರುದ್ಧ್ ಹಿನ್ನೆಲೆ ಸಂಗೀತ ಪ್ಲಸ್ ಪಾಯಿಂಟ್ ಆಗಿದೆ.

More from Filmibeat

English summary
Jailer First Half Review: Check Out The Audience Response After Watching First Half Of Jailer Movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X