James Twitter Review : ಅಪ್ಪು ಕೊನೆ ಸಿನಿಮಾ 'ಜೇಮ್ಸ್' ಚಿತ್ರದ ಟ್ವಿಟ್ಟರ್ ವಿಮರ್ಶೆ!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಇಂದು ರಿಲೀಸ್ ಆಗಿದೆ. ಮುಂಜಾನೆಯಿಂದಲೇ 'ಜೇಮ್ಸ್' ಚಿತ್ರ ಬಿಡುಗಡೆಯ ಸಂಭ್ರಮ ಶುರುವಾಗಿದೆ. ಅಪ್ಪು ಅಭಿಮಾನಿಗಳು, ಪ್ರೇಕ್ಷಕರು ಮತ್ತು ಸಿನಿಮಾ ಮಂದಿ ಇಂದು 'ಜೇಮ್ಸ್' ಸಿನಿಮಾವನ್ನು ಕಣ್ತುಂಬಿ ಕೊಳ್ಳಲಿದ್ದಾರೆ. ಎಲ್ಲೆಡೆ ಚಿತ್ರದ ಸಂಭ್ರಮ ಮುಗಿಲು ಮುಟ್ಟಿದೆ. ಹಬ್ಬದಂತೆ 'ಜೇಮ್ಸ್' ಚಿತ್ರ ರಿಲೀಸ್ ಅನ್ನೂ ಆಚರಿಸುತ್ತಿದ್ದಾರೆ.
Recommended Video

ಈಗಾಗಲೇ ಸಿನಿಮಾ ನೋಡಿದರವರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಬರೆದುಕೊಳ್ಳುತ್ತಾ ಇದ್ದಾರೆ. ಸಿನಿಮಾ ಹೇಗಿದೆ ಎನ್ನುವ ಬಗ್ಗೆ ರಿವ್ಯೂ ಕೂಡ ಹಂಚಿಕೊಳ್ಳುತ್ತಾ ಇದ್ದಾರೆ. ಟ್ವಿಟ್ಟರ್‌ನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಭಾವುಕರಾಗಿದ್ದಾರೆ. 'ಜೇಮ್ಸ್' ಚಿತ್ರ ನೋಡುವವರ ಹೃದಯ ಸ್ಪರ್ಶಿಸಿದೆ.
ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರೇ ಹೈಲೈಟ್. ಇಡೀ ಸಿನಿಮಾದಲ್ಲಿ ಅಪ್ಪು ನೋಡುವುದೊಂದೆ ಪ್ರೇಕ್ಷಕರ ಪ್ರಮುಖ ಉದ್ದೇಶ. ಇನ್ನು ಸಿನಿ ಪ್ರೇಕ್ಷಕರು ಅಪ್ಪುನಾ ತೆರೆಮೇಲೆ ನೋಡಿ ಖುಷಿಯಾಗಿದ್ದಾರೆ. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಆಕ್ಷನ್ ಸ್ಟಂಟ್‌ಗಳು ಭರ್ಜರಿಯಾಗಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಚಿತ್ರದಲ್ಲಿ ನಾಯಕಿಯಾಗಿ ಅಪ್ಪು ಜೊತೆಗೆ ಪ್ರಿಯಾ ಆನಂದ್ ನಟಿಸಿದ್ದಾರೆ. ಅತಿಥಿ ಪಾತ್ರಗಳಲ್ಲಿ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅಭಿನಯಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಸಿನಿಮಾ ನೋಡಿದವರು ಹೇಗೆ ವಿಮರ್ಶೆ ಮಾಡಿದ್ದಾರೆ. ಸಿನಿಮಾ ಬಗ್ಗೆ ಏನೆಲ್ಲಾ ಹೇಳುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

ಸಿನಿಮಾದ ಮೊದಲಾರ್ಧ ಕೇವಲ ಅಪ್ಪು ಶೋ. ಅಪ್ಪು ಆಕ್ಷನ್ ಸೂಪರ್. ಮೊದಲ ಅರ್ಧ ಬ್ಯಾಂಗ್.. ಬ್ಯಾಂಗ್.. ಬ್ಯಾಂಗ್ ಎಂದು ಬರೆದುಕೊಂಡಿದ್ದಾರೆ.
ಇನ್ನು ಪುನೀತ್ ರಾಜ್‌ಕುಮಾರ್‌ರನ್ನು ತೆರೆಯ ಮೇಲೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾದಲ್ಲಿ ಪ್ರತಿ ಸೆಕೆಂಡು ನಿಮ್ಮನ್ನು ನೋಡುವಾಗ ದು:ಖ ಉಮ್ಮಳಿಸಿ ಬರುತ್ತದೆ. ಎಂದು ಹಲವು ಬರೆದುಕೊಂಡಿದ್ದಾರೆ.
ಇನ್ನು ಚಿತ್ರದಲ್ಲಿನ ಪುನೀತ್ ರಾಜ್‌ಕುಮಾರ್ ಪ್ರತೀ ಡೈಲಾಗ್ ನೋಡಿ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ತೆರೆಯ ಮೇಲೆ ಪುನೀತ್ ರಾಜ್‌ಕುಮಾರ್‌ರನ್ನು ನೋಡುವುದೇ ಅದೃಷ್ಟ ಎನ್ನುವಂತೆ ಜನ 'ಜೇಮ್ಸ್' ಸಿನಿಮಾವನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.
ಚೇತನ್ ಕುಮಾರ್ ಬರೆದು ನಿರ್ದೇಶಿಸಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅನು ಪ್ರಭಾಕರ್, ಶ್ರೀಕಾಂತ್, ಆರ್. ಶರತ್‌ಕುಮಾರ್, ಹರೀಶ್ ಪೆರಾಡಿ, ತಿಲಕ್ ಶೇಖರ್, ಮುಖೇಶ್ ರಿಷಿ, ಆದಿತ್ಯ ಮೆನನ್, ಅವಿನಾಶ್ ಮತ್ತು ಸಾಧು ಕೋಕಿಲ, ಚಿಕ್ಕಣ್ಣ ಮತ್ತು ಸುಚೇಂದ್ರ ಪ್ರಸಾದ್ ಪೋಷಕ ಪಾತ್ರಗಳಲ್ಲಿದ್ದಾರೆ.
ಕಿಶೋರ್ ಪ್ರೊಡಕ್ಷನ್ಸ್ ಅಡಿಯಲ್ಲಿ ಕಿಶೋರ್ ಪಾತಿಕೊಂಡ ಚಿತ್ರವನ್ನು ನಿರ್ಮಿಸಿದ್ದಾರೆ. 'ಜೇಮ್ಸ್' ತಾಂತ್ರಿಕ ತಂಡದಲ್ಲಿ ಸಂಗೀತ ಸಂಯೋಜಕ ಚರಣ್ ರಾಜ್, ಸಂಕಲನಕಾರ ದೀಪು ಎಸ್ ಕುಮಾರ್ ಮತ್ತು ಛಾಯಾಗ್ರಾಹಕ ಸ್ವಾಮಿ ಜೆ ಗೌಡ ಇದ್ದಾರೆ.


Click it and Unblock the Notifications











