Jawan Twitter Review: 'ಜವಾನ್' ಪಕ್ಕಾ ಬ್ಲಾಕ್‌ಬಸ್ಟರ್‌.. ಆದ್ರೆ..

ಶಾರುಖ್ ಖಾನ್ ಹಾಗೂ ನಯನತಾರಾ ನಟನೆಯ 'ಜವಾನ್' ಸಿನಿಮಾ ತೆರೆಗಪ್ಪಳಿಸಿ ಧೂಳೆಬ್ಬಿಸಿದೆ. ಮಧ್ಯರಾತ್ರಿಯಿಂದಲೇ ಹಲವೆಡೆ ಸಿನಿಮಾ ಪ್ರದರ್ಶನ ಶುರುವಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ ದಾಖಲೆ ಬರೆದಿತ್ತು. ಇದೀಗ ಸಿಲ್ವರ್ ಸ್ಕ್ರೀನ್‌ ಮೇಲೆ 'ಜವಾನ್' ದರ್ಬಾರ್ ಶುರುವಾಗಿದೆ.

ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ 'ಜವಾನ್' ಚಿತ್ರವನ್ನು ಸ್ವತಃ ಶಾರುಖ್ ಖಾನ್ ನಿರ್ಮಾಣ ಮಾಡಿದ್ದಾರೆ. ಟ್ರೈಲರ್, ಸಾಂಗ್ಸ್‌ನಿಂದ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಇದೀಗ ಪ್ರೇಕ್ಷಕರನ್ನು ರಂಜಿಸುತ್ತಿದೆ. ವಿಜಯ್ ಸೇತುಪತಿ, ಸಂಜಯ್ ದತ್, ಪ್ರಿಯಾಮಣಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅನಿರುದ್ದ್ ರವಿಚಂದರ್ ಮ್ಯೂಸಿಕ್ ಚಿತ್ರಕ್ಕಿದೆ.

Jawan Twitter Review: What netizens Say After Watching Shah Rukh Khans Jawan Movie

ನಯನತಾರಾ, ಅಟ್ಲಿ, ಅನಿರುದ್ದ್ ರವಿಚಂದರ್ ಮೂವರಿಗೂ ಇದು ಮೊದಲ ಬಾಲಿವುಡ್ ಸಿನಿಮಾ. ಹಿಂದಿ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಗಳಲ್ಲೂ 'ಜವಾನ್' ಸಿನಿಮಾ ರಿಲೀಸ್ ಆಗಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಬ್ಲಾಕ್‌ಬಸ್ಟರ್

ಒಂದೇ ಮಾತಲ್ಲಿ ಹೇಳಬೇಕು ಅಂದರೆ ಬ್ಲಾಕ್‌ ಬಸ್ಟರ್. ಜಬರ್ದಸ್ತ್ ಆಕ್ಷನ್ ಸೀಕ್ವೆನ್ಸ್ ಜೊತೆಗೆ ಮಾಡಿರುವ ಪಕ್ಕಾ ಮಾಸ್‌ ಸಿನಿಮಾ 'ಜವಾನ್'. ಅದ್ಭುತ ವಿಷ್ಯುವಲ್ಸ್, ಶಾರುಖ್ ಖಾನ್ ಆಕ್ಷನ್ ಅವತಾರ ಸೂಪರ್. ಉಳಿದವರು ಕೂಡ ಚೆನ್ನಾಗಿ ಮಾಡಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಆಗಿ ನಯನತಾರಾ ಬೆಂಕಿ. ನೆಗೆಟಿವ್ ರೋಲ್‌ನಲ್ಲಿ ವಿಜಯ್‌ ಸೇತುಪತಿ ಕೇಕ್‌ ಮೇಲೆ ಚೆರ್ರಿ. ಒಳ್ಳೆ ಕಥೆ ಜೊತೆಗೆ ಇತ್ತೀಚೆಗೆ ಮಾಡಿರುವ ಪರ್ಫೆಕ್ಟ್ ಸಿನಿಮಾ ಜವಾನ್.

ಮಾಸ್ ಎಂಟರ್‌ಟೈನರ್

ಸ್ಟೈಲ್, ಸ್ಕೇಲ್, ಸಾಂಗ್ಸ್ ಮತ್ತು ಸರ್ಪ್ರೈಸ್‌ ಕೆಮಿಯೊ. ಮುಖ್ಯವಾಗಿ ಶಾರುಖ್ ಮತ್ತೊಮ್ಮೆ ಖಡಕ್ ಮಾಸ್ ಅವತಾರದಲ್ಲಿ ವಾಪಸ್ ಬಂದಿದ್ದಾರೆ. ಈ ವರ್ಷ ಕಿಂಗ್‌ಖಾನ್‌ಗೆ 2ನೇ ಬ್ಲಾಕ್‌ಬಸ್ಟರ್ 'ಜವಾನ್' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

Jawan Twitter Review: What netizens Say After Watching Shah Rukh Khans Jawan Movie

ಅಟ್ಲಿ ಸ್ಕ್ರೀನ್‌ಪ್ಲೇ ಚಿಂದಿ

ಜವಾನ್ ಇಂಟರ್‌ವಲ್ ಬ್ಲಾಕ್ ಸೂಪರ್. ಫಸ್ಟ್‌ ಹಾಫ್ ಮುಗೀತು. ಅಟ್ಲಿ ಸ್ಕ್ರೀನ್‌ಪ್ಲೇ ಸಖತ್ ಆಗಿದೆ. ಥಿಯೇಟರ್‌ಗಳಲ್ಲಿ ಮಾತ್ರ ನೋಡಿ ಎಂದು ಸಿದ್ದಾರ್ಥ್ ಎಂಬುವವರು ಬರೆದುಕೊಂಡಿದ್ದಾರೆ.

ಮೆಗಾ ಬ್ಲಾಕ್‌ಬಸ್ಟರ್

ಮಾಸ್ ಆಕ್ಷನ್, ಡ್ರಾಮಾ ಎರಡನ್ನು ಸೇರಿಸಿ ಅಟ್ಲಿ ಎಮೋಷನಲ್ ಆಗಿ ಅಟ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಫಸ್ಟ್‌ಹಾಫ್ ಸಿನಿಮಾ ಅದ್ಭುತವಾಗಿದೆ. ಮುಖ್ಯವಾಗಿ ಆಕ್ಷನ್ ಸನ್ನಿವೇಶಗಳು. ಸೆಕೆಂಡ್ ಹಾಫ್ ಇನ್ನು ಚೆನ್ನಾಗಿದೆ. ಶಾರುಖ್ ಫ್ಲ್ಯಾಶ್‌ಬ್ಯಾಕ್‌ ಜೊತೆಗೆ ಸಖತ್ ಗೂಸ್‌ಬಂಪ್ಸ್ ತರಿಸುತ್ತದೆ. ನಯನತಾರಾ ಎಂಟ್ರಿ ಹಾಗೂ ವಿಜಯ್ ಸೇತುಪತಿ ನಟನೆ ಚೆನ್ನಾಗಿದೆ. ಅನಿರುದ್ದ್ ಬಿಜಿಎಂ ಯಾವಾಗಲೂ ಸಖತ್ ಆಗಿರುತ್ತದೆ. ಜವಾನ್ ಚಿತ್ರದಲ್ಲಿ ಅದು ಮತ್ತೆ ಸಾಬೀತಾಗಿದೆ. ಸಿನಿಮಾ ಪಕ್ಕಾ ಬ್ಲಾಕ್‌ಬಸ್ಟರ್, ದಳಪತಿ ವಿಜಯ್ ಅತಿಥಿ ಪಾತ್ರದಲ್ಲಿ ನಟಿಸಿಲ್ಲ. ಸಿನಿಮಾ ಕಲೆಕ್ಷನ್ 1000 ಕೋಟಿ ದಾಟುತ್ತದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

More from Filmibeat

English summary
Explore What is Audience Responses To Jawan Kannada Movie On Twitter:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X