twitter
    For Quick Alerts
    ALLOW NOTIFICATIONS  
    For Daily Alerts

    ಶೃಂಗಾರ ಪ್ರಿಯರಿಗೆ ರಸಭಂಗ...(ಜಿಸ್ಮ್ 2 ವಿಮರ್ಶೆ)

    By ರವಿಕಿಶೋರ್
    |

    ನಿಜ ಜೀವನದಲ್ಲಿ ನೀಲಿ ಚಿತ್ರಗಳ ತಾರೆಯಾಗಿ ಗುರುತಿಸಿಕೊಂಡಿರುವ ಸನ್ನಿ ಲಿಯೋನ್ ತನ್ನ ಚೊಚ್ಚಲ ಬಾಲಿವುಡ್ 'ಜಿಸ್ಮ್ 2' ಚಿತ್ರದಲ್ಲೂ ನಿಜ ಜೀವನದ ಪಾತ್ರವನ್ನು ಪೋಷಿಸಿದ್ದಾರೆ. ಚಿತ್ರದ ಟ್ರೇಲರ್ ಗಳು, ಹಾಟ್ ಪೋಸ್ಟರ್ ಗಳು, ಅರೆನಗ್ನ ಸನ್ನಿವೇಶಗಳು, ಚುಂಬನ ದೃಶ್ಯಗಳು ಚಿತ್ರದ ಬಗೆಗಿನ ಕಲ್ಪನೆ, ನಿರೀಕ್ಷೆಗಳನ್ನು ಸಿಕ್ಕಾಪಟ್ಟೆ ಹೆಚ್ಚಿಸಿದ್ದವು.

    ಶೃಂಗಾರ ಪ್ರಿಯರಂತೂ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಚಿತ್ರದಲ್ಲಿ ತಮಗೆ ಬೇಕಾದ ಮಸಾಲೆ ಅಂಶಗಳು ಸಾಕಷ್ಟಿವೆ ಎಂಬುದು ಅವರ ಕಲ್ಪನೆಯಾಗಿತ್ತು. ಚಿತ್ರದಲ್ಲಿ ಆ ರೀತಿಯ ಸನ್ನಿವೇಶಗಳೇನಾದರೂ ಇವೆಯೇ?

    ಇಜ್ನ (ಸನ್ನಿ ಲಿಯೋನ್) ಒಬ್ಬ ನೀಲಿ ಚಿತ್ರಗಳ ತಾರೆ. ಕಬೀರ್ ವಿಲ್ಸನ್ (ರಣದೀಪ್ ಹೂಡಾ) ನನ್ನು ಪ್ರೇಮಿಸುವ ಆಕೆ ಆತನ ಕೈಯಲ್ಲಿ ಮೋಸ ಹೋಗುತ್ತಾಳೆ. ತಾನು ಮೋಸ ಹೋದೆ ಎಂಬ ವಿಷಯವನ್ನು ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾಳೆ.

    ಆದರೆ ಇಂಟಲಿಜೆನ್ಸ್ ಏಜೆಂಟ್ ಅಯಾನ್ ಠಾಕೂರ್ (ಅರುಣೋದಯ ಸಿಂಗ್) ಆಕೆಯನ್ನು ಆತ್ಮಹತ್ಯೆಯಿಂದ ತಡೆಯುತ್ತಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ದೇಶಕ್ಕಾಗಿ ಹೋರಾಡುವಂತೆ ವಿನಂತಿಸಿಕೊಳ್ಳುತ್ತಾನೆ. ಕಡೆಗೆ ಆಕೆಯ ಮನವೊಲಿಸುತ್ತಾನೆ.

    ತನಗೆ ಇಷ್ಟವಿಲ್ಲದಿದ್ದರೂ ಅಯಾನ್ ಮಾತಿಗೆ ಬೆಲೆಕೊಟ್ಟು ಒಪ್ಪಿಕೊಳ್ಳುತ್ತಾಳೆ. ಇವರಿಬ್ಬರೂ ಕೈಜೋಡಿಸಿ ಕಬೀರ್ ನನ್ನು ಮುಗಿಸಲು ಪ್ಲಾನ್ ಮಾಡುತ್ತಾರೆ. ಇಷ್ಟಕ್ಕೂ ಈ ಕಬೀರ್ ಯಾರು? ಆತನನ್ನು ಕೊಲ್ಲಲು ಅಯಾನ್ ಯಾಎಕ್ ಪ್ಲಾನ್ ಮಾಡಿದ? ಇಜ್ನ ಕೊನೆಗೇನಾಗುತ್ತಾಳೆ? ಎಂಬುದೇ ಮುಂದಿನ ಕಥೆ.

    ಸನ್ನಿ ಲಿಯೋನ್ ಕೇವಲ ಸೆಕ್ಸ್ ಚಿತ್ರಗಳಲ್ಲಿ ಮಾತ್ರ ಅಭಿನಯಿಸಲು ಲಾಯಕ್ಕು. ಮಾಮೂಲಿ ಚಿತ್ರಗಳಲ್ಲಿ ಅಭಿನಯಿಸಲು ಈಕೆ ನಾಲಾಯಕ್ಕು ಎಂಬ ಅಂಶ 'ಜಿಸ್ಮ್ 2' ಚಿತ್ರ ನೋಡಿದರೆ ಅರ್ಥವಾಗುತ್ತದೆ. ಸನ್ನಿ ಲಿಯೋನ್ ಗೆ ನಟನೆಯ ಗಂಧಗಾಳಿ ಗೊತ್ತಿಲ್ಲ ಎಂಬ ಅಂಶವೂ ಸ್ಪಷ್ಟವಾಗುತ್ತದೆ.

    ಇನ್ನು ರಣದೀಪ್ ಹೂಡಾ ಕೂಡಾ ಅಷ್ಟೇ ಪೇಲವವಾಗಿ ಅಭಿನಯಿಸಿ ಪ್ರೇಕ್ಷಕರನ್ನು ಮತ್ತಷ್ಟು ನಿರಾಸೆಗೊಳಿಸಿದ್ದಾರೆ. ಅರುಣೋದಯ ಸಿಂಗ್ ಪಾತ್ರವೂ ಅಷ್ಟೇ ಎರಡರಲ್ಲಿ ಮತ್ತೊಂದಾಗಿದೆ. ಆದರೆ ಇವರು ಮೂವರ ಅಂಗಸೌಷ್ಠವನ್ನು ಮಾತ್ರ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ ಅಷ್ಟೇ.

    ತಾಂತ್ರಿಕ ಅಂಶಗಳು: ಚಿತ್ರದ ನಿರ್ದೇಶಕಿ ಪೂಜಾ ಭಟ್ ಸಂಪೂರ್ಣ ವಿಫಲರಾಗಿದ್ದಾರೆ. ಚಿತ್ರವನ್ನು ಹೇಗೆ ತೆಗೆಯಬಾರದು ಎಂಬುದಕ್ಕೆ 'ಜಿಸ್ಮ್ 2' ತಾಜಾ ಉದಾಹರಣೆ. ಆದರೆ ಚಿತ್ರದಲ್ಲಿ ಮೆಚ್ಚಲೇ ಬೇಕಾದ ಅಂಶ ಎಂದರೆ ಛಾಯಾಗ್ರಹಣ.

    ಚಿತ್ರೀಕರಣಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಆಹ್ಲಾದಕರವಾದ ಸನ್ನಿವೇಶಗಳು ಪ್ರೇಕ್ಷಕರ ಕಣ್ಮನ ತಣಿಸುತ್ತವೆ. ಹಿನ್ನೆಲೆ ಸಂಗೀತ ಪರ್ವಾಗಿಲ್ಲ. ಹಾಡುಗಳಲ್ಲಿ ಹೊಸತನವಿಲ್ಲದಿದ್ದರೂ ಆವರೇಜ್ ಆಗಿವೆ.

    ಸಿನಿಮಾ ಟ್ರೇಲರ್ ಗಳನ್ನು ನೋಡಿ, ಪೋಸ್ಟರ್ ಗಳನ್ನು ನೋಡಿ ಇನ್ನೇನು ಇದೆ ಎಂದು ಭಾವಿಸಿ ಹೋದ ಪ್ರೇಕ್ಷಕರಿಗೆ ನಿರಾಸೆ ತಪ್ಪಿದ್ದಲ್ಲ. ಚಿತ್ರದಲ್ಲಿ ಎರಡು ಮೂರು ಕಿಸ್ಸಿಂಗ್ ಸನ್ನಿವೇಶಗಳು ಬಿಟ್ಟರೆ ಇನ್ನೇನು ಆ ರೀತಿಯ ಹಾಟೂ ಇಲ್ಲ ಗಾಟು ಮೊದಲೇ ಇಲ್ಲ.

    ಮಹೇಶ್ ಭಟ್ ಅವರ ಜಿಸ್ಮ್, ಮರ್ಡರ್ ಚಿತ್ರಗಳಿಗೆ ಹೋಲಿಸಿದರೆ ಅವುಗಳಷ್ಟು ಹಾಟ್ ಆಗಿ ಜಿಸ್ಮ್ 2 ಮೂಡಿಬಂದಿಲ್ಲ. ಚಿತ್ರದಲ್ಲಿ ಕತೆಯೇ ಇಲ್ಲ. ಇರುವ ಕತೆ ಅತ್ಯಂತ ಬಾಲೀಶ. ಸನ್ನಿ ಲಿಯೋನ್ ಅವರನ್ನು ಬಾಲಿವುಡ್ ಗೆ ಪರಿಚಯಿಸುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಿರುವಂತಿದೆ.

    ಕೊನೆಯ ಮಾತು: ಸಿನಿಮಾ ನೋಡಿದ ಮೇಲೆ ಯಾಕಾದರೂ ಬಂದೆವೋ? ಎಂಬ ಪ್ರಶ್ನೆ ಕಾಡದೆ ಬಿಡುವುದಿಲ್ಲ. ಇಷ್ಟರ ಮೇಲೂ ನೋಡಿಯೇ ನೋಡ್ತೀವಿ ಎಂದರೆ ನಮ್ಮಿಷ್ಟ.

    ಬ್ಯಾನರ್: ಕ್ಲಾಕ್ ವರ್ಕ್ಸ್ ಫಿಲಂ, ಫಿಷ್ ಐ ನೆಟ್ ವರ್ಕ್ಸ್
    ನಿರ್ದೇಶನ: ಪೂಜಾ ಭಟ್
    ನಿರ್ಮಾಣ: ಡಿನೋಮೋರಿಯಾ, ಪೂಜಾ ಭಟ್
    ಕಥೆ, ಚಿತ್ರಕಥೆ: ಮಹೇಶ್ ಭಟ್
    ಸಂಗೀತ: ಆರ್ಕೋ ಪ್ರಾವೋ ಮುಖರ್ಜಿ, ಮಿಥುನ್
    ಛಾಯಾಗ್ರಹಣ: ನಿಗಮ್ ಬೊಂಜಾನ್
    ತಾರಾಗಣ: ಸನ್ನಿ ಲಿಯೋನ್, ರಣದೀಪ್ ಹೂಡಾ, ಅರುಣೋದಯ ಸಿಂಗ್

    English summary
    Jism 2 film is designed to be Sunny Leone’s ticket to a place in the Bollywood sun, but it isn’t quite love-all in her favour. Yet, Jism 2 has enough soul not be swamped by a curvaceous body. It is more than just another 'booby' trap of a film.
    Saturday, August 11, 2012, 12:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X