twitter
    For Quick Alerts
    ALLOW NOTIFICATIONS  
    For Daily Alerts

    Joji Movie Review: ಸುಂದರ ಸಿನಿಮಾಕ್ಕೆ ಅದ್ಭುತ ನಟನೆಯ ಕಳಶವಿಟ್ಟ ಫಹಾದ್‌

    |

    ಷೇಕ್ಸ್‌ಪಿಯರ್‌ನ ' ಮ್ಯಾಕ್‌ಬೆತ್' ಕತೆಯನ್ನು ಆಧರಿಸಿ ಹಲವು ಸಿನಿಮಾಗಳು ಭಾರತದ ವಿವಿಧ ಭಾಷೆಗಳಲ್ಲಿ ಬಂದಿವೆ. ಆದರೆ ಕೆಲವಷ್ಟೆ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ನಿಲ್ಲುತ್ತವೆ. ಅದೇ ಪಟ್ಟಿಗೆ ಸೇರುತ್ತದೆ ಕಳೆದ ವಾರವಷ್ಟೆ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆದ 'ಜೋಜಿ' ಸಿನಿಮಾ.

    ಫಹಾದ್ ಫಾಸಿಲ್ ನಟಿಸಿ ದಿಲೇಶ್ ಪೂತನ್ ನಿರ್ದೇಶಿಸಿರುವ ಈ ಸಿನಿಮಾ ಪ್ರೇಕ್ಷಕನಿಗೆ ಒಂದು ವಿಭಿನ್ನ ಅನುಭವ ನೀಡುತ್ತದೆ. ಸಿನಿಮಾ ಮುಗಿದ ಮೇಲೆ ಕತೆ, ಪಾತ್ರಗಳು ಕಾಡಲಾರಂಭಿಸುತ್ತದೆ. ಸಿನಿಮಾ ಗುಂಗು ತಲೆಯಿಂದ ಬಹುಕಾಲ ಹೊರಹೋಗುವುದಿಲ್ಲ.

    Drishyam 2 movie review: ಮತ್ತೆ ಗೆದ್ದ ಜಾರ್ಜ್ ಕುಟ್ಟಿ, ಪೆಚ್ಚಾದ ಪೊಲೀಸರುDrishyam 2 movie review: ಮತ್ತೆ ಗೆದ್ದ ಜಾರ್ಜ್ ಕುಟ್ಟಿ, ಪೆಚ್ಚಾದ ಪೊಲೀಸರು

    ಕೊರೊನಾದ ಸಂಕಷ್ಟದ ಸಮಯದಲ್ಲಿ ಕಡಿಮೆ ಸಂಪನ್ಮೂಲಗಳನ್ನು ಬಳಸಿ, ಸೀಮಿತ ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ ಈ ಸಿನಿಮಾ ಸೃಜನಶೀಲತೆ ದೃಷ್ಟಿಯಿಂದ 'ಬೃಹತ್‌' ಆಗಿದೆ. ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ ತಂದೆ ಹಾಸಿಗೆ ಹಿಡಿದಾಗ ಮಗನಲ್ಲಿ ಏಳುವ ದುರಾಸೆ ಅದರಿಂದ ಅವನು ಹಿಡಿವ ದಾರಿ, ಮಾಡುವ ಹಿಂಸೆ ಇದೇ ಸಿನಿಮಾದ ಒನ್‌ಲೈನರ್ ಕತೆ.

    ತಣ್ಣನೆಯ ಕ್ರೌರ್ಯವನ್ನು ಪ್ರತಿಬಿಂಬಿಸಿರುವ ರೀತಿ ಅದ್ಭುತ

    ತಣ್ಣನೆಯ ಕ್ರೌರ್ಯವನ್ನು ಪ್ರತಿಬಿಂಬಿಸಿರುವ ರೀತಿ ಅದ್ಭುತ

    ಜೋಜಿ ಪಾತ್ರ ನಿರ್ವಹಿಸಿರುವ ಫಹಾದ್ ಫಾಸಿಲ್ ತಾವೇಕೆ ಭಾರತದ ಅತ್ಯುತ್ತಮ ನಟ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಪ್ಪನಿಂದ, ಮನೆಯವರಿಂದ ನಿರ್ಲಕ್ಷ್ಯಕ್ಕೆ ಒಳಗಾದ ಯುವಕ ದುರಾಸೆಗೆ ಸಿಲುಕಿ, ದುರಾಸೆ ಈಡೇರಿಸಿಕೊಳ್ಳಲು ಕ್ರೌರ್ಯವನ್ನು ಆವಾಹಿಸಿಕೊಳ್ಳುತ್ತಾನೆ. ಸನ್ನಿವೇಶಕ್ಕೆ ತಕ್ಕಂತೆ ಜೋಜಿಯ ಮನಸ್ಥಿತಿಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಇಂಥ ಸಂಕೀರ್ಣವಾದ ಪಾತ್ರವನ್ನು ಲೀಲಾಜಾಲವಾಗಿ ನಟಿಸಿದ್ದಾರೆ ಫಹಾದ್. ಪಾತ್ರದ ತಣ್ಣನೆಯ ಕ್ರೌರ್ಯವನ್ನು ಫಹಾದ್ ಪ್ರತಿಬಿಂಬಿಸಿರುವ ರೀತಿ ಅದ್ಭುತ.

    ಸಂಕೀರ್ಣ ಭಾವಗಳ ಅನಾವರಣದ ಯತ್ನ

    ಸಂಕೀರ್ಣ ಭಾವಗಳ ಅನಾವರಣದ ಯತ್ನ

    ಸಿನಿಮಾದ ಕತೆ ಸರಳವಾಗಿಯೇ ಇದೆ ಆದರೆ ಈ ಸರಳ ಕತೆ ಮೂಲಕ ಮನುಷ್ಯನ ಸಂಕೀರ್ಣ ಭಾವಗಳನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಲಾಗಿದೆ. ಷೇಕ್ಸ್‌ಪಿಯರ್‌ನ 'ಮ್ಯಾಕ್‌ಬೆತ್‌' ಇದೇ ಕಾರಣಕ್ಕೆ ಅತ್ಯುತ್ತಮ ಕೃತಿ ಎನಿಸಿಕೊಂಡಿರುವುದು. ಮ್ಯಾಕ್‌ಬೆತ್‌ ಅಂಥಹಾ ಒಳ್ಳೆಯ ಕತೆಯನ್ನು ಹೇಗೆ ಭಿನ್ನ-ಭಿನ್ನ ರೀತಿಯಲ್ಲಿ ಪ್ರಸ್ತುತ ಪಡಿಸಬಹುದು ಎಂಬುದಕ್ಕೆ 'ಜೋಜಿ' ಒಳ್ಳೆಯ ಉದಾಹರಣೆ.

    The Great Indian Kitchen Review: ಅಡುಗೆಮನೆಯಲ್ಲಿ ಬೆತ್ತಲಾಗುವ 'ಗಂಡಸು'The Great Indian Kitchen Review: ಅಡುಗೆಮನೆಯಲ್ಲಿ ಬೆತ್ತಲಾಗುವ 'ಗಂಡಸು'

    ದೃಶ್ಯ ಸಂಯೋಜನೆ ಭಿನ್ನವಾಗಿದೆ

    ದೃಶ್ಯ ಸಂಯೋಜನೆ ಭಿನ್ನವಾಗಿದೆ

    ಸಿನಿಮಾದಲ್ಲಿನ ದೃಶ್ಯ ಸಂಯೋಜನೆ ಭಿನ್ನವಾಗಿದೆ. ಮನೆ ಒಳಗೆ ತೆಗೆಯಲಾಗಿರುವ ಲಾಂಗ್‌ ಶಾಟ್‌ಗಳು. ನೆರಳು ಬೆಳಕಿನ ಆಟ. ಮನೆಯ ಸುತ್ತಲ ವಾತಾವರಣ, ಫಹಾದ್ ಫಾಸಿಲ್‌ನ ಕ್ಲೋಸ್‌ ಅಪ್ ಶಾಟ್‌ಗಳು, ರಬ್ಬರ್ ಫ್ಲಾಂಟ್‌ನ ಏರಿಯಲ್‌ ಶಾಟ್‌ಗಳು ಭಿನ್ನವಾಗಿರುವ ಜೊತೆಗೆ ಮುದ ನೀಡುತ್ತವೆ. ಪಾತ್ರಗಳು ಸರಳುಗಳ ಹಿಂದಿರುವಂತೆ ಚಿತ್ರಿಸಿರುವುದು, ಪಾತ್ರಗಳ ಬದಲಾದ ಮನಸ್ಥಿತಿಯನ್ನು ಕನ್ನಡಿ ಮೂಲಕ ತೋರುವ ಪ್ರಯತ್ನ ಇಂಥ ಹಲವು ದೃಶ್ಯ ಪ್ರಯೋಗಗಳು ಚಿತ್ರದುದ್ದಕ್ಕೂ ಇವೆ.

    ದೃಶ್ಯಗಳ ಮೂಲಕ ಭಾವನೆ ದಾಟಿಸಿರುವ ನಿರ್ದೇಶಕ

    ದೃಶ್ಯಗಳ ಮೂಲಕ ಭಾವನೆ ದಾಟಿಸಿರುವ ನಿರ್ದೇಶಕ

    ಸಿನಿಮಾದಲ್ಲಿ ಸಂಭಾಷಣೆ ಬಹಳ ಕಡಿಮೆ. ಪಾತ್ರಗಳ ಮನಸ್ಥಿತಿಯನ್ನು, ಭಾವನೆಗಳನ್ನು ಪ್ರೇಕ್ಷಕರಿಗೆ ದಾಟಿಸಲು ಸಂಭಾಷಣೆಗಳ ಬದಲಿಗೆ ದೃಶ್ಯಗಳನ್ನೇ ಬಳಸಿಕೊಂಡಿದ್ದಾರೆ ನಿರ್ದೇಶಕ. ಅಪ್ಪ ಸತ್ತಾಗ ಮಗ ಜೋಜಿ ನಿಧಾನಕ್ಕೆ ನಡೆದುಕೊಂಡು ಹೋಗುವುದು, ಸೊಸೆ ಬಿನ್ಸಿಯ ಮೌನ, ಜೋಜಿ ಸಿಗರೇಟು ಸೇದುವ ಜಾಗದಲ್ಲಿ ಆಗುವ ಬದಲಾವಣೆ. ಇಂಥ ಸಾಕಷ್ಟು ದೃಶ್ಯಗಳು ಸಿನಿಮಾದಲ್ಲಿದೆ. ಸಂಭಾಷಣೆಗಳು ಕಡಿಮೆ ಇದ್ದರು ಬಹಳ ಚುರುಕಾಗಿವೆ. ''ಸತ್ತವರು ಮರಳಿ ಬರುವುದಿಲ್ಲ ಅವರ ಬಗ್ಗೆ ಭಯ ಬೇಡ, ನೀನು ಯೋಚಿಸಬೇಕಿರುವುದು ಬದುಕಿರುವವರ ಬಗ್ಗೆ'' ಇದೊಂದು ಉದಾಹರಣೆಯಷ್ಟೆ.

    Yuvarathnaa Movie Review: ಪುನೀತ್ ನಟನೆಯ 'ಯುವರತ್ನ' ಹೇಗಿದೆ?Yuvarathnaa Movie Review: ಪುನೀತ್ ನಟನೆಯ 'ಯುವರತ್ನ' ಹೇಗಿದೆ?

    ಬಿನ್ಸಿ ಪಾತ್ರಧಾರಿ ಉನ್ನಿಮಾಯ ನಟನೆ ಅದ್ಭುತ

    ಬಿನ್ಸಿ ಪಾತ್ರಧಾರಿ ಉನ್ನಿಮಾಯ ನಟನೆ ಅದ್ಭುತ

    ಫಹಾದ್ ಫಾಸಿಲ್‌ಗೆ ಸರಿಸಮನಾಗಿ ಸೊಸೆ ಬಿನ್ಸಿ ಪಾತ್ರ ಮಾಡಿರುವ ಉನ್ನಿಮಾಯ ಪ್ರಸಾದ್ ನಟಿಸಿದ್ದಾರೆ. ಅವರ ಮೌನವೂ ಮಾತನಾಡುತ್ತದೆ. ಕುಡುಕ ಹಾಗೂ ಮುಂಗೋಪಿ ಮಗನ ಪಾತ್ರದಲ್ಲಿ ಬಾಬುರಾಜ್, ಕಠಿಣ ತಂದೆಯ ಪಾತ್ರದಲ್ಲಿ ಸನ್ನಿ ಇವರುಗಳ ನಟನೆ ಬಹುಕಾಲ ನೆನಪಿರುತ್ತದೆ. ಫಹಾದ್ ಫಾಸಿಲ್ ನಟನೆ ಸಿನಿಮಾದ ಕಳಶ. ಪಾತ್ರಕ್ಕಾಗಿ ದೇಹವನ್ನು ಕೃಶಗೊಳಿಸಿಕೊಂಡಿದ್ದಾರೆ ಫಹಾದ್.

    ಶ್ಯಾಮ್ ಪುಷ್ಕರನ್‌ಗೆ ಸಮಾನ ಗೌರವ ಸಲ್ಲಬೇಕು

    ಶ್ಯಾಮ್ ಪುಷ್ಕರನ್‌ಗೆ ಸಮಾನ ಗೌರವ ಸಲ್ಲಬೇಕು

    ನಿರ್ದೇಶಕ ದಿಲೇಶ್ ಪೋತನ್‌ಗೆ ನಿರ್ದೇಶಕನಾಗಿ ಇದು ಮೂರನೇ ಸಿನಿಮಾ. ಮೊದಲೆರಡು ಸಿನಿಮಾ, 'ಮಹೇಶಿಂಟೆ ಪ್ರತೀಕಾರಂ', 'ತೋಂಡಿಪುತ್ತಲುಮ್ ದೃಕ್ಷಕ್ಯುಮ್' ಸಿನಿಮಾಗಳಲ್ಲಿ ಸಹ ಫಹಾದ್ ಫಾಸಿಲ್ ಅವರೇ ನಾಯಕ. ಮನುಷ್ಯರ ವರ್ತನೆಗಳು, ಭಾವನೆಗಳನ್ನೇ ಸಿನಿಮಾದ ವಿಷಯವಾಗಿ ಆಯ್ಕೆ ಮಾಡಿಕೊಳ್ಳುವ ದಿಲೇಶ್ 'ಜೋಜಿ' ಮೂಲಕ ಮತ್ತೊಮ್ಮೆ ಗೆದ್ದಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ ಬರೆದಿರುವ ಶ್ಯಾಮ್ ಪುಷ್ಕರನ್‌ಗೆ ಸಹ ಸಮಾನ ಗೌರವ ಸಲ್ಲಲೇಬೇಕು.

    English summary
    Fahadh Faasil starrer Malayalam movie Joji review in Kannada. Movie directed by Dileesh Pootan.
    Thursday, April 15, 2021, 18:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X