'Junior' Twitter {X} Review: ಹೇಗಿದೆ ಗಾಲಿ ಜನಾರ್ದನ ರೆಡ್ಡಿ ಮಗ ಕಿರೀಟಿಯ ಜೂನಿಯರ್ ? ಪಾಸಾ ? ಫೇಲಾ ?

ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಚಿತ್ರರಂಗದ ಹಲವರು ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರೆ.. ರಾಜಕೀಯದಲ್ಲಿ ಎದ್ದು-ಬಿದ್ದು-ಗೆದ್ದ ಅನೇಕರ ಮಕ್ಕಳು ಚಿತ್ರರಂಗದ ಮೇಲಿನ ಸೆಳೆತದಿಂದ ಚಿತ್ರರಂಗಕ್ಕೆ ಬಂದಿದ್ದಾರೆ. ಆ ಪೈಕಿ.. ಕೆಲವರು ಗೆದ್ದಿದ್ಧಾರೆ. ಕೆಲವರು ಸೋತಿದ್ದಾರೆ. ಇನ್ನು ಕೆಲವರು ಸೋತು .. ಸೋತು .. ಚಿತ್ರರಂಗದ ಸಹವಾಸವೇ ಬೇಡ ಎಂದು ದೂರ ಸರಿದಿದ್ದಾರೆ.

ಗಾಲಿ ಜನಾರ್ಧನ್ ರೆಡ್ಡಿಯ ಪುತ್ರ ಕಿರೀಟಿ ಯಾವ ಸಾಲಿಗೆ ಸೇರುತ್ತಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಕಿರೀಟಿಯ ಚೊಚ್ಚಲ ಚಿತ್ರ ಜೂನಿಯರ್ ಇಂದು { ಜುಲೈ 18 } ತೆರೆಗೆ ಬಂದಿದೆ. ಹಾಗಿದ್ದರೆ.. ಜೂನಿಯರ್ ಹೇಗಿದೆ..? ಚಿತ್ರವನ್ನು ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ.

Junior Verdict  Is Kireeti Reddy s Debut a Hit or Miss  Twitter Weighs In


ಉಜ್ವಲ ಭವಿಷ್ಯ

ಚೊಚ್ಚಲ ಚಿತ್ರದಲ್ಲಿಯೇ ಕಿರೀಟಿ ಅದ್ಭುತವಾದ ಪ್ರದರ್ಶನ ನೀಡಿದ್ಧಾರೆ. ಡ್ಯಾನ್ಸ್ ಮತ್ತು ಅವರಲ್ಲಿನ ಉತ್ಸಾಹದ ಕುರಿತು ಮಾತನಾಡುವಂತೆ ಇಲ್ಲ. ಸಾಹಸ ಸನ್ನಿವೇಶಗಳು ಕೂಡ ರೋಮಾಂಚನಕಾರಿಯಾಗಿವೆ. ಗಮನ ಸೆಳೆಯುವಂತಹ ಅಭಿನಯ. ಉತ್ತಮವಾದ ಪ್ರಾರಂಭ.. ಕಿರೀಟಿಗೆ ಉಜ್ವಲ ಭವಿಷ್ಯ ಇದೆ.

ಸಖತ್ ಮನರಂಜನೆ

ಹಾಸ್ಯ.. ಆಕ್ಷನ್.. ಮತ್ತು ಭಾವನೆಗಳ ಪರಿಪೂರ್ಣ ಮಿಶ್ರಣವನ್ನು ಹೊಂದಿರುವ ಮನರಂಜನಾತ್ಮಕ ಚಿತ್ರ ಜೂನಿಯರ್. ಕಿರೀಟಿ ಅವರದ್ದು ಅತ್ಯದ್ಭುತ ಅಭಿನಯ, ಜೆನಿಲಿಯಾ ಅವರದ್ದು ಸಾಲಿಡ್ ಮತ್ತು ಶ್ರೀಲೀಲಾ ಅವರದ್ದು ಡೀಸೆಂಟ್ ಅಭಿನಯ. ದೇವಿಶ್ರೀ ಪ್ರಸಾದ್ ಅವರ ಹಾಡು ಮತ್ತು ಹಿನ್ನೆಲೆ ಸಂಗೀತ ಅದ್ಭುತ.

ಹೇಳಿ ಮಾಡಿಸಿದ ಚಿತ್ರ

ಕಿರೀಟಿಯ ಚೊಚ್ಚಲ ಚಿತ್ರಕ್ಕೆ ಇದು ಹೇಳಿ ಮಾಡಿಸಿದಂತಹ ಸಿನಿಮಾ. ಅಸಾಧಾರಾಣ ಡ್ಯಾನ್ಸ್.. ಕಾಲೇಜ್‌ನಲ್ಲಿನ ಹಾಸ್ಯ ಸನ್ನಿವೇಶಗಳು, ಸಾಹಸದ ಜೊತೆ ಭಾವನಾತ್ಮಕ ಅಂಶಗಳನ್ನು ಕೂಡ ಹೊಂದಿರುವ ಈ ಚಿತ್ರದಲ್ಲಿ ಕಿರೀಟಿಗೆ ತನ್ನ ಸಾಮರ್ಥ್ಯ ಪ್ರದರ್ಶನ ಮಾಡುವ ಅವಕಾಶ ಸಿಕ್ಕಿದೆ. ಚೊಚ್ಚಲ ಚಿತ್ರದಲ್ಲಿಯೇ ಅವರ ಆತ್ಮವಿಶ್ವಾಸ ಮತ್ತು ಸಾಮರ್ಥ್ಯ ಎಲ್ಲರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

ಮೊದಲ ಪ್ರಯತ್ನದಲ್ಲೇ ಗೆಲುವು

ಮೊದಲ ಪ್ರಯತ್ನದಲ್ಲಿಯೇ ಕಿರೀಟಿ ಗೆಲುವಿನೊಂದಿಗೆ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ನಿಜಕ್ಕೂ ಮೊದಲ ಚಿತ್ರದಲ್ಲಿಯೇ ಪ್ರಭಾವ ಬೀರಿದ್ದಾರೆ. ತಮ್ಮ ಅಭಿನಯ ಸಾಮರ್ಥ್ಯ ಮತ್ತು ತಮ್ಮ ನೃತ್ಯ ಕೌಶಲ್ಯವನ್ನು ತೋರಿಸಿದ್ಧಾರೆ. ದೇವಿಶ್ರೀ ಪ್ರಸಾದ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್. ಜೆನಿಲಿಯಾ ಅಭಿನಯ ಕೂಡ ಅದ್ಭುತವಾಗಿದೆ. ಶ್ರೀಲೀಲಾ ಮತ್ತು ಡ್ಯಾನ್ಸ್ ಮತ್ತು ಆಕ್ಟಿಂಗ್ ಕೂಡ ಚೆನ್ನಾಗಿದೆ. ಒಟ್ಟಾರೆಯಾಗಿ ಇದು ನೋಡಬಹುದಾದ ಒಳ್ಳೆಯ ಚಿತ್ರ 👍🏻3/5

ಡೀಸೆಂಟ್ ಸಿನಿಮಾ.

ಜೂನಿಯರ್ ಚಿತ್ರದ ಮೊದಲಾರ್ಧ ಸಾಧಾರಣವಾಗಿದೆ. ಸೆಕೆಂಡ್ ಹಾಫ್ ಭಾವನಾತ್ಮಕವಾಗಿದೆ. ದೇವಿಶ್ರೀ ಪ್ರಸಾದ್ ಸಂಗೀತ ಚೆನ್ನಾಗಿದೆ. ಕಿರೀಟಿ ಅಭಿನಯ ಚೆನ್ನಾಗಿದೆ. ತುಂಬಾ ದಿನಗಳ ನಂತರ ಜೆನೆಲಿಯಾ ಅವರನ್ನು ನೋಡಿ ಖುಷಿಯಾಯ್ತು. ಡೀಸೆಂಟ್ ಸಿನಿಮಾ

ಸಾಧಾರಣ ಸಿನಿಮಾ

ಹಳೆಯ ನಿರೂಪಣೆ ಶೈಲಿ.. ದುರ್ಬಲ ವಿಲನ್.. ಭಾವನಾತ್ಮಕ ಅಂಶಗಳ ಕೊರತೆಯಿಂದ ಜೂನಿಯರ್ ಸಾಧಾರಣವೆನಿಸಿಕೊಳ್ಳುತ್ತೆ.ದ್ವೀತಿಯಾರ್ಧದ ಕಥೆ ಊಹಿಸಬಲ್ಲದಾದರೂ ಕೂಡ ಕಿರೀಟಿ ಅವರ ಅಭಿನಯ ಗಮನಾರ್ಹವಾಗಿದೆ. ದೇವಿಶ್ರೀ ಪ್ರಸಾದ್ ಹಿನ್ನೆಲೆ ಸಂಗೀತ, ವೈರಲ್ ವಯ್ಯಾರಿ ಹಾಡು ನೋಡಲು ಹಬ್ಬದಂತೆ ಇದೆ. ಕೆಲವು ಆಕ್ಷನ್ ಸನ್ನಿವೇಶಗಳು ಪ್ರಮುಖವಾಗಿ ಬಸ್ ಸನ್ನಿವೇಶ ರೋಮಾಂಚಕಾರಿಯಾಗಿದೆ. ಕಿರೀಟಿ ಅವರಿಗಾಗಿ ಈ ಚಿತ್ರವನ್ನು ಒಮ್ಮೆ ನೋಡಬಹುದು

ಹೀಗೆ ಹಲವಾರು ಜನ ಟ್ವಿಟರ್‌ { ಎಕ್ಸ್ } ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ಧಾರೆ. ಅಂದ್ಹಾಗೇ ರಾಧಾಕಷ್ಣ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಸುಧಾರಾಣಿ, ರಾವ್ ರಮೇಶ್, ಅಚ್ಯುತ್ ರಾವ್ ಕೂಡ ಇದ್ದು ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ.

More from Filmibeat

English summary
Wondering about "Junior"? We break down the early Twitter reviews for Kireeti Reddy's highly anticipated debut. See what netizens are saying about the film's hits, misses, and performances by Sreeleela and Genelia.
Read more about: review release filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X