For Quick Alerts
ALLOW NOTIFICATIONS  
For Daily Alerts

'ಕಾಫಿತೋಟ' ಚಿತ್ರದ ಖ್ಯಾತ ಪತ್ರಿಕೆಗಳ ವಿಮರ್ಶೆ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಲಭ್ಯ

By Bharath Kumar
|
Kaafi Thota : Director TN Seetharam Talks About His Movie | Filmibeat Kannada

ಕುತೂಹಲಭರಿತವಾದ 'ಕಾಫಿತೋಟ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರೀಕ್ಷೆಯಂತೆ ಓಪನ್ನಿಂಗ್ ಪಡೆದುಕೊಂಡಿರುವ 'ಕಾಫಿತೋಟ' ಸಿನಿಮಾ ಎಲ್ಲೆಡೆ ಹೌಸ್ ಫುಲ್ ಆಗಿದೆ.

ಟಿ.ಎನ್.ಸೀತಾರಾಮ್ ಅವರ ಕ್ಲಾಸ್ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಆದ್ರೆ, ಈ ಸಸ್ಪೆನ್ಸ್ ಕಾಫಿತೋಟವನ್ನ ನೋಡಿದ ವಿಮರ್ಶಕರು ಚಿತ್ರದ ಬಗ್ಗೆ ಏನಂದ್ರು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಕಾಫಿತೋಟ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ನೋಡಿ...

'ತೋಟಕ್ಕೆ ಹೋಗಿ ಥ್ರಿಲ್ಲರ್ ಕಾಫಿ ಕುಡಿದು ಬನ್ನಿ' - ಕನ್ನಡ ಪ್ರಭ

''ಟಿ.ಎನ್ ಸೀತಾರಮ್ ಅವರ ಕಾಫಿತೋಟ ಒಂದು ಕಮರ್ಷಿಯಲ್ ಥ್ರಿಲ್ಲರ್ ಪ್ಯಾಕೇಜ್. ಪಾರ್ಟಿ ಸಾಂಗ್, ಪ್ರೀತಿ, ಪ್ರೇಮ, ಉಸಿರು ಬಿಗಿ ಹಿಡಿದು ನೋಡವಂತಹ ಥ್ರಿಲ್ಲಿಂಗ್ ಕ್ಷಣಗಳು, ರಮಣೀಯ ದೃಶ್ಯಗಳು, ಕಿವಿಗಿಂಪಾದ ಹಾಡು...ಹೀಗೆ ಈ ಪ್ಯಾಕೇಜ್ ಟೂರ್ ನಲ್ಲಿದೆ. ಕೊನೆಯ 20 ನಿಮಿಷ ಕತೆ ಹೆಚ್ಚು ಪರಿಣಾಮಕಾರಿಯಾಗಿದೆ. ಮೊದಲಾರ್ಧಕ್ಕಿಂತ ದ್ವಿತೀಯಾರ್ದದಲ್ಲಿ ವೇಗ ಪಡೆದುಕೊಳ್ಳುತ್ತೆ. ಅಶೋಕ್ ಕಶ್ಯಪ್ ಅವರು ಛಾಯಾಗ್ರಹಣ ಹಾಗೂ ಅನೂಪ್ ಸಿಳೀನ್ ಅವರ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ನಟರ ದಂಡೆ ಇದ್ದು, ರಾಧಿಕಾ ಚೇತನ್ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇದೆ. ರಾಹುಲ್, ರಘುಮುಖರ್ಜಿ ಪಾತ್ರಗಳಲ್ಲಿ ಜೀವಿಸಿದ್ದಾರೆ. ಅನೀರಿಕ್ಷಿತದವಾದ್ದನ್ನು ನಿರೀಕ್ಷಿಸುವವರಿಗೆ ಕೊರಕಲು ಹಾದಿಯ ಕಾಡ ದಾರಿಯಂತೆ ಕಾಫಿತೋಟ'' - ಕನ್ನಡ ಪ್ರಭ

'ಕುಂಡದಲ್ಲಿ ಬೆಳೆಸಿದ ಕಾಫಿ ಗಿಡ' - ಪ್ರಜಾವಾಣಿ

''ಹಸಿರು ತೋಟ, ಸಮುದ್ರತೀರ, ಕಟಕಟೆ, ವಾರಾಣಸಿ, ಕಲ್ಯಾಣಿಯಲ್ಲಿ ನಡೆವ ಕೊಲೆ, ಕರಿ ಕೋಟು, ಹುಸಿ ಪ್ರೇಮ, ಚೂರು ಹಾಸ್ಯ, ಸ್ವಲ್ಪ ವಿಡಂಬನೆ, ವಿರಕ್ತಿ, ನಿಗೂಢತೆ ಹೀಗೆ ಮೇಲ್ನೋಟಕ್ಕೆ ಪರಸ್ಪರ ಸಂಬಂಧವಿಲ್ಲದಂತೆ ತೋರುವ ಹಲವು ತಂತುಗಳನ್ನು ಹೆಣೆದು ‘ಕಾಫಿ ತೋಟ'ಕ್ಕೆ ಬೇಲಿ ಕಟ್ಟಿದ್ದಾರೆ ಟಿ.ಎನ್. ಸೀತಾರಾಮ್.

ಕೋರ್ಟಿನ ದೃಶ್ಯಗಳೂ ಯಾವ ರೋಮಾಂಚನ ಹುಟ್ಟಿಸದಷ್ಟು ಸಪ್ಪೆಯಾಗಿವೆ. ಬೇಗ ಮುಗಿಸುವ ಗಡಿಬಿಡಿಯಲ್ಲಿ ಪಾತ್ರಗಳಲ್ಲಿ ಭಾವನಾತ್ಮಕ ಸಾತತ್ಯವೇ ತಪ್ಪಿಹೋಗಿದೆ. ರಾಧಿಕಾ ಚೇತನ್‌ ಅವರ ಅತಿಶಯದ ಅಭಿನಯವೂ ಕಿರಿಕಿರಿ ಹುಟ್ಟಿಸುತ್ತದೆ. ರಾಹುಲ್‌ ಮಾಧವ್ ಗಮನ ಸೆಳೆಯುತ್ತಾರೆ. ಸಂಯುಕ್ತಾ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲ. ಅವರಲ್ಲಿ ಟಿಎನ್ಎಸ್ ಅವರ ಅಭಿನಯವೇ ಹೆಚ್ಚು ಪಕ್ವವಾಗಿದೆ. ಎಲ್ಲ ಹಾಡುಗಳೂ ಗುನುಗಿಕೊಳ್ಳುವಂತಿವೆ. ಎಲ್ಲವನ್ನೂ ರಮ್ಯವಾಗಿ ತೋರಿಸಬೇಕು ಎಂಬ ಅಶೋಕ್‌ ಕಶ್ಯಪ್ (ಛಾಯಾಗ್ರಹಣ) ಹಂಬಲ ಪ್ರತಿಯೊಂದು ಫ್ರೇಮಿನಲ್ಲಿಯೂ ಎದ್ದು ಕಾಣುತ್ತದೆ.

'ಕಾಫಿ ತೋಟದಲ್ಲೊಂದು ಸಾವಿನ ಸುತ್ತ...'- ಉದಯವಾಣಿ

ಮೊದಲಾರ್ಧವೆಲ್ಲಾ ಪ್ರೇಮಕಥೆಗಳನ್ನು ಹೇಳುವುದಕ್ಕೆ ಮೀಸಲಿಟ್ಟರೆ, ದ್ವಿತೀಯಾರ್ಧವನ್ನು ಅವರು ಕೊಲೆಯ ರಹಸ್ಯವನ್ನು ಬೇಧಿಸುವುದಕ್ಕೆ ಮೀಸಲಿಟ್ಟಿದ್ದಾರೆ. ರಾಧಿಕಾಗೆ ಇಲ್ಲೊಂದು ಬಹಳ ಒಳ್ಳೆಯ ಪಾತ್ರವಿದೆ ಮತ್ತು ಆ ಅವಕಾಶವನ್ನು ಆಕೆ ಚೆನ್ನಾಗಿ ಬಳಸಿಕೊಂಡಿದ್ದಾರೆ. ರಾಹುಲ್‌ ಮಾಧವ್ ಲವಲವಿಕೆ ಇಷ್ಟವಾಗುತ್ತದೆ. ರಘು ಮುಖರ್ಜಿ ಅವರಿಂದ ಇನ್ನಷ್ಟು ತೆಗೆಯಬೇಕಿತ್ತೇನೋ? ಮಿಕ್ಕಂತೆ ಟಿ.ಎನ್‌. ಸೀತಾರಾಂ, ವೀಣಾ ಸುಂದರ್‌, ಸುಂದರ್‌ರಾಜ್‌, ರಾಜೇಶ್‌ ನಟರಂಗ, ಸಂಯುಕ್ತಾ ಬೆಳವಾಡಿ, ಕೃಷ್ಣಮೂರ್ತಿ ನಾಡಿಗ್‌ ಎಲ್ಲರಿಂದಲೂ ಅಚ್ಚುಕಟ್ಟಾದ ಅಭಿನಯ ತೆಗೆದಿದ್ದಾರೆ ಸೀತಾರಾಂ.

ಅಶೋಕ್‌ ಕಶ್ಯಪ್ ಅವರ ಛಾಯಾಗ್ರಹಣ ಇಡೀ ಪರಿಸರವನ್ನು ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಸೀತಾರಾಂ ಮತ್ತು ಅವರ ಕೋರ್ಟ್‌ರೂಂ ಡ್ರಾಮಾಗಳನ್ನು ಕೆಲವು ವರ್ಷಗಳಿಂದ ಕಿರುತೆರೆಯಲ್ಲಿ ಮಿಸ್‌ ಮಾಡಿಕೊಂಡಿದ್ದವರು ಈ ಚಿತ್ರವನ್ನು ನೋಡಬಹುದು.

ಕಾಫಿತೋಟ ವಿಮರ್ಶೆ: ಟೈಮ್ಸ್ ಆಫ್ ಇಂಡಿಯಾ

Director TN Seetharam returns to the big screen well after a decade. This time around, the film features court room drama, something that is considered his forte. The film begins on a slow pace with the makers trying to establish everyone's character and trying to connect loose ends by establishing clues with scenes aplenty. It is only towards the interval and in the second half that one gets to see the film progress with everything unravelling then. The film majorly revolves around Radhika Chetan's character, but one sees a rather caricature-like role for her, restricting the scope for surprise. Rahul Madhav has the more affable role among the two male leads, but Raghu Mukherjee impresses in the second half.

ವಿಮರ್ಶೆ: ಕುತೂಹಲಭರಿತ 'ಕಾಫಿತೋಟ'ದಲ್ಲಿ ಥ್ರಿಲ್ಲಿಂಗ್ ಜರ್ನಿ

English summary
T.N.Seetharam' directional 'Kaafi Thota' Movie has received positive response from the critics. Here is the collection of 'Kaafi Thota' reviews by Top News Papers of Karnataka.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more