Kaatera Twitter Review: ಬಿಲ್ಡಪ್ ಇಲ್ಲ, ಫುಲ್ ಕಂಟೆಂಟ್ ಫಿಲಂ, ಪಕ್ಕಾ ಮಾಸ್.. ಫ್ಯಾಮಿಲಿ ಮೂವಿ.. ಇದು ಟ್ವಿಟ್ಟರ್ ರಿವ್ಯೂ!

'ಕಾಟೇರ'ನ ಅಬ್ಬರ ಆರಂಭವಾಗಿದೆ. ಪಟಾಕಿ ಸಿಡಿಸಿ, ದರ್ಶನ್ ಕಟೌಟ್‌ಗಳಿಗೆ ಹಾರ ಹಾಕಿ ಡಿಬಾಸ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಜನಸಾಗರವೆ ಹರಿದು ಬಂದಿದೆ. ಡಿಬಾಸ್‌ ಎಮದು ಜೈಕಾರ ಹಾಕುತ್ತಾ, ಚಿತ್ರಮಂದಿರಗಳಿಗೆ ತರೆಳುತ್ತಿದ್ದಾರೆ. ಜೊತೆಗೆ ಮೊದಲ ಶೋ ನೋಡಿದ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರ, ಈ ಬಾರಿ ಮೇನ್ ಥಿಯೇಟರ್ ಆಗಿರುವ ಅನುಪಮಾ, ದಾವಣಗೆರೆ ತ್ರಿಶೂಲ್, ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರಗಳ ಬಳಿ ದರ್ಶನ್ ಅಭಿಮಾನಿಗಳು ಮಧ್ಯರಾತ್ರಿಯೇ ಹಬ್ಬ ಮಾಡಿದ್ದಾರೆ. ಶಿಳ್ಳೆ, ಘೋಷಣೆ, ಹಾಎ, ಪಟಾಕಿಗಳ ಮೂಲಕ ನೆಚ್ಚಿನ ನಟನ ಸಿನಿಮಾವನ್ನು ಸಂಭ್ರಮಿಸುತ್ತಿದ್ದಾರೆ.

Kaatera Twitter review in Kannada

ಕಾಟೇರ ಹೇಗಿದೆ..? ಫ್ಯಾನ್ಸ್ ಹೇಳಿದ್ದೇನು...?

ಮಧ್ಯರಾತ್ರಿಯೇ ಕಾಟೇರನ ದರ್ಶನ ಮಾಡಿದ ಮಂದಿ ಟ್ವಿಟ್ಟರ್‌, ಇನ್‌ಸ್ಟಾಗ್ರಾಮ್ ಫೇಸ್‌ಬುಕ್‌ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ 'ಕಾಟೇರ' ಸಿನಿಮಾದ ವಿಮರ್ಶೆ ಮಾಡುತ್ತಿದ್ದಾರೆ. ಸಿನಿಮಾ ಬೆಂಕಿ... ಇದು ಪಕ್ಕಾ ಮಾಸ್... ಕಂಟೆಂಟ್ ಇರಲ್ಲ ಬರಿ ಬಿಲ್ಡಪ್ ಎನ್ನುತ್ತಿದ್ರಿ...ಈಗ ಬಂದು ನೋಡಿ..ಹೀಗೆ ಹಲವು ಜನ ಹಲವು ರೀತಿಯಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.

"ಬಾಕ್ಸ್ ಆಫೀಸ್ ಸುಲ್ತಾನಾ ಮತ್ತೆ ಮರಳಿದ್ದಾರೆ. ಇದು ಡಿಬಾಸ್‌ಗೆ ಒಳ್ಳೆ ಕಮ್ ಬ್ಯಾಕ್ ಮತ್ತು ವೃತ್ತಿಜೀವನದ ಅತ್ಯುತ್ತಮ ನಟನೆ. ಕಂಟೆಂಟ್ ಆಧಾರಿತ ಸಿನಿಮಾ" ಎಂದು ಒಬ್ಬರು ಟ್ವೀಟ್ ಮಾಡಿದ್ದು, ಬೆಂಗಳೂರಿನ ಅನುಪಮಾ ಥಿಯೇಟರ್‌ನಲ್ಲಿ 'ಕಾಟೇರ' ಕಣ್ತುಂಬಿಕೊಳ್ಳಲು ಬಂದಿದ್ದ ಜನರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಿನಿಮಾದ ದೃಶ್ಯವೊಂದನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, "ಇಲ್ಲಿಯೇ ಪ್ರೇಕ್ಷಕರು ದರ್ಶನ್ ಅವರ ಡೈಲಾಗ್ ಡೆಲಿವರಿಯನ್ನು ನೋಡಲು ಉತ್ಸುಕರಾಗುತ್ತಾರೆ. ಪೌರಾಣಿಕ ಪಾತ್ರಗಳಲ್ಲಿ ಅವರು ಮಾಸ್ಟರ್ಸ್ ಮಾಡಿದ್ದಾರೆ" ಎಂದು ಹೇಳಿದ್ದಾರೆ.

Kaatera Twitter review in Kannada

ಮತ್ತೊಬ್ಬರು "ಒಂದು ವಿಷಯ ನಂಗೆ ಏನ್ ಬೇಜಾರ್ ಆಗ್ತಿದೆ ಅಂದ್ರೆ ಸುದೀಪ್ ಮತ್ತು ಪುನಿತ್ ಫ್ಯಾನ್ಸ್ ಗೆ ನೆಗೆಟಿವ್ ಹಾಕೋಕೆ ಯೇನೂ ಕಂಟೆಂಟ್ ಸಿಗ್ತಿಲ್ಲ. ಪಾಪಾ ಅವರು ಏನೇನು ಹುಡುಕಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ" ಎಂದು ಹೇಳಿಕೊಂಡಿದ್ದಾರೆ.

ಮತ್ತೊಬ್ಬರು 'ಕಾಟೇರ' ಸಿನಿಮಾವನ್ನು ಇಷ್ಟಪಟ್ಟಿಲ್ಲ. ತಾವು ದರ್ಶನ್ ಅಭಿಮಾನಿ ಎನ್ನುವ ಅವರು, "ಕಾಟೇರ ವಿಮರ್ಶೆ, ಕಥೆ ಮತ್ತು ಸಿನಿಮಾದಲ್ಲಿ ಅವರನ್ನು ತೋರಿಸಿರುವ ಬಗ್ಗೆ ನನಗೆ ಇಷ್ಟವಾಗಿಲ್ಲ. ಕಾಟೇರಂತಹ ಕಥೆಗಳನ್ನು ಆಯ್ಕೆ ಮಾಡಬೇಡಿ. ಸ್ಕ್ರೀಪ್ಟ್‌ ಬಗ್ಗೆ ಹೆಚ್ಚು ಗಮನ ನೀಡಿ" ಎಂದು ಮನವಿ ಮಾಡಿದ್ದಾರೆ.

"ಕಾಟೇರಾ ಅಲ್ಟ್ರಾ ಮಾಸ್ ಪ್ರೊ.... ತರುಣ್ ಸುಧೀರ್ ಅವರಿಗೆ ಅಭಿನಂದನೆಗಳು. ಕಥೆ ಹೇಳುವುದರಲ್ಲಿ ಅವರು ಅದ್ಭುತ, ಸಿನಿಮಾದ ಅತ್ಯುತ್ತಮ ಚಿತ್ರಕಥೆ... ಎಲ್ಲರಿಂದಲೂ ಉತ್ತಮವಾದ ನಟನೆ ಹೊರತೆಗೆದಿದ್ದಾರೆ. ದಯವಿಟ್ಟು ಡಿಬಾಸ್‌ಗಾಗಿ ವಿವಿಧ ಜಾನರ್‌ಗಳ ಹೆಚ್ಚಿನ ಚಲನಚಿತ್ರಗಳನ್ನು ಮಾಡಿ. ಈ ವರ್ಷದ ಎಲ್ಲಾ ಪ್ರಶಸ್ತಿಗಳು ಅರ್ಹತೆಯ ಆಧಾರದ ಮೇಲೆ ಡಿಬಾಸ್ ಕೈಗೆ ಬರಬೇಕು" ಎಂದು ಹೊಗಳಿದ್ದಾರೆ.

ಕಾಟೇರ ಸಿನಿಮಾದಲ್ಲಿ ನಟ ದರ್ಶನ್ ಭೀಮನಹಳ್ಳಿ ಕಾಟೇರ ಆಗಿ ದರ್ಶನ ನೀಡಿದ್ದಾರೆ. ಚಂದನವನಕ್ಕೆ ಕಾಲಿಟ್ಟಿರುವ ಮಾಲಾಶ್ರೀ ಪುತ್ರಿ ಆರಾಧನ ಶಾನುಭೋಗರ ಮಗಳು ಪ್ರಭಾವತಿಯಾಗಿ ಕಾಣಿಸಿಕೊಂಡಿದ್ದಾರೆ. ಊರಿನ ಜಮಿನ್ದಾರನ ಪಾತ್ರದಲ್ಲಿ ನಟ ಜಗಪತಿ ಬಾಬು ಅಬ್ಬರಿಸಿದ್ದಾರೆ. ಭೀಮನಹಳ್ಳಿ ಮತ್ತು ಮಲ್ಲನಹಳ್ಳಿ ಊರುಗಳ ನಡುವಿನ ಕಥೆಯೇ 'ಕಾಟೇರ'.

More from Filmibeat

English summary
Kaatera Twitter Review: What Audiences Need to say about Darshan's New Movie Kaatera On Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X