twitter
    For Quick Alerts
    ALLOW NOTIFICATIONS  
    For Daily Alerts

    Review: ನಗಿಸುತ್ತಲೇ ಪ್ರಶ್ನಿಸುವ 'ಕಾಳಿದಾಸ ಕನ್ನಡ ಮೇಷ್ಟ್ರು'

    |

    ಕಡಿಮೆ ವಿದ್ಯಾರ್ಥಿಗಳು ಎಂಬ ಕಾರಣಕ್ಕೆ ಸರ್ಕಾರಿ ಶಾಲೆಯನ್ನು ಮುಚ್ಚಲಾಗುತ್ತದೆ. ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಅಂದ್ರೆ ಕಾನ್ವೆಂಟ್ ಶಾಲೆಯಲ್ಲಿ ಓದಬೇಕು. ಮಕ್ಕಳ ಮಾರ್ಕ್ಸ್ ಮೇಲೆ ಪೋಷಕರ ಗೌರವ ಅಳೆಯಲಾಗುತ್ತೆ. ಮಕ್ಕಳು ಓದುವ ಶಾಲೆಯ ಮೇಲೆ ಪೋಷಕರ ಶ್ರೀಮಂತಿಕಗೆ ನಿರ್ಧಾರವಾಗುತ್ತೆ. ಇಂತಹ ಮನಸ್ಥಿತಿವುಳ್ಳ ಸಮಾಜದಿಂದ ಮಕ್ಕಳಿಗೆ ಎಷ್ಟ ತೊಂದೆಯಾಗುತ್ತೆ? ಇಂತಹ ಶಿಕ್ಷಣ ವ್ಯವಸ್ಥೆಯ ಸಮಾಜವನ್ನು ಮನರಂಜನೆಯ ಮೂಲಕ ಪ್ರಶ್ನಿಸಿದೆ ಕಾಳಿದಾಸ ಕನ್ನಡ ಮೇಷ್ಟ್ರು. ಪೂರ್ತಿ ವಿಮರ್ಶೆ ಓದಿ....

    Rating:
    4.0/5
    Star Cast: ಜಗ್ಗೇಶ್, ಮೇಘನಾ ಗಾಂವ್ಕರ್
    Director: ಕವಿರಾಜ್

    ಚಿತ್ರ: ಕಾಳಿದಾಸ ಕನ್ನಡ ಮೇಷ್ಟ್ರು

    ನಿರ್ದೇಶಕ: ಕವಿರಾಜ್

    ಕಲಾವಿದರು: ಜಗ್ಗೇಶ್, ಮೇಘನಾ ಗಾಂವ್ಕರ್

    ಬಿಡುಗಡೆ: ನವೆಂಬರ್ 22, 2019

    ಕನ್ನಡ ಮೇಷ್ಟ್ರು, ಕಾನ್ವೆಂಟ್ ಪತ್ನಿ

    ಕನ್ನಡ ಮೇಷ್ಟ್ರು, ಕಾನ್ವೆಂಟ್ ಪತ್ನಿ

    ಕನ್ನಡ ಶಾಲೆಯಲ್ಲಿ ಓದಿ ಶಿಕ್ಷಕರಾಗಿರುವ ಸ್ವಾಭಿಮಾನಿ ಮೇಷ್ಟ್ರು ಕಾಳಿದಾಸ (ಜಗ್ಗೇಶ್). ತಮ್ಮ ಮಗ ಪ್ರತಿಷ್ಠಿತ ಕಾನ್ವೆಂಟ್ನಲ್ಲಿ ಓದಬೇಕು ಎಂದು ಹಠ ತೊಟ್ಟಿರುವ ಕಾಳಿದಾಸನ ಪತ್ನಿ (ಮೇಘನಾ ಗಾಂವ್ಕರ್). ಕನ್ನಡ ಶಾಲೆ ಮೇಷ್ಟ್ರು ಆದರೂ ಮಗನಿಗೆ ಮಾತ್ರ ಕಾನ್ವೆಂಟ್ ನಲ್ಲಿ ಸೇರಿಸಬೇಕು ಎಂದು ಪತ್ನಿಯ ಒತ್ತಡಕ್ಕೆ ಮಣಿದು ಅಡ್ಮಿಷನ್ ಪಡೆಯುವುದಕ್ಕೆ ಮೇಷ್ಟ್ರು ಅನುಭವಿಸುವ ತೊಳಲಾಟ, ಸಂಕಟ ಮೊದಲಾರ್ಧದಲ್ಲಿದೆ. ಅರ್ಜಿ ಪಡೆಯಲು ರಾತ್ರಿ ಇಡೀ ಕಾಯುವುದು, ಮಗ ಶಾಲೆಗೆ ಸೇರಲು ಪೋಷಕರು ಸಂದರ್ಶನ ಎದುರಿಸುವುದು, ಪೋಷಕರಿಗೆ ಇಂಗ್ಲಿಷ್ ಜ್ಞಾನ ಇಲ್ಲವೆಂದು ರಿಜೆಕ್ಟ್ ಮಾಡುವುದು, ಸೀಟು ಸಿಗಲ್ಲ ಎಂಬ ಕಾರಣಕ್ಕೆ ಲಂಚ ಕೊಟ್ಟು ಶಾಲೆಗೆ ಸೇರಿಸುವುದು ಹೀಗೆ, ಡೋನೆಷನ್ ಗಾಗಿ ದುಡ್ಡು ಸೇರಿಸಲು ಪರದಾಡುವುದು ಎಲ್ಲವೂ ಪ್ರಸ್ತುತ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.

    ಕಾಳಿದಾಸ ಕನ್ನಡ ಮೇಷ್ಟ್ರನ್ನ ಹಾಡಿ ಹೊಗಳಿದ ಕವಿತಾ, ಜಯಂತ್ ಕಾಯ್ಕಿಣಿಕಾಳಿದಾಸ ಕನ್ನಡ ಮೇಷ್ಟ್ರನ್ನ ಹಾಡಿ ಹೊಗಳಿದ ಕವಿತಾ, ಜಯಂತ್ ಕಾಯ್ಕಿಣಿ

    ಪ್ರತಿಯೊಬ್ಬರನ್ನು ಕಾಡುವ ಕಥೆ

    ಪ್ರತಿಯೊಬ್ಬರನ್ನು ಕಾಡುವ ಕಥೆ

    ತಮ್ಮ ಮಕ್ಕಳು ಕಾನ್ವೆಂಟ್ ನಲ್ಲೇ ಓದಬೇಕು, Rank ಪಡೆಯಬೇಕು, ಸ್ಕೂಲ್ ಗೆ ಟಾಪ್ ಬರಬೇಕು, ಅದರಿಂದ ತಂದೆ-ತಾಯಿಗೆ ಗೌರವ ಹೆಚ್ಚಾಗಬೇಕು ಎಂಬ ದೃಷ್ಟಿಯಿಂದ ಮಕ್ಕಳ ಮನಸ್ಥಿತಿ ಅರ್ಥಮಾಡಿಕೊಳ್ಳದ ಪೋಷಕರು, ಬಾಲ್ಯ ಜೀವನದ ಬಗ್ಗೆ ಯೋಚಿಸದೆ, ಓದು ಓದು ಎಂದು ಒತ್ತಡ ಹಾಕುವುದು ಹೆಚ್ಚಾಗಿದೆ. ಮಾರ್ಕ್ಸ್, Rank, ಹೋಮ್ ವರ್ಕ್, ಮನೆಯವರ ಭಯದಿಂದ ಮಕ್ಕಳು ಮಾನಸಿಕ ರೋಗಗಳಿಗೆ ತುತ್ತಾಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಇಂತಹ ವಿಷ್ಯಗಳನ್ನು ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ, ಪ್ರೇಕ್ಷಕರ ಮನಸ್ಸು ಮುಟ್ಟುವಂತೆ ಪ್ರಸ್ತುತಪಡಿಸಲಾಗಿದೆ. ಈ ಎಲ್ಲ ಗಂಭೀರ ವಿಷಯಗಳನ್ನ ನೋಡಿದ ಪ್ರೇಕ್ಷಕರಿಗೆ 'ಹೌದು ಇದು ನಿಜಾ ಅಲ್ವಾ? ಎಂಬ ಯೋಚನೆ ಬರುವುದು ಮಾತ್ರ ಸುಳ್ಳಲ್ಲ.

    ಸೂತ್ರಧಾರಿ ಮತ್ತು ಪಾತ್ರಧಾರಿ

    ಸೂತ್ರಧಾರಿ ಮತ್ತು ಪಾತ್ರಧಾರಿ

    ನಿರ್ದೇಶಕ ಕವಿರಾಜ್ ಸಮಾಜದ ಬಹುಮುಖ್ಯ ಅಂಶವೊಂದನ್ನು ತೆಗೆದುಕೊಂಡು, ಅದಕ್ಕೆ ಮನರಂಜನೆಯ ಮಿಶ್ರಣ ಮಾಡಿ ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಸಫಲರಾಗಿದ್ದಾರೆ. ಮನರಂಜನೆಯೂ ಇದೆ, ಉತ್ತಮ ಸಂದೇಶವೂ ಇದೆ. ಅದೇ ರೀತಿ ಸೂತ್ರದಾರನ ತಾಳಕ್ಕೆ ತಕ್ಕಂತೆ ನಟ ಜಗ್ಗೇಶ್ ಅವರನ್ನ ನೋಡಬಹುದು. ಜಗ್ಗೇಶ್ ಅವರ ಪಾತ್ರ ಹಾಗೂ ನಟನೆ ನೋಡಿದ್ರೆ ತನ್ನ ಜೊತೆಯಲ್ಲೇ ಇಂತವರೊಬ್ಬರು ಇದ್ದರೆ ಎಷ್ಟು ಚೆಂದ ಎನಿಸುತ್ತೆ. ಜಗ್ಗೇಶ್ ಅವರಿಗೆ ಸೂಕ್ತ ಜೋಡಿಯಾಗಿ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ಟಿಎಸ್ ನಾಗಾಭರಣ, ತಬಲ ನಾಣಿ, ಹಿರಿಯ ನಟಿ ಅಂಬಿಕಾ ಇತರೆ ಪಾತ್ರಗಳಿಗೆ ನಟಿಸುವ ಮೂಲಕ ಕಾಳಿದಾಸ ಮೇಷ್ಟ್ರಿಗೆ ಉತ್ತಮ ಸಾಥ್ ನೀಡಿದ್ದಾರೆ.

    ಪ್ರಶ್ನೆಯಾಗಿಯೇ ಉಳಿದ ಕ್ಲೈಮ್ಯಾಕ್ಸ್

    ಪ್ರಶ್ನೆಯಾಗಿಯೇ ಉಳಿದ ಕ್ಲೈಮ್ಯಾಕ್ಸ್

    ಮಕ್ಕಳ ಸಿನಿಮಾ ಎನಿಸಿಕೊಳ್ಳದೆ, ಪೂರ್ತಿ ಕಮರ್ಷಿಯಲ್ ಚಿತ್ರವೂ ಎನಿಸಿಕೊಳ್ಳದೆ ಎರಡನ್ನು ಸಮಾನಾಗಿ ತೆಗೆದುಕೊಂಡು ಹೋಗಿರುವ ನಿರ್ದೇಶಕರ ಜಾಣ್ಮೆ ವಿಶೇಷ. ಬರಿ ಶಾಲೆ, ಮಕ್ಕಳು ಎನ್ನದ ನಿರ್ದೇಶಕರು, ಒಂದು ಕುಟುಂಬದ ಭಾವನೆಗಳ ಮೂಲಕ ಸಿನಿಮಾ ತೋರಿಸಿದ್ದಾರೆ. ಸಿನಿಮಾ ಕ್ಲೈಮ್ಯಾಕ್ಸ್ ಬರುವಷ್ಟರಲ್ಲಿ ಪ್ರೇಕ್ಷಕರೆದುರೇ ಪ್ರಶ್ನೆಗಳಾಗಿ ಉಳಿದುಕೊಳ್ಳುತ್ತೆ. ಅದೇನು ಎಂಬುದು ಚಿತ್ರದಲ್ಲಿಯೇ ನೋಡಿ.

    ಕೊನೆಯದಾಗಿ ಹೇಳುವುದು ಏನಂದರೆ?

    ಕೊನೆಯದಾಗಿ ಹೇಳುವುದು ಏನಂದರೆ?

    ಆಕ್ಷನ್, ಫೈಟ್, ಸಾಂಗ್, ಹೀರೋ, ಹೀರೋಯಿಸಂ, ಗ್ಲಾಮರ್ ಪಕ್ಕಕ್ಕಿಟ್ಟು ಮಾಡಿರುವಂತಹ ಚೊಕ್ಕ ಸಿನಿಮಾ. ಗುರುಕಿರಣ್ ಅವರ ಹಿನ್ನೆಲೆ ಸಂಗೀತ ಕೂಲ್ ಆಗಿದೆ. ಹಾಡುಗಳು ಕೂಡ ಕೇಳಲು ಮತ್ತು ನೋಡಲು ಮಜವಾಗಿದೆ. ಸುರೇಶ್ ಗುಂಡ್ಲುಪೇಟೆ ಛಾಯಾಗ್ರಹಣದಲ್ಲಿ ಕೈಚಳಕ ತೋರಿದ್ದಾರೆ. ಆರಾಮಾಗಿ ಸಿನಿಮಾ ನೋಡಬಹುದು, ಇಷ್ಟವಾಗುತ್ತೆ.

    English summary
    Navarasa nayaka Jaggesh starrer 'Kalidasa Kannada Meshtru' Kannada movie review.
    Monday, January 6, 2020, 18:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X