Kalki 2898 AD Review: ನಾಗ್ ಅಶ್ವಿನ್ ಕಟ್ಟಿದ ಭೂತ-ಭವಿಷ್ಯತ್ ಕಾಲದ ಅದ್ಭುತಲೋಕ

Rating:
3.5/5

ಭಾರೀ ನಿರೀಕ್ಷೆ ಹುಟ್ಟಾಕಿದ್ದ 'ಕಲ್ಕಿ 2898 AD' ಸಿನಿಮಾ ತೆರೆಗಪ್ಪಳಿಸಿದೆ. ನಾಗ್ ಅಶ್ವಿನ್ ನಿರ್ದೇಶನದ ಚಿತ್ರದಲ್ಲಿ ಘಟನುಘಟಿ ಕಲಾವಿದರು ನಟಿಸಿದ್ದಾರೆ. ಅಭಿಮಾನಿಗಳು ಅದ್ಧೂರಿಯಾಗಿ ಚಿತ್ರವನ್ನು ಸ್ವಾಗತಿಸಿದ್ದಾರೆ. ಪ್ರಭಾಸ್ ಆರ್ಭಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಗ್‌ಬಿ, ಕಮಲ್, ದೀಪಿಕಾ ಅನುಭವದ ನಟನೆ ಬೋನಸ್.

ಬಹುಕೋಟಿ ವೆಚ್ಚದ ಸಿನಿಮಾ ತೆರೆಮೇಲೆ ಅಷ್ಟೇ ಅದ್ಧೂರಿಯಾಗಿ ಮೂಡಿ ಬಂದಿದೆ. ಕಣ್ಣು ಕೊರೈಸುವ ವಿಷ್ಯುವಲ್ಸ್, ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಹಬ್ಬ. ಹಾಲಿವುಡ್ ಶೈಲಿಯ ಮೇಕಿಂಗ್‌ನಿಂದ ಎಪಿಕ್ ಸೈನ್ಸ್ ಫಿಕ್ಷನ್ ಆಕ್ಷನ್ ಸಿನಿಮಾ ಗಮನ ಸೆಳೆಯುತ್ತದೆ. ಒಂದಷ್ಟು ಅತಿಥಿ ಪಾತ್ರಗಳಲ್ಲಿ ಸ್ಟಾರ್ ನಟ-ನಟಿಯರು ಮೋಡಿ ಮಾಡುತ್ತಾರೆ.

Kalki 2898 AD Review  Prabhas  amitabh  kamal Starrer Kalki 2898 AD Review

ಸಿನಿಮಾ ಕಥೆ?

ಮಹಾಭಾರತದಲ್ಲಿ ಧರ್ಮರಾಯ ಆಡಿದ ಒಂದು ಸುಳ್ಳಿನಿಂದ ಶುರುವಾಗುತ್ತದೆ. ಕುರುಕ್ಷೇತ್ರದಲ್ಲಿ ಶ್ರೀಕೃಷ್ಣನಿಂದ ಶಾಪಗ್ರಸ್ತನಾದ ಅಶ್ವತ್ಥಾಮ (ಅಮಿತಾಭ್ ಬಚ್ಚನ್) ಕಲ್ಕಿಯ ಆಗಮನಕ್ಕಾಗಿ ಕಾಯುತ್ತಿರುತ್ತಾನೆ. ಸುಮತಿ (ದೀಪಿಕಾ ಪಡುಕೋಣೆ) ಎಂಬ ಮಹಿಳೆಯ ಹೊಟ್ಟೆಯಲ್ಲಿ ಕಲ್ಕಿ ಹುಟ್ಟುತ್ತಾನೆ ಎಂದು ತಿಳಿದ ಆತ ಆಕೆಯನ್ನು ರಕ್ಷಿಸುತ್ತಾನೆ. ಮತ್ತೊಂದೆಡೆ, ಕಾಶಿಯಲ್ಲಿ ವಾಸಿಸುವ ಭೈರವ (ಪ್ರಭಾಸ್) ಸ್ವರ್ಗದಂತೆ ಕಾಣುವ ಕಾಂಪ್ಲೆಕ್ಸ್‌ಗೆ ಹೋಗಲು ಹವಣಿಸುತ್ತಿರುತ್ತಾನೆ. ಅದಕ್ಕಾಗಿ ನಾನಾ ಪ್ರಯತ್ನ ಮಾಡುತ್ತಿರುತ್ತಾನೆ.

ಕಾಶಿ ನಗರ ಶೈತಾನ್ ನಾಯಕ ಸುಪ್ರೀಮ್ ಯಾಸ್ಕಿನ್ (ಕಮಲ್ ಹಾಸನ್) ಅಧೀನದಲ್ಲಿರುತ್ತದೆ. ಆತ ಕಟ್ಟಿಕೊಂಡಿದ್ದೆ ಕಾಂಪ್ಲೆಕ್ಸ್‌ ಎನ್ನುವ ಸ್ವರ್ಗಲೋಕ. ಇನ್ನು ಆತನ ಪ್ರಯೋಗ ಶಾಲೆಯಿಂದ ಗರ್ಭಿಣಿ ಸುಮತಿ ತಪ್ಪಿಸಿಕೊಂಡಿರುತ್ತಾಳೆ. ಆಕೆಯನ್ನು ಹಿಡಿದುಕೊಟ್ಟರೆ ಭೈರವನಿಗೆ ಕಾಂಪ್ಲೆಕ್ಸ್‌ಗೆ ಹೋಗುವ ಅವಕಾಶ ಸಿಗುತ್ತದೆ ಎನ್ನುವ ಆಸೆ ಹುಟ್ಟುತ್ತದೆ. ಹಾಗಾದರೆ ಅಶ್ವತ್ಥಾಮನನ್ನು ಎದುರಿಸಿ ಸುಮತಿಯನ್ನು ಭೈರವ ಕರೆದುಕೊಂಡು ಬರ್ತಾನಾ? ಈ ಸುಪ್ರೀಮ್ ಯಶ್ಕಿನ್ ಯಾರು? ಅವನಿಗೆ ಸುಮತಿ ಏಕೆ ಬೇಕು? ಕಲಿಯುಗದ ಅಂತ್ಯವು ಕುರುಕ್ಷೇತ್ರ ಯುದ್ಧದೊಂದಿಗೆ ಹೇಗೆ ಬೆಸೆದುಕೊಂಡಿದೆ? ಕಾಶಿ ಮತ್ತು ಶಂಬಲದ ಜನರು ಏಕೆ ತೊಂದರೆಯಲ್ಲಿದ್ದಾರೆ? ಇದೆಕ್ಕೆಲ್ಲಾ ಉತ್ತರ ಬೇಕು ಅಂದ್ರೆ, 'ಕಲ್ಕಿ 2898 AD' ಸಿನಿಮಾ ನೋಡಬೇಕು.

ಸಿನಿಮಾ ಹೇಗಿದೆ?

ಕುರುಕ್ಷೇತ್ರದ ಅಂತ್ಯದಲ್ಲಿ ಶ್ರೀಕೃಷ್ಣನಿಂದ ಅಶ್ವತ್ಥಾಮ ಶಾಪ ಪಡೆಯುವುದು ಚಿತ್ರದ ಮೊದಲ ದೃಶ್ಯ. ಅಲ್ಲಿಂದ 6000 ವರ್ಷಗಳ ಬಳಿಕ ಕಾಶಿಯಲ್ಲಿ ಕಥೆ ತೆರೆದುಕೊಳ್ಳುತ್ತದೆ. ಅಂದರೆ ವರ್ತಮಾನದ ಉಲ್ಲೇಖ ಇಲ್ಲದೇ ಭೂತ- ಭವಿಷ್ಯತ್ ಕಾಲದ ಕಲ್ಪನೆಯಲ್ಲಿ ಕಥೆ ಸಾಗುತ್ತದೆ. ಅದೇ ಚಿತ್ರದ ಹೈಲೆಟ್. ಇದೇ ಕೊಂಚ ಕ್ಲಿಷ್ಟಕರ ಕೂಡ ಎನಿಸುತ್ತದೆ. ಆದರೆ ನಾಗ್ ಅಶ್ವಿನ್ ವಿಷನ್, ಮೇಕಿಂಗ್, ಕ್ರಿಯೇಟಿವಿಟಿಯನ್ನು ಮೆಚ್ಚಿಕೊಳ್ಳಲೇಬೇಕು.

ನಿಜಕ್ಕೂ ಇದು ಕಲ್ಪನೆಗೂ ನಿಲುಕದ ಅದ್ಭುತವೇ ಸರಿ. ಭಾರತೀಯ ಚಿತ್ರರಂಗದ ಮಟ್ಟಿಗೆ ಮತ್ಯಾರೂ ಈ ರೀತಿ ಊಹಿಸಲು ಸಾಧ್ಯವಿಲ್ಲ. ಚಿತ್ರದಲ್ಲಿ ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿ ನಿರ್ದೇಶಕರು ಹುಬ್ಬೇರಿಸುತ್ತಾರೆ. ಕಲ್ಕಿ ಪುರಾಣದ ಶಂಭಲ ಹಾಗೂ ಕಾಶಿ ಜೊತೆಗೆ ಕಾಂಪ್ಲೆಕ್ಸ್ ಎನ್ನುವ ಮತ್ತೊಂದು ಪ್ರಪಂಚವನ್ನು ಚಿತ್ರಕ್ಕಾಗಿ ಸೃಷ್ಟಿಸಲಾಗಿದೆ. ಕಾಶಿ ಅಂದ್ರೆ ಈಗಿನ ಕಾಶಿ ಅಲ್ಲ. ನೀರು ಸೇರಿದಂತೆ ಮೂಲಭೂತ ಸೌಕರ್ಯಗಳು ಇಲ್ಲದೇ ಮುಂದೊಂದು ದಿನ ಜನ ಹೇಗೆ ಬದುಕಬಹುದು ಎನ್ನುವ ಚಿತ್ರಣ ಅದು.

ಇಷ್ಟೆಲ್ಲಾ ಕಲ್ಪನೆಯನ್ನು ಊಹಿಸಿಕೊಳ್ಳುವುದು ಕಷ್ಟ ಎನ್ನುವುದು ಒಂದು ಕಡೆ. ಮತ್ತೊಂದು ಕಡೆ ಅದನ್ನು ತೆರೆಗೆ ತರುವುದು ಮತ್ತೊಂದು ಸಾಹಸವೇ ಬಿಡಿ. ಇನ್ನು ಅದನ್ನು ಪ್ರೇಕ್ಷಕರಿಗೆ ಅರ್ಥವಾಗುವಂತೆ ಹೇಳುವುದು ಸವಾಲೇ ಸರಿ. ಈ ಹಾದಿಯಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಪ್ರಾಯಾಸಪಡುತ್ತಲೇ ಗೆದ್ದಿದ್ದಾರೆ ಎಂದರೆ ತಪ್ಪಾಗಲ್ಲ. ನಿರ್ದೇಶಕರ ಕಲ್ಪನೆಗೆ ನಿರ್ಮಾಪಕರ ಹಣ, ವಿಎಫ್‌ಎಸ್‌ ಸಾಥ್ ಸಿಕ್ಕಿದೆ. ಎಲ್ಲಾ ಸೇರಿ 'ಕಲ್ಕಿ' ಹೊಸ ಪ್ರಪಂಚ ನಿರ್ಮಾಣವಾಗಿದೆ. ಹಾಲಿವುಡ್ ಸಿನಿಮಾಗಳನ್ನು ಮೀರಿಸುವಂತಹ ವಿಷ್ಯುವಲ್ ವಂಡರ್ ತೆರೆಮೇಲೆ ಬಂದಿದೆ.

ಫಸ್ಟ್‌ ಆಫ್

ಮಹಾಭಾರತದ ಅಂತ್ಯದಿಂದ ಕಥೆ ಕಾಶಿ ಹಾಗೂ ಕಾಂಪ್ಲೆಕ್ಸ್‌ ಪ್ರಪಂಚಕ್ಕೆ ಶಿಫ್ಟ್ ಆಗುತ್ತದೆ. ಅಲ್ಲಿಂದ ಮುಂದೆ ಕಥೆಗೊಂದು ಪೀಠಿಕೆ, ಪಾತ್ರಗಳ ಪರಿಚಯ, ಆ ಪಾತ್ರಗಳ ಉದ್ದೇಶವೇನು? ಎನ್ನುವುದನ್ನು ಹೇಳಲಾಗುತ್ತದೆ. ಅಲ್ಲೇ ಸಿನಿಮಾ ಕೊಂಚ ಸ್ಲೋ ಎನಿಸಿಬಿಡುತ್ತದೆ. ಭೈರವ ಹಾಗೂ ಬುಜ್ಜಿ ನಡುವೆ ಒಂದಷ್ಟು ಫನ್ನಿ ಸೀನ್ಸ್ ಟ್ರೈ ಮಾಡಿದ್ದಾರೆ. ಆದರೆ ಅದು ವರ್ಕೌಟ್ ಆಗ್ಲಿಲ್ಲ. ಕೆಲ ಅನವಶ್ಯಕ ಸನ್ನಿವೇಶಗಳು ಇವೆ. ಭೈರವನ ಪಾತ್ರಕ್ಕೆ ಕಾಮಿಡಿ ಟಚ್ ಕೊಟ್ಟಿರುವುದು ಅಷ್ಟಾಗಿ ಇಷ್ಟವಾಗಲ್ಲ. ಯಾಕಂದ್ರೆ ಇತ್ತೀಚಿನ ವರ್ಷಗಳಲ್ಲಿ ಪ್ರಭಾಸ್‌ ಅನ್ನು ತೆರೆಮೇಲೆ ಆ ರೀತಿ ನೋಡಲಿಲ್ಲ. ಹಾಗಾಗಿ ಅದನ್ನು ಅರಗಿಸಿಕೊಳ್ಳುವುದು ಕಷ್ಟ.

ಒಂದಷ್ಟು ಟ್ವಿಸ್ಟ್‌ಗಳ ಜೊತೆಗೆ ಇಂಟರ್‌ವಲ್ ವೇಳೆಗೆ ಕಥೆ ಕುತೂಹಲ ಮೂಡಿಸುತ್ತದೆ. ದಿಶಾ ಪಟಾನಿ ಗ್ಲಾಮರ್‌ ಡಾಲ್ ಆಗಿ ಮಾತ್ರ ಕಾಣಿಸಿಕೊಂಡಿದ್ದಾರೆ. ಭೈರವನ ಸೋಂಬೇರಿತನ, ಕಾಟಾಚಾರದಂತೆ ಮಾಡುವ ಫೈಟ್ ಬೇಸರ ಮೂಡಿಸುತ್ತದೆ. ಫಸ್ಟ್‌ ಹಾಫ್‌ನಲ್ಲಿ ಸುಪ್ರೀಂ ಯಶ್ಕಿನ್ ಆಗಿ ಕಮಲ್ ಹಾಸನ್ ಕಾಣಿಸಿಕೊಂಡರೂ ನಿರಾಸೆ ಮೂಡಿಸುತ್ತಾರೆ. ಗುರುತೇ ಸಿಗದಂತ ಮೇಕಪ್‌ನಲ್ಲಿ ಆ ಪಾತ್ರವನ್ನು ತೋರಿಸಿದ್ದು ಕುತೂಹಲ ಮೂಡಿಸುತ್ತದೆ.

Kalki 2898 AD Review  Prabhas  amitabh  kamal Starrer Kalki 2898 AD Review

ಸೆಕೆಂಡ್ ಹಾಫ್

ಇಂಟರ್‌ವಲ್ ಬಳಿಕ ಪ್ರೇಕ್ಷಕರಿಗೆ ಮಸ್ಟ್ ಮನರಂಜನೆ ಕಾದಿದೆ. ಅಶ್ವತ್ಥಾಮ ಹಾಗೂ ಭೈರವನ ನಡುವಿನ ಆಕ್ಷನ್ ಸೀನ್ಸ್ ಸಖತ್ ಕಿಕ್ ಕೊಡುತ್ತದೆ. ಕೆಲವೊಮ್ಮೆ ಚಿತ್ರದ ಹೀರೊ ಬಿಗ್‌ಬಿನಾ? ಪ್ರಭಾಸಾ? ಎನ್ನುವ ಅನುಮಾನ ಮೂಡುತ್ತದೆ. ಅಷ್ಟರಮಟ್ಟಿಗೆ ಅಮಿತಾಬ್ ಪಾತ್ರಕ್ಕೆ ಅವಕಾಶ ಸಿಕ್ಕಿದೆ. ಅದನ್ನು ಅಷ್ಟೇ ಸೊಗಸಾಗಿ ನಿಭಾಯಿಸಿದ್ದಾರೆ. ಅಶ್ವತ್ಥಾಮನ ಪಾತ್ರವನ್ನು ಮತ್ಯಾರೂ ಅಷ್ಟು ಚೆನ್ನಾಗಿ ಮಾಡಲ್ಲ ಎನ್ನುವಂತೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.

ಪ್ರೀ ಕ್ಲೈಮ್ಯಾಕ್ಸ್‌ನಿಂದ ಕ್ಲೈಮ್ಯಾಕ್ಸ್‌ವರೆಗೆ ಸಿನಿಮಾ ನೆಕ್ಟ್ಸ್ ಲೆವೆಲ್ ಎನ್ನಬಹುದು. ಕೊನೆಯ 30 ನಿಮಿಷಗಳು ಹಾಲಿವುಡ್ ಆಕ್ಷನ್ ಚಿತ್ರವನ್ನು ಕಣ್ಮುಂದೆ ತರುತ್ತದೆ. ಇರುವ ಕಥೆಯನ್ನು ಬೇಗ ಹೇಳಿ ಮುಗಿಸದೇ ಮುಂದಿನ ಭಾಗಗಳಿಗೆ ಉಳಿಸಿಕೊಂಡಿರುವುದು ಫಸ್ಟ್‌ ಹಾಫ್‌ ನಿರಾಸೆ ಮೂಡಿಸಲು ಕಾರಣ ಎನ್ನಬಹುದು. ಆದರೆ ಸೆಕೆಂಡ್ ಆಫ್ ಬಡ್ಡಿ ಸಮೇತ ರಂಜಿಸುವಂತಿದೆ. ಗ್ರಾಫಿಕ್ಸ್ ಚೆನ್ನಾಗಿದೆ. ಆದರೆ ಡ್ರಾಮಾ ವರ್ಕೌಟ್ ಆಗುವುದಿಲ್ಲ. ಆಕ್ಷನ್ ಎಪಿಸೋಡ್ಸ್ ಇಷ್ಟವಾಗುತ್ತದೆ. ಇನ್ನು ಚಿರಂಜೀವಿ ಅಶ್ವತ್ಥಾಮನನ್ನು ಎದುರಿಸುವ ಭೈರವನಿಗೆ ಅಷ್ಟು ಶಕ್ತಿ ಹೇಗೆ ಸಾಧ್ಯ? ಎನ್ನುವುದೇ ಅರ್ಥವಾಗಲ್ಲ. ಅದೇ ಕಾರಣಕ್ಕೆ ಕೆಲ ಸನ್ನಿವೇಶಗಳು ಕನೆಕ್ಟ್ ಆಗಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಮಹಾಭಾರತದ ಕರ್ಣನ ಅಂಶ ಭೈರವನನ್ನು ಸೇರಿ ಸುಪ್ರೀಂ ಯಶ್ಕಿನ್ ಎದುರು ನಿಲ್ಲುತ್ತಾನೆ. ಮುಂದೆ ಕಥೆ ಏನು? ಎನ್ನುವುದನ್ನು ಸೀಕ್ವೆಲ್‌ನಲ್ಲೇ ನೋಡಬೇಕು.

ಕಲಾವಿದರ ನಟನೆ ಹೇಗಿದೆ?

ಪ್ರಭಾಸ್ ಎಂದಿನಂತೆ ತಮ್ಮ ಪವರ್‌ಫುಲ್ ಪರ್ಫಾರ್ಮೆನ್ಸ್‌ನಿಂದ ಪ್ರೇಕ್ಷಕರನ್ನು ರಂಜಿಸುತ್ತಾರೆ. ಆದರೆ ಮೊದಲೇ ಹೇಳಿದಂತೆ ಕೆಲವೆಡೆ ಅಮಿತಾಬ್ ಓವರ್‌ಟೇಕ್ ಮಾಡಿಬಿಡುತ್ತಾರೆ. ಅಶ್ವತ್ಥಾಮ ಚಿರಂಜೀವಿ, ಆತನಿಗೆ ಅಪಾರ ಶಕ್ತಿ, ಆತನಿಗೆ ಸಾವಿಲ್ಲ, ಎನ್ನುವ ಅಂಶ ಆ ಪಾತ್ರಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ. ಆ ಪಾತ್ರಕ್ಕೆ ಬಿಗ್‌ಬಿ ನ್ಯಾಯ ಒದಗಿಸಿದ್ದಾರೆ. ಫಸ್ಟ್‌ ಹಾಫ್‌ನಲ್ಲಿ ಪ್ರಭಾಸ್ ಪಾತ್ರಕ್ಕೆ ಕಮ್ಮಿ ಅವಕಾಶ ಸಿಕ್ಕಿದೆ. ಕಾರಣ ಇದು ನಿರ್ದೇಶಕರ ಸಿನಿಮಾ. ಹಾಗಾಗಿ ಇಲ್ಲಿ ಒಂದು ಪಾತ್ರವಾಗಿ ಮಾತ್ರ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಸೀಕ್ವೆನ್ಸ್‌ಗಾಗಿ ಅಮಿತಾಬ್ ಶ್ರಮ ತೆರೆಯ ಮೇಲೆ ಕಾಣುತ್ತದೆ. ಇನ್ನು ಕ್ಲೈಮ್ಯಾಕ್ಸ್‌ನಲ್ಲಿ ವಿಲನ್ ಆಗಿ ಕಮಲ್ ಮ್ಯಾಜಿಕ್ ನೋಡಬಹುದು. ಇನ್ನುಳಿದಂತೆ ದೀಪಿಕಾ ಪಡುಕೋಣೆ ಇಷ್ಟವಾಗುತ್ತಾರೆ.

ಮಹಾಭಾರತದ ಅರ್ಜುನನಾಗಿ ಸಣ್ಣ ಸಣ್ಣ ಝಲಕ್‌ನಲ್ಲಿ ವಿಜಯ್ ದೇವರಕೊಂಡ ಮಿಂಚಿದ್ದಾರೆ. ಇನ್ನುಳಿದಂತೆ ದುಲ್ಕರ್ ಸಲ್ಮಾನ್, ರಾಜಮೌಳಿ, ಆರ್‌ಜಿವಿ ಅತಿಥಿ ಪಾತ್ರಗಳಲ್ಲಿ ಬಂದು ಹೋಗುತ್ತಾರೆ.

ಟೆಕ್ನಿಕಲ್ ವಿಭಾಗ

ತಾಂತ್ರಿಕವಾಗಿ ಸಿನಿಮಾ ಹೇಗಿದೆ ಎನ್ನುವುದನ್ನು ನೋಡುವುದಾದರೆ ಸೂಪರ್ ಎನ್ನಬಹುದು. ಅದರಲ್ಲೂ ಗ್ರಾಫಿಕ್ಸ್ ವಿಭಾಗಕ್ಕೆ ಹೆಚ್ಚು ಅಂಕ ಸಿಗಲೇಬೇಕು. ಬಹಳ ತಡವಾಗಿ ಸಿನಿಮಾ ಬಂದಿದ್ದಕ್ಕೂ ಗ್ರಾಫಿಕ್ಸ್ ನೋಡಿದಾಗ ಸಮಾಧಾನವಾಗುತ್ತದೆ. ಛಾಯಾಗ್ರಹಣ ಅದ್ಭುತವಾಗಿದೆ. ಸಾಂಗ್ಸ್ ಕೈ ಕೊಟ್ಟರೂ ಹಿನ್ನೆಲೆ ಸಂಗೀತ ಅಲ್ಲಲ್ಲಿ ಕಿಕ್ ಕೊಡುತ್ತದೆ. ಆದರೆ ಇಂತಹ ಸಿನಿಮಾಗಳಿಗೆ ಕೀರವಾಣಿ ಉತ್ತಮ ಆಯ್ಕೆ ಎನಿಸದೇ ಇರದು. ಎಡಿಟರ್ ಇನ್ನಷ್ಟು ಚಿತ್ರವನ್ನು ಟ್ರಿಮ್ ಮಾಡಿದ್ದರೆ ಚೆನ್ನಾಗಿತ್ತು.

ಪ್ಲಸ್ ಪಾಯಿಂಟ್ಸ್

* ಕಥೆ, ಚಿತ್ರಕಥೆ, ನಿರ್ದೇಶನ
* ಅಮಿತಾಬ್, ಪ್ರಭಾಸ್ ನಟನೆ
* ವಿಷ್ಯುವಲ್ಸ್, ಗ್ರಾಫಿಕ್ಸ್
* ಕುರುಕ್ಷೇತ್ರ ದೃಶ್ಯಗಳು
* ಕ್ಲೈಮ್ಯಾಕ್ಸ್

ಮೈನಸ್ ಪಾಯಿಂಟ್ಸ್

* ಫಸ್ಟ್‌ ಹಾಫ್ 40 ನಿಮಿಷ
* ಕಾಲಾವಧಿ(3 ಗಂಟೆ ಸಿನಿಮಾ)
* ಕಾಮಿಡಿ ಸೀನ್ಸ್

'ಕಲ್ಕಿ 2898 AD' ಅದ್ಭುತ ಸಿನಿಮಾ ಎನ್ನುವುದು ಕಷ್ಟ. ಒಳ್ಳೆ ಪ್ರಯತ್ನ ಎನ್ನುಬಹುದು. ದೃಶ್ಯಗಳ ಆಳ ಕಮ್ಮಿ. ಭಾವನಾತ್ಮಕವಾಗಿ ದೃಶ್ಯಗಳು ಬೆಸೆದುಕೊಳ್ಳುವುದಿಲ್ಲ. ಅದೇ ಚಿತ್ರದ ದೊಡ್ಡ ಹಿನ್ನಡೆ. ಕೆಲ ದೃಶ್ಯಗಳಿಗೆ ಲಿಂಕ್ ಇಲ್ಲ. ಒಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ, ಆದರೆ ನಿರೀಕ್ಷೆ ಕಮ್ಮಿ ಇದ್ದರೆ ಮಾತ್ರ. ಬಹಳ ಸಂಕೀರ್ಣ ಎನಿಸುವ ಕಥೆ ಸೆಕೆಂಡ್ ಆಫ್‌ನಲ್ಲೇ ಉಸಿರಾಡುವಂತೆ ಮಾಡುತ್ತದೆ. ಇನ್ನು ಮಕ್ಕಳಿಗೆ ಇಷ್ಟವಾಗಬಹುದು, ಆದರೆ ಸಾಮಾನ್ಯ ಪ್ರೇಕ್ಷಕರಿಗೆ ಅರ್ಥವಾಗಲು ಕ್ಲಿಷ್ಟಕರ ಎನಿಸುವ ವಿಚಾರಗಳು ಮಕ್ಕಳಿಗೆ ಅರ್ಥವಾಗುತ್ತಾ? ಎನ್ನುವುದೇ ದೊಡ್ಡ ಪ್ರಶ್ನೆ.

More from Filmibeat

English summary
Nag ashwin directional Kalki 2898 AD Movie Review In Kannada;
Read more about: filmibeat original telugu prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X