twitter
    For Quick Alerts
    ALLOW NOTIFICATIONS  
    For Daily Alerts

    Vikram Movie Review: ಕಮಲ್ ಹಾಸನ್ ಅದ್ಭುತ ಕಮ್‌ಬ್ಯಾಕ್

    |

    ಬಹುನಿರೀಕ್ಷಿತ ಕಮಲ್ ಹಾಸನ್ ಸಿನಿಮಾ 'ವಿಕ್ರಂ' ತೆರೆಗೆ ಬಂದಿದೆ. ಲೋಕೇಶ್ ಕನಕರಾಜನ್ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್. ಕಮಲ್ ಹಾಸನ್ ಜೊತೆಗೆ ಅದ್ಭುತ ನಟರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಸಹ ನಟಿಸಿದ್ದಾರೆ.

    Rating:
    3.5/5

    Recommended Video

    ವಿಕ್ರಮ್ ಚಿತ್ರಕ್ಕೆ ಪ್ರೇಕ್ಷಕರು ಏನಂದ್ರು ? | Vikram Movie Review #kamalhaasan

    ಬಹಳ ವರ್ಷಗಳ ಗ್ಯಾಪ್‌ನ ಬಳಿಕ ಕಮಲ್ ಹಾಸನ್ ಮತ್ತೆ ಸಿನಿಮಾದಲ್ಲಿ ನಟಿಸಿದ್ದು, ಕಮಲ್‌ಹಾಸನ್‌ರ ಕಮ್‌ ಬ್ಯಾಕ್ ಸಿನಿಮಾ ಎನಿಸಿಕೊಂಡಿರುವ 'ವಿಕ್ರಂ' ಪ್ರೇಕ್ಷಕರ ನಿರೀಕ್ಷೆಗಳನ್ನು ಮುಟ್ಟಿದೆಯೇ? ತಿಳಿಯಲು ಈ ಸಿನಿಮಾ ವಿಮರ್ಶೆ ನೆರವಾಗಲಿದೆ ಓದಿ.

    ಸಿನಿಮಾದ ಮುಖ್ಯ ಮೂರು ಕಂಬಗಳಾದ ಕಮಲ್ ಹಾಸನ್, ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ಇವರು ಮೂವರ ನಟನೆ ಅತ್ಯದ್ಭುತ. ಸಿನಿಮಾದ ಬರವಣಿಗೆ ಅದ್ಭುತ. ಮೇಕಿಂಗ್ ಅಂತೂ ಸೂಪರ್. ಎರಡು ಭಿನ್ನ ಲೋಕಗಳನ್ನು ಒಟ್ಟಿಗೆ ಮರ್ಜ್ ಮಾಡಿರುವ ರೀತಿಯೂ ಸೂಪರ್. ಸಂಗೀತ, ಆಕ್ಷನ್‌ ಅಂತೂ ಒಂದರ ಮೇಲೆ ಒಂದು ಸ್ಪರ್ಧೆಗೆ ಬಿದ್ದಿವೆ. ಸಿನಿಮಾದ ಒಂದು ಸಣ್ಣ ಡ್ರಾಬ್ಯಾಕ್ ಎಂದರೆ ಕತೆಯನ್ನು ಅಥವಾ ಕೆಲವು ಪಾತ್ರಗಳ ವರ್ತನೆಯನ್ನು ಮುಂದೇ ಊಹಿಸಬಹುದು.

    ಕತೆ ಏನು?

    ಕತೆ ಏನು?

    ಪೊಲೀಸರ ಸರಣಿ ಕೊಲೆಯನ್ನು ತಡೆಯಲು, ಕೊಲೆಗಡುಕರನ್ನು ಹಿಡಿಯಲು ಅಮರ್ (ಫಹಾದ್ ಫಾಸಿಲ್) ಮತ್ತು ತಂಡವನ್ನು ರಾಜ್ಯ ಪೊಲೀಸರು ನೇಮಿಸಿಕೊಳ್ಳುತ್ತಾರೆ. ಕೊಲೆಯಾದ ಪೊಲೀಸರಲ್ಲಿ ಕರ್ಣನ್ (ಕಮಲ್ ಹಾಸನ್) ದತ್ತು ಪುತ್ರನೂ ಇದ್ದಾನೆ. ಅಮರ್‌ನ ತನಿಖೆಯು ಆತನನ್ನು ಗ್ಯಂಗ್‌ಸ್ಟರ್ ಸಂತಾನಂ (ವಿಜಯ್) ಬಳಿ ಕರೆತರುತ್ತದೆ. ತನಿಖೆ ಮುಂದುವರೆದಂತೆ ಕಮಲ್‌ ಹಾಸನ್‌ನ ನಿಜ ಮುಖ ಬಯಲಾಗುತ್ತಾ ಹೋಗುತ್ತದೆ. ಕೊನೆಗೆ ಗೊತ್ತಾಗುತ್ತದೆ, ಕರ್ಣನ್ ನಿಜವಾದ ಹೆಸರು ವಿಕ್ರಂ ಎಂದು.

    ಕತೆ ಹಾಗೂ ಚಿತ್ರಕತೆ ಹೇಗಿದೆ?

    ಕತೆ ಹಾಗೂ ಚಿತ್ರಕತೆ ಹೇಗಿದೆ?

    ಕೇವಲ ನಾಲ್ಕು ಸಿನಿಮಾ ಮಾಡಿರುವ ಲೋಕೇಶ್ ಕನಕರಾಜನ್ ಒಂದು ಮಲ್ಟಿಸ್ಟಾರರ್ ಸಿನಿಮಾ ಹೇಗೆ ಮಾಡಬೇಕು ಎಂಬುದನ್ನು 'ವಿಕ್ರಂ' ಮೂಲಕ ಹೇಳಿದ್ದಾರೆ. ಲೋಕೇಶ್ ಕನಕರಾಜನ್, ಕಮಲ್‌ ಹಾಸನ್‌ರ ದೊಡ್ಡ ಅಭಿಮಾನಿ, ಹಾಗಿದ್ದರೂ ಸಹ ಕೇವಲ ಅಭಿಮಾನಿಯೊಬ್ಬ ಮಾಡಿದ ಟ್ರಿಬ್ಯೂಟ್ ಎಂಬಂತಾ ಸಿನಿಮಾ ಇದಲ್ಲ. ಬದಲಿಗೆ ಕಮಲ್ ವೃತ್ತಿಯಲ್ಲಿ ವಿಶೇಷವಾದ ಸಿನಿಮಾಗಳಲ್ಲಿ ಒಂದು ಎಂಬಂತೆ ಮಾಡಿದ್ದಾರೆ ಲೋಕೇಶ್. ಅದ್ಭುತ ಬರವಣಿಗೆಯ, ಅದ್ಭುತ ಮೇಕಿಂಗ್‌ನ ಹಾಗೂ ಎರಡು ಭಿನ್ನ ಪ್ರಪಂಚದ ಅದ್ಭುತ ಮಿಕ್ಸರ್‌ ನೋಡಸಿಗುತ್ತದೆ 'ವಿಕ್ರಂ'ನಲ್ಲಿ.

    ಕೇವಲ ಕಮಲ್ ಹಾಸನ್ ಸಿನಿಮಾ ಅಲ್ಲ

    ಕೇವಲ ಕಮಲ್ ಹಾಸನ್ ಸಿನಿಮಾ ಅಲ್ಲ

    'ವಿಕ್ರಂ' ಸಿನಿಮಾ ಕೇವಲ ಕಮಲ್ ಹಾಸನ್ ಸಿನಿಮಾ ಅಲ್ಲ. ಕಮಲ್ ಅನ್ನು ಸ್ಟಾರ್‌ ಆಗಿ ತೋರಿಸಿದರೂ ಸಹ, ಸಿನಿಮಾದ ಇನ್ನೆರಡು ಪಿಲ್ಲರ್‌ಗಳಾದ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಅವರಿಗೂ ಸಿನಿಮಾದಲ್ಲಿ ಸಾಕಷ್ಟು ಸ್ಪೇಸ್ ಒದಗಿಸಲಾಗಿದೆ. 'ವಿಕ್ರಂ' ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಹಾಗೂ ಲೋಕೇಶ್ ಕನಕರಾಜನ್ ಸಿನಿಮಾ.

    ಸಿನಿಮಾದಲ್ಲಿ ಎಲ್ಲವೂ ಇದೆ

    ಸಿನಿಮಾದಲ್ಲಿ ಎಲ್ಲವೂ ಇದೆ

    ಹಾಗೆಂದು ಇದು ಸಟಲ್ ಕ್ಲಾಸ್ ಸಿನಿಮಾ ಎಂದೇನೂ ಅಲ್ಲ. ಇಲ್ಲಿ ಸಹ ಶಿಳ್ಳೆ ಗಿಟ್ಟಿಸುವ ಎಂದೇನೂ ಅಲ್ಲ. ಕಮಲ್ ಹಾಸನ್‌ಗೆ ಬಿಲ್ಡಪ್ ನೀಡುವ ಕೆಲವು ಸನ್ನಿವೇಶಗಳಿವೆ. ಕಮಲ್ ಹಾಸನ್‌ರ ಕೆಲವು ಹಳೆಯ ಸಿನಿಮಾಗಳ ರೆಫರೆನ್ಸ್‌ಗಳಿವೆ. ಆದರೆ ಅವನ್ನೆಲ್ಲ ಸುಮ್ಮನೆ ಇಡಲಾಗಿಲ್ಲ ಬದಲಿಗೆ ಸಿನಿಮಾದಲ್ಲಿ ಕ್ರಮವಾಗಿ ಜೋಡಿಸಲಾಗಿದೆ. ಕೆಲವು ಕಡೆ ಸಿನಿಮಾದ ಕತೆ ಊಹಿಸಬಹುದು ಎಂಬುದು ಬಿಟ್ಟರೆ ಇದೊಂದು ಅದ್ಭುತವಾಗಿ ಕಟ್ಟಲಾಗಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ. ಲೋಕೇಶ್ ಕನಕರಾಜನ್‌ರ ಈ ಸಿನಿಮಾ ಚಿತ್ರಮಂದಿರದಲ್ಲಿ ನೋಡಲೇ ಬೇಕಾದ ಸಿನಿಮಾ.

    ಕಮಲ್ ಹಾಸನ್ ಅತ್ಯದ್ಭುತವಾದ ನಟನೆ

    ಕಮಲ್ ಹಾಸನ್ ಅತ್ಯದ್ಭುತವಾದ ನಟನೆ

    ಕಮಲ್ ಹಾಸನ್ ಅವರದ್ದು ಅತ್ಯದ್ಭುತ ನಟನೆ. ತಾವು ಭಾರತದ ಅತ್ಯುತ್ತಮ ನಟ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ ಕಮಲ್ ಹಾಸನ್. ಅಷ್ಟೇ ಅಲ್ಲದೆ, ಸಿನಿಮಾದ ಚೆನ್ನಾಗಿ ಮೂಡಿಬರುವ ಕಾರಣ ಅವಶ್ಯಕತೆ ಬಿದ್ದಲ್ಲಿ ಮುಲಾಜಿಲ್ಲದೆ ಹಿಂದೆ ಸರಿದು, ಇತರ ನಟರನ್ನು ಮಿನುಗಲು ಬಿಟ್ಟಿದ್ದಾರೆ. ವಿಶೇಷವಾಗಿ ಸಿನಿಮಾದ ಮೊದಲಾರ್ಧದಲ್ಲಿ.

    ಎಲ್ಲರನ್ನೂ ಮೀರಿಸಿದ್ದಾರೆ ಫಹಾದ್ ಫಾಸಿಲ್

    ಎಲ್ಲರನ್ನೂ ಮೀರಿಸಿದ್ದಾರೆ ಫಹಾದ್ ಫಾಸಿಲ್

    ಫಹಾದ್ ಫಾಸಿಲ್ ಅದೆಷ್ಟು ಅದ್ಭುತವಾದ ನಟರೆಂದರೆ ಕಮಲ್ ಹಾಸನ್ ಅಂಥಹಾ ಕಮಲ್ ಹಾಸನ್ ಅವರನ್ನೂ ಬದಿಗೆ ಸರಿಸಿ ನಟನೆಯಿಂದ ಮಿಂಚಬಲ್ಲರು. ಅದ್ಭುತವಾಗಿ ನಟಿಸಿರುವ ಫಹಾದ್ ಫಾಸಿಲ್, ಆಕ್ಷನ್ ದೃಶ್ಯಗಳಲ್ಲಿ ಅಂತೂ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಜಯ್ ಸೇತುಪತಿ ತಾವೊಬ್ಬ ಅದ್ಭುತ ನಟ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅವರ ಹಾಗೂ ಕಮಲ್ ಹಾಸನ್ ಜೊತೆಗಿನ ದೃಶ್ಯಗಳನ್ನಂತೂ ನೋಡಿಯೇ ಸವಿಯಬೇಕು.

    ತಾಂತ್ರಿಕ ಅಂಶಗಳು ಹೇಗಿವೆ?

    ತಾಂತ್ರಿಕ ಅಂಶಗಳು ಹೇಗಿವೆ?

    ಅನಿರುದ್ಧ್ ರವಿಚಂದ್ರನ್ ಸಂಗೀತ ಅದ್ಭುತವಾಗಿದೆ. 'ವಿಕ್ರಂ' ಸಿನಿಮಾದ ಕ್ರೇಜಿ ಯೂನಿವರ್ಸ್‌ಗೆ ಜೀವ ತುಂಬಿದ್ದಾರೆ ಅನಿರುದ್ಧ್ ರವಿಚಂದ್ರನ್, ವೀಕ್ಷಕರು ಎದ್ದು ಕುಣಿಯುವಂತೆ ಸಂಗೀತ ನೀಡಿದ್ದಾರೆ ಈ ಯುವ ಸಂಗೀತ ನಿರ್ದೇಶಕ. ಸಿನಿಮಾದ ಹಿನ್ನೆಲೆ ಸಂಗೀತ, ಸಿನಿಮಾ ಮುಗಿದ ಮೇಲೂ ಪ್ರೇಕ್ಷಕನ ಜೊತೆಗಿರುತ್ತದೆ. ಹಾಡುಗಳು ಸಹ. ಇನ್ನು ಸಿನಿಮಾದ ಆಕ್ಷನ್ ದೃಶ್ಯಗಳು ಅದ್ಭುತವಾಗಿವೆ. ಆಕ್ಷನ್ ದೃಶ್ಯಗಳನ್ನು ಸೆರೆ ಹಿಡಿದಿರುವ ರೀತಿಯೂ ಸೂಪರ್.

    ಕೊನೆಯ ಮಾತು

    ಕೊನೆಯ ಮಾತು

    ನಿರ್ದೇಶಕ ಲೋಕೇಶ್ ಕನಕರಾಜ್, ಕಮಲ್ ಹಾಸನ್‌ಗೆ ಒಂದು ಅತ್ಯದ್ಭುತ ಕಮ್‌ಬ್ಯಾಕ್ ಸಿನಿಮಾ ನೀಡಿದ್ದಾರೆ 'ವಿಕ್ರಂ' ಮೂಲಕ. ಅತ್ಯದ್ಭುತ ಮೇಕಿಂಗ್, ಅದ್ಭುತವಾದ ಕತೆ, ಅದ್ಭುತವಾದ ನಟನೆ ಎಲ್ಲ ತಾಂತ್ರಿಕ ಅಂಶಗಳು ಅದ್ಭುತವಾಗಿದ್ದು, ಕಮಲ್ ಹಾಸನ್ ಅಭಿಮಾನಿಗಳು, ಅಭಿಮಾನಿಗಳಲ್ಲದ ಕೇವಲ ಸಿನಿಮಾ ಪ್ರೇಮಿಗಳು ಎಲ್ಲರೂ ನೋಡಬೇಕಾದ ಸಿನಿಮಾ ಇದಾಗಿದೆ.

    English summary
    Kamal Haasan, Vijay Sethupathi, Fahad Fasil starrer Tamil movie Vikram review in Kannada. Lokesh Kanakaraj creats a master class.
    Saturday, June 4, 2022, 9:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X