Kanguva Review: 1000 ವರ್ಷ ಹಿಂದಕ್ಕೆ ಕರ್ಕೊಂಡ್ ಹೋಗುವ 'ಕಂಗುವ' ಇಷ್ಟವಾಗ್ತಾನಾ?

Rating:
2.5/5
Star Cast: ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ, ಕಾರ್ತಿ ಮುಂತಾದವರು.
Director: ಶಿವ

ತಮಿಳು ಚಿತ್ರರಂಗದ ಬಾಹುಬಲಿ ಎಂದೇ ಬಿಂಬಿಸಲಾಗಿದ್ದ 'ಕಂಗುವ' ಸಿನಿಮಾ ಕೊನೆಗೂ ತೆರೆಗಪ್ಪಳಿಸಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 3 ತಿಂಗಳು ಹಿಂದೆಯೇ ಸಿನಿಮಾ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ತಡವಾಗಿತ್ತು. ಸೂರ್ಯ ದ್ವಿಪಾತ್ರದಲ್ಲಿ ನಟಿಸಿರುವ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಕೊನೆಯಲ್ಲಿ ಕಾರ್ತಿ ಗೆಸ್ಟ್ ಅಪಿಯರೆನ್ಸ್ ಕಿಕ್ ಕೊಡುತ್ತದೆ.

ನಿರ್ದೇಶಕರು ತಮ್ಮ ಕಲ್ಪನೆಯಲ್ಲಿ ಏನೇನೋ ಊಹಿಸಿಕೊಳ್ಳಬಹುದು. ಅದನ್ನು ಕಷ್ಟಪಟ್ಟು ತೆರೆಮೇಲೆ ಕೂಡ ತರಬಹುದು. ಆದರೆ ಅಂತಿಮವಾಗಿ ಸಿನಿಮಾ ಜನರಿಗೆ ಇಷ್ಟವಾಯ್ತಾ? ಇಲ್ವಾ? ಎನ್ನುವುದಷ್ಟೆ ಇಲ್ಲಿ ಉಳಿಯುವುದು. ಸಿನಿಮಾ ನೋಡುಗರಿಗೆ ಕನೆಕ್ಟ್ ಆಗದಿದ್ದರೆ ಎಷ್ಟೇ ಕೋಟಿ ಸುರಿದರೂ, ಎಂಥಹ ಪರ್ಫಾರ್ಮನ್ಸ್ ಇದ್ದರೂ ಪ್ರಯೋಜನವಾಗಲ್ಲ. 'ಕಂಗುವ' ಸಿನಿಮಾ ಕೂಡ ಇದೇ ಭಾವನೆ ಮೂಡಿಸುತ್ತದೆ. ದೊಡ್ಡ ಪರದೆಯಲ್ಲಿ ಕಣ್ಣಿಗೆ ಹಬ್ಬ ಅನ್ನಿಸಿದರು ಮನಸ್ಸಿಗೆ ಅಷ್ಟಾಗಿ ಹತ್ತಿರವಾಗಲ್ಲ. ಏನೋ ಮಿಸ್ ಹೊಡೆಯುತ್ತಿದೆ ಅನ್ನಿಸುತ್ತಲೇ ಇರುತ್ತದೆ.

Kanguva Review in kannada  Suriya Starrer epic fantasy action film visual treat

ಫ್ಯಾಂಟಸಿ ಚಿತ್ರಗಳು ಹೊಸದೇನೂ ಅಲ್ಲ. ಪ್ರಸ್ತುತ ಕಾಲಘಟ್ಟದ ಕಥೆಗೆ ನೂರಾರು ವರ್ಷಗಳ ಹಿಂದಿನ ಕಥೆಯನ್ನು ಸೇರಿಸಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನಗಳು ನಡೆದಿದೆ. ಇದೇ ಕಾನ್ಸೆಪ್ಟ್‌ನಲ್ಲಿ ಸೂರ್ಯ ನಟನೆಯ 'ಕಂಗುವ' ಸಿನಿಮಾ ಕೂಡ ಮೂಡಿ ಬಂದಿದೆ. ಈ ಬಗ್ಗೆ ಚಿತ್ರದ ಸ್ಯಾಂಪಲ್‌ಗಳಲ್ಲೇ ಸುಳಿವು ಸಿಕ್ಕಿತ್ತು.

'ಕಂಗುವ' ಕಥೆ

ಬೌಂಟಿ ಹಂಟರ್ ಆಗಿ ಫ್ರಾನ್ಸಿಸ್ (ಸೂರ್ಯ) ಗೋವಾದಲ್ಲಿ ಜಾಲಿ ಲೈಫ್ ಎಂಜಾಯ್ ಮಾಡಿಕೊಂಡಿರುತ್ತಾರೆ. ಆತನಿಗೆ ಏಂಜಲೀನಾ(ದಿಶಾ ಪಟಾನಿ) ಜೊತೆ ಲವ್ ಬ್ರೇಕಪ್ ಆಗಿರುತ್ತದೆ. ಅತ್ತ ರಷ್ಯಾದ ಲ್ಯಾಬ್‌ನಿಂದ ಒಬ್ಬ ಬಾಲಕ ತಪ್ಪಿಸಿಕೊಂಡು ಗೋವಾಗೆ ಬರುತ್ತಾನೆ. ಫ್ರಾನ್ಸಿಸ್ ಹಾಗೂ ಆ ಬಾಲಕನ ಭೇಟಿ ಆಗುತ್ತದೆ. ತಮ್ಮಿಬ್ಬರಿಗೂ ಏನೋ ನಂಟಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಆದರೆ ಆ ಬಾಲಕನಿಗಾಗಿ ಒಂದು ಸೈನ್ಯವೇ ಬರುತ್ತದೆ.

Kanguva Review in kannada  Suriya Starrer epic fantasy action film visual treat

ಫ್ರಾನ್ಸಿಸ್ ಆ ಬಾಲಕನ ರಕ್ಷಣೆಗೆ ನಿಲ್ಲುತ್ತಾನೆ. ಈ ಹೋರಾಟದ ಸಮಯದಲ್ಲಿ ಕಂಗುವ ಕಥೆ 1000 ವರ್ಷ ಹಿಂದಕ್ಕೆ ಹೋಗುತ್ತದೆ. ಅದು ಕ್ರಿಶ 1070ರ ಕಾಲಘಟ್ಟ. ಆಗ ಪ್ರಣವಾದಿ ಕೋನದ ನಾಯಕ 'ಕಂಗುವ' ಪ್ರಣವ ಎಂಬ ಬಾಲಕನ ಜವಾಬ್ದಾರಿ ವಹಿಸಿಕೊಂಡಿರುತ್ತಾನೆ. ಅದು 5 ಬೇರೆ ಬೇರೆ ಬುಡಕಟ್ಟು ಜನರ ಗುಂಪುಗಳ ಪ್ರಪಂಚ. ಅಲ್ಲಿ ಕಾಪಾಲ ಕೋನದ ನಾಯಕ ಉಧಿರನ್(ಬಾಡಿ ಡಿಯೋಲ್) ಹಾಗೂ ಕಂಗುವ ವೈರತ್ವ ಇರುತ್ತದೆ. ಅಷ್ಟಕ್ಕೂ ಏನಿದು ಪಂಚ ಕೋನಗಳ ಕಾನ್ಸೆಪ್ಟ್? ಕಂಗುವ ಹಾಗೂ ಪ್ರಣವ ಜನ್ಮಜನ್ಮಾಂತರದ ಕಥೆ ಏನು? ಕ್ಲೈಮ್ಯಾಕ್ಸ್‌ನಲ್ಲಿ ಬರುವ ರುದ್ರಾಂಗ ನೇತ್ರ(ಕಾರ್ತಿ) ಮಾಡುವ ಶಪಥ ಏನು? ಈ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ 'ಕಂಗುವ' ಸಿನಿಮಾ ನೋಡಬೇಕು.

ಸಿನಿಮಾ ಹೇಗಿದೆ?

ನಿಜಕ್ಕೂ 'ಕಂಗುವ' ಕಥೆಯ ಕಾನ್ಸೆಪ್ಟ್ ಚೆನ್ನಾಗಿದೆ. ಒಂದು ಫ್ಯಾಂಟಸಿ ಚಿತ್ರಕ್ಕೆ ಇದ್ದಕ್ಕಿಂತ ಒಳ್ಳೆ ಸ್ಟೋರಿಲೈನ್ ಸಿಗಲ್ಲ. ಅದನ್ನು ಅಷ್ಟೇ ಸೊಗಸಾಗಿ ತೆರೆಗೆ ತರುವ ಪ್ರಯತ್ನ ಕೂಡ ನಡೆದಿದೆ. ಬಹಳ ಅದ್ಧೂರಿಯಾಗಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಜೊತೆಗೆ ಹುಬ್ಬೇರಿಸುವಂತಹ ದೃಶ್ಯಕಾವ್ಯ ತೆರೆಮೇಲೆ ನಿರ್ಮಾಣವಾಗಿದೆ. ತ್ರಿಡಿ ಕನ್ನಡಕದಲ್ಲಿ ಸಿನಿಮಾ ಮತ್ತಷ್ಟು ಮಜಾ ಕೊಡುತ್ತದೆ. ಸೂರ್ಯ ಒನ್‌ಮ್ಯಾನ್ ಶೋ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಆದರೆ ಕೆಲವೆಡೆ ಸಿನಿಮಾ ಬೋರ್ ಹೊಡೆಸುತ್ತದೆ.

ಗೋವಾದಿಂದ ಶುರುವಾಗುವ ಚಿತ್ರದ ಕಥೆಯೇ ನಿರಾಸೆ ಮೂಡಿಸಿಬಿಡುತ್ತದೆ. ಆರಂಭದಲ್ಲಿ ಕೆಲ ಸನ್ನಿವೇಶಗಳಂತೂ ತಾಳ್ಮೆ ಪರೀಕ್ಷೆ ಮಾಡುತ್ತದೆ. ಅಂತೂ ಇಂತೂ ಫ್ಲ್ಯಾಶ್ ಬ್ಯಾಕ್ ಎಪಿಸೋಡ್ ಶುರುವಾದ ಬಳಿಕ ಸಿನಿಮಾ ಕೊಂಚ ಕುತೂಹಲ ಮೂಡಿಸುತ್ತದೆ. ಒಂದೊಳ್ಳೆ ಟ್ವಿಸ್ಟ್ ಕೊಟ್ಟು ಇಂಟರ್‌ವಲ್ ಕಾರ್ಡ್ ಬೀಳುತ್ತದೆ. ಸಾಗರ ಕೋನ, ಹಿಮ ಕೋನ, ಅರಣ್ಯ ಕೋನ, ಪ್ರಣವಾದಿ ಕೋನ, ಕಾಪಾಲ ಕೋನ ಎನ್ನುವ ಬೇರೆ ಬುಡಕಟ್ಟು ಸಾಮ್ರಾಜ್ಯಗಳ ಕಾನ್ಸೆಪ್ಟ್ ಚೆನ್ನಾಗಿದೆ. ಅದನ್ನು ಬಹಳ ಸೊಗಸಾಗಿಯೇ ತೆರೆಗೆ ತಂದಿದ್ದಾರೆ.

ಸೆಕೆಂಡ್ ಹಾಫ್‌ನಲ್ಲಿ ಕೆಲ ಸನ್ನಿವೇಶಗಳು ಮೈ ಜುಮ್ ಎನಿಸುತ್ತದೆ. ಆದರೆ ಅಷ್ಟರಲ್ಲಿ ಸಿನಿಮಾ ನಿರಾಸೆ ಮೂಡಿಸಿಬಿಟ್ಟಿರುತ್ತದೆ. ನೋಡ ನೋಡುತ್ತಲೇ ಕ್ಲೈಮ್ಯಾಕ್ಸ್ ಕಡೆಗೆ ಸಾಗುತ್ತದೆ. ಕೊನೆಗೆ ಸೂರ್ಯ ಸಹೋದರ ಕಾರ್ತಿ ಸರ್‌ಪ್ರೈಸ್ ಎಂಟ್ರಿ ಕೊಡುತ್ತಾರೆ. ಚಿತ್ರದ ಸೀಕ್ವೆಲ್‌ಗೆ ಲಿಂಕ್ ಕೊಡುವಂತೆ ಆ ಪಾತ್ರ ಚಿತ್ರದಲ್ಲಿದೆ. ಹಾಗಾಗಿ 'ಕಂಗುವ- 2' ಚಿತ್ರದಲ್ಲಿ ಸೂರ್ಯ-ಕಾರ್ತಿ ದರ್ಬಾರ್ ನೋಡಬಹುದು.

ಯಾವುದೇ ಕಥೆ ಆಗಿದ್ದರೂ ಭಾವನಾತ್ಮಕವಾಗಿ ಕನೆಕ್ಟ್ ಆಗಬೇಕು. ಈ ಚಿತ್ರದಲ್ಲಿ ಅದೇ ಕೈ ಕೊಟ್ಟಿದೆ. ಅದೇ ಕಾರಣಕ್ಕೆ ಕೆಲವು ಸನ್ನಿವೇಶಗಳ ಪೇಲವ ಎನಿಸಿಬಿಡುತ್ತದೆ. ಎಮೋಷನ್ ಇಲ್ಲದೇ ಎಷ್ಟು ದುಡ್ಡು ಸುರಿದು ತೆರೆಮೇಲೆ ಏನೇ ಅದ್ಭುತ ಸೃಷ್ಟಿಸಿದರೂ ಪ್ರಯೋಜನವಾಗಲ್ಲ ಎನ್ನುವುದಕ್ಕೆ 'ಕಂಗುವ' ಸಿನಿಮಾ ಕೂಡ ಉದಾಹರಣೆ ಆಗಿ ನಿಲ್ಲುತ್ತದೆ.

ಕಲಾವಿದರ ಅಭಿನಯ

ನಟನೆ ವಿಚಾರಕ್ಕೆ ಬಂದರೆ ಇಡೀ ಸಿನಿಮಾ ಸೂರ್ಯ ಆವರಿಸಿಕೊಂಡಿದ್ದಾರೆ. ಆ ಪಾತ್ರದ ಎದುರು ಬೇರೆ ಪಾತ್ರಗಳು ಸಪ್ಪೆ ಎನಿಸಿಬಿಡುತ್ತದೆ. ಇನ್ನು ಪರ್ಫಾರ್ಮನ್ಸ್ ಸೂಪರ್ ಎಂದೇ ಹೇಳಬೇಕು. ಅದರಲ್ಲೂ 'ಕಂಗುವ' ಪಾತ್ರದಲ್ಲಿ ಸೂರ್ಯ ಲುಕ್, ಮೇಕಪ್ ಎಲ್ಲವೂ ಕಿಕ್ ಕೊಡುತ್ತದೆ. ನಾಯಕಿಯಾಗಿ ದಿಶಾಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಬಾಬಿ ಡಿಯೋಲ್ ಇದ್ದಷ್ಟು ಹೊತ್ತು ಅಬ್ಬರಿಸುತ್ತಾರೆ.

ಎಲ್ಲಾ ಪಾತ್ರಗಳು ಕೂಡ ಚಿತ್ರದಲ್ಲಿ ಆರ್ಭಟಿಸುತ್ತಲೇ ಇರುತ್ತವೆ. ಅದನ್ನು ಅಬ್ಬರದ ಸಂಗೀತದಿಂದ ಮತ್ತಷ್ಟು ಕರ್ಕಶವಾಗಿ ತೋರಿಸಲಾಗಿದೆ. ಇನ್ನು ಕಥೆಯ ಕೇಂದ್ರಬಿಂದು ಒಬ್ಬ ಬಾಲಕ. ಸೂರ್ಯ ರೀತಿಯಲ್ಲೇ ದ್ವಿಪಾತ್ರದಲ್ಲಿ ಆತ ನಟಿಸಿದ್ದಾನೆ. ಆತನ ನಟನೆ ಇಷ್ಟವಾಗುತ್ತದೆ.

ಟೆಕ್ನಿಕಲಿ ಸಿನಿಮಾ

ಎಲ್ಲಾ ವಿಭಾಗದಲ್ಲಿ 'ಕಂಗುವ' ಸಿನಿಮಾ ಚೆನ್ನಾಗಿದೆ. ಮುಖ್ಯವಾಗಿ ಚಿತ್ರದ ವಿಎಫ್‌ಎಕ್ಸ್ ಹೈಲೆಟ್ ಆಗಿದೆ. ಫ್ಲ್ಯಾಶ್‌ಬ್ಯಾಕ್ ಎಪಿಸೋಡ್ ಕಟ್ಟಿಕೊಟ್ಟಿರುವ ಬಗೆ ಚೆನ್ನಾಗಿದೆ. ವೆಟ್ರಿ ಪಳನಿಸ್ವಾಮಿ ಛಾಯಾಗ್ರಹಣ ಚೆನ್ನಾಗಿದೆ. ದೇವಿ ಶ್ರೀಪ್ರಸಾದ್ ಹಿನ್ನೆಲೆ ಸಂಗೀತ ಕೆಲವೊಮ್ಮೆ ಅತಿಯಾಯಿತು ಎನಿಸುತ್ತದೆ. ಆರ್ಟ್‌ ವರ್ಕ್, ಕಲಾವಿದರ ಕಾಸ್ಟ್ಯೂಮ್ ಎಲ್ಲವೂ ಚೆನ್ನಾಗಿದೆ. ಕಥೆಗೆ ಪೂರಕವಾಗಿದೆ.

ಕೊನೆಯ ಮಾತು

ಫ್ಯಾಂಟಸಿ ಸಿನಿಮಾ ಇಷ್ಟಪಡುವವರು ಅಥವಾ ಯಾವುದೇ ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಹೋಗುವವರಿಗೆ 'ಕಂಗುವ' ಇಷ್ಟವಾಗಬಹುದು. ವಿಭಿನ್ನ ಪ್ರಯತ್ನವಾಗಿದ್ದರೂ ಸಾಕಷ್ಟು ಲೋಪದೋಷಗಳು ಇವೆ. ದೊಡ್ಡ ಪರದೆಯಲ್ಲಿ ಆಕ್ಷನ್ ಸನ್ನಿವೇಶಗಳು ಒಳ್ಳೆ ಅನುಭವ ನೀಡುತ್ತದೆ. ಲಾಜಿಕ್‌ಗಳನ್ನು ಪಕ್ಕಕ್ಕಿಟ್ಟು ಬರೀ ಟೈಂ ಪಾಸ್‌ ರೀತಿ ಸಿನಿಮಾ ನೋಡಿ ಬರಲು ಅಡ್ಡಿಯಿಲ್ಲ.

More from Filmibeat

English summary
Suriya and Shiva's Kanguva Movie complete review and rating in kannada;
Read more about: filmibeat original surya review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X