Kanguva Twitter Review: ಸೂರ್ಯ 'ಕಂಗುವ' ಯುದ್ಧ ಗೆದ್ನಾ?
ಶಿವ ನಿರ್ದೇಶನದಲ್ಲಿ ತಮಿಳಿನ 'ಕಂಗುವ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದೆ. ಬಹುಕೋಟಿ ವೆಚ್ಚದ ಈ ತ್ರೀಡಿ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದು ಸುಳ್ಳಲ್ಲ. ಕೊಂಚ ತಡವಾಗಿ ಸಿನಿಮಾ ತೆರೆಗೆ ಬಂದಿದ್ದು ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ದಿಶಾ ಪಟಾನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬಾಬಿ ಡಿಯೋಲ್ ಸೇರಿದಂತೆ ಖಡಕ್ ನಟರು ಚಿತ್ರದಲ್ಲಿ ಮಿಂಚಿದ್ದಾರೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮೂಡಿ ಬಂದಿದ್ದು ಹಾಲಿವುಡ್ ರೇಂಜ್ ವಿಷ್ಯುವಲ್ಸ್ ಚಿತ್ರದಲ್ಲಿದೆ. ಸೂರ್ಯ ಕರಿಯರ್‌ನಲ್ಲೇ ಇದು ಬಹಳ ಅದ್ಧೂರಿ ಸಿನಿಮಾ. ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ಸೂರ್ಯ ಅಬ್ಬರಿಸಿದ್ದಾರೆ. ದಸರಾ ಸಂಭ್ರಮದಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. 'ವೆಟ್ಟೆಯಾನ್' ಕಾರಣಕ್ಕೆ ಡೇಟ್ ಮುಂದೂಡಲಾಯಿತು.

ಕೆಲವೆಡೆ ಬೆಳ್ಳಂ ಬೆಳಗ್ಗೆ 4 ಗಂಟೆಗೆ 'ಕಂಗುವ' ಸಿನಿಮಾ ಮೊದಲ ಪ್ರದರ್ಶನ ಆರಂಭವಾಗಿದೆ. ಈಗಾಗಲೇ ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯವನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ವಿಷ್ಯುವಲಿ ಸೂಪರ್.. ಆದರೆ
ಆರಂಭದಲ್ಲೇ ಸಿನಿಮಾ ಕೊಂಚ ಡಲ್ ಆಗಿದೆ. ಬರವಣಿಗೆಯಲ್ಲಿ ಹೆಚ್ಚಿನ ಡ್ರಾಮಾ ಬೇಕಿತ್ತು. ಕಲಾವಿದರು ಅಬ್ಬರಿಸಿದ್ದಾರೆ. ಆದರೆ ಅದು ಎಳೆದಂತೆ ಭಾಸವಾಗುತ್ತದೆ. ಕೆಲ ನ್ಯೂನತೆಗಳ ಹೊರತಾಗಿಯೂ ವಿಷ್ಯುವಲಿ ಸಿನಿಮಾ ಚೆನ್ನಾಗಿದೆ. ಒಳ್ಳೆ ಆಕ್ಷನ್, ಎಮೋಷನಲ್ ಸನ್ನಿವೇಶಗಳಿಗೆ, ಸೂರ್ಯ- ಶಿವ ಜಾದೂ ಮಾಡಿದ್ದಾರೆ. ಇದು ಕಲ್ಟ್ ಸಿನಿಮಾ ಆಗಲಿದೆ. ಸೀಕ್ವೆಲ್ ಮಾಡಿದರೆ ನಾನು ನೋಡ್ತೀನಿ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಚಿತ್ರಮಂದಿರಗಳಲ್ಲೇ ನೋಡಿ
ನ್ಯೂನ್ಯತೆಗಳನ್ನು ಪಕ್ಕಕ್ಕಿಟ್ಟರೆ ದೊಡ್ಡದಾಗಿ ಸಿನಿಮಾ ಮಾಡಬೇಕು ಎಂದು 'ಕಂಗುವ' ಚಿತ್ರತಂಡ ಅಂದುಕೊಂಡಿತ್ತು. ಆ ಪ್ರಯತ್ನದಲ್ಲಿ ತಂಡ ನಿಜಕ್ಕೂ ಗೆದ್ದಿದೆ. ಬರೀ ತೆರೆಮೇಲೆ ಅದ್ಭುತ ದೃಶ್ಯಕಾವ್ಯವಾಗಿ ನೋಡಲು 'ಕಂಗುವ' ಸಿನಿಮಾ ಬಹಳ ಚೆನ್ನಾಗಿದೆ. ಪ್ರತಿ ಫ್ರೇಮ್ ಕೂಡ ಅದ್ಭುತ. ಸಿಜಿ ಕೂಡ ಬಹಳ ಚೆನ್ನಾಗಿದೆ. ಈ ವಿಷ್ಯುವಲ್ ಟ್ರೀಟ್ ಅನ್ನು ಚಿತ್ರಮಂದಿರಗಳಲ್ಲಿ ನೋಡಿ ಎಂಜಾಯ್ ಮಾಡಿ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.
ಸೆಕೆಂಡ್ ಹಾಫ್ ನೀರಸ
'ಕಂಗುವ' ಪರವಾಗಿಲ್ಲ ಎನ್ನುವಂತಹ ಫ್ಯಾಂಟಸಿ ಎನ್ನಬಹುದು. ಒಳ್ಳೆ ಕಥೆ ಇತ್ತು. ಆದರೆ ಅದನ್ನು ಸರಿಯಾಗಿ ತೆರೆಗೆ ತಂದಿಲ್ಲ. ಸೂರ್ಯ ನಟನೆ ಚೆನ್ನಾಗಿದೆ. ಅವರ ಪ್ರಯತ್ನ ಮೆಚ್ಚಲೇಬೇಕು. ಆದರೆ ಬರೀ ನಟನೆಯಿಂದ ಇಂತಹ ಸಿನಿಮಾವನ್ನು ಮೇಲೆತ್ತುವುದು ಕಷ್ಟ. ಚಿತ್ರದಲ್ಲಿ ಕೆಲ ಒಳ್ಳೆ ಸನ್ನಿವೇಶಗಳಿವೆ. ಉಳಿದವು ಅಷ್ಟಕ್ಕಷ್ಟೆ. ಭಾವನಾತ್ಮಕವಾಗಿ ಸಿನಿಮಾ ಕನೆಕ್ಟ್ ಆಗಲ್ಲ. ಫಸ್ಟ್ ಹಾಫ್ ಚೆನ್ನಾಗಿದೆ. ಸೆಕೆಂಡ್ ಹಾಫ್ ನೀರಸವಾಗಿದೆ ಎನ್ನುವುದು ಮತ್ತೊಬ್ಬರ ರಿವ್ಯೂ.
ವಿಎಫ್‌ಎಕ್ಸ್ ಸೂಪರ್
ಫಸ್ಟ್ ಹಾಗೂ ಸೆಕೆಂಡ್ ಹಾಫ್ ಸಖತ್ತಾಗಿದೆ. ಒಟ್ಟಾರೆ ಸಿನಿಮಾ ಚೆನ್ನಾಗಿದ್ದು ಎಂಗೇಜಿಂಗ್ ಆಗಿದೆ. ಕೆಲ ನ್ಯೂನ್ಯತೆಗಳಿವೆ. ಇನ್ನುಳಿದಂತೆ ಸಿನಿಮಾ ಸೊಗಸಾಗಿದೆ. ವಿಎಫ್‌ಎಕ್ಸ್ ವಿಭಾಗಕ್ಕೆ ದೊಡ್ಡ ಸೆಲ್ಯೂಟ್. ಚಿತ್ರದ ಪ್ರತಿ ವಿಚಾರವೂ ಅದ್ಧೂರಿಯಾಗಿದೆ ಎಂದು ಇನ್ನೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ.
ತ್ರಿಡಿಯಲ್ಲಿ ಮಾಡಿದ್ದು ಉತ್ತಮ
ಸೂರ್ಯ ಹಾಗೂ ದೇವಿಶ್ರೀ ಪ್ರಸಾದ್ ಇಬ್ಬರು ಕೂಡ ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೂ ಚಿತ್ರದ ಕತೆ ಹಾಗೂ ಪಾತ್ರಗಳ ಬರವಣಿಗೆ ಚೆನ್ನಾಗಿ ಇರಬೇಕಿತ್ತು. ಈ ಚಿತ್ರವನ್ನು ತ್ರಿಡಿಯಲ್ಲಿ ಮಾಡಬೇಕು ಎಂದುಕೊಂಡ ಚಿತ್ರತಂಡ ನಿರ್ಧಾರ ಸರಿಯಾಗಿದೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಬಹುದು ಎನಿಸುತ್ತದೆ ಎಂದು ಅನ್ಬು ಎಂಬುವವರು ಟ್ವೀಟ್ ಮಾಡಿದ್ದಾರೆ.
ಫಸ್ಟ್ ಹಾಫ್ ಬೋರಿಂಗ್
ಫಸ್ಟ್ ಹಾಫ್ ಇನ್ನೂ ಮುಗಿದಿಲ್ಲ. ಈಗಾಗಲೇ ಕೆಲವಡೆ ಬೇಸರ ಮತ್ತು ಸ್ಲೋ ಎನಿಸುತ್ತಿದೆ. ಫ್ರಾನ್ಸಿಸ್ ಮತ್ತು ಏಂಜೆಲಾ ಪಾತ್ರಗಳು ಕಿರಿಕಿರಿಯುಂಟುಮಾಡುತ್ತಿವೆ. ಆದರೆ ಕೂಡಲೇ ಮತ್ತೆ ಲಯಕ್ಕೆ ಚಿತ್ರ ಮರಳಿದೆ. ಫ್ಲ್ಯಾಶ್ ಬ್ಯಾಕ್ ಶುರುವಾಗಿದೆ ಎನ್ನುವುದು ಮತ್ತೊಬ್ಬ ನೆಟ್ಟಿಗನ ಅಭಿಪ್ರಾಯ.


Click it and Unblock the Notifications











