For Quick Alerts
ALLOW NOTIFICATIONS  
For Daily Alerts

  ಬದ್ಮಾಶ್ ವಿಮರ್ಶೆ: ಫೈಟ್ಸ್, ಡೈಲಾಗ್ ಗಳ ಅಬ್ಬರದಲ್ಲಿ ಧನಂಜಯ

  |

  ''ಇಂಟ್ರೊಡಕ್ಷನ್ ಗೆಲ್ಲ ಟೈಮ್ ಇಲ್ಲ. ಡೈರೆಕ್ಟ್ ಆಗಿ ಒಂದು ಗೇಮ್ ಆಡೋಣ''

  ''ನಮ್ಮ ಹುಡುಗಿ ಹುಕ್ಕಂ ಕೊಟ್ರೆ, ಅಲ್ಲೇ ಹಾಜರ್ ಆಗ್ತಾನೆ ಈ ಬದ್ಮಾಶ್''

  ಸ್ಪೆಷಲ್ ಸ್ಟಾರ್ ಧನಂಜಯ್ ಅಭಿನಯದ 'ಬದ್ಮಾಶ್' ಚಿತ್ರದಲ್ಲಿ ಇಂತಹ ಅಬ್ಬರದ ಡೈಲಾಗ್ ಗಳು ಬೇಜಾನ್ ಇವೆ. ಔಟ್ ಅಂಡ್ ಔಟ್ ಮಾಸ್ ಚಿತ್ರವಾಗಿರುವ 'ಬದ್ಮಾಶ್' ಸಂಪೂರ್ಣ ವಿಮರ್ಶೆ ಇಲ್ಲಿದೆ....

  Rating:
  3.0/5
  Star Cast: ಧನಂಜಯ್, ಸಂಚಿತಾ ಶೆಟ್ಟಿ, ರಮೇಶ್ ಭಟ್
  Director: ಆಕಾಶ್ ಶ್ರೀವತ್ಸ

  ಕಥಾ ಹಂದರ

  'ವಿಜಯ ವೈಡೂರ್ಯ' ಎಂಬ ವಜ್ರವನ್ನ ಅಂದಿನ ರಾಜರು ಪರಕೀಯರ ಕೈಗೆ ಸಿಗದಂತೆ ಕಾಪಾಡಿಕೊಂಡು ಬಂದಿರುತ್ತಾರೆ. ರಾಜ ಮನೆತನದ ಕೊನೆಯ ವಾರಸುದಾರ ಸಾಯುವ ಮುನ್ನ, ಈ ವಜ್ರವನ್ನ ಭಾರತ ಸರ್ಕಾರದ ಅಧೀನಕ್ಕೆ ಒಪ್ಪಿಸಬೇಕು ಎಂಬ ಆಜ್ಞೆಯನ್ನಿಟ್ಟು ಪೊಲೀಸ್ ಅಧಿಕಾರಿಯೊಬ್ಬರಿಗೆ ನೀಡುತ್ತಾನೆ. ಆದ್ರೆ, ಅದು ದುಷ್ಟರ ಕೈ ಸೇರುತ್ತೆ. ಈ ವಜ್ರವನ್ನ ದುಷ್ಟರ ಕೈಯಿಂದ ರಕ್ಷಿಸಿ ಮರಳಿ ಸರ್ಕಾರಕ್ಕೆ ಒಪ್ಪಿಸುವುದೇ 'ಬದ್ಮಾಶ್' ಚಿತ್ರದ ಕಥೆ. ಈ ಕಥೆಯನ್ನ ಔಟ್ ಅಂಡ್ ಔಟ್ ಮಾಸ್ ಎಲಿಮೆಂಟ್ಸ್ ಗಳೊಂದಿಗೆ 'ಬದ್ಮಾಶ್' ಚಿತ್ರದಲ್ಲಿ ತೋರಿಸಲಾಗಿದೆ.['ಬದ್ಮಾಶ್' ಟ್ವಿಟ್ಟರ್ ವಿಮರ್ಶೆ: ಥರ ಥರ, ಏನೋ ಒಂಥರಾ ಎಂದ ಪ್ರೇಕ್ಷಕರು]

  ಮನರಂಜನೆಯ ಮೊದಲಾರ್ಧ

  ಚಿತ್ರದ ಫಸ್ಟ್ ಹಾಫ್ ಪೂರ್ತಿ ಮನರಂಜನೆ ಇದೆ. ಸಂಪ್ರದಾಯವಾಗಿ ಹೀರೋ ಇಂಟ್ರಡಕ್ಷನ್, ಆಮೇಲೆ ಒಂದು ಹಾಡು, ತದ ನಂತರ ಹೀರೋಯಿನ್ ಎಂಟ್ರಿ, ಹೀಗೆ 'ಬದ್ಮಾಶ್' ಸಿನಿಮಾ ಶುರುವಾಗುತ್ತೆ. ದುಡ್ಡಿಗಾಗಿ ಡೀಲ್ ಗಳನ್ನ ಮಾಡುವ ಗಲ್ಲಿ ಕ್ರಿಕೆಟರ್ ವಿಜಯ್ ಗೆ (ಧನಂಜಯ್), ರೇಡಿಯೋ ಜಾಕಿ ಪ್ರಿಯಾ (ಸಂಚಿತಾ ಶೆಟ್ಟಿ) ನೋಡಿದ ಲವ್ @ ಫಸ್ಟ್ ಸೈಟ್. ಇವರಿಬ್ಬರ ಮಧ್ಯೆ ಪ್ರೀತಿಯಾಗುವಷ್ಟರಲ್ಲೇ ಬ್ರೇಕ್ ಅಪ್ ಜೊತೆಗೆ ಇಂಟರ್ ವಲ್.

  ಸೆಕೆಂಡ್ ಆಫ್ ನಲ್ಲಿ ಅಸಲಿ ಕಥೆ

  ಮೊದಲಾರ್ಧ ಪೂರ್ತಿ ಮನರಂಜನೆ ನೀಡುವ ಬದ್ಮಾಶ್, ದ್ವಿತೀಯಾರ್ಧದಲ್ಲಿ ಸೀರಿಯಸ್ ಆಗುತ್ತೆ. ಕೆಲವು ಸನ್ನಿವೇಶಗಳು ಪ್ರೇಕ್ಷಕರಿಗೆ ಬೋರ್ ಎನಿಸುತ್ತದೆ. ಆದರೆ ಧನಂಜಯ್ ಡೈಲಾಗ್ಸ್, ಫೈಟ್ಸ್ ಅಬ್ಬರ ಇಷ್ಟವಾಗುತ್ತೆ. ಸಿಕ್ಕಾಪಟ್ಟೆ ಟ್ವಿಸ್ಟ್ ಗಳ ಜೊತೆ ಸಾಗುವ ಕಥೆಯಲ್ಲಿ 'ವಜ್ರ'ದ ಕಹಾನಿ ನೋಡುಗರನ್ನ ಹಿಡಿದಿಟ್ಟುಕೊಳ್ಳುತ್ತೆ. ಆ ಟ್ವಿಸ್ಟ್ ಏನು? ವಜ್ರದ ಕಹಾನಿ ಏನಾಗುತ್ತೆ ಎನ್ನುವುದೇ ಕ್ಲೈಮ್ಯಾಕ್ಸ್.

  ಮಾಸ್ ಹೀರೋ ಧನಂಜಯ್

  'ಸ್ಪೆಷಲ್ ಸ್ಟಾರ್' ಅಂತ ಕರೆಸಿಕೊಂಡಿರುವ 'ಧನಂಜಯ್', 'ಬದ್ಮಾಶ್' ಚಿತ್ರದಲ್ಲಿ ಔಟ್ ಅಂಡ್ ಔಟ್ ಮಾಸ್ ಹೀರೋ ಆಗಿ ಬದಲಾಗಿದ್ದಾರೆ. ಮೊದಲ ದೃಶ್ಯದಿಂದ ಹಿಡಿದು ಕ್ಲೈಮ್ಯಾಕ್ಸ್ ದೃಶ್ಯದವರೆಗೂ ಡೈಲಾಗ್ ಹಾಗೂ ಫೈಟ್ಸ್ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾರೆ. ಧನಂಜಯ್ ಸ್ಕ್ರೀನ್ ನಲ್ಲಿ ಇದ್ದಷ್ಟೂ ಜೋಶ್ ಗೆ ಕೊರತೆಯಿಲ್ಲ.

  ಸಂಚಿತಾ ಶೆಟ್ಟಿ ಅಭಿನಯ ಹೇಗಿದೆ?

  'ರೇಡಿಯೋ ಜಾಕಿ ಪ್ರಿಯಾ' ಪಾತ್ರದಲ್ಲಿ ಸಂಚಿತಾ ಶೆಟ್ಟಿ ಇಷ್ಟವಾಗುತ್ತಾರೆ. ತನ್ನ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿರುವ ಸಂಚಿತಾ, 'ಬದ್ಮಾಶ್' ಗೆ ಉತ್ತಮ ಸಾಥ್ ಕೊಟ್ಟಿದ್ದಾರೆ.

  ಉಳಿದವರು....

  ಗೃಹ ಮಂತ್ರಿ ರಾಜಶೇಖರ್ ಅಲಿಯಾಸ್ 'ಕಿಂಗ್' ಪಾತ್ರದಲ್ಲಿ ಅಚ್ಯುತ್ ಕುಮಾರ್ ಅಬ್ಬರಿಸಿದ್ದಾರೆ. ಹಾಸ್ಯನಟ ಜಹಾಂಗೀರ್, ರಮೇಶ್ ಭಟ್, ರಮೇಶ್ ಪಂಡಿತ್, ಬಿ.ಸುರೇಶ್, ಸುಚೇಂದ್ರ ಪ್ರಸಾದ್, ಪ್ರಕಾಶ್ ಬೆಳವಾಡಿ, ಪನ್ನಗಾಭರಣ ಸಣ್ಣ ಪಾತ್ರಗಳಾದರೂ ನ್ಯಾಯ ಒದಗಿಸಿದ್ದಾರೆ

  ಸಂಗೀತ ಹೇಗಿದೆ?

  'ಬದ್ಮಾಶ್' ಚಿತ್ರಕ್ಕೆ ಜುಡಾ ಸ್ಯಾಂಡಿ ಅವರ ಸಂಗೀತ ಉತ್ತಮವಾಗಿ ಸಾಥ್ ಕೊಟ್ಟಿದೆ. ಹಾಡುಗಳು ತೆರೆಮೇಲೆ ನೋಡುವುದಕ್ಕೆ ಮತ್ತಷ್ಟು ಅದ್ದೂರಿ ಎನಿಸಿದೆ. ಚಿತ್ರದ ಹಿನ್ನಲೆ ಸಂಗೀತ ಕೂಡ ವರ್ಕೌಟ್ ಆಗಿದೆ.

  ನಿರ್ದೇಶನದ ಬಗ್ಗೆ

  ಆಕಾಶ್ ಚೊಚ್ಚಲ ನಿರ್ದೇಶನದಲ್ಲಿ ಗಮನ ಸೆಳೆದಿದ್ದಾರೆ. ಪ್ರೇಕ್ಷಕರು ಇಷ್ಟ ಪಡುವ ಎಲ್ಲ ಅಂಶಗಳನ್ನ ಚಿತ್ರದಲ್ಲಿ ಒದಗಿಸಿದ್ದಾರೆ. ಆದ್ರೆ, ಚಿತ್ರಕಥೆಯಲ್ಲಿ ಇನ್ನೂ ಸ್ವಲ್ಪ ಹೆಚ್ಚಿನ ಜವಾಬ್ದಾರಿ ವಹಿಸಬಹುದಿತ್ತು.

  ಮೈನಸ್ ಪಾಯಿಂಟ್

  'ಬದ್ಮಾಶ್' ಚಿತ್ರದ ಮೊದಲಾರ್ಧ ಮನರಂಜನಯಾಗಿದ್ರೂ, ಕಾಮಿಡಿ ಕೊರತೆಯಿತ್ತು. ಕೆಲವು ಕಡೆ ಹಾಡುಗಳು ಬೇಡವೆನಿಸಿದರು ಬಂದು ಹೋಗುತ್ತೆ. ಸೆಕೆಂಡ್ ಹಾಫ್ ಕಥೆಯಲ್ಲಿ ಕನ್ ಫ್ಯೂಶನ್ ಸ್ವಲ್ಪ ಗೊಂದಲ ಉಂಟಾಗುತ್ತೆ. ಚಿತ್ರದ ಕ್ಲೈಮ್ಯಾಕ್ಸ್ ಸಲೀಸಾಗಿ ಮುಗಿದುಹೋಗುತ್ತೆ. ಅಲ್ಲಿ ಇನ್ನೂ ಅತ್ಯುತ್ತಮವಾದ ಕ್ಲೈಮ್ಯಾಕ್ಸ್ ಮಾಡಬಹುದಾಗಿತ್ತು.

  ಟೆಕ್ನಿಕಲಿ ಸಿನಿಮಾ

  ಶ್ರೀಶಾ ಕುಡವಳ್ಳಿ ಅವರ ಛಾಯಗ್ರಹಣ ಚಿತ್ರದ ಪ್ಲಸ್ ಪಾಯಿಂಟ್ ಅಂತಾನೇ ಹೇಳಬಹುದು. ಶ್ರೀಕಾಂತ್ ಅವರ ಎಡಿಟಿಂಗ್ ಉತ್ತಮವಾಗಿದೆ.[ಸಂದರ್ಶನ: ಎಡಿಟರ್ ಶ್ರೀಕಾಂತ್ ಬದ್ಮಾಶ್ ರಿವರ್ಸ್ ಸ್ಕ್ರೀನ್ ಪ್ಲೇ ಬಗ್ಗೆ]

  ಫೈನಲ್ ಸ್ಟೇಟ್ ಮೆಂಟ್

  ಟ್ರೈಲರ್ ನಿಂದ ತುಂಬಾ ನಿರೀಕ್ಷೆ ಹುಟ್ಟಿಹಾಕಿದ್ದ 'ಬದ್ಮಾಶ್' ಚಿತ್ರ, ನಿರೀಕ್ಷೆಯಂತೆ ಯಶಸ್ಸು ಕಂಡಿದೆ. ಧನಂಜಯ್ ಅವರನ್ನ ಸೈಲೆಂಟ್ ಪಾತ್ರಗಳಲ್ಲಿ ನೋಡಿದ್ದ ಪ್ರೇಕ್ಷಕರಿಗೆ, ಬದ್ಮಾಶ್ ಚಿತ್ರದಲ್ಲಿ ಸಖತ್ ಮಾಸ್ ಆಗಿ ನೋಡುವ ಅವಕಾಶ ಸಿಕ್ಕಿದೆ. 'ಬದ್ಮಾಶ್' ಕೊಟ್ಟ ದುಡ್ಡಿಗೆ ಮೋಸವಿಲ್ಲ, ಮನರಂಜನೆಗೆ ಕೊರತೆಯಿಲ್ಲ. ಚಿತ್ರವನ್ನ ಒಮ್ಮೆ ನೋಡಲು ಅಡ್ಡಿಯಿಲ್ಲ. [ತೆಲುಗಿನಲ್ಲಿ 'ಬದ್ಮಾಶ್' ಆಗ್ತಾರಾ ಅಲ್ಲು ಅರ್ಜುನ್.? ]

  English summary
  Kannada Actor Dhananjaya and Sanchitha shetty starrer 'Badmaash' has hit the screens today (November 18th). The movie is a Complete Action entertainer and a treat for Dhananjaya fans. Here is the complete review of 'Badmaash'

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more