For Quick Alerts
  ALLOW NOTIFICATIONS  
  For Daily Alerts

  'ಆಕ್ಟರ್' ಅಂತರಂಗ ಕಂಡ ವಿಮರ್ಶಕರು ನೀಡಿದ ಮಾರ್ಕ್ಸ್ ಎಷ್ಟು?

  By Harshitha
  |

  'ಧಿಮಾಕು' ಖ್ಯಾತಿಯ ನಟ ನವೀನ್ ಕೃಷ್ಣ ಅಭಿನಯದ ದಯಾಳ್ ಪದ್ಮನಾಭನ್ ನಿರ್ದೇಶನದ 'ಆಕ್ಟರ್' ಸಿನಿಮಾ ಈ ವಾರ ತೆರೆಕಂಡಿದೆ.

  ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಇದ್ದಕ್ಕಿದ್ದಂತೆ ಸಾಲು ಸಾಲು ಫ್ಲಾಪ್ ಗಳನ್ನ ನೀಡುತ್ತಾನೆ. ಮಾನಸಿಕ ಖಿನ್ನತೆಗೆ ಒಳಗಾಗುವ ನಟನೊಬ್ಬನ ಆಂತರಿಕ ಸಂಘರ್ಷ ಈ ಸಿನಿಮಾ. [ವಿಮರ್ಶೆ : ಬಣ್ಣದ ಬದುಕಿಗೆ ಕನ್ನಡಿ ಹಿಡಿಯುವ 'ಆಕ್ಟರ್']

  ಪ್ರಯೋಗಾತ್ಮಕ ಚಿತ್ರವಾದರೂ, 'ಆಕ್ಟರ್' ಚಿತ್ರವನ್ನ ನೋಡಿದ ಪ್ರೇಕ್ಷಕ ಮಹಾಪ್ರಭುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ, ವಿಮರ್ಶಕರಿಗೆ 'ಆಕ್ಟರ್' ಬೆಸ್ಟ್ ಆಫ್ ದಿ ಬೆಸ್ಟ್ ಮೂವಿ ಅನಿಸ್ತಾ? ನೋಡೋಣ ಬನ್ನಿ ಕೆಳಗಿರುವ ಸ್ಲೈಡ್ ಗಳಲ್ಲಿ.....

  ನಟನ ಅಂತರಂಗದ ಅನಾವರಣ - ಪ್ರಜಾವಾಣಿ

  ನಟನ ಅಂತರಂಗದ ಅನಾವರಣ - ಪ್ರಜಾವಾಣಿ

  ಖ್ಯಾತಿಯ ಉತ್ತುಂಗಕ್ಕೇರಿದ ನಟನೊಬ್ಬ ತನ್ನ ಜನಪ್ರಿಯತೆ ಕುಸಿದಾಗ ಮಾನಸಿಕವಾಗಿ ಕುಗ್ಗಿ ಹೋಗುವ ಕಥೆ ‘ಆಕ್ಟರ್' ಚಿತ್ರದ್ದು. ಆರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಾಯಕ ನಟ ಸಂಜಯ್‌ನ ಇತ್ತೀಚಿನ ಮೂರು ಸಿನಿಮಾಗಳು ಸೋತಿವೆ. ಈ ಸೋಲಿನಿಂದ ಅವಕಾಶಗಳಿಲ್ಲದೆ ಕಂಗಾಲಾಗಿ ತನ್ನ ವೈಭವೋಪೇತ ಬಂಗಲೆಯಲ್ಲಿ ಖಿನ್ನತೆಯಿಂದ ದಿನದೂಡುತ್ತಿರುತ್ತಾನೆ. ಸಂಜಯ್‌ನ ಸಂದರ್ಶನ ಬಯಸಿ ಬರುವ ರೇಡಿಯೋ ಜಾಕಿ ಹಾಗೂ ಟೀವಿ ಚಾನೆಲ್‌ನ ನಿರೂಪಕರು, ಆತನ ವೈಫಲ್ಯವನ್ನು ಅಣಕಿಸುವಂತೆ ಮಾತನಾಡುತ್ತಾರೆ. ಖಿನ್ನತೆಗೆ ಒಳಗಾಗುವ ಆತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾನೆ. ಆ ಸಮಯಕ್ಕೆ ಬರುವ ಮನೆಗೆಲಸದ ಗೀತಮ್ಮ, ತನ್ನ ಕುಟುಂಬದ ಬಗ್ಗೆ ಮಾತಾಡುತ್ತಲೇ ಸಾವು ಎಲ್ಲದಕ್ಕೂ ಪರಿಹಾರ ಅಲ್ಲ ಎಂಬುದನ್ನು ಹೇಳುತ್ತಾಳೆ. ಗೀತಮ್ಮನ ಮಾತುಗಳು ಸಂಜಯ್‌ ಮೇಲೆ ಬೀರಿದ ಪರಿಣಾಮ ಯಾವುದು ಎನ್ನುವುದು ಕಥೆಯಲ್ಲಿನ ಕೌತುಕ - ಆನಂದತೀರ್ಥ ಪ್ಯಾಟಿ

  ಹಾರುವ ಹಕ್ಕಿಯ ಹತಾಶೆ ಗೂಡು - ಕನ್ನಡ ಪ್ರಭ

  ಹಾರುವ ಹಕ್ಕಿಯ ಹತಾಶೆ ಗೂಡು - ಕನ್ನಡ ಪ್ರಭ

  ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಸ್ಟಾರ್ ನಟನೊಬ್ಬನ ಅಂತರಂಗ. ಹಾಗಂತ ಇದು ಯಾವುದೋ ನಟನೊಬ್ಬನ ಆತ್ಮಕತೆಯಲ್ಲ. ಕಥಾನಾಯಕ ಸಂಜೀವ್, ಯಾವುದೇ ಭಾಷೆ ಅಥವಾ ಪ್ರದೇಶನದ ನಟನೂ ಆಗಬಹುದು. ಕಲೆಯನ್ನೇ ನಂಬಿದ ವ್ಯಕ್ತಿ. ಹೆಸರಾಂತ ಕಲಾವಿದ ಚಾರ್ಲಿ ಚಾಪ್ಲಿನ್ ಅಭಿಮಾನಿ. ಆತ ತನ್ನ ಸಿನಿ ಜರ್ನಿಯಲ್ಲಿ 9 ಚಿತ್ರಗಳಿಗೆ ನಾಯಕ. ಆ ಪೈಕಿ ಆರು ಹಿಟ್, ಮೂರು ಫ್ಲಾಪ್. ಹಿಟ್ ಚಿತ್ರಗಳ ಸಂಖ್ಯೆಯೇ ಹೆಚ್ಚು. ಹೀಗಾಗಿ ಯಶಸ್ವಿ ನಟ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತಿ ಸೆಕೆಂಡ್ ಬ್ಯುಸಿ ಇದ್ದ ಮನುಷ್ಯ, ಏಕಾಏಕಿ ಅವಕಾಶಗಳಿಲ್ಲದ ನಿರುದ್ಯೋಗಿ. ನಿತ್ಯ ಚಟುವಟಿಕೆಯಲ್ಲಿದ್ದ ದೇಹಕ್ಕೆ ಜಡ ಆವರಿಸಿಕೊಂಡು ಮನಸ್ಸಲ್ಲಿ ಹತಾಶೆ ಕವಿಯುತ್ತದೆ. 100 ನಿಮಿಷಗಳ ಸಿನಿಮಾ. ಕತೆಯ ಮುಕ್ಕಾಲು ಭಾಗ ನಟ ನವೀನ್ ಕೃಷ್ಣರ ಏಕವ್ಯಕ್ತಿ ದರ್ಶನ - ದೇಶಾದ್ರಿ ಹೊಸ್ಮನೆ

  ಕ್ರಿಯಾಶೀಲರ ಮನೋವೇದನೆ - ಸಂಯುಕ್ತ ಕರ್ನಾಟಕ

  ಕ್ರಿಯಾಶೀಲರ ಮನೋವೇದನೆ - ಸಂಯುಕ್ತ ಕರ್ನಾಟಕ

  ಇಲ್ಲಿನ ನಟ ತನ್ನ ಬದುಕಿನ ವೈಭವದ ದಿನಗಳನ್ನು ಮೆಲುಕು ಹಾಕುತ್ತಲೇ ಹತಾಶೆಯ ಅಂಚಿಗೆ ದೂಡಲ್ಪಟ್ಟು ಅನುಭವಿಸುವ ಸಂಕಷ್ಟ ಪ್ರೇಕ್ಷಕನ ಮರುಗುವಿಕೆಗೆ ಕಾರಣವಾಗುತ್ತದೆ. ಸಿನಿಮಾ ಜಗತ್ತಿನಲ್ಲಿ ಮೆರೆದು ಅಭಿಮಾನಿ ಹಿಂಡಿನ ನಡುವೆ ಕರಗಿ ಹೋಗುವ ಸ್ಟಾರ್ ನಟರ ಬದುಕು ಸ್ವಲ್ಪ ವ್ಯತ್ಯಾಸಗೊಂಡರೆ ಹೇಗಾಗುತ್ತದೆ ಎಂಬುದು ಸಮರ್ಥ ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ಇಲ್ಲಿ ಎಲ್ಲವೂ ವಿಶೇಷಗಳೇ. ಒಂದು ಮನೆ ಎರಡು ಪಾತ್ರಗಳು. ಇಡೀ ಚಿತ್ರವನ್ನು ಒಂದೇ ಪಾತ್ರ ಒಂದುವರೆ ಗಂಟೆಗಳ ಕಾಲ ಆವರಿಸಿಕೊಳ್ಳುತ್ತದೆ. ನಿರ್ದೇಶಕ ದಯಾಳ್ ಪದ್ಮನಾಭನ್ ಹಾಘೂ ನಟ ನವೀನ್ ಕೃಷ್ಣ ಜೋಡಿ ಮೋಡಿ ಮಾಡಿದೆ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ - ಸ್ನೇಹಪ್ರಿಯ

  A successful experiment - Bangalore Mirror

  A successful experiment - Bangalore Mirror

  Actor is an experimental film with three charac ters; one of the charac ters being a house. The other two are Naveen Krishna and Sihi Kahi Geetha. With these limited options, director Dayal Padmanabhan has managed to weave a movie that demolishes the distinction between commercial and art films. What could easily have become a monotonous movie has been shaped into an inter esting and engrossing watch.The film may lack the regular kick of a commercial entertainer, but those interested in films as a craft will really appreciate Actor - S Shyam Prasad

  This Actor Struggles - The New Indian Express

  This Actor Struggles - The New Indian Express

  More like a stage play, the 100-minute film tries hard to mix love, sentiment, comedy and family, however, Dayal seems to have tripped. And it is clear that he was in a hurry to complete the film.
  Surely, Dayal, on hindsight, would now think that if he had taken time to do some research and get under the skin of an actor's life before helming the project, the result could have been applaudable. The film just gives a glimpse and does not go deep. The story is not about an actor alone, but every common man who goes through ups and downs, which could have been dealt with in great profoundness. He could have used Naveen Krishna, who takes most of the screen space better. Naveen, who has seen success and failures in the industry, fails to put himself in a dejected actor's shoes. Sihi Kahi Geetha, in a guest appearance, has justified her role.The camerawork by Suresh Bhairasandra does not match the theme. The story is about dejection but the entire house is brightly lit, a complete circumstantial mismatch. Even in the depressing scenes, the poignancy is missing. The background music by Gautham Srivatsa is too deafening for the subject - A Sharadhaa

  English summary
  Kannada Actor Naveen Krishna starrer 'Actor' movie has received positive response from the critics. Here is the collection of reviews by Top News Papers of Karnataka.
  Saturday, February 20, 2016, 11:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X