'ರುಸ್ತುಂ' ಮೊದಲಾರ್ಧ ಅಷ್ಟಕ್ಕಷ್ಟೆ, ಎರಡನೇ ಭಾಗ ಸೂಪರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ರುಸ್ತುಂ' ಸಿನಿಮಾ ಇಂದು ರಾಜ್ಯದಾದ್ಯಂತ ತೆರೆಗೆ ಬಂದಿದೆ. ಸಾಹಸ ನಿರ್ದೇಶಕ ರವಿವರ್ಮ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಸಿನಿಮಾ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಚಿತ್ರಗಳು ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಸಾಹಸ ನಿರ್ದೇಶನ ಮಾಡಿರುವ ರವಿವರ್ಮ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದಾರೆ.

ಪೊಲೀಸ್ ಮಾತ್ರದಲ್ಲಿ ಖದರ್ ತೋರಿಸಿರುವ ಶಿವಣ್ಣ ಪಾತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವಯಸ್ಸಿನಲ್ಲಿಯೂ ಹೈ ಮೋಲ್ಟೇಜ್ ಆಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿರುವ ಕರನಾಡ ಚಕ್ರವರ್ತಿಯ ಎನರ್ಜರಿಗೆ ಅಭಿಮಾನಿಗಳು ದಂಗ್ ಆಗಿದ್ದಾರೆ. ಹೆಚ್ಚು ಪ್ರಮೋಷನ್ ಮಾಡದಿದ್ದರು ಮೊದಲ ದಿನ ಚಿತ್ರ ಉತ್ತಮವಾದ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ.

ಮೊದಲ ಬಾರಿಗೆ ವಿವೇಕ್ ಒಬೆರಾಯ್ ಕನ್ನಡದಲ್ಲಿ ಅಭಿನಯಿಸಿದ ಸಿನಿಮಾ. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಿದ್ದಾರೆ. ಶಿವಣ್ಣನ ತಂಗಿಯ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡರೆ, ವಿವೇಕ್ ಒಬೆರಾಯ್ ಪತ್ನಿಯಾಗಿ ರಚಿತಾ ರಾಮ್ ಮಿಂಚಿದ್ದಾರೆ. 'ರುಸ್ತುಂ' ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ಹೇಳಿದ್ದೇನು? ಮುಂದೆ ಓದಿ..

ನೋಡಲೆ ಬೇಕಾದ ಸಿನಿಮಾ 'ರುಸ್ತುಂ'

ನೋಡಲೆ ಬೇಕಾದ ಸಿನಿಮಾ 'ರುಸ್ತುಂ'

ಚಿತ್ರದ ಮೊದಲರ್ಧ ತುಂಬ ವೇಗವಾಗಿದೆ ಮತ್ತು ಸಖತ್ ಎನರ್ಜಿಟಿಕ್ ಆಗಿದೆ.

ಸಾಮಾನ್ಯ ಮನುಷ್ಯನಿಂದ ಸೂಪರ್ ಪೊಲೀಸ್ ಆಗುವ ಬದಲಾವಣೆ ಅದ್ಭುತವಾಗಿದೆ. ನೋಡಲೆ ಬೇಕಾದ ಸಿನಿಮಾ ರುಸ್ತುಂ". "ವಿರಾಮದ ವೇಳೆ ಬರುವ ಹಿನ್ನಲೆ ಸಂಗೀತ ಅದ್ಫುತವಾಗಿದೆ" ಎಂದು ಅಭಿಮಾನಿ ಒಬ್ಬರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಮೊದಲರ್ದ ಅಷ್ಟಕ್ಕಷ್ಟೆ, ಎರಡನೇ ಭಾಗ ಸೂಪರ್

ಮೊದಲರ್ದ ಅಷ್ಟಕ್ಕಷ್ಟೆ, ಎರಡನೇ ಭಾಗ ಸೂಪರ್

"ಚಿತ್ರದ ಮೊದಲ ಭಾಗ ಹೇಳುವಷ್ಟು ಅದ್ಭುತವಾಗಿಲ್ಲ. ಆದ್ರೆ ಎರಡನೆ ಭಾಗ ಪ್ರಾರಂಭದಿಂದ ಕ್ಲೈಮ್ಯಾಕ್ಸ್ ವರೆಗು ಅಭಿಮಾನಿಗಳಿಗೆ ಫುಲ್ ಮೀಲ್ಸ್ ಸಿಗಲಿದೆ. ಸತ್ಯ ಇನ್ ಲವ್ ಚಿತ್ರದ ನಂತರ ಶಿವಣ್ಣ ಅವರ ಉತ್ತಮ ಮಾಸ್ ಸಿನಿಮಾ ಇದಾಗಿದೆ. ಹೆಚ್ಚಿನ ಪ್ರಮೋಶನ್ ಮಾಡಿ" ಎಂದು ಸಚಿನ್ ಎನ್ನುವವರು ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪ್ರಮೋಷನ್ ಮಾಡುವಂತೆ ಸಲಹೆ ಕೂಡ ನೀಡಿದ್ದಾರೆ.

ಅದ್ಭುತವಾಗಿಯೂ ಇಲ್ಲ, ಕೆಟ್ಟದಾಗಿಯು ಇಲ್ಲ

ಅದ್ಭುತವಾಗಿಯೂ ಇಲ್ಲ, ಕೆಟ್ಟದಾಗಿಯು ಇಲ್ಲ

"ಶಿವರಾಜ್ ಕುಮಾರ್ ಅವರ ಎನರ್ಜಿ ಈ ಚಿತ್ರದಲ್ಲಿ ನಂಬಲಾಗದಷ್ಟು ಇದೆ. ಶ್ರದ್ಧಾ ಶ್ರೀನಾಥ್ ಅಭಿನಯ ಉತ್ತಮವಾಗಿದೆ. ಒಟ್ಟಾರೆಯಾಗಿ ಸಿನಿಮಾ ಚೆನ್ನಾಗಿದೆ. ಆದ್ರೆ ಅತೀ ಅದ್ಭುತವಾಗಿಯೂ ಇಲ್ಲ ಹಾಗೂ ಕೆಟ್ಟದಾಗಿಯು ಇಲ್ಲ.

ಎರಡನೇ ಭಾಗ ಫುಲ್ ಮಾಸ್

ಎರಡನೇ ಭಾಗ ಫುಲ್ ಮಾಸ್

"ಚಿತ್ರದ ಎರಡನೆ ಭಾಗ ಔಟ್ ಅಂಡ್ ಔಟ್ ಮಾಸ್ ಆಗಿದೆ. ಬಿಹಾನ್ ಬ್ಯಾಗ್ರೌಂಡ್ ನಲ್ಲಿ ಶಿವರಾಜ್ ಕುಮಾರ್ ಅಭಿನಯ ಚಿಂದಿಯಾಗಿದೆ. ಪ್ರಿ-ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ನೋಡುಗರಿಗೆ ಫುಲ್ ಮೀಲ್ಸ್ ಪಕ್ಕ" ಎಂದು ಕೇಶವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

More from Filmibeat

English summary
Kannada actor Shivaraj Kumar starrer Rustum film twitter review. This movie is directed by ravi varma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X