twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶಕರ ಮನಸ್ಸು ಗೆಲ್ಲುವಲ್ಲಿ ಯಶಸ್ಸಾಯ್ತಾ 'ಅಮ್ಮ ಐ ಲವ್ ಯು'.?

    By Pavithra
    |

    'ಅಮ್ಮ ಐ ಲವ್ ಯು' ಚಿರಂಜೀವಿ ಸರ್ಜಾ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ಸಿನಿಮಾ. ಹೆಸರಾಂತ ನಿರ್ದೇಶಕ ಕೆ ಎಂ ಚೈತನ್ಯ ಆಕ್ಷನ್ ಕಟ್ ಹೇಳಿರುವ ಸಿನಿಮಾ ಇದಾಗಿದ್ದು, ಆರಂಭದಿಂದಲೇ 'ಅಮ್ಮ ಐ ಲವ್ ಯು' ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು.

    'ಅಮ್ಮ ಐ ಲವ್ ಯು' ಚಿತ್ರದ ಪೋಸ್ಟರ್ ಮತ್ತು ಹಾಡುಗಳು ಸಾಕಷ್ಟು ಖ್ಯಾತಿ ಹೊಂದಿದ್ದು ಪ್ರೇಕ್ಷಕರು ಸಿನಿಮಾ ನೋಡಲು ಕಾತುರರಾಗಿದ್ದರು. ಅದರಂತೆ ಜೂನ್ 15ಕ್ಕೆ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

    ನಿನ್ನೆಯಷ್ಟೇ ಬಿಡುಗಡೆ ಆಗಿರುವ 'ಅಮ್ಮ ಐ ಲವ್ ಯು' ಸಿನಿಮಾ ವಿಮರ್ಶಕರ ಮಾರ್ಕ್ಸ್ ತೆಗೆದುಕೊಂಡಿದೆ. ಯಾವ ಅಂಶಗಳು ನೋಡುಗರನ್ನ ಇಂಪ್ರೇಸ್ ಮಾಡಿದೆ ಎನ್ನುವುದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ...

    ಮಮತೆಯ ನೇವರಿಕೆ; ಪ್ರೇಮದ ಕನವರಿಕೆ : ಪ್ರಜಾವಾಣಿ

    ಮಮತೆಯ ನೇವರಿಕೆ; ಪ್ರೇಮದ ಕನವರಿಕೆ : ಪ್ರಜಾವಾಣಿ

    ಭಿಕ್ಷುಕರ ಬದುಕಿನ ಏರಿಳಿತ ಮತ್ತು ಜೀವನದ ಅರ್ಥ ಎರಡನ್ನೂ ಹೊಸೆದು ಸೊಗಸಾಗಿ ಸಿನಿಮಾ ಕಟ್ಟಲಾಗಿದೆ. ಒಂದೆಡೆ ಭಿಕ್ಷೆ ಬೇಡಿ ಹರಕೆ ತೀರಿಸುವ ಮೂಲಕ ಅಮ್ಮನ ಪ್ರೀತಿ ಪಡೆಯಲು ಹೊರಟ ಮಗ, ಮತ್ತೊಂದೆಡೆ ಭಿಕ್ಷೆ ಬೇಡುವ ಪ್ರೇಮಿಯ ಪ್ರೀತಿ ಬಯಸುವ ಪ್ರೇಯಸಿ ಈ ಎರಡೂ ಪಾತ್ರಗಳು ಜೀವನ ಸಂಗ್ರಾಮದ ಎರಡು ದಿಕ್ಕುಗಳಾಗಿ ಕಾಣುತ್ತವೆ. ಪ್ರೀತಿಯೇ ಈ ಎರಡೂ ದಿಕ್ಕುಗಳ ಮೂಲವೂ ಆಗಿದೆ. ಮೊದಲಾರ್ಧ ಮಮತೆ, ಪ್ರೀತಿಯ ಹುಡುಕಾಟದಲ್ಲಿ ಮುಗಿದುಹೋಗುತ್ತದೆ. ದ್ವಿತೀಯಾರ್ಧದಲ್ಲಿ ಕಥೆಯಲ್ಲಿನ ಬಿಗಿತನ ನೋಡುಗರ ಮನತಟ್ಟುತ್ತದೆ. ಅಮ್ಮನ ಜೀವ ಉಳಿಸಲು ಭಿಕ್ಷುಕನ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಸೊಗಸಾಗಿ ನಟಿಸಿದ್ದಾರೆ. ನಾಯಕಿನಿಶ್ವಿಕಾ ನಾಯ್ಡು ಅವರದು ಅಚ್ಚುಕಟ್ಟಾದ ನಟನೆ.

    ಹೃದಯವನ್ನು ಆವರಿಸಿಕೊಳ್ಳುವ ಸಿನಿಮಾ - ವಿಜಯ ಕರ್ನಾಟಕ

    ಹೃದಯವನ್ನು ಆವರಿಸಿಕೊಳ್ಳುವ ಸಿನಿಮಾ - ವಿಜಯ ಕರ್ನಾಟಕ

    ಅಮ್ಮಾ ಐ ಲವ್ ಯೂ ಹೆಸರೇ ಹೇಳುವಂತೆ ಇದು ಅಮ್ಮ ಮಗನ ನಡುವಿನ ಸೆಂಟಿಮೆಂಟ್ ಇರುವ ಕಥೆ. ಅಷ್ಟೇ ಅಂದುಕೊಂಡರೆ ತಪ್ಪಾಗುತ್ತದೆ. ಈ ಮೂಲಕ ಬದುಕಿನ ಫಿಲಾಸಫಿಯನ್ನು ಚಿತ್ರದಲ್ಲಿ ಕಾಣಬಹುದು. ಭಾವನಾತ್ಮಕ ಕಥೆಯನ್ನು, ಕಾಮಿಡಿ ಸ್ಪರ್ಶದೊಂದಿಗೆ ಫಿಲಾಸಫಿಕಲಾಗಿ ತೆರೆಯ ಮೇಲೆ ತರಲಾಗಿದೆ. ಚಿತ್ರ ಸಮಾಜದ ಹಲವು ಸಂಬಂಧಗಳನ್ನು ಪ್ರಜ್ಞೆಗೆ ತರುತ್ತದೆ. ನಿರ್ದೇಶಕ ಕೆ.ಎಂ. ಚೈತನ್ಯ ಸಮರ್ಥವಾಗಿ ತೆರೆಗೆ ತಂದಿದ್ದಾರೆ. ಇಲ್ಲಿಯವರೆಗಿನ ಚಿತ್ರಗಳಿಗೆ ಹೋಲಿಸಿದರೆ ಚಿರು ನಟನೆ ಅತ್ಯುತ್ತಮವಾಗಿದೆ. ಇನ್ನು ಹೊಸ ನಟಿ ನಿಶ್ವಿಕಾ ಸೌಂದರ್ಯ, ನಟನೆ ಎರಡರಲ್ಲೂ ಪ್ರತಿಭಾವಂತ ನಟಿ ಅನ್ನೋದನ್ನು ನಿರೂಪಿಸಿದ್ದಾರೆ.

    ಅಮ್ಮನ ಉಸಿರಿಗೆ ಮಗನ ಭಿಕ್ಷೆ - ಉದಯವಾಣಿ

    ಅಮ್ಮನ ಉಸಿರಿಗೆ ಮಗನ ಭಿಕ್ಷೆ - ಉದಯವಾಣಿ

    ಅಮ್ಮ-ಮಗನ ಪ್ರೀತಿ, ವಾತ್ಸಲ್ಯ ಮತ್ತು ಬಾಂಧವ್ಯ ಎಲ್ಲಕ್ಕಿಂತಲೂ ಮಿಗಿಲು ಎಂಬುದನ್ನು ಕೇಳಿದವರಿಗೆ, ಇಲ್ಲಿರುವ ಹೂರಣದ ಚಿತ್ರಣ ಇನ್ನಷ್ಟು ಹತ್ತಿರವಾಗದೇ ಇರದು. ಇಲ್ಲಿ ಅಮ್ಮ-ಮಗನ ಬಾಂಧವ್ಯ, ವಾತ್ಸಲ್ಯ ನೋಡುಗನ ಎದೆಭಾರವಾಗಿಸುತ್ತಲೇ, ಕೆಲವೆಡೆ ಕಣ್ಣುಗಳನ್ನು ಒದ್ದೆಯಾಗಿಸಿಬಿಡುತ್ತೆ. ಅದೇ ಇಲ್ಲಿರುವ ತಾಕತ್ತು. ಹಾಗಂತ, ಇಲ್ಲಿ ಬರೀ, ಭಾವನಾತ್ಮಕ ಸಂಬಂಧ, ಭಾವುಕತೆಯ ಆಳವಷ್ಟೇ ಇಲ್ಲ, ಮಾನವೀಯತೆ ಮೌಲ್ಯದ ಸಾರವಿದೆ. ಅಂಗೈ ಅಗಲದಷ್ಟು ಪ್ರೀತಿಯ ಬೆಸುಗೆ ತುಂಬಿದೆ, ಸ್ವಾರ್ಥ ಮನೋಭಾವವುಳ್ಳ ಮನಸ್ಸುಗಳ ವಿಲಕ್ಷಣ ನೋಟವಿದೆ, ಎಲ್ಲವನ್ನೂ ಬದಿಗೊತ್ತಿ, ನಿರೀಕ್ಷೆ ಮೀರಿ ಮಾಡುವ ಒಂದು ಕೆಲಸದಲ್ಲಿ ಬದುಕಿನ ಸಾರವಿದೆ, ಸತ್ಯದ ರುಚಿ ಇದೆ ಎಂಬುದನ್ನು ಸಂದರ್ಭದ ಸಂಗತಿಗಳ ಕ್ಷಣವನ್ನು ಮನ ಮುಟ್ಟುವಂತೆ, ಅಲ್ಲಲ್ಲಿ ಕಲಕುವಂತೆ ಮಾಡಿರುವ ಪ್ರಯತ್ನ ಸಾರ್ಥಕ

    Times of india Amma i love u movie Review

    Times of india Amma i love u movie Review

    Chiranjeevi Sarja comes up with a good performance that could possibly be his best till date. Newbie Nishvika Naidu is a good find and she is expressive and shows a lot of promise. Prakash Belawadi is a hoot as the money hungry and evil uncle. The ensemble cast, which involves many seasoned names like Chikkanna, Biradar and Ravi Kale, delivers what is expected. The film has a soundtrack that lingers on and it is definitely one of its plus points. The special opening and end credits also are an added attraction. This film is well worth it if you like your films served Indian style, high on emotions and drama.

    English summary
    Kannada actor Chiranjeevi Sarja starrer kannada movie Amma I love you critics review. the movie has released on june 15th
    Saturday, June 16, 2018, 14:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X