For Quick Alerts
ALLOW NOTIFICATIONS  
For Daily Alerts

  ಲಕ್ಷ್ಮಿ ಚಿತ್ರ ವಿಮರ್ಶೆ: ಸಸ್ಪೆನ್ಸ್ ಪ್ರಿಯರಿಗೆ ಥ್ರಿಲ್ಲಿಂಗ್ ಚಿತ್ರ

  By Rajendra
  |

  Rating:
  3.0/5
  ತಮ್ಮ 25 ವರ್ಷಗಳ ವೃತ್ತಿ ಬದುಕಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಭಿನ್ನ ಪಾತ್ರಗಳನ್ನು ಪೋಷಿಸಿಕೊಂಡು ಬಂದವರು. ಹೆಚ್ಚಾಗಿ ಲವರ್ ಬಾಯ್ ಪಾತ್ರಗಳಲ್ಲಿ ಮಿಂಚುತ್ತಿದ್ದ ಶಿವಣ್ಣ ಈ ಬಾರಿ ಸಿಬಿಐ ಅಧಿಕಾರಿಯಾಗಿ ಗಮನಸೆಳೆದಿದ್ದಾರೆ.

  ಲಕ್ಷ್ಮಿ ಚಿತ್ರದ ಕಥಾವಸ್ತು ತುಂಬಾ ವಿಸ್ತಾರವಾಗಿದೆ. ಚಿತ್ರದ ಕ್ಯಾಪ್ಟನ್ ರಾಘವ ಲೋಕಿ ಅವರು ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರು ತಮ್ಮ ಪ್ರಯತ್ನದಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ.

  ಒಂದು ಕಡೆ ಭಯೋತ್ಪಾದನೆ ಇನ್ನೊಂದು ಕಡೆ ಮೈನಿಂಗ್ ಮಾಫಿಯಾ. ಇವೆರಡೂ ಕರಾಳ ಮುಖಗಳನ್ನು ತೋರಿಸುವಲ್ಲಿ ಅಲ್ಲಲ್ಲಿ ಅವರ ಹಿಡಿತ ತಪ್ಪಿದೆ. ಈ ಅಂಶ ಪ್ರೇಕ್ಷಕರ ಗಮನಕ್ಕೆ ಬಾರದೆ ಇರದು. ಬಹುಶಃ ಲೋಕಿ ಎಡವಿರುವುದು ಇಲ್ಲೇ.

  ಪ್ರೇಕ್ಷಕರನ್ನು ಸೀಟಿನ ಅಂಚಿಗೆ ತಳ್ಳುವ ಸಸ್ಪೆನ್ಸ್

  ಚಿತ್ರದ ಒಟ್ಟಾರೆ ಆಶಯಕ್ಕೆ ಸಂಪೂರ್ಣ ನ್ಯಾಯ ಒದಗಿಸುವಲ್ಲಿ ಅವರು ಸೋತಿದ್ದಾರೆ. ಆದರೆ ಚಿತ್ರದ ಸಸ್ಪೆನ್ಸ್ ಎಳೆಯನ್ನು ಕೊನೆಯ ತನಕ ಉಳಿಸಿಕೊಂಡು ಹೋಗಿ ಪ್ರೇಕ್ಷಕರನ್ನು ಸೀಟಿಗೆ ಅಂಟಿಕೊಳ್ಳುವಂತೆ ಮಾಡಿದೆ. ಇದೇ ಲಕ್ಷ್ಮಿ ಚಿತ್ರದ ಗಮನಾರ್ಹ ಅಂಶ.

  ಖಡಕ್ ಸಿಬಿಐ ಅಧಿಕಾರಿಯಾಗಿ ಶಿವಣ್ಣ

  ಸಿಬಿಐ ಅಧಿಕಾರಿ ಲಕ್ಷ್ಮಿನಾರಾಯಣ ಪಾತ್ರದಲ್ಲಿ ತಾವೊಬ್ಬ ಮಾಗಿದ ನಟ ಎಂಬುದನ್ನು ಶಿವಣ್ಣ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪ್ರಿಯಾಮಣಿ ಅವರು ಅಷ್ಟೇ ಸೊಗಸಾದ ಅಭಿನಯ ನೀಡಿದ್ದಾರೆ. ಅಭಿನಯಲ್ಲಿ ಅವರು ಶಿವಣ್ಣನಿಗೆ ಸರಿಸಾಟಿಯಾಗಿ ನಿಂತಿದ್ದಾರೆ.

  ಇಷ್ಟಕ್ಕೂ ಲಕ್ಷ್ಮಿ ಚಿತ್ರದ ಕಥೆ ಏನು?

  ಮೈನಿಂಗ್ ಮಾಫಿಯಾ, ಭಯೋತ್ಪಾದಕ ಶಕ್ತಿಗಳನ್ನು ಹತ್ತಿಕ್ಕುವುದೇ ಚಿತ್ರದ ನಾಯಕನ ಉದ್ದೇಶ. ಇದಕ್ಕಾಗಿ ಆತ ಅವರೊಂದಿಗೆ ಭರ್ಜರಿ ಫೈಟ್ ಗಳನ್ನು ಮಾಡುತ್ತಾನೆ. ಕಾಣೆಯಾದ ತನ್ನ ಪತ್ನಿ ಪ್ರಿಯಾಳಿಗಾಗಿ (ಪ್ರಿಯಾಮಣಿ) ಹುಡುಕುತ್ತಾನೆ. ಹಾಂಕಾಂಗ್ ಸುತ್ತುತ್ತಾನೆ. ಕಡೆಗೆ ಲಕ್ಷ್ಮಿ ಕೈಗೆ ಪ್ರಿಯಾ ಸಿಗುತ್ತಾಳಾ?
  ಇಷ್ಟು ದಿನ ಅವಳೇನಾಗಿರುತ್ತಾಳೆ? ಎಲ್ಲಿರುತ್ತಾಳೆ? ಅವಳು ಉಗ್ರರ ಜೊತೆ ಕೈಜೋಡಿಸಿರುತ್ತಾಳಾ? ಎಂಬ ಸಸ್ಪೆನ್ಸ್ ಗೊತ್ತಾಗಬೇಕಾದರೆ ಒಮ್ಮೆ ಚಿತ್ರವನ್ನು ನೋಡಬೇಕು.

  ವಿಭಿನ್ನ ಗೆಟಪ್ ನಲ್ಲಿ ಗಮನಸೆಳೆಯುವ ಅವಿನಾಶ್

  ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದರ ಬಳಗವೇ ಇದೆ. ಅವರಲ್ಲಿ ಪ್ರಮುಖವಾದದ್ದು ಅವಿನಾಶ್ ಅವರ ಪಾತ್ರ. ಅವರದು ಸಿಬಿಐ ಅಧಿಕಾರಿ ಪಾತ್ರ. ಚಿತ್ರದಲ್ಲಿ ಅವರ ಪಾತ್ರ ಬರುವುದು ಕೆಲವೇ ಕೆಲವು ಸನ್ನಿವೇಶಗಳಲ್ಲಾದರೂ ತಮ್ಮ ವಿಭಿನ್ನ ಗೆಟಪ್ ಮೂಲಕ ಗಮನಸೆಳೆಯುತ್ತಾರೆ.

  ಪೋಷಕ ಪಾತ್ರಗಳ ಅಭಿನಯ ಹೇಗಿದೆ

  ಡೀಲ್ ರಾಜ ಪಾತ್ರದಲ್ಲಿ ರಂಗಾಯಣ ರಘು ಅವರು ನಗಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಭೂಗತ ಸಾಮ್ರಾಜ್ಯದ ಅಧಿಪತಿಯಾಗಿ ಆಶಿಶ್ ವಿದ್ಯಾರ್ಥಿ ಲೀಲಾಜಾಲ ಅಭಿನಯ. ರವಿ ಕಾಳೆ, ಚಿ.ಗುರುದತ್, ಯತಿರಾಜ್, ಜಿಮ್ ರವಿ ಪಾತ್ರಗಳು ಸಾಂದರ್ಭಿಕವಾಗಿ ಮೂಡಿಬಂದಿವೆ.

  ಪಡ್ಡೆಗಳಿಗೂ ಬೋರು ಹೊಡೆಸಿದ ಐಟಂ ಗರ್ಲ್

  ಗುರುಕಿರಣ್ ಅವರ ಸಂಗೀತದಲ್ಲಿ ಮೂಡಿಬಂದಿರುವ ನೀನೇನೆ ನೀನೇನೆ, ಕಮ್ ಕಮ್, ಲಕ್ಷ್ಮಿ ನೋ ಒನ್ ಕೆನ್ ಟಚ್ ಮಿ ಹಾಡುಗಳ ಚಿತ್ರೀಕರಣ ಹಾಗೂ ಕೊರಿಯೋಗ್ರಫಿ ಚೆನ್ನಾಗಿದೆ. ಆದರೆ ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ಐಟಂ ಹಾಡಿಗೆ ಅಷ್ಟೇ ಕೆಟ್ಟದಾಗಿ ಶಾಲಿನಿ ನಾಯ್ಡು ಹೆಜ್ಜೆ ಹಾಕಿ ಪಡ್ಡೆಗಳಿಗೂ ಬೋರು ಹೊಡೆಸಿದ್ದಾರೆ.

  ಚಿತ್ರದ ಗ್ರಾಫಿಕ್ಸ್ ನಲ್ಲಿ ಅಸಾಧಾರಣ ಏನೂ ಇಲ್ಲ

  ಚಿತ್ರದಲ್ಲಿ ಬಳಸಿಕೊಂಡಿರುವ ಕಂಪ್ಯೂಟರ್ ಗ್ರಾಫಿಕ್ಸ್ ಕೆಲವೊಂದು ಕಡೆ ಅದ್ಭುತ, ಕೆಲವು ಕಡೆ ಸಾಧಾರಣ. ಆದರೆ ಎಲ್ಲೂ ಅಸಾಧಾರಣ ಎನ್ನುವಂತಿಲ್ಲ. ಮದುವೆಯಾದವರ ಎದೆ ನೋಡಬೇಕಾದರೆ ಎದೆಹಾಲು ಕುಡಿಸಿದ ತಾಯಿ, ಹೊಕ್ಕಳು ನೋಡಬೇಕಾದರೆ ತಾಯಿಯ ಮಡಿಲು ನೆನಪಾಗಬೇಕು ಎಂಬ ಡೈಲಾಗ್ಸ್ ಗಮನಸೆಳೆಯುತ್ತವೆ.

  English summary
  Kannda film Lakshmi review - Starring Shivrajkumar, Priyamani, Produced by Barani Minerals and Music by Guru Kiran. The first half builds the tempo and the second half unleashes one by one. Raghav Loki has tried to blend Western and our regular mass elements to bring out something different.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more