twitter
    For Quick Alerts
    ALLOW NOTIFICATIONS  
    For Daily Alerts

    ಸ್ವೀಟಿ ಚಿತ್ರ ವಿಮರ್ಶೆ: ಒಮ್ಮೆ ನೋಡಬಹುದಾದ ಚಿತ್ರ

    By ಸಂದೇಶ್
    |

    ರಾಧಿಕಾ ಕುಮಾರಸ್ವಾಮಿ ಅವರು ಸೆಂಟಿಮೆಂಟ್ ಚಿತ್ರಗಳಿಂದ ಗುರುತಿಸಿಕೊಂಡವರು. ಅವರ ಅಭಿಮಾನಿಗಳೂ ಈ ಒಂದು ವಸ್ತುವನ್ನೇ ನಿರೀಕ್ಷಿಸುತ್ತಾರೆ. ಜೊತೆಗೆ ರಾಧಿಕಾ ಅವರ ಗ್ಲಾಮರ್ ಕೂಡ ಒಂದು ಪ್ರಮುಖ ಆಕರ್ಷಣೆ. 'ಸ್ವೀಟಿ' ಚಿತ್ರವೂ ಇವೆರಡೂ ವಸ್ತುಗಳಿಂದಲೂ ಹೊರತಾಗಿಲ್ಲ.

    ಇಲ್ಲೂ ಸೆಂಟಿಮೆಂಟ್, ಗ್ಲಾಮರ್, ಕೌಟುಂಬಿಕ ವಾತಾವರಣ, ಅಣ್ಣ ತಂಗಿ ಸಂಬಂಧ, ಅತ್ತೆ ಸೊಸೆ ಜಗಳ ಎಲ್ಲವೂ ಇವೆ. ಆದರೆ ಅವೆಲ್ಲವೂ ರಾಧಿಕಾ ಮತ್ತು ರಮ್ಯಾ ಕೃಷ್ಣ ಅವರ ಗ್ಲಾಮರ್ ಮುಂದೆ ಮಂಡಿಯೂರುತ್ತವೆ.

    ಐದು ವರ್ಷಗಳ ಬಳಿಕ 'ಸ್ವೀಟಿ' ಚಿತ್ರದ ಮೂಲಕ ರಾಧಿಕಾ ಕುಮಾರಸ್ವಾಮಿ ಬೆಳ್ಳಿತೆರೆಗೆ ಆಗಮಿಸಿದ್ದಾರೆ. 'ನವಶಕ್ತಿ ವೈಭವ' (2008) ಚಿತ್ರದ ಬಳಿಕ ರಾಧಿಕಾ ಮತ್ತೆ ಬಣ್ಣ ಹಚ್ಚಿದ್ದು ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ...

    ಚಿತ್ರ: ಸ್ವೀಟಿ
    ನಿರ್ಮಾಣ: ಶಮಿಕ ಎಂಟರ್ ಪ್ರೈಸಸ್
    ಕಥೆ, ಚಿತ್ರಕಥೆ,ನಿರ್ದೇಶನ: ವಿಜಯಲಕ್ಷ್ಮೀಸಿಂಗ್
    ಸಂಗೀತ: ಅರ್ಜುನ್ ಜನ್ಯ
    ಛಾಯಾಗ್ರಹಣ: ಅಜಯ್ ವಿನ್ಸೆಂಟ್
    ಸಂಕಲನ: ಕೆಂಪರಾಜ್
    ಸಾಹಸ: ರವಿವರ್ಮ
    ಸಂಭಾಷಣೆ: ಬಿ.ಎ.ಮಧು
    ಪಾತ್ರವರ್ಗ: ಆದಿತ್ಯ, ರಾಧಿಕಾ, ರಮ್ಯಕೃಷ್ಣ, ಗಿರೀಶ್ ಕಾರ್ನಾಡ್, ಸಾಧುಕೋಕಿಲಾ, ಉಮಾಶ್ರೀ, ತಬಲನಾಣಿ, ಶರತ್‍ಲೋಹಿತಾಶ್ವ ಮುಂತಾದವರು.

    ಚಿತ್ರದ ಕಥೆ ಏನೆಂದರೆ...

    ಚಿತ್ರದ ಕಥೆ ಏನೆಂದರೆ...

    ದುಡ್ಡಿರುವವರ ಮನೋಭಾವವನ್ನು ಕಂಡರೆ ಆಗದ ಮಧ್ಯಮ ವರ್ಗದ ಹುಡುಗಿ ಪ್ರಿಯಾ ಪಾತ್ರದಲ್ಲಿ ರಾಧಿಕಾ ಕಾಣಿಸುತ್ತಾರೆ. ಇಂತಹ ಹುಡುಗಿಗೆ ಮಲ್ಟಿ ಮಿಲಿಯನೇರ್ ಸಿದ್ಧಾರ್ಥ್ (ಆದಿತ್ಯ) ಸಿಗುತ್ತಾನೆ. ಈತ ಥೇಟ್ ಅಮ್ಮನ ಮಗ.

    ಶ್ರೀಮಂತಿಕೆಯನ್ನು ದ್ವೇಷಿಸುವ ಪ್ರಿಯಾ

    ಶ್ರೀಮಂತಿಕೆಯನ್ನು ದ್ವೇಷಿಸುವ ಪ್ರಿಯಾ

    ದುಡ್ಡಿಗಷ್ಟೇ ಪ್ರಾಮುಖ್ಯತೆ ಕೊಡುವ ಅತ್ತೆಯಾಗಿ ರಮ್ಯಾ ಕೃಷ್ಣ ಕಾಣಿಸುತ್ತಾರೆ. ಈ ದರ್ಪದ ಹೆಂಗಸು ಗಂಡನಿಂದ (ಜೈ ಜಗದೀಶ್) ದೂರವಿರುತ್ತಾರೆ. ಮೊದಲ ನೋಟದಲ್ಲೇ ಪ್ರಿಯಾರನ್ನು ಇಷ್ಟಪಡುತ್ತಾನೆ. ಆದರೆ ಅವಳಿಗೆ ಶ್ರೀಮಂತಿಕೆ ಎಂದರೆ ಆಗದು.

    ಅತ್ತೆ ಸೊಸೆ ಹಾವು ಏಣಿ ಆಟ

    ಅತ್ತೆ ಸೊಸೆ ಹಾವು ಏಣಿ ಆಟ

    ಇದಕ್ಕಾಗಿ ತಾನು ಬಡವ ಎಂಬಂತೆ ವರ್ತಿಸುತ್ತಾನೆ. ಪ್ರಿಯಾಳ ಮನಗೆಲ್ಲುತ್ತಾನೆ. ಅತ್ತೆ ಮನೆಗೆ ಬರುವ ಪ್ರಿಯಾಗೆ ನಾನಾ ಕಿರುಕುಳ ಎದುರಾಗುತ್ತದೆ. ಮಗನ ಅರಿವಿಗೆ ಬಾರದಂತೆ ಪ್ರಿಯಾರನ್ನು ದೂರ ಮಾಡಲು ಅತ್ತೆ ಪ್ರಯತ್ನಿಸುತ್ತಾಳೆ. ಇದಕ್ಕೆ ಪ್ರಿಯಾ ಏನು ಮಾಡುತ್ತಾಳೆ, ಅತ್ತೆ ಜೊತೆ ಹೇಗೆ ಸಾಗುತ್ತದೆ ಹಾವು ಏಣಿ ಆಟ ಎಂಬುದನ್ನು ತೆರೆಯ ಮೇಲೆ ನೋಡಿ.

    ಇಲ್ಲಿನ ಸೊಸೆ ಅಸಹಾಯಕಳಲ್ಲ

    ಇಲ್ಲಿನ ಸೊಸೆ ಅಸಹಾಯಕಳಲ್ಲ

    ತವರಿಗೆ ಬಾ ತಂಗಿ, ಅಣ್ಣ ತಂಗಿ ಚಿತ್ರಗಳಲ್ಲಿ ರಾಧಿಕಾ ಅಸಹಾಯಕ ಸೊಸೆ ಪಾತ್ರಗಳಲ್ಲಿ ಕಾಣಿಸಿದ್ದರು. ಆದರೆ ಇಲ್ಲಿ ಅವರ ಪಾತ್ರ ಬದಲಾಗಿದೆ. ಸ್ವಲ್ಪ ಆಧುನಿಕ ಸ್ಪರ್ಶ ನೀಡಲಾಗಿದೆ. ಆದರೆ ಇಲ್ಲಿನ ಸೊಸೆ ಅಸಹಾಯಕಳಲ್ಲ.

    ಮಹಿಳಾ ಪ್ರಧಾನ ಚಿತ್ರ

    ಮಹಿಳಾ ಪ್ರಧಾನ ಚಿತ್ರ

    ರಾಧಿಕಾ ಅವರ ಈ ಹಿಂದಿನ ಚಿತ್ರಗಳಂತೆ ಇದೂ ಒಂದು ಮಹಿಳಾ ಪ್ರಧಾನ ಚಿತ್ರದ ಕೆಟಗರಿಗೆ ಸೇರುತ್ತದೆ. ಅತ್ತೆ ಸೊಸೆ ನಡುವಿನ ಹಗ್ಗ ಜಗ್ಗಾಟವೇ ಇಲ್ಲಿನ ಕಥಾವಸ್ತು.

    ಆದಿತ್ಯ ಅವರದು ಅಸಹಾಯಕ ಮಗನ ಪಾತ್ರ

    ಆದಿತ್ಯ ಅವರದು ಅಸಹಾಯಕ ಮಗನ ಪಾತ್ರ

    ಚಿತ್ರದಲ್ಲಿ ಆದಿತ್ಯ ಅವರು ಅಸಹಾಯಕ ಮನಗ ಪಾತ್ರ. ಅಮ್ಮ ಮತ್ತು ಹೆಂಡತಿ ನಡುವಿನ ಮುಸುಕಿನ ಗುದ್ದಾಟದಲ್ಲಿ ನಲುಗುತ್ತಾನೆ. ಆದಿತ್ಯ ತಮ್ಮ ಪಾತ್ರಕ್ಕೆ ಬಹುತೇಕ ನ್ಯಾಯ ಒದಗಿಸಿದ್ದಾರೆ.

    ಆಧುನಿಕ ನಾರಿಯಾಗಿ ರಾಧಿಕಾ

    ಆಧುನಿಕ ನಾರಿಯಾಗಿ ರಾಧಿಕಾ

    ರಾಧಿಕಾ ಅವರು ಆಧುನಿಕ ನಾರಿಯಾಗಿ ಗಮನಸೆಳೆಯುತ್ತಾರೆ. ಹಲವಾರು ವರ್ಷಗಳ ಬಳಿಕ ಅವರು ಬಣ್ಣ ಹಚ್ಚಿದರೂ ಅವರ ಗ್ಲಾಮರ್ ಎಳ್ಳಷ್ಟೂ ಕಡಿಮೆಯಾಗಿಲ್ಲ ಎಂಬುದು ಇಲ್ಲಿ ಎದ್ದು ಕಾಣುವ ಅಂಶ.

    ರಮ್ಯಾ ಕೃಷ್ಣ ಚಿತ್ರದ ಮತ್ತೊಂದು ಆಕರ್ಷಣೆ

    ರಮ್ಯಾ ಕೃಷ್ಣ ಚಿತ್ರದ ಮತ್ತೊಂದು ಆಕರ್ಷಣೆ

    ಚಿತ್ರದಲ್ಲಿ ಮತ್ತೊಂದು ಆಕರ್ಷಣೆ ಎಂದರೆ ರಮ್ಯಾ ಕೃಷ್ಣ. ಅತ್ತೆ ಪಾತ್ರಕ್ಕೆ ಅವರು ಸಂಪೂರ್ಣ ನ್ಯಾಯ ಒದಗಿಸಿದ್ದು ಗ್ಲಾಮರ್ ನಲ್ಲೂ ರಾಧಿಕಾ ಅವರಿಗೆ ಪೈಪೋಟಿ ನೀಡಿದ್ದಾರೆ. ದರ್ಪದ ಅತ್ತೆಯಾಗಿ ರಮ್ಯಾ ಕೃಷ್ಣ ಗಮನಸೆಳೆಯುತ್ತಾರೆ.

    ಕಾಮಿಡಿ

    ಕಾಮಿಡಿ

    ಜಯದೇವ್ ಅವರ ಕಾಮಿಡಿ ತಕ್ಕಮಟ್ಟಿಗೆ ವರ್ಕ್ ಔಟ್ ಆಗಿದೆ. ಆದರೆ ಅವರು ಇನ್ನೂ ಸಾಕಷ್ಟು ಸುಧಾರಿಸಬೇಕು. ಸಾಧು ಕೋಕಿಲಾ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು ಇನ್ನೊಂದಿಷ್ಟು ನಗಿಸುವ ಪ್ರಯತ್ನ ಮಾಡಿದ್ದಾರೆ.

    ಪೋಷಕ ಪಾತ್ರಗಳು

    ಪೋಷಕ ಪಾತ್ರಗಳು

    ಚಿತ್ರದಲ್ಲಿ ಬಹಳಷ್ಟು ನುರಿತ ಕಲಾವಿದರಿದ್ದು ಗಿರೀಶ್ ಕಾರ್ನಾಡ್, ಉಮಾಶ್ರೀ, ತಬಲಾ ನಾಣಿ, ಜೈ ಜಗದೀಶ್ ಮತ್ತು ಶರತ್ ಲೋಹಿತಾಶ್ವ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

    ಸಂಗೀತ

    ಸಂಗೀತ

    ಅರ್ಜುನ್ ಜನ್ಯ ಅವರ ಸಂಗೀತ ಮುಖ್ಯವಾಗಿ ಯುವ ನಾಡಿಮಿಡಿತ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂತೆ ಸಂಗೀತ ನೀಡಿದ್ದಾರೆ. 'ಸ್ವೀಟಿ ಸ್ವೀಟಿ' ಟ್ರ್ಯಾಕ್ ನಮ್ಮ ಆಯ್ಕೆ.

    ನಿರ್ದೇಶನ

    ನಿರ್ದೇಶನ

    ವಿಜಯಲಕ್ಷ್ಮಿ ಸಿಂಗ್ ಅವರ ನಿರ್ದೇಶನ ರಾಧಿಕಾ ಹಾಗೂ ರಮ್ಯಾ ಕೃಷ್ಣ ಅವರನ್ನು ಮತ್ತಷ್ಟು ಗ್ಲಾಮರಸ್ ಆಗಿ ತೋರಿಸಲು, ಹೊಸ ಲುಕ್ ನೀಡುವಲ್ಲಿ ಯಶಸ್ವಿಯಾಗಿದೆ. ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನ ಪ್ರಭಾವ ವಿಜಯಲಕ್ಷ್ಮಿ ಸಿಂಗ್ ಮೇಲೆ ಆಗಿರುವುದನ್ನು ಇಲ್ಲಿ ಕಾಣಬಹುದು.

    ಕೊನೆಯ ಮಾತು

    ಕೊನೆಯ ಮಾತು

    ವಿಜಯಲಕ್ಷ್ಮಿ ಸಿಂಗ್ ಅವರ ನಿರ್ದೇಶನದಲ್ಲಿ ಬಂದಿರುವ ಮತ್ತೊಂದು ಮಹಿಳಾ ಪ್ರಧಾನ ಚಿತ್ರವಿದು. ಕಥೆಗಿಂತಲೂ ಇಲ್ಲಿ ಗ್ಲಾಮರ್ ಗೇ ಹೆಚ್ಚಿನ ಪ್ರಾಧಾನ್ಯತೆ ಇರುವ ಕಾರಣ ಪ್ರೇಕ್ಷಕರಿಗೆ ಖಂಡಿತ ನಿರಾಸೆಯಾವುದಿಲ್ಲ. ಒಮ್ಮೆ ನೋಡಬಹುದುದಾ ಚಿತ್ರ.

    English summary
    Kannada film 'Sweety' Nanna Jodi review. It is another feminist movie with Vijay Lakshmi Singh's direction. The audience will not be disappointed because it is filled with two glamorous queens - Radhika Kumarswamy and Ramya Krishna. It is one time watchable.
    Friday, November 8, 2013, 17:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X