For Quick Alerts
  ALLOW NOTIFICATIONS  
  For Daily Alerts

  ವಿಮರ್ಶಕರ ಪ್ರಕಾರ 'ಅಸ್ತಿತ್ವ' ಸಿನಿಮಾ ಹೇಗಿದೆ? ನೋಡ್ಬಹುದಾ.?

  By Harshitha
  |

  2012 ರಲ್ಲಿ ತೆರೆ ಕಂಡಿದ್ದ ತಮಿಳಿನ ಥ್ರಿಲ್ಲರ್ 'ನಾನ್' ಚಿತ್ರದ ಕನ್ನಡ ಅವತರಣಿಕೆ ಈ 'ಅಸ್ತಿತ್ವ'. ಓರ್ವ ಸೈಕೋಪಾತ್ ಕಿಲ್ಲರ್ ಸುತ್ತ ಕಥೆ ಹೆಣೆದಿರುವ 'ಅಸ್ತಿತ್ವ' ಚಿತ್ರ ಕರ್ನಾಟಕ ರಾಜ್ಯಾದ್ಯಂತ ತೆರೆಕಂಡಿದೆ.

  ತಮಿಳು ಚಿತ್ರಕ್ಕೆ ಚಿತ್ರಕಥೆ ಬರೆದಿದ್ದ ಜೀವ ಮತ್ತು ಸಂಗೀತ ನೀಡಿದ್ದ ವಿಜಯ್ ಆಂಟೋನಿ ಇಲ್ಲೂ ಕೆಲಸ ಮಾಡಿದ್ದಾರೆ. ನೂತನ್ ಉಮೇಶ್ ಆಕ್ಷನ್ ಕಟ್ ಹೇಳಿರುವ ಯುವರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಅಸ್ತಿತ್ವ' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಆದ್ರೆ, 'ಅಸ್ತಿತ್ವ' ಸಿನಿಮಾ ವಿಮರ್ಶಕರ ಮನ ಗೆಲ್ಲುವಲ್ಲಿ ಯಶಸ್ವಿ ಆಯ್ತಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕನ್ನಡದ ಜನಪ್ರಿಯ ದಿನ ಪತ್ರಿಕೆಗಳು ಪ್ರಕಟಿಸಿರುವ 'ಅಸ್ತಿತ್ವ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

  ನೈಜ ನಿರೂಪಣೆಯ 'ಅಸ್ತಿತ್ವ' : ವಿಜಯ ಕರ್ನಾಟಕ

  ನೈಜ ನಿರೂಪಣೆಯ 'ಅಸ್ತಿತ್ವ' : ವಿಜಯ ಕರ್ನಾಟಕ

  ಇದು ಕ್ರೈಮ್ ಕತೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಅಸ್ತಿತ್ವ' ನೂತನ್ ಉಮೇಶ್ ನಿರ್ದೇಶನದಲ್ಲಿ ತೆರೆಕಂಡಿದೆ. ಬಿಗಿಯಾದ ನಿರೂಪಣೆ, ಸಸ್ಪೆನ್ಸ್‌ನಿಂದ ಪ್ರೇಕ್ಷಕನನ್ನು ಹಿಡಿದಿಡುವುದಲ್ಲದೆ ನೈಜವಾಗಿ ಮೂಡಿಬಂದಿದೆ. ಆದರೆ ನೋಡುಗರಿಗೆ ತಪ್ಪು ಮೆಸೇಜ್ ನೀಡುವಂತಿದೆಯಾ ಸಿನಿಮಾ ಎಂಬ ಪ್ರಶ್ನೆಯೂ ಕಾಡುತ್ತದೆ. ಅತ್ಯಂತ ಬುದ್ಧಿವಂತಿಕೆಯಿಂದ ಹೆಣೆದ ಕತೆ, ದೃಶ್ಯಗಳು, ಸಣ್ಣಪುಟ್ಟ ಅಂಶಗಳಿಗೂ ಕೊಡುವ ಮಹತ್ವ, ಬಿಗಿಯಾದ ನಿರೂಪಣೆ... ಹೀಗೆ ಒಟ್ಟಾರೆ ವಿಭಿನ್ನ ಸಿನಿಮಾವನ್ನು ನೋಡಿದ ಥ್ರಿಲ್ ಕೊಡುವ ಅಸ್ತಿತ್ವ ತಮಿಳಿನಲ್ಲಿ ತೆರೆಕಂಡ 'ನಾನ್' ಚಿತ್ರದ ಯಥಾವತ್ ರಿಮೇಕ್ ಅನ್ನೋದು ವೀಕ್ ಪಾಯಿಂಟ್. ತಮಿಳು ಚಿತ್ರಕ್ಕೆ ಚಿತ್ರಕಥೆ ಬರೆದಿದ್ದ ಜೀವ ಮತ್ತು ಸಂಗೀತ ನೀಡಿದ್ದ ವಿಜಯ್ ಆಂಟೋನಿ ಇಲ್ಲೂ ಕೆಲಸ ಮಾಡಿದ್ದಾರೆ. ಆದರೆ, ಚಿತ್ರದ ಮೂಲಕ ಏನು ಹೇಳಹೊರಟಿದ್ದಾರೆ ಎನ್ನುವುದು ಮಾತ್ರ ಆತಂಕದ ಸಂಗತಿ - ಪದ್ಮಾ ಶಿವಮೊಗ್ಗ

  'ಅಸ್ತಿತ್ವ'ದ ಹುಡುಕಾಟದಲ್ಲಿ ಸೈಕೋಪಾತ್ ವಿಜೃಂಭಣೆ - ಕನ್ನಡ ಪ್ರಭ

  'ಅಸ್ತಿತ್ವ'ದ ಹುಡುಕಾಟದಲ್ಲಿ ಸೈಕೋಪಾತ್ ವಿಜೃಂಭಣೆ - ಕನ್ನಡ ಪ್ರಭ

  ತಾಯಿಯ ಮದುವೆಯಾಚೆಗಿನ ಸಂಬಂಧ ತಿಳಿಯುವ, ಓದಿನಲ್ಲಿ ಅತಿ ಚುರುಕಿನ ಬಾಲಕ ರಾಮ್, ಈ ವಿಷಯವನ್ನು ತಂದೆಗೆ ತಿಳಿಸಿದಾಗ, ಪೋಷಕರ ನಡುವೆ ತೀವ್ರ ಕಲಹವುಂಟಾಗಿ ತಂದೆ ನೇಣಿಗೆ ಶರಣಾಗುತ್ತಾನೆ. ಇದರಿಂದ ಮಾನಸಿಕವಾಗಿ ತೊಂದರೆಗೆ ಒಳಗಾಗುವ ರಾಮ್, ತಾಯಿ ಮತ್ತು ಪ್ರಿಯಕರನನ್ನು ತನ್ನ ಮನೆಯಲ್ಲೇ ಸೀಮೆಎಣ್ಣೆ ಸುರಿದು ಸುಟ್ಟುಹಾಕಿ ರಿಮ್ಯಾಂಡ್ ಹೋಮ್ ಸೇರುತ್ತಾನೆ. ಇಂತಹುದೊಂದು ಭಾರಿ ಆಘಾತಕಾರಿ ಸನ್ನಿವೇಶವನ್ನು ಪ್ರಾರಂಭದಲ್ಲಿಯೇ ಪ್ರೇಕ್ಷಕರ ಮುಂದಿಡುವ ನಿರ್ದೇಶಕ, ಈ ಕಥೆಯನ್ನು/ ಸನ್ನಿವೇಶವನ್ನು ಹೇಗೆ ಮುಂದುವರೆಸಬಹುದು ಎಂಬ ಕುತೂಹಲವನ್ನು ಉಳಿಸಿದರು, ಎಲ್ಲೋ ಮಾನಸಿಕ ಅಸ್ವಸ್ಥತೆಯನ್ನು ವಿಜೃಂಭಿಸುವ ಅಪಾಯವು ಇರಬಹುದೇನೋ ಎಂಬ ಸಂದೇಹವನ್ನು ಉಳಿಸುತ್ತಾರೆ.

  ಸ್ಥಿತಿ ಸ್ಥಾಪಕ ಕಥಾನಕದ ಸ್ಥಿತ ಪ್ರಜ್ಞ ಚಿತ್ರಣ - ಉದಯವಾಣಿ

  ಸ್ಥಿತಿ ಸ್ಥಾಪಕ ಕಥಾನಕದ ಸ್ಥಿತ ಪ್ರಜ್ಞ ಚಿತ್ರಣ - ಉದಯವಾಣಿ

  ಇದು ತಮಿಳಿನ 'ನಾನ್' ಚಿತ್ರದ ಅವತರಣಿಕೆ. ತಮಿಳಿನ ರೆಡಿ ಮೇಡ್ ಫುಡ್ ಇದಾಗಿದ್ದರೂ, ನಿರ್ದೇಶಕ ನೂತನ್ ಉಮೇಶ್, ಅದನ್ನೇ ಒಂದಷ್ಟು 'ಬಿಸಿ' ಮಾಡಿ, ಕನ್ನಡದ ರುಚಿ ಬೆರಸಿ ಅಚ್ಚುಕಟ್ಟಾಗಿ ಹೊಸ ಶೈಲಿಯ ನಿರೂಪಣೆ ಮೂಲಕ ಉಣಬಡಿಸಿದ್ದಾರೆ. ಹಾಗಂತ, 'ಅಸ್ತಿತ್ವ' ಸರಾಗವಾಗಿ ಸಾಗುವ ಸಿನಿಮಾವೇನಲ್ಲ. ಮೊದಲರ್ಧ ಕೊಂಚ ನಿಧಾನವೆನಿಸಿದರೂ, ದ್ವಿತಿಯಾರ್ಧ ಪ್ರೇಕ್ಷಕರನ್ನು ಕುತೂಹಲದಿಂದ ಹಿಡಿದಿಟ್ಟುಕೊಳ್ಳುವ ತಾಕತ್ತಿದೆ - ವಿಜಯ್ ಭರಮಸಾಗರ

  ಸ್ಥಿತಿ ಸ್ಥಾಪಕ ಕಥಾನಕದ ಸ್ಥಿತ ಪ್ರಜ್ಞ ಚಿತ್ರಣ - ಉದಯವಾಣಿ

  ಸ್ಥಿತಿ ಸ್ಥಾಪಕ ಕಥಾನಕದ ಸ್ಥಿತ ಪ್ರಜ್ಞ ಚಿತ್ರಣ - ಉದಯವಾಣಿ

  ಯುವರಾಜ್ ಗೆ ಇದು ಮೊದಲ ಸಿನಿಮಾವಾದರೂ, ಅನುಭವಿ ನಟರಂತೆ ಕಾಣುತ್ತಾರೆ. ಎರಡು ಶೇಡ್ ಪಾತ್ರದಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಡೈಲಾಗ್ ಡಿಲಿವರಿ, ಬಾಡಿ ಲಾಂಗ್ವೇಜ್ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದು, ಭವಿಷ್ಯದಲ್ಲಿ ಗಾಂಧಿನಗರದಲ್ಲಿ 'ಅಸ್ತಿತ್ವ' ಉಳಿಸಿಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ - ವಿಜಯ್ ಭರಮಸಾಗರ

  English summary
  Kannada Actor Yuvaraj starrer 'Astitva' movie has received mixed response from the critics. Here is the collection of 'Astitva' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X