»   » 'ಬದ್ಮಾಶ್' ಆಕ್ಷನ್ ಅಬ್ಬರಕ್ಕೆ ವಿಮರ್ಶಕರ ಮಾರ್ಕ್ಸ್ ಎಷ್ಟು?

'ಬದ್ಮಾಶ್' ಆಕ್ಷನ್ ಅಬ್ಬರಕ್ಕೆ ವಿಮರ್ಶಕರ ಮಾರ್ಕ್ಸ್ ಎಷ್ಟು?

Written By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸ್ಪೆಷಲ್ ಸ್ಟಾರ್ ಧನಂಜಯ್ ಹಾಗೂ ಸಂಚಿತಾ ಶೆಟ್ಟಿ ಅಭಿನಯದ 'ಬದ್ಮಾಶ್' ಚಿತ್ರ, ನಿನ್ನೆ (ನವೆಂಬರ್ 18) ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ.

  ಮೊದಲ ದಿನ 'ಬದ್ಮಾಶ್' ಚಿತ್ರಕ್ಕೆ ಭರ್ಜರಿ ಒಪನಿಂಗ್ ಸಿಕ್ಕಿದ್ದು, ಪ್ರೇಕ್ಷಕರು ಶಬ್ಬಾಶ್ ಎಂದಿದ್ದಾರೆ. ಪಂಚಿಂಗ್ ಡೈಲಾಗ್ ಗಳು, ಜಬರ್ ದಸ್ತ್ ಫೈಟಿಂಗ್ ಮೂಲಕ ಧನಂಜಯ್ ಅಬ್ಬರಿಸಿದ್ದಾರೆ.[ಬದ್ಮಾಶ್ ವಿಮರ್ಶೆ: ಫೈಟ್ಸ್, ಡೈಲಾಗ್ ಗಳ ಅಬ್ಬರದಲ್ಲಿ ಧನಂ'ಜಯ']

  ಹಾಗಾದ್ರೆ, 'ಬದ್ಮಾಶ್' ಚಿತ್ರಕ್ಕೆ ವಿರ್ಮಶಕರು ಏನ್ ಹೇಳಿದ್ದಾರೆ. ಧನಂಜಯ್ ಅವರ ಆಕ್ಷನ್ ಧಮಾಕಗೆ ಎಷ್ಟು ಮಾರ್ಕ್ಸ್ ಕೊಟ್ಟಿದ್ದಾರೆ ಅಂತ ಮುಂದೆ ಓದಿ...

  ''ಅಬ್ಬರಿಸಿ ಬೊಬ್ಬಿರಿಯುವ ಬದ್ಮಾಶ್''- ವಿಜಯ ಕರ್ನಾಟಕ

  ಬದ್ಮಾಶ್ ಕಂಪ್ಲೀಟ್ ಮಾಸ್ ಚಿತ್ರ. ಹೊಡೆದಾಟ, ಕಿಕ್ ಕೊಡುವ ಡೈಲಾಗ್‌ಗಳು, ಅಬ್ಬರಿಸುವ ನಾಯಕ, ಖಡಕ್ ವಿಲನ್ ಮಾಸ್ ಪ್ರೇಕ್ಷಕರಿಗೆ ಇಷ್ಟವಾದರೆ, ಅಂದವಾದ ಲೋಕೆಷನ್ ಗಳ ಜತೆಗೆ ಚೆಂದದ ನಾಯಕಿ, ಇಂಪಾದ ಹಾಡುಗಳು ಕ್ಲಾಸ್ ಪ್ರೇಕ್ಷಕರಿಗೆ ಮುದ ನೀಡುತ್ತವೆ. ಸಿನಿಮಾದ ತುಂಬಾ ಆವರಿಸಿರುವ ಧನಂಜಯ್ ಅಬ್ಬರಿಸಿದ್ದಾರೆ. ಉದ್ದುದ್ದ ಪಂಚಿಂಗ್ ಡೈಲಾಗ್‌ಗಳನ್ನು ನಿರರ್ಗಳವಾಗಿ ಹೊಡೆದು ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಅಚ್ಯುತ ಕ್ರಿಮಿನಲ್ ಮತ್ತು ತಮ್ಮ ಸೈಲಂಟ್ ಆಕ್ಟಿಂಗ್ ನಿಂದ ಮಿಂಚುತ್ತಾರೆ. ನಾಯಕಿ ಸಂಚಿತಾ ಶೆಟ್ಟಿ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ರೋಚಕವಾಗಿ ಚಿತ್ರಿಸುವಲ್ಲಿ ನಿರ್ದೇಶಕ ಶ್ರೀವತ್ಸ ಗೆದ್ದಿದ್ದಾರೆ. ತಮ್ಮ ಕ್ಯಾಮೆರಾ ಕಣ್ಣಿನಿಂದ ಸಿನಿಮಾವನ್ನು ಶ್ರೀಮಂತಗೊಳಿಸಿರುವ ಸಿನಿಮಾಟೋಗ್ರಾಫರ್ ಶ್ರೀಶಾ ಕೂದವಳ್ಳಿಗೆ ಗರಿಷ್ಠ ಅಂಕ ಕೊಡಬೇಕು. ಜ್ಯೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ ಮತ್ತು ಇಂಪಾದ ಹಾಡುಗಳಿಂದ ಮೆಚ್ಚುಗೆ ಗಳಿಸುತ್ತಾರೆ.''- ರೇಟಿಂಗ್: 3/5

  ''ಗೇಮ್ ಅದ್ದೂರಿಯಾದ್ರೂ, ಗಮ್ಮತ್ತು ಕಮ್ಮಿ''-ವಿಜಯವಾಣಿ

  'ಒಂದು ಕಮರ್ಷಿಯಲ್ ಚಿತ್ರದಲ್ಲಿ ಏನೇನಿರಬೇಕೋ ಎಲ್ಲವೂ ಬದ್ಮಾಶ್ ಚಿತ್ರದಲ್ಲಿದೆ. ಮೊದಲರ್ದದಲ್ಲಿ ಕಥೆ ತೆರೆದುಕೊಳ್ಳುವುದೇ ಇಲ್ಲ. ಸ್ವಲ್ಪ ತಾಳ್ಮೆ ಕಾಯ್ದುಕೊಂಡರೆ ದ್ವಿತಿಯಾರ್ದದಲ್ಲಿ ಕೊಂಚ ಮನರಂಜನೆ ದಕ್ಕಬಹುದು. ನಾಯಕ ಮತ್ತು ಖಳನಾಯಕನ ಮಧ್ಯೆ ನಡೆಯುವ ಚೌಕಬಾರದ ಕಥೆಯನ್ನ, ಸಾಧರಾಣ ಚಿತ್ರಕಥೆಯ ಜತೆಗೆ ಉತ್ತಮ ಮೇಕಿಂಗ್ ಮೂಲಕ ತೆರೆಗೆ ತಂದಿದ್ದಾರೆ ನಿರ್ದೇಶಕ ಆಕಾಶ್ ಶ್ರೀವತ್ಸ. ನಾಯಕನ ಬಿಲ್ಡಪ್ ಗೆ ಅಂತನೇ ಚಿತ್ರದ ಇಂತಿಷ್ಟು ಭಾಗ ಮೀಸಲಿಟ್ಟಿದ್ದಾರೆ. ಅಬ್ಬರದ ಹಿನ್ನಲೆ ಸಂಗೀತ. ಸಾಹಸ ದೃಶ್ಯಗಳಿಗೆ ಇಲ್ಲಿಯೂ ಮೆರವಣಿಗೆ ಮುಂದುವರೆದಿದೆ. ಧನಂಜಯ್ ಗೆ ಆಕ್ಷನ್ ಇಮೇಜ್ ಅಷ್ಟಾಗಿ ಒಗ್ಗಿಲ್ಲ. ಆದರೂ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಅವರು ಹಿಂದೆ ಬಿದ್ದಿಲ್ಲ. ಡ್ಯಾನ್ಸ್, ಫೈಟ್ ಮೂಲಕ ಗಮನ ಸೆಳೆಯುತ್ತಾರೆ. ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ನಟಿಸಿದ್ದಾರೆ ಸಂಚಿತಾ. ರಾಜಕಾರಣಿ ಪಾತ್ರದಲ್ಲಿ ನಟಿಸುವ ಬದಲು ಜೀವಿಸಿದ್ದಾರೆ ಅಚ್ಯುತ್ ಕುಮಾರ್. ಚೆಂದನೆಯ ಛಾಯಗ್ರಹಣದಿಂದ ಶ್ರೀಶು ಕುದೂವಳ್ಳಿ ಹೆಚ್ಚು ಮಾರ್ಕ್ಸ್ ಗಿಟ್ಟಿಸುತ್ತಾರೆ. ಅಬ್ಬರದ ಹಾಡಿನೊಂದಿಗೆ ಗುನುಗುವಂತಹ ಹಾಡುಗಳನ್ನ ಕೊಟ್ಟಿದ್ದಾರೆ ಜುಡ್ಯಾ ಸ್ಯಾಂಡಿ.''-ರೇಟಿಂಗ್ 2/5

  ''ಪರೋಡಿ ಪ್ರೇಮಿಯೊಬ್ಬನ ಆಟ ಬೊಂಬಾಟ''-ಉದಯವಾಣಿ

  ಟ್ವಿಸ್ಟು, ಟರ್ನು, ಟರ್ನು, ಟ್ವಿಸ್ಟು ಗಳಿಂದ ಚಿತ್ರ ಎಲ್ಲಿಂದ ಎಲ್ಲಿಗೋ ಹೋಗುತ್ತದೆ. ವಿಜಯ ವೈಡೂರ್ಯ ಎಂಬ ಅಪರೂಪದ ರತ್ನದಿಂದ ಶುರುವಾಗುವ ಚಿತ್ರದ ಕಥೆ, ಈಗಿನ ಕಾಲಕ್ಕೆ ಶಿಫ್ಟ್ ಆಗಿ ಸಮಾಪ್ತಿಯಾಗುತ್ತದೆ. ಈ ಮಧ್ಯೆ ಇವತ್ತಿನ ರಾಜಕೀಯ, ಕ್ರಿಕೆಟ್ ಬೆಟ್ಟಿಂಗ್, ಮಾಧ್ಯಮಗಳು, ಮೂಡನಂಬಿಕೆಗಳು, ಎಲ್ಲವೂ ಬಂದು ಹೋಗುತ್ತದೆ. ಮೊದಲರ್ದದಲ್ಲಿ ಎರಡು ಫೈಟ್, ಮೂರು ಸಾಂಗ್, ಕೆಟ್ಟ ಕಾಮಿಡಿ, ಎಲ್ಲರ ಇಂಟ್ರೋಡಕ್ಷನ್ ಗಳು ಸುಮ್ಮನೆ ಎಳೆಯಲಾಗಿದೆ. ಇಂಟರ್ ವಲ್ ಗೆ 'ದಿ ಗೇಮ್ ಬಿಗಿನ್ಸ್ ನೌ' ಎಂಬ ಸಂದೇಶ ಬಂದು ದ್ವಿತಿಯಾರ್ದದಿಂದ ಗೇಮ್ ಶುರುವಾಗುತ್ತೆ. ಹಾಗಂತ ಸೆಕೆಂಡ್ ಹಾಫ್ ಅದ್ಬುತ ಎಂಬಂತೆ ಅಲ್ಲ. ಧನಂಜಯ್ ಗೆ ಮಾಸ್ ಇಮೇಜ್ ನೀಡಲಾಗಿದೆ. ಬಿಲ್ಡಪ್ ಹಾಗೂ ಹೊಡೆದಾಟಗಳಿಂದ ಹೆಚ್ಚು ಗಮನ ಸೆಳೆಯುತ್ತಾರೆ. ಸಂಚಿತಾ ಶೆಟ್ಟಿಗೆ ಹೆಚ್ಚು ಕೆಲಸವಿಲ್ಲ. ಜಹಾಂಗೀರ್ ಕಾಮಿಡಿ ವರ್ಕೌಟ್ ಆಗಿಲ್ಲ. ಎರಡು ಹಾಡುಗಳು ಪರವಾಗಿಲ್ಲ. ಚಿತ್ರದ ಪ್ಲಸ್ ಪಾಯಿಂಟ್ ಏನಂದ್ರೆ, ಶ್ರೀಶ ಕೂದುವಳ್ಳಿ ಛಾಯಗ್ರಹಣ ಹಾಗೂ ಅಚ್ಯುತ್ ಕುಮಾರ್ ಅವರ ಅಭಿನಯ.''-ಉದಯವಾಣಿ

  ''ಬದ್ಮಾಶ್ ಬಡಿತಕ್ಕೆ ಅವನ ಮಾತಿನ ಬರೆಗೆ ಸರ್ವವೂ ತತ್ತರ''-ಕನ್ನಡ ಪ್ರಭ

  ಈ ಕಥೆ ರಾಜಕಾರಿಣಿಯ ಪಾತ್ರವೊಂದನ್ನು ಒಳಗೊಂಡಿದೆ ಎಂಬುದನ್ನು ಬಿಟ್ಟರೆ, ಸಮಕಾಲೀನ ಅಥವಾ ಇತಿಹಾಸದ ರಾಜಕಾರಣವನ್ನು ಗಟ್ಟಿಯಾಗಿ-ಪರಿಣಾಮಕಾರಿಯಾಗಿ ಹಿಡಿದಿಡುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಜ್ಯೋತಿಷ್ಯವನ್ನು-ಮಾಧ್ಯಮಗಳ ಹುಚ್ಚಾಟವನ್ನು ಅಪಹಾಸ್ಯ ಮಾಡುವ, ಕೆಡುಕಿನ ರಾಜಕಾರಣಿಯ ಪಾತ್ರವನ್ನು ಚಿತ್ರಿಸುವ ಮಾಮೂಲಿ ಕಥಾ ಹಂದರವನ್ನು ಹೊಂದಿರುವ ಈ ಸಿನೆಮಾ ಹೀರೊ ವೈಭವೀಕರಣ ಮತ್ತು ಅವನನ್ನು ಅತಿರೇಕದಿಂದ ಬಿಂಬಿಸಿರುವ ಒಂದು ಮಸಾಲ ಸಿನೆಮಾ. ನಟ ಧನಂಜಯ್ ಉದ್ದುದ್ದ ಡೈಲಾಗ್ ಗಳನ್ನು ಹೊಡೆದಿದ್ದಾರೆ, ಒಂದಷ್ಟು ಫೈಟ್ ಗಳನ್ನೂ ಮಾಡಿದ್ದಾರೆ ಎಂಬುದನ್ನು ಹೊರತುಪಡಿಸಿದರೆ, ಬೇರೇನು ಇಲ್ಲ. ಸಂಚಿತ ಶೆಟ್ಟಿ ಅವರದ್ದು ಕೂಡ ಸಾಧಾರಣ ನಟನೆ. ಸಿನೆಮಾಗೆ ಸ್ವಲ್ಪ ಜೀವ ತುಂಬುವುದೆಂದರೆ ಅಚ್ಯುತ್ ಕುಮಾರ್ ಅವರ ನಟನೆ. ಜುಡಾ ಸ್ಯಾಂಡಿ ಅವರ ಅಬ್ಬರದ ಸಂಗೀತ ಪರಿಣಾಮಕಾರಿಯಾಗಿಲ್ಲ. ತಮ್ಮ ಚೊಚ್ಚಲ ಸಿನೆಮಾದಲ್ಲಿ ತಾಜಾತನದಿಂದ ಕುಡಿದ ಯಾವುದನ್ನೂ ಹೇಳಲು ಸಾಧ್ಯವಾಗದೆ, ಮಸಾಲ ಸಿನೆಮಾದ ನಿರೂಪಣಾ ತಂತ್ರಕ್ಕೆ ಮೊರೆ ಹೋಗಿ, ಅಲ್ಲಿ ಕೂಡ ಲವಲವಿಕೆಯಿಂದ ಕೂಡಿರದ ಸಿನೆಮಾವನ್ನು ನೀರಸವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

  BADMAASH MOVIE REVIEW- BANGALORE MIRROR

  ''It takes a diamond to cut a diamond. It takes heroism to kill a film. Red diamonds are the rarest variety of diamonds. Excessive hype is the bane of movies. Like these unconnected statements, Badmash races ahead with a disconnected narrative that begins to test your patience after just a few scenes. The director manages to turn a simple plot into as much as a confusion as possible. The unnecessary buildups for Dhananjay scars half the film. What could have been a thriller is turned into a boring mess. Except for the scenes involving Achyuth and his believable performance, there is nothing much to salvage from Badmaash. Without a cohesive narrative and a large body of boring scenes, only the mistakes get magnified'' -ರೇಟಿಂಗ್-2/5

  English summary
  Kannada Movie 'Badmaash'' Critics Review. Kannada Actor Dhananjaya and Sanchitha shetty starrer 'Badmaash' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more