Don't Miss!
- News
ಭಾರತ್ ಜೋಡೋ ಯಾತ್ರೆಯಲ್ಲಿ ಭದ್ರತೆ ಲೋಪ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ
- Automobiles
ಭಾರತದದಲ್ಲಿ ಟ್ರೆಂಡಿಂಗ್ನಲ್ಲಿರುವ ಜನಪ್ರಿಯ ಕಾರುಗಳು: ಇವುಗಳಿಗೆ ಸರಿಸಾಟಿಯೇ ಇಲ್ಲ..!
- Sports
ಈ ಹಿಂದಿನಂತೆ ಈ ತಂಡ ಈಗ ಬಲಿಷ್ಠ ತಂಡವಲ್ಲ: ಆಕಾಶ್ ಚೋಪ್ರ ಹೇಳಿದ ಆ ತಂಡ ಯಾವುದು?
- Technology
ChatGPT ಬಳಕೆಯಿಂದ ಏನೆಲ್ಲಾ ಲಾಭ? ಏನೆಲ್ಲಾ ನಷ್ಟ?
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುನೀತ್ 'ಚಕ್ರವ್ಯೂಹ'ದ ಒಳ ನುಗ್ಗಿದ ವಿಮರ್ಶಕರು ಏನಂತಾರೆ?
ಭೃಷ್ಟ ಅಧಿಕಾರಿಗಳಿಂದ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ನೋಡಿ ತಟ್ಟಿ ಕೇಳುವ ಒಬ್ಬ ಸಾಮಾನ್ಯ ಯುವಕನ ಬಗ್ಗೆ ಇಡೀ 'ಚಕ್ರವ್ಯೂಹ' ಕಥೆಯನ್ನು ಹೆಣೆಯಲಾಗಿದೆ. ದುಷ್ಟರ ವಿರುದ್ಧ ಸೆಣಸಾಡುವ ಯುವಕನ ಕಿಚ್ಚಿಗೆ ಆತನ ಪ್ರೇಯಸಿ ಬಲಿಯಾಗುತ್ತಾಳೆ.
'ಎಂಗೇಯುಮ್ ಎಪ್ಪೋದುಮ್' ಚಿತ್ರದ ಖ್ಯಾತಿಯ ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿರುವ 'ಚಕ್ರವ್ಯೂಹ' ಸಿನಿಮಾ ತಮಿಳಿನ ತಾವೇ ನಿರ್ದೇಶನ ಮಾಡಿದ್ದ 'ಇವನ್ ವೇರೆಮಾದ್ರಿ' ಚಿತ್ರದ ಪ್ರೇರಣೆ ಪಡೆದುಕೊಂಡು ಈ ಸಿನಿಮಾ ಮಾಡಿದ್ದಾರೆ.[ವಿಮರ್ಶೆ; 'ಚಕ್ರವ್ಯೂಹ'ದೊಳ್ ಜನನಾಯಕ ಪುನೀತ್ ಗೆ ಜೈ.!]
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಇದೇ ಮೊದಲ ಬಾರಿಗೆ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಡ್ಯುಯೆಟ್ ಹಾಡಿರುವ 'ಚಕ್ರವ್ಯೂಹ' ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ತಮಿಳಿನ ಖ್ಯಾತ ನಟ ಅರುಣ್ ವಿಜಯ್ ಅವರು ಮಿಂಚಿದ್ದರು.[ಪುನೀತ್ ರ 'ಚಕ್ರವ್ಯೂಹ' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ...]
ಒಬ್ಬ ಜನ ಸಾಮಾನ್ಯನಾಗಿ ಮುಖವಾಡ ತೊಟ್ಟು ಸಮಾಜಕ್ಕೆ ಅಂಟಿಕೊಂಡಿರುವ ಕೊಳೆಯನ್ನು ಹೇಗೆ ಚಿತ್ರದ ನಾಯಕ ತೊಳೆದು ಹಾಕುತ್ತಾನೆ ಅನ್ನೋದು ಕಥೆ. ಇಂತಹ ವಿಭಿನ್ನ ಕಥೆಗೆ ಕನ್ನಡದ ಖ್ಯಾತ ವಿಮರ್ಶಕರು ವಿಭಿನ್ನ ವಿಮರ್ಶೆಗಳನ್ನು ವ್ಯಕ್ತಪಡಿಸಿದ್ದಾರೆ. ಕನ್ನಡದ ಖ್ಯಾತ ದಿನಪತ್ರಿಕೆಗಳ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

'ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಟ'- ಪ್ರಜಾವಾಣಿ
"ತನ್ನ ಹಿಂಬಾಲಕರಿಗೆ ಸೀಟು ಕೊಡಲಿಲ್ಲ ಎಂಬ ಸಿಟ್ಟಿನಿಂದ ಕಾನೂನು ಮಂತ್ರಿ ಕಾಲೇಜಿನಲ್ಲಿ ಗಲಭೆ ಎಬ್ಬಿಸುತ್ತಾನೆ. ಆ ಗಲಾಟೆಯಲ್ಲಿ ವಿದ್ಯಾರ್ಥಿಯೊಬ್ಬ ಬಲಿಯಾಗುತ್ತಾನೆ. ಆತನ ತಾಯಿಯ ಆಕ್ರಂದನ ಕೇಳಿ ಆಕ್ರೋಶಗೊಳ್ಳುವ ಲೋಹಿತ್ ಎನ್ನುವ ತರುಣ, ಮಂತ್ರಿಯ ತಮ್ಮನನ್ನು ಒಂದೆಡೆ ರಹಸ್ಯವಾಗಿ ಕೂಡಿಹಾಕುತ್ತಾನೆ. ಮಂತ್ರಿಯ ಕೆಟ್ಟ ಕೆಲಸಗಳು ಜನರಿಗೆ ಗೊತ್ತಾಗುವುದರಿಂದ, ಆತ ರಾಜೀನಾಮೆ ನೀಡಬೇಕಾಗಿ ಬರುತ್ತದೆ. ತಮ್ಮನನ್ನು ಈ ಸ್ಥಿತಿಗೆ ತಂದಿದ್ದು ಲೋಹಿತ್ ಎಂದು ಗೊತ್ತಾದಾಗ, ಆತನನ್ನು ಮುಗಿಸಲು ಮಂತ್ರಿ ಹಾಗೂ ಆತನ ತಮ್ಮ ಸಂಚು ಹೂಡುತ್ತಾರೆ. ಅದರಲ್ಲಿ ಅವರು ಯಶಸ್ವಿಯಾಗುತ್ತಾರೆಯೇ? ಲೋಹಿತ್ ತನ್ನ ಗುರಿ ಮುಟ್ಟುತ್ತಾನೆಯೇ? ಇದಕ್ಕೆಲ್ಲ ಕ್ಲೈಮ್ಯಾಕ್ಸ್ ನಲ್ಲಿ ಉತ್ತರ ಸಿಗುತ್ತದೆ".['ಚಕ್ರವ್ಯೂಹ' ಜಾತ್ರೆ: ಟ್ವಿಟ್ಟರ್ ನಲ್ಲಿ ಪ್ರೇಕ್ಷಕರ ಮತ್ತು ಅಭಿಮಾನಿಗಳ ವಿಮರ್ಶೆ]

'ಸಂದೇಶ ದಾಟಿಸುವ ಸಾಹಸ' - ವಿಜಯಕರ್ನಾಟಕ
"ಚಕಚಕನೆ ಓಡುವ ಚಿತ್ರಕಥೆ, ಬೈಕ್- ಕಾರುಗಳ ಚೇಸಿಂಗ್ ಸೀನ್‌ಗಳೊಂದಿಗೆ ಯುವ ನಿರ್ದೇಶಕ ಶರವಣನ್ ಕಸುಬುದಾರಿಕೆ ಮೆರೆದಿದ್ದಾರೆ. ಮೂರು ವರ್ಷಗಳ ಹಿಂದೆ ತೆರೆಕಂಡಿದ್ದ ಅವರೇ ನಿರ್ದೇಶಿಸಿದ್ದ ತಮಿಳು ಚಿತ್ರವೊಂದರ ಪ್ರೇರಣೆಯಿಂದ ತಯಾರಾಗಿರುವ ಸಿನಿಮಾ 'ಚಕ್ರವ್ಯೂಹ'. ಬಹುಶಃ ಇದೇ ಕಾರಣಕ್ಕೆ ಇಲ್ಲಿಯೂ ಅವರು ಹಿಡಿತ ಸಾಧಿಸಿದ್ದಾರೆ. ಇನ್ನು ಹೀರೋ ಪುನೀತ್ ರಾಜಕುಮಾರ್ ಕತೆಯ ಆಯ್ಕೆಯಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗಿಲ್ಲ. ಸರಳ ಕತೆಯಲ್ಲಿ ಎಂದಿನಂತೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಚಪ್ಪಾಳೆ ಗಿಟ್ಟಿಸುತ್ತಾರೆ. ದುಷ್ಟತನವನ್ನೇ ಆವರಿಸಿಕೊಂಡಂತೆ ನಟಿಸಿರುವ ತಮಿಳು ನಟ ಅರುಣ್ ವಿಜಯ್‌ಗೂ ಹೆಚ್ಚು ಅಂಕಗಳು ಸಲ್ಲಬೇಕು. ಹುಡುಗಾಟದ ಹುಡುಗಿಯಾಗಿ ನಾಯಕಿ ರಚಿತಾ ರಾಮ್ ಇಷ್ಟವಾಗುತ್ತಾರೆ". -ಶಶಿಧರ ಚಿತ್ರದುರ್ಗ.

'ಇದು ಅಭಿಮಾನಿಗಳ ಚಕ್ರವ್ಯೂಹ ಮೋಹ'- ವಿಜಯವಾಣಿ
ಸಿನಿಮಾ ಶುರುವಾದ ಸ್ವಲ್ಪ ಹೊತ್ತಿಗೇ ಕಥೆಯ ರಹಸ್ಯ ಬಯಲಾಗಿರುತ್ತದೆ. ಅದರಲ್ಲೂ, ತಮಿಳಿನ ‘ಇವನ್ ವೇರೆ ಮಾದರಿ' ನೋಡಿದ್ದವರಿಗೆ ಕುತೂಹಲವೇ ಉಳಿದಿರುವುದಿಲ್ಲ. ನೋಡದಿದ್ದವರಿಗೂ, ಮುಂದೇನಾಗುತ್ತೆ ಎಂಬ ಕೌತುಕವನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಶರವಣನ್ ವಿಫಲರಾಗಿದ್ದಾರೆ. ಹಾಗೆ ನೋಡಿದರೆ, ಇದು ಪುನೀತ್ ರಾಜ್ಕುಮಾರ್ ಚಿತ್ರವೇ ಅಲ್ಲ! ಒಬ್ಬ ಸ್ಟಾರ್ ಆಗಿ, ಅಸಂಖ್ಯ ‘ಮಾಸ್' ಅಭಿಮಾನಿಗಳನ್ನು ಹೊಂದಿರುವ ಹೀರೋ ಅಪ್ಪು ಇಂತಹ ಕಥೆ ಒಪ್ಪಿಕೊಂಡಿದ್ದೇ ಹೆಚ್ಚುಗಾರಿಕೆ.

'ಚಕ್ರಕ್ಕೆ ನಿರ್ದೇಶಕನ ವ್ಯೂಹವೇ ಭಾರ' - ಕನ್ನಡ ಪ್ರಭ
"ತಮಿಳು ನಿರ್ದೇಶಕ ಎಮ್ ಸರವಣನ್ ಹೇಳಿರುವ ಕಥೆ ಹೊಸದೇನೂ ಅಲ್ಲ. ನಿತ್ಯ ನೂರಾರು ಮಂದಿ ಓಡಾಡುವ ರಸ್ತೆಯಲ್ಲಿ ದೊಡ್ಡ ಗುಂಡಿ ಇದೆ. ಎಲ್ಲರೂ ಅದನ್ನು ನೋಡಿ ರಾಜಕಾರಣಿಗಳನ್ನು, ಸರ್ಕಾರವನ್ನು ಶಪಿಸುತ್ತಾ ಮುಂದೆ ಹೋಗುತ್ತಾರೆ ಹೊರತು, ಗುಂಡಿ ಮುಚ್ಚುವ ಕೆಲಸ ಮಾತ್ರ ಮಾಡಲ್ಲ. ಆ ಎಲ್ಲರೊಳಗೇ ಇರುವ ಒಬ್ಬ ಮಾತ್ರ ಗುಂಡಿ ಮುಚ್ಚುವ ಸಾಹಸಕ್ಕೆ ಮುಂದಾಗುತ್ತಾನೆ. ಆದರೆ, ಅಂಥ ಗುಂಡಿಗಳು ಒಂದಲ್ಲ ಎರಡಲ್ಲ ರಸ್ತೆ ಉದ್ದಕ್ಕೂ ಇದೆ. ಈಗ ಆತ ಏನು ಮಾಡಬೇಕು ಎನ್ನುವ ಪ್ರಶ್ನೆ ಹಾಕಿಕೊಂಡರೆ 'ಚಕ್ರವ್ಯೂಹ'ದ ಕತೆ ಮತ್ತು ಅಲ್ಲಿನ ಹೀರೋ ಅಂತ ಗೊತ್ತಾಗುತ್ತದೆ". -ಆರ್ ಕೇಶವಮೂರ್ತಿ.

'ಹೊಡೆದಾಟ ಒಂದು ಕೈ ಮೇಲೆ, ಎಲ್ಲವೂ ಮೈಂಡ್ ಗೇಮ್ ಲೀಲೆ'-ಉದಯವಾಣಿ
"'ಚಕ್ರವ್ಯೂಹ' ಒಂದು ಮೈಂಡ್ ಗೇಮ್ ನ ಚಿತ್ರ. ಇಲ್ಲಿ ಪ್ರಮುಖವಾಗಿ ಎರಡು ಪಾತ್ರಗಳಿವೆ. ನಾಯಕನಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ವಿಲನ್ ಗೂ ಅಷ್ಟೇ ಪ್ರಾಧಾನ್ಯತೆ ಇದೆ. ಇಡೀ ಚಿತ್ರ ಅವೆರಡು ಪಾತ್ರಗಳ ಸುತ್ತ ಸುತ್ತುತ್ತದೆ. ಮೊದಲಾರ್ಧ ಹೀರೋ, ವಿಲನ್ ಗೆ ಹೇಗೆಲ್ಲಾ ಆಟವಾಡಿಸುತ್ತಾನೋ, ದ್ವಿತೀಯಾರ್ಧದಲ್ಲಿ ವಿಲನ್ ಅದೇ ತರಹ ಹೀರೋ ಹಿಂದೆ ಬೀಳುತ್ತಾನೆ. ಹೀಗೆ ಇಬ್ಬರೂ ಮೇಲುಗೈ ಸಾಧಿಸುವುದಕ್ಕೆ ಏನೆಲ್ಲಾ ತಂತ್ರಗಳನ್ನು ಹೂಡುತ್ತಾರೆ ಮತ್ತು ಅದಕ್ಕೆ ಪ್ರತಿ ತಂತ್ರಗಳು ಯಾವ ರೀತಿ ಇರುತ್ತದೆ, ಎಂಬುದೇ ಚಿತ್ರದ ಕಥೆ".