twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಪಾರ್ವತಮ್ಮನ 'ರೆಬೆಲ್' ಮಗಳು

    |

    ಸಿಐಡಿ ಆಫೀಸರ್ ವೈದೇಹಿ. ಯಾವುದೇ ಪ್ರಕರಣ ಆದ್ರೂ ಕೂಲ್ ಆಗಿ ಡೀಲ್ ಮಾಡೋ ರೆಬೆಲ್ ಅಧಿಕಾರಿ. ಒಂದು ಕೊಲೆ, ಅದರ ಸುತ್ತ ಹಲವು ಅನುಮಾನ. ಕ್ರಿಮಿನಲ್ ನಿರ್ಮಿಸಿಕೊಂಡಿದ್ದ ಚಕ್ರವ್ಯೂಹ ಭೇದಿಸಿ ಅದು ಕೊಲೆನಾ ಅಥವಾ ಆತ್ಮಹತ್ಯೆನಾ ಎಂದು ಇತಿಶ್ರೀ ಹಾಡುವ ಲೇಡಿ ಸಿಂಗಂ ಕಥೆ ಡಾಟರ್ ಆಫ್ ಪಾರ್ವತಮ್ಮ.

    Rating:
    3.0/5
    Star Cast: ಹರಿಪ್ರಿಯಾ, ಸುಮಲತಾ, ಸೂರಜ್ ಗೌಡ, ಪ್ರಭು, ತರಂಗ ವಿಶ್ವ
    Director: ಶಂಕರ್ ಜೆ

    ಹರಿಪ್ರಿಯಾ ಇಷ್ಟ ಆಗ್ತಾರೆ

    ಹರಿಪ್ರಿಯಾ ಇಷ್ಟ ಆಗ್ತಾರೆ

    ಡಾಟರ್ ಆಫ್ ಪಾರ್ವತಮ್ಮ ಸಿನಿಮಾದಲ್ಲಿ ಹರಿಪ್ರಿಯಾ ಇಷ್ಟ ಆಗ್ತಾರೆ. ಇಷ್ಟು ದಿನ ಪಕ್ಕದ ಮನೆ ಹುಡುಗಿ ಪಾತ್ರದಲ್ಲಿ ಮಿಂಚಿದ್ದ ಹರಿಪ್ರಿಯಾ ಮೊದಲ ಸಲ ರೆಬೆಲ್ ಆಗಿ, ಸಿಐಡಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಗೆಟಪ್, ಆ ರೆಬಲ್ ವ್ಯಕ್ತಿತ್ವ, ಆ ಬಿಲ್ಡಪ್, ಆ ಆಕ್ಷನ್ ಎಲ್ಲವೂ ಹರಿಪ್ರಿಯಾಗೆ ಹೊಸ ಜೋಶ್ ನೀಡಿದೆ. ಈ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಂದ್ಹಾಗೆ, ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ ಹರಿಪ್ರಿಯಾ ಈ ಚಿತ್ರಕ್ಕೆ ಒನ್ ವುಮನ್ ಆರ್ಮಿ.

    'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾದ ಮೊದಲ ಹಾಡು ಕೇಳಿ'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾದ ಮೊದಲ ಹಾಡು ಕೇಳಿ

    ಕ್ರೈಂ-ಸಸ್ಪೆನ್ಸ್-ಥ್ರಿಲ್-ಟ್ವಿಸ್ಟ್

    ಕ್ರೈಂ-ಸಸ್ಪೆನ್ಸ್-ಥ್ರಿಲ್-ಟ್ವಿಸ್ಟ್

    ಈ ಸಿನಿಮಾದಲ್ಲಿರುವ ಪ್ರಮುಖ ಅಂಶಗಳು ಕ್ರೈಂ, ಸಸ್ಪೆನ್ಸ್, ಥ್ರಿಲ್, ಟ್ವಿಸ್ಟ್. ಇದನ್ನ ಬಿಟ್ಟರೇ ಉಳಿದವೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸಿನಿಮಾದ ಕ್ಲೈಮ್ಯಾಕ್ಸ್ ವರೆಗೂ ಆ ಕುತೂಹಲವನ್ನ ಉಳಿಸಿಕೊಳ್ಳುವ ಉದ್ದೇಶದಿಂದ ಚಿತ್ರಕಥೆ ಮಾಡಲಾಗಿದೆ. ಆಗಾಗ ಫ್ಯಾಮಿಲಿ ಎಮೋಷನ್ ತೋರಿಸಿ ಪ್ರೇಕ್ಷಕರ ಮೈಂಡ್ ಸ್ಬಲ್ಪ ಡೈವರ್ಟ್ ಆಗುತ್ತೆ. ಇಂತಹ ಕಥೆಯಲ್ಲಿ ಫ್ಯಾಮಿಲಿ ಕಾನ್ಸಪ್ಟ್ ಬೇಕಾಗಿರಲಿಲ್ಲ. ಆದರೂ ಅಲ್ಲೊಂದು ಟ್ವಿಸ್ಟ್ ಇಡಬಹುದಿತ್ತು. ಇದರ ಬಗ್ಗೆ ನಿರ್ದೇಶಕರು ಜಾಗೃತಿವಹಿಸಬಹುದಿತ್ತು.

    ಮಗಳು ರೆಬೆಲ್, ಅಮ್ಮ ಕೂಲ್

    ಮಗಳು ರೆಬೆಲ್, ಅಮ್ಮ ಕೂಲ್

    ಡಾಟರ್ ಆಫ್ ಪಾರ್ವತಮ್ಮ ಎಂದು ಹೆಸರಿಡಲಾಗಿದೆ. ಆದರೆ ಪಾರ್ವತಮ್ಮ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇಲ್ಲ. ಮನೆ ಮಗಳ ಬಗ್ಗೆ ಕಾಳಜಿ ವಹಿಸುವಂತಹ ಮಹಿಳೆ ಪಾತ್ರದಲ್ಲಿ ಸುಮಲತಾ ಅಭಿನಯಿಸಿದ್ದಾರೆ. ಇಲ್ಲಿ ಮಗಳಿಗೆ ಹೆಚ್ಚು ಕೆಲಸವಿರುವುದರಿಂದ ಒಬ್ಬ ತಾಯಿಯಾಗಿ ಪಾತ್ರ ಚೆನ್ನಾಗಿ ನಿಭಾಯಿಸಿದ್ದಾರೆ. ಬಟ್, ಸಿನಿಮಾದ ಹೆಸರಲ್ಲಿ ಅಮ್ಮನ ಹೆಸರು ಇರುವುದರಿಂದ ಇನ್ನು ಪರಿಣಾಮಕಾರಿಯಾಗಿ ಬಳಸಬಹುದಿತ್ತು.

    ಒಬ್ಬ ನಾಯಕಿ ಶೋ ಇದು

    ಒಬ್ಬ ನಾಯಕಿ ಶೋ ಇದು

    ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ ಸೂರಜ್ ಗೌಡ ಮತ್ತು ಪ್ರಭು ಪಾತ್ರಗಳಿಗೂ ಚಿತ್ರದಲ್ಲಿ ಅಷ್ಟಾಗಿ ಪ್ರಾಮುಖ್ಯತೆ ಇಲ್ಲ. ಹಾಸ್ಯಕ್ಕಾಗಿ ತರಂಗ ವಿಶ್ವ ಇದ್ದಾರೆ. ಅಲ್ಲೊಮ್ಮೆ ಇಲ್ಲೊಮ್ಮೆ ನಗಿಸುವ ಪ್ರಯತ್ನ ಮಾಡ್ತಾರೆ. ಹರಿಪ್ರಿಯಾ ಅವರ ಜೊತೆ ಇಡೀ ಸಿನಿಮಾ ಇವರನ್ನ ನೋಡೋದು ಒಂದು ಖುಷಿ ಅಷ್ಟೇ. ಟಗರು ಖ್ಯಾತಿಯ ಕಾಕ್ರೋಚ್ ಒಂದು ದೃಶ್ಯಕ್ಕೆ ಸೀಮಿತ. ಅದಕ್ಕೆ ಹೇಳಿದ್ದು ಇದು ಹರಿಪ್ರಿಯಾ ಅವರ ಒನ್ ವುಮನ್ ಶೋ.

    ಟೆಕ್ನಿಕಲಿ ಸಿನಿಮಾ ಹೇಗಿದೆ?

    ಟೆಕ್ನಿಕಲಿ ಸಿನಿಮಾ ಹೇಗಿದೆ?

    ಚಿತ್ರದಲ್ಲಿ ಇರೋದು ಎರಡು ಹಾಡು. ಸಂದರ್ಭಕ್ಕೆ ಈ ಹಾಡುಗಳು ಬರುವುದರಿಂದ ಪೂರಕವಾಗಿದೆ. ಮಿಧುನ್ ಮುಕುಂದನ್ ಅವರ ಹಿನ್ನೆಲೆ ಸಂಗೀತವೂ ಚೆನ್ನಾಗಿದೆ. ಅರುಳ್ ಕೆ ಸೋಮಸುಂದರನ್ ಛಾಯಾಗ್ರಹಣವೂ ಓಕೆ. ನಿರ್ದೇಶನದಲ್ಲಿ ಲೋಪ ಕಾಣಿಸಲ್ಲ. ಆದರೆ ಕಥೆ, ಚಿತ್ರಕಥೆ, ಸಂಭಾಷಣೆ ಅವರೇ ಮಾಡಿರುವುದರಿಂದ ಸ್ಕ್ರಿಪ್ಟ್ ಸ್ವಲ್ಪ ಗಟ್ಟಿಯಾಗಿ ಮಾಡಬಹುದಿತ್ತು.

    ಕೊನೆಯ ಮಾತು ಏನು ಗೊತ್ತಾ?

    ಕೊನೆಯ ಮಾತು ಏನು ಗೊತ್ತಾ?

    ಹರಿಪ್ರಿಯಾ ಆಕ್ಷನ್ ಇದೆ. ಫ್ಯಾಮಿಲಿ ಸೆಂಟಿಮೆಂಟ್ ಇದೆ. ಸಣ್ಣ ಸಣ್ಣದಾಗಿ ಎರಡು ಲವ್ ಸ್ಟೋರಿ ಇದೆ. ಹರಿಪ್ರಿಯಾ ಹೊಸ ಜಾನರ್ ಎಂದು ನೋಡಬಹುದು. ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ, ಎಲ್ಲವನ್ನ ಸರಿದೂಗಿಸಿ ಉತ್ತಮವಾಗಿ ಪ್ರೆಸೆಂಟ್ ಮಾಡಿದ್ದಾರೆ.

    English summary
    Kannada actress haripriya and sumalatha starrer D/O Parvathamma movie has released today (may24th). the movie directed by shankar j.
    Friday, May 24, 2019, 15:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X