twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ : ಸಾಮಾನ್ಯ ಹುಡುಗನ ಅಸಾಮಾನ್ಯ ಸಾಹಸ

    |

    'ಧೈರ್ಯಂ ಸರ್ವತ್ರ ಸಾಧನಂ' ಎನ್ನುವ ಒಂದು ಸಾಲಿನ ಮೇಲೆ 'ದೈರ್ಯಂ' ಚಿತ್ರದ ಇಡೀ ಕಥೆ ಹೆಣೆಯಲಾಗಿದೆ. ಒಬ್ಬ ಸಾಮಾನ್ಯ ಮಿಡಲ್ ಕ್ಲಾಸ್ ಮನೆಯ ಹುಡುಗನ ಜೀವನವನ್ನು ಇಲ್ಲಿ ತೋರಿಸಿದ್ದಾರೆ. ದುಡ್ಡಿನ ಹಿಂದೆ ಮನುಷ್ಯ ಹೋದರೆ ಏನೆಲ್ಲಾ ಆಗುತ್ತದೆ ಹಾಗೂ ಧೈರ್ಯ ಒಂದು ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಕಮರ್ಷಿಯಲ್ ಆಗಿ ಹೇಳಿದ್ದಾರೆ.

    Rating:
    3.5/5
    Star Cast: ಅಜಯ್ ರಾವ್, ಅಧಿತಿ, ರವಿಶಂಕರ್, ಸಾಧು ಕೋಕಿಲ
    Director: ಶಿವ ತೇಜಸ್

    ಮನೆ ಮನೆ ಕಥೆ

    ಮನೆ ಮನೆ ಕಥೆ

    'ಧೈರ್ಯಂ' ಚಿತ್ರದ ಕಥೆ ಒಬ್ಬ ಮಿಡಲ್ ಕ್ಲಾಸ್ ಹುಡುಗನ ಜೀವನ ಮೇಲೆ ಇದೆ. ಕಾಲೇಜು ಹುಡುಗನಾಗಿರುವ ಅಜಯ್ ಕೃಷ್ಣ (ಅಜಯ್ ರಾವ್) ಓದಿ ಒಂದು ಕೆಲಸ ಸಿಕ್ಕರೆ ಸಾಕು ಅಂತ ಇರುತ್ತಾನೆ. ಕುಟುಂಬ ಸಮಸ್ಯೆ ಒಂದು ಕಡೆ ಆದರೆ ಇನ್ನೊಂದು ಕಡೆ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವ ಹಂಬಲ. ಹೀಗಿರುವಾಗ Rank ಸ್ಟೂಡೆಂಟ್ ಆಗಿರುವ ಈ ಹುಡುಗನ ಜೀವನದಲ್ಲಿ ಇದಕ್ಕಿದ್ದಂತೆ ಒಂದು ದೊಡ್ಡ ತಿರುವು ಸಿಗುತ್ತದೆ. ಅದರಿಂದ ಅವನು ಜೈಲಿಗೆ ಹೋಗ ಬೇಕಾಗುತ್ತದೆ. ನಂತರ ಆ ಹುಡುಗನ ಪರಿಸ್ಥಿತಿ ಏನಾಯ್ತು..? ಯಾಕೆ ಒಬ್ಬ ಒಳ್ಳೆ ವಿದ್ಯಾರ್ಥಿ ಜೈಲು ಪಾಲಾದ..? ಎನ್ನುವುದೇ ಚಿತ್ರದ ಕಥಾಹಂದರ.

    ನಾಯಕ - ನಾಯಕಿ

    ನಾಯಕ - ನಾಯಕಿ

    ಮಿಡಲ್ ಕ್ಲಾಸ್ ಹುಡುಗನಾಗಿ ಅಜಯ್ ಸಹಜವಾಗಿ ನಟಿಸಿದ್ದಾರೆ. ಆಕ್ಷನ್ ಲುಕ್ ಕೂಡ ಅವರಿಗೆ ಹೊಂದಾಣಿಕೆ ಆಗಿದೆ. ಸಾಹಸ ದೃಶ್ಯಗಳಲ್ಲಿ ಅಜಯ್ ಚೆನ್ನಾಗಿ ನಟಿಸಿದ್ದಾರೆ. ಪರಿಮಳ ಪಾತ್ರದಲ್ಲಿ ನಟಿಸಿರುವ ನವ ನಟಿ ಅಧಿತಿ ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆಯುತ್ತಾರೆ. ಹೀರೋಯಿನ್ ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿದೆ. ಆದರೆ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ನಾಯಕಿ ಎರಡು ಮೂರು ದೃಶ್ಯದಲ್ಲಿ ಮಾತ್ರ ಬಂದು ಹೋಗುತ್ತಾರೆ ಅಷ್ಟೆ.

    ಜುಗಲ್ ಬಂದಿ

    ಜುಗಲ್ ಬಂದಿ

    ಸೆಕೆಂಡ್ ಹಾಫ್ ನಲ್ಲಿ ಸಿನಿಮಾ ತಿರುವು ಪಡೆದುಕೊಳ್ಳುತ್ತದೆ. ಇಡೀ ಚಿತ್ರದ ಹೈಲೈಟ್ ಅಂದರೆ ಅಜಯ್ ಕೃಷ್ಣ (ಅಜಯ್ ರಾವ್) ಮತ್ತು ಅಶೋಕ್ ಕಶ್ಯಪ್ (ರವಿಶಂಕರ್) ಜುಗಲ್ ಬಂದಿ. ಈ ಇಬ್ಬರ ಕಾಂಬಿನೇಶನ್ ನಲ್ಲಿ ಚಿತ್ರದ ಕಥೆಗೆ ಅನೇಕ ಟ್ವಿಸ್ಟ್ ಸಿಗುತ್ತದೆ. ಪೊಲೀಸ್ ಅಧಿಕಾರಿಯಾಗಿರುವ ರವಿಶಂಕರ್ ನಾಯಕನಿಗೆ ಪೈಪೋಟಿ ನೀಡುವಂತೆ ನಟಿಸಿದ್ದಾರೆ.

    ಪ್ಲಸ್ ಪಾಯಿಂಟ್

    ಪ್ಲಸ್ ಪಾಯಿಂಟ್

    ಸಿನಿಮಾದ ಪ್ಲಸ್ ಪಾಯಿಂಟ್ ಅಂದರೆ ಕಥೆ. ಚಿತ್ರದ ಕಥೆ ಸಾಮಾನ್ಯ ಪ್ರೇಕ್ಷಕರಿಗೆ ಹತ್ತಿರವಾಗಿದೆ. ಪ್ರತಿ ಕುಟುಂಬದಲ್ಲಿ ಇರುವ ಕಷ್ಟ, ಅಸಹಾಯಕತೆಯನ್ನು ನಿರ್ದೇಶಕ ಶಿವ ತೇಜಸ್ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಜೊತೆಗೆ ಮೇಕಿಂಗ್ ಮತ್ತು ಡೈಲಾಗ್ ಚಿತ್ರದ ಶಕ್ತಿಯನ್ನು ಹೆಚ್ಚಿಸಿವೆ.

    ಉಳಿದಂತೆ

    ಉಳಿದಂತೆ

    ನಾಯಕನ ತಂದೆ ತಾಯಿ ಪಾತ್ರಗಳು ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಪೋಷಕ ಪಾತ್ರಗಳು ಇಷ್ಟ ಆಗುತ್ತದೆ. ಶೇಖರ್ ಚಂದ್ರ ಅವರ ಕ್ಯಾಮರಾ ಕೆಲಸ, ನಂದೀಶ್ ಅವರ ಡೈಲಾಗ್ ಸೂಪರ್ ಆಗಿವೆ.

    ಮನರಂಜನೆಗೆ ಮೋಸ

    ಮನರಂಜನೆಗೆ ಮೋಸ

    'ಧೈರ್ಯಂ' ಸಿನಿಮಾನ ಒಂದು ಬಾರಿ ಆರಾಮಾಗಿ ನೋಡಬಹುದು. ಸಿನಿಮಾದಲ್ಲಿ ಮನರಂಜನೆಗೆ ಮೋಸ ಇಲ್ಲ. 'ಧೈರ್ಯಂ' ಸಾಮಾನ್ಯ ಹುಡುಗನ ಅಸಾಮಾನ್ಯ ಸಾಹಸ. ಮಿಡಲ್ ಕ್ಲಾಸ್ ಜನರ ಮನೆ-ಮನೆ ಕಥೆ ಇಷ್ಟ ಆಗುತ್ತದೆ.

    English summary
    Ajay Rao starrer Kannada Movie 'Dhairyam' has hit the screens today (July 21th). The movie is out and out Commercial Entertainer. 'Dhairyam' Review is here.
    Saturday, September 29, 2018, 14:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X