ಚಿತ್ರ ವಿಮರ್ಶೆ: 'ಡಿಕೆ' ಪ್ರೇಮ್ ಪ್ರಯತ್ನ ಓಕೆ ಆದರೆ

ಈ ಚಿತ್ರದ ಒಂದು ಸನ್ನಿವೇಶದಲ್ಲಿ ನಾಯಕಿ ಚೈತ್ರಾ ಚಂದ್ರನಾಥ್ ರಾ ವಿಸ್ಕಿಯನ್ನು ಗಟಗಟ ಎಂದು ಒಂದೇ ಉಸಿರಿಗೆ ಕುಡಿಯುತ್ತಾಳೆ. ಬಹುಶಃ ಈ ವಿಚಾರಕ್ಕಾಗಿಯಾದರೂ ಇದನ್ನು 'ರಾ' ಲವ್ ಸ್ಟೋರಿ ಎಂದು ಭಾವಿಸಲೂ ಬಹುದು. ಅಷ್ಟರಮಟ್ಟಿಗೆ 'ಶೋ ಮ್ಯಾನ್' ಪ್ರೇಮ್ ಯಶಸ್ವಿಯಾಗಿದ್ದಾರೆ.

ಕಾಮಿಡಿ, ರೊಮ್ಯಾನ್ಸ್, ಟ್ವಿಸ್ಟ್, ಫೈಟು, ಸಸ್ಪನ್ಸ್ ಹೀಗೆ ಎಲ್ಲಾ ಮಸಾಲೆಗಳು ಚಿತ್ರದಲ್ಲಿವೆ. ಆದರೆ ಯಾವುದೂ ಅಂದುಕೊಂಡಷ್ಟು ಪರಿಣಾಮಕಾರಿಯಾಗಿ ಮೂಡಿಬರದೆ ಇರುವುದು 'ಡಿಕೆ' ಚಿತ್ರದ ವೈಫಲ್ಯಗಳಲ್ಲಿ ಒಂದು. ರಾಜಕೀಯ ವಿಡಂಬನಾತ್ಮಕ ಚಿತ್ರವೊಂದಕ್ಕೆ ಇರಬೇಕಾದಂತಹ ಚೌಕಟ್ಟುಗಳಾಗಲಿ, ಕಟ್ಟುಪಾಡುಗಳಾಗಲಿ ಈ ಚಿತ್ರದಲ್ಲಿ ಎಲ್ಲೂ ಕಾಣಲ್ಲ.

ಇಷ್ಟಕ್ಕೂ 'ಡಿಕೆ' ಅಂದ್ರೆ ಅಂತಹ ವಿಶೇಷವೇನು ಇಲ್ಲ. ಹಳ್ಳಿಯೊಂದರ ತರ್ಲೆ ಹೈದ ಡಿ ಕುಮಾರನ ಶಾರ್ಟ್ ಹೆಸರೇ 'ಡಿಕೆ'. ಈ ಡಿಕೆಗೂ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಕಥೆಗೂ ಒಂಚೂರು ಲಿಂಕ್ ಇರುವ ಕಥೆಯನ್ನು ಹೆಣೆದಿದ್ದಾರೆ ಚಿತ್ರದ ನಿರ್ದೇಶಕ ವಿಜಯ್ ಹಂಪಳಿ.

Rating:
2.5/5
Star Cast: ಪ್ರೇಮ್, ಸನ್ನಿ ಲಿಯೋನ್, ಶೋಭರಾಜ್
Director: ಪ್ರೇಮ್

ಡಿಕೆಗೂ ಡಿಕೆಶಿಗೂ ಲಿಂಕ್ ಇರುವ ಕಥೆಯೇ?

ಡಿಕೆಗೂ ಡಿಕೆಶಿಗೂ ಲಿಂಕ್ ಇರುವ ಕಥೆಯೇ?

ಈ ಚಿತ್ರವನ್ನು ನೋಡಿದ ಮೇಲೆ ಕೊನೆಗೂ ತಲೆಯಲ್ಲಿ ಒಂದು ಸಣ್ಣ ಸಂದೇಹ ಕಾಯಿ ಕೊರಕ ಹುಳುವಿನಂತೆ ಕೊರೆಯಲು ಶುರುವಾಗುತ್ತದೆ. ಮಾಜಿ ಬಿಜೆಪಿ ಸಂಸದೆ ತೇಜಸ್ವಿನಿ ಶ್ರೀರಮೇಶ್ ಹಾಗೂ ಡಿಕೆ ಶಿವಕುಮಾರ್ ಅವರದೇ ಕಥೆ ಇರಬರಹುದೇ ಎಂಬ ಅನುಮಾನ ಮೂಡುತ್ತದೆ.

ಡಿಕೆಶಿಗೆ ಸಾಕಷ್ಟು ಸಾಮ್ಯತೆಗಳಿವೆ

ಡಿಕೆಶಿಗೆ ಸಾಕಷ್ಟು ಸಾಮ್ಯತೆಗಳಿವೆ

ಈ ಚಿತ್ರದ ಸನ್ನಿವೇಶಗಳು, ಪಾತ್ರಗಳು ಯಾರನ್ನೂ ಉದ್ದೇಶಿಸಿದ್ದಲ್ಲ, ಅವೆಲ್ಲವೂ ಕೇವಲ ಕಾಲ್ಪನಿಕ ಎಂದು ಪ್ರೇಕ್ಷಕರು ತಮ್ಮಷ್ಟಕ್ಕೆ ತಾವು ಹೇಳಿಕೊಂಡರೂ ಡಿಕೆ ಮತ್ತು ಡಿಕೆಶಿ ಕಥೆಗೆ ಸಾಕಷ್ಟು ಸಾಮ್ಯತೆಗಳು ಕಾಣುತ್ತವೆ.

ಕುಡಲಿ ಶಾಸ್ತ್ರಿಯಾಗಿ ಋಷಿಕುಮಾರ

ಕುಡಲಿ ಶಾಸ್ತ್ರಿಯಾಗಿ ಋಷಿಕುಮಾರ

ಹೆಣ್ಣುಮಗುವಾದರೆ ಅದೃಷ್ಟ ಲಕ್ಷ್ಮಿ ಮನೆಗೆ ಬಂದಂತೆ ಎಂದು ಕುಂಡಲಿ ಶಾಸ್ತ್ರಿ (ಋಷಿಕುಮಾರ ಸ್ವಾಮಿಜಿ) ಹೇಳಿದ ಮಾತನ್ನು ನಂಬಿದ ಶಿವೇಗೌಡ (ಶರತ್ ಲೋಹಿತಾಶ್ವ) ಮೂರು ಗಂಡು ಮಕ್ಕಳ ಬಳಿಕ ಒಂದು ಹೆಣ್ಣು ಮಗು ತಂದೆಯಾಗುತ್ತಾನೆ. ಮನೆಗೆ ಮಹಾಲಕ್ಷ್ಮಿ ಸುಬ್ಬುಲಕ್ಷ್ಮಿ (ಚೈತಾ ಚಂದ್ರನಾಥ್) ಬಂದ ಮೇಲೆ ಅವರ ಅದೃಷ್ಟವೂ ಕುಲಾಯಿಸುತ್ತದೆ.

ಬೀಡಿ ಕುಮಾರನಾಗಿ ಶೋಭರಾಜ್

ಬೀಡಿ ಕುಮಾರನಾಗಿ ಶೋಭರಾಜ್

ಆದರೆ ಅದೇ ಊರಿನ 'ಡಿಕೆ' ಮತ್ತೊಬ್ಬ ಸ್ವಾಮೀಜಿ ಬೀಡಿ ಕುಮಾರ (ಶೋಭರಾಜ್) ಜೊತೆ ಕೈಜೋಡಿಸಿ ಶಿವೇಗೌಡನ ವಿರುದ್ಧ ಚುನಾವಣೆಗೆ ಸ್ಪರ್ಧಿಸುವಂತಾಗುತ್ತದೆ. ಈ ಗ್ಯಾಪಲ್ಲಿ ಎಣ್ಣೆ ಸೀಗೆಕಾಯಿಯಂತಿದ್ದ ಸುಬ್ಬುಲಕ್ಷ್ಮಿಗೂ ಡಿಕೆಗೂ ಲವ್ ಆಗುತ್ತದೆ. ಗುಟ್ಟಾಗಿ ಮದುವೆಯೂ ಆಗುತ್ತದೆ.

ಹೊಟ್ಟೆ ಬರಿಸಿ ಕೈಯೆತ್ತುವ 'ಡಿಕೆ' ಸಾಹೇಬ

ಹೊಟ್ಟೆ ಬರಿಸಿ ಕೈಯೆತ್ತುವ 'ಡಿಕೆ' ಸಾಹೇಬ

ಮುಂದೇನಾಗುತ್ತದೆ ಎಂದರೆ ಸುಬ್ಬುಲಕ್ಷ್ಮಿಗೆ ಮೂರು ತಿಂಗಳೂ ಆಗುತ್ತದೆ. ಆದರೆ 'ಡಿಕೆ' ಅದಕ್ಕೂ ತನಗೂ ಸಂಬಂಧವಿಲ್ಲ ಎಂದು ಕೈ ಎತ್ತುತ್ತಾನೆ. ಮುಂದೆ ಜ್ಞಾನೋದಯವಾಗಿ ಅವಳೇ ನನ್ನ ಹೆಂಡ್ತಿ ಎನ್ನುತ್ತಾನೆ. ಕೊನೆಗೆ ಅಪ್ಪನ ವಿರುದ್ಧವೇ ಮಗಳನ್ನು ಚುನಾವಣೆಗೆ ನಿಲ್ಲಿಸುತ್ತಾನೆ. ಮುಂದೇನಾಗುತ್ತದೆ ಎಂಬುದನ್ನು ಸಾಧ್ಯವಾದರೆ ಥಿಯೇಟರ್ ನಲ್ಲಿ ನೋಡಿ.

ಚೈತ್ರಾ ಚಂದ್ರನಾಥ್ ಗಮನಾರ್ಹ ಅಭಿನಯ

ಚೈತ್ರಾ ಚಂದ್ರನಾಥ್ ಗಮನಾರ್ಹ ಅಭಿನಯ

ಇದಿಷ್ಟು ಕಥೆಯನ್ನು ಹಾಸ್ಯದ ಧಾಟಿಯಲ್ಲಿ ನಿರ್ದೇಶಕರು ಹೇಳಲು ಹೊರಟಿದ್ದಾರೆ. ಆದರೆ ಅವರ ಹಾಸ್ಯ ಹಾಸ್ಯಸ್ಪದವಾಗಿದೆ. ಪ್ರೇಮ್ ಅವರಿಗೆ ಹೋಲಿಸಿದರೆ ಚಿತ್ರದ ನಾಯಕಿ ಚೈತ್ರಾ ಅವರ ಪಾತ್ರವೇ ಗಮನಾರ್ಹವಾಗಿ ಮೂಡಿಬಂದಿದೆ.

ಸಂಪತ್ತಿಗೆ ಸವಾಲ್ ಚಿತ್ರದ ಮಂಜುಳಾ ಇದ್ದಂತೆ

ಸಂಪತ್ತಿಗೆ ಸವಾಲ್ ಚಿತ್ರದ ಮಂಜುಳಾ ಇದ್ದಂತೆ

ತಾನು 'ಸಂಪತ್ತಿಗೆ ಸವಾಲ್' ಚಿತ್ರದ ಮಂಜುಳಾ ಇದ್ದಂತೆ ಎಂದು ಹೇಳಿದರೂ ಗಂಡುಬೀರಿಯಾಗಿ ಗಮನಸೆಳೆಯುತ್ತಾರೆ. ಇನ್ನು ಶರತ್ ಲೋಹಿತಾಶ್ವ ಹಾಗೂ ಶೋಭರಾಜ್ ಅವರದು ಅತ್ತ ಗಂಭೀರವೂ ಅಲ್ಲದ ಇತ್ತ ಹಾಸ್ಯವೂ ಅಲ್ಲದ ಪಾತ್ರ.

ಸನ್ನಿ ಲಿಯೋನ್ ಐಟಂ ಹಾಡು ಓಕೆ

ಸನ್ನಿ ಲಿಯೋನ್ ಐಟಂ ಹಾಡು ಓಕೆ

ಇನ್ನು ಕುಂಡಲಿ ಶಾಸ್ತ್ರಿಯಾಗಿ ಋಷಿಕುಮಾರ್ ಅವರದು ಅಂತಹ ವಿಶೇಷವೇನು ಇಲ್ಲ. ಸನ್ನಿ ಲಿಯೋನ್ ಅವರ ಐಟಂ ಹಾಡು "ಬಾಗಿಲು ತೆಗೆಯೇ ಸೇಸಮ್ಮ..." ಸುಮಾರಾಗಿದೆ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಅಂತಹ ಮನತಟ್ಟುವ ಹಾಡುಗಳೇನು ಮೂಡಿಬಂದಿಲ್ಲ.

ಧ್ವನಿ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ

ಧ್ವನಿ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ

ಈ ಚಿತ್ರವನ್ನು ಅತ್ಯಾಧುನಿಕ 7.1 ಧ್ವನಿ ತಂತ್ರಜ್ಞಾನದಲ್ಲಿ ಹೊರತಂದಿದ್ದರೂ ನಾವು ನೋಡಿದ ಮೇನಕಾ ಚಿತ್ರಮಂದಿರದ ಧ್ವನಿ ವ್ಯವಸ್ಥೆ ತೀರಾ ಕಳಪೆಯಾಗಿದ್ದು, ಹೊಸ ತಂತ್ರಜ್ಞಾನ ಅಂತಹ ಪರಿಣಾಮಕಾರಿಯಾಗೇನು ಇಲ್ಲ.

ಇದೇ ನನ್ನ ಉತ್ತರ ಎನ್ನುವ ಡಿಕೆ

ಇದೇ ನನ್ನ ಉತ್ತರ ಎನ್ನುವ ಡಿಕೆ

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳಿರುತ್ತಾಳೆ ಹಾಗೆಯೇ ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ ಪುರುಷನೊಬ್ಬ ಇರುತ್ತಾನೆ ಎಂಬುದು ಡಿಕೆ ಚಿತ್ರದ ಸಂದೇಶ. ಈ ಸಂದೇಶವನ್ನು ತಿಳಿದುಕೊಳ್ಳಬೇಕೆಂಬ ಆಸೆ ಇದ್ದರೆ ಡಿಕೆ ಚಿತ್ರ ನೋಡಬಹುದು.

More from Filmibeat

English summary
Kannada movie DK review. The film directed by Vijay Hampali. The political Satirical film disappoints the audience. The film produced by actress Rakshita, the film stars Prem and Chaitra Chandranath in the lead roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X