twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: 'ಡಬ್ಬಲ್' ಮನರಂಜನೆ ನೀಡುವ 'ಇಂಜಿನ್'

    By Bk
    |

    'ಡಬಲ್ ಮೀನಿಂ'ಗ್ ಡೈಲಾಗ್ ಗಳು, ಪಕ್ಕಾ ಯುವಕರಿಗಾಗಿಯೇ ಮಾಡಿರುವ ಕಾಮಿಡಿ, ಯುವ ರಸಿಕರು ನೋಡಲೇಬೇಕಾದ ಸಿನಿಮಾ 'ಡಬ್ಬಲ್ ಇಂಜಿನ್'. ಪೂರ್ತಿ ವಿಮರ್ಶೆ ಮುಂದೆ ಓದಿ....

    Rating:
    3.5/5

    ಚಿತ್ರ: ಡಬ್ಬಲ್ ಇಂಜಿನ್
    ನಿರ್ದೇಶನ: ಚಂದ್ರಮೋಹನ್
    ಸಂಗೀತ: ವೀರ್ ಸಮರ್ಥ್
    ಕಲಾವಿದರು: ಚಿಕ್ಕಣ್ಣ, ಅಶೋಕ್, ಪ್ರಭು, ಸುಮನ್ ರಂಗನಾಥ್ ಮತ್ತಿತರು
    ಬಿಡುಗಡೆ: ಜುಲೈ 13

    'ಬಾಂಬೆ ಮಿಠಾಯಿ' ಸಿನಿಮಾ ಮಾಡಿ ಯಶಸ್ಸು ಕಂಡಿದ್ದ ನಿರ್ದೇಶಕ ಚಂದ್ರಮೋಹನ್ ನಿರ್ದೇಶನದ 'ಡಬ್ಬಲ್ ಇಂಜಿನ್' ಸಿನಿಮಾ ಈ ವಾರ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಈ ಸಿನಿಮಾ ಯುವಕರಿಗೆ ಫುಲ್ ಎಂಟರ್ ಟೈನ್ಮೆಂಟ್ ಎನ್ನಬಹುದು.

    kannada movie double engine review

    ಚಿತ್ರದ ಆರಂಭದಿಂದಲೂ ಕೊನೆಯವರೆಗೂ ಮನರಂಜನೆಯೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಸಂಭಾಷಣೆಯೇ ಪ್ರಮುಖ ಅಸ್ತ್ರ. ಟೈಟಲ್ ತಕ್ಕ ಹಾಗೆ ಡಬ್ಬಲ್ ಮೀನಿಂಗ್ ಡೈಲಾಗ್ ಗಳೇ ಹೆಚ್ಚಿದೆ. ಈ ಸಂಭಾಷಣೆಗಳೇ ನೋಡುಗರ ಕಿಕ್ ನೀಡಿದೆ.

    'ಡಬ್ಬಲ್ ಇಂಜಿನ್' ಕಥೆ
    '' ಊರಿನಲ್ಲಿ ಅಡ್ಡಾದಿಡ್ಡಿ ಸುತ್ಕೊಂಡು, ಎಲ್ಲರ ಕಾಲೆಳೆದುಕೊಂಡು ಇರುವ ಮೂರು ಜನ ಪಡ್ಡೆ ಯುವಕರು (ಚಿಕ್ಕಣ್ಣ, ಪ್ರಭು, ಅಶೋಕ). ಅದೇ ಊರಿನಲ್ಲಿ ವಿಧವೆಯೊಬ್ಬಳು (ಸುಮನ್ ರಂಗನಾಥ್) ಕೈತುಂಬಾ ಸಾಲ ಮಾಡಿಕೊಂಡು ಜೀವನ ಮಾಡ್ತಿರ್ತಾಳೆ. ಈ ನಾಲ್ಕು ಜನಕ್ಕೂ ದುಡ್ಡು ಬೇಕು. ಆಗಲೇ ಗೊತ್ತಾಗೋದು ಸಿಡಿಲಿನ ಬಡಿತಕ್ಕೆ ಹೊಡೆದು ಹೋದ ಚಂಬಿಗೆ 100 ಕೋಟಿ ಬೆಲೆ ಇದೆ ಎಂದು. ಅದನ್ನ ಹುಡುಕಿ ತಂದು ಮಾರಿ ದುಡ್ಡು ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಬರ್ತಾರೆ ಈ ಬಳಗ. ಆಮೇಲೆ ಏನಾಗುತ್ತೆ ಎಂಬುದೇ ಕಥೆ.

    ಅಭಿನಯ.?
    ಇಡೀ ಸಿನಿಮಾ ಮನರಂಜನೆಯಿಂದ ಕೂಡಿದ್ದು, ಪ್ರತಿಯೊಂದು ಪಾತ್ರಗಳು ಇದಕ್ಕೆ ಸಾಥ್ ನೀಡಿದೆ. ಚಂಬು ಮಾರಿಕೊಡುವ ಬ್ರೋಕರ್ ಪಾತ್ರದಲ್ಲಿ ಸುಚ್ಚೇಂದ್ರ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಸರ್ಪ್ರೈ ಆಗಿ ಬರುವಸಾಧುಕೋಕಿಲಾ ಪಾತ್ರ ನಗು ತರಿಸುತ್ತೆ

    ಸಂದೇಶ.!
    'ಡಬ್ಬಲ್ ಇಂಜಿನ್' ಕೇವಲ ಮನರಂಜನೆ ಮಾತ್ರವಲ್ಲದೇ ಯುವಕರಿಗೆ ಒಂದೊಳ್ಳೆ ಸಂದೇಶ ನೀಡಿದೆ. ದುಡ್ಡಿನ ಹಿಂದೆ ಬಿದ್ದು ಜೀವನ ಹಾಳಮಾಡಿಕೊಳ್ಳುವುದಕ್ಕಿಂತ ಹಳ್ಳಿಯಲ್ಲೇ ಇದ್ದು ಕೃಷಿಯನ್ನ ನಂಬಿ ಜೀವನ ಮಾಡುವುದು ಒಳಿತು ಎಂದು ತೋರಿಸಲಾಗಿದೆ.. ದತ್ತಣ್ಣ ಕೂಡ ತಮ್ಮದೇ ಸ್ಟೈಲ್ ನಲ್ಲಿ ಕಾಮಿಡಿ ಕಿಕ್ ನೀಡ್ತಾರೆ. ನಾಯಕಿಯಾಗಿ ಪ್ರಿಯಾಂಕಾ ಮಲ್ನಾಡ್ ಅಭಿನಯಿಸಿದ್ದು, ವೀರ್ ಸಮರ್ಥ ಸಂಗೀತವಿದೆ.

    ಒಟ್ನಲ್ಲಿ, ಬಾಂಬೆ ಮಿಠಾಯಿ' ಸಿನಿಮಾಗೆ ಹೋಲಿಸಿಕೊಂಡ್ರೆ ಇದು ಮತ್ತಷ್ಟು ಕಾಮಿಡಿ, ಎಂಟರ್ ಟೈನ್ಮೆಂಟ್ ಹೆಚ್ಚು ನೀಡುತ್ತೆ. ಪಡ್ಡೆ ಹುಡುಗ್ರಂತು ಮಿಸ್ ಮಾಡಿಕೊಳ್ಳಬೇಡಿ...

    English summary
    Chikkanna, Ashok, Prabhu starrer 'double engine' movie has released today (july 13th). here is the review.
    Thursday, July 19, 2018, 16:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X