For Quick Alerts
ALLOW NOTIFICATIONS  
For Daily Alerts

  'ಹ್ಯಾಪಿ ಬರ್ತ್ ಡೇ' ಚಿತ್ರ ನೋಡಿದ ವಿಮರ್ಶಕರು ಕೊಟ್ಟ ಕಾಮೆಂಟ್ಸ್ ಇವು

  By Harshitha
  |

  'ಹ್ಯಾಪಿ ಬರ್ತ್ ಡೇ' ಅಂದ್ರೆ ಜನ್ಮ ದಿನದ ಶುಭಾಶಯಗಳು ಅಂತರ್ಥ. ಆದ್ರೆ, 'ಹ್ಯಾಪಿ ಬರ್ತ್ ಡೇ' ಎಂಬುದಕ್ಕೆ ಬೇರೆಯದ್ದೇ ಅರ್ಥ ಕಲ್ಪಿಸಿ ಕೊಟ್ಟಿದ್ದಾರೆ ನಿರ್ದೇಶಕ ಮಹೇಶ್ ಸುಖಧರೆ. ಆ ಆರ್ಥ ಏನು ಅಂತ ತಿಳಿಯಲು ನೀವು ಸಿನಿಮಾ ನೋಡಬೇಕು.

  ಮಂಡ್ಯ ಭಾಷೆ, ದೇಸಿ ಸೊಗಡು ಮೇಳೈಸಿರುವ 'ಹ್ಯಾಪಿ ಬರ್ತ್ ಡೇ' ಚಿತ್ರ ಮಾಸ್ ಅಭಿಮಾನಿಗಳಿಗೆ ಹಬ್ಬದೂಟ ಆಗಿರಬಹುದು. ಆದ್ರೆ, ಎಲ್ಲಾ ಚಿತ್ರಗಳನ್ನೂ ಅಳೆದು ತೂಗುವ ವಿಮರ್ಶಕರು 'ಹ್ಯಾಪಿ ಬರ್ತ್ ಡೇ' ಬಗ್ಗೆ ಏನೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ ಅಂತ ನಿಮಗೆ ಗೊತ್ತಾ?

  ರಾಜಕಾರಣಿ ಚೆಲುವರಾಯಸ್ವಾಮಿ ಪುತ್ರ ಸಚಿನ್ ಅಭಿನಯದ ಚೊಚ್ಚಲ ಸಿನಿಮಾ 'ಹ್ಯಾಪಿ ಬರ್ತ್ ಡೇ' ಬಗ್ಗೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ......

  ಹಳ್ಳಿ ಸೊಗಡಿನೊಂದಿಗೆ ರಂಜನೆ - ಪ್ರಜಾವಾಣಿ

  ಸರಳ ಕಥೆಯೊಂದನ್ನು ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸುವಂತೆ ಕ್ಲಿಷ್ಟಗೊಳಿಸಿದ್ದರ ನಿರ್ದೇಶಕರ ಉದ್ದೇಶ ಅರ್ಥವಾಗದು. ಫ್ಲ್ಯಾಶ್ ಬ್ಯಾಕ್ ಹಿನ್ನೆಲೆ ಇಟ್ಟಿಕೊಂಡೇ ಕಥೆ ಓಡುತ್ತದೆ. ಅದರೊಳಗೆ ಮತ್ತೊಂದು ಫ್ಲ್ಯಾಶ್ ಬ್ಯಾಕ್! ಮೈಸೂರು ಪ್ರಾಂತ್ಯದ ದೇಸಿ ಕಲೆಗಳ ಸ್ಪರ್ಶ ಇದರಲ್ಲಿದೆ. ‘ಹ್ಯಾಪಿ ಬರ್ತ್ ಡೇ' ಅಂದರೆ ಜನ್ಮದಿನದ ಶುಭಾಶಯಗಳು ಎಂದರ್ಥ. ಆದರೆ ಮಂಡ್ಯ ಕಡೆ ಅದಕ್ಕೆ ‘ಹೊಗೆ ಹಾಕಿಸಿಕೊಳ್ಳೋದು' ಎಂಬ ಎರಡನೇ ಅರ್ಥವೂ ಇದೆ! ಕೆ. ಮಹೇಶ್ ಸುಖಧರೆ ನಿರ್ದೇಶನದ ‘ಹ್ಯಾಪಿ ಬರ್ತ್ ಡೇ' ಸಿನಿಮಾದಲ್ಲಿ ನಾಯಕನ ಪ್ರಿಯತಮೆಯ ತಂದೆ ‘ಹ್ಯಾಪಿ ಬರ್ತ್ ಡೇ' ದಿನಕ್ಕೆ ಸಮೀಪ ಬರುತ್ತಿರುತ್ತಾನೆ. ಆತನ ಕೊನೆಯ ಆಸೆಯನ್ನು ಈಡೇರಿಸುವುದೇ ನಾಯಕನ ಗುರಿ. ಅದರಲ್ಲಿ ಆತ ಯಶಸ್ವಿಯಾಗುತ್ತಾನೆಯೇ ಎಂಬ ಅರ್ಥಹೀನ ಪ್ರಶ್ನೆಗೆ ಇಲ್ಲಿ ಅವಕಾಶವಿಲ್ಲ! - ಆನಂದತೀರ್ಥ ಪ್ಯಾಟಿ

  ದೇಸಿ ನೆಲದಲ್ಲಿ ಅರಳಿದ ಕೆಂಡಸಂಪಿಗೆ ಪ್ರೇಮ - ಉದಯವಾಣಿ

  ನಿರ್ದೇಶಕ ಮಹೇಶ್ ಸುಖಧರೆ, ಈ ಬಾರಿ ಹೊಸ ಫ್ಲೇವರ್ ಕಟ್ಟಿಕೊಟ್ಟಿದ್ದಾರೆ. ಬೇಳೆಯನ್ನು ಹದವಾಗಿ ಬೇಯಿಸಿ, ಅದಕ್ಕೆ ಬೆಲ್ಲದ ಪಾಕ ಬೆರೆಸಿ, ಏಲಕ್ಕಿ ಪುಡಿ ಉದುರಿಸಿ, ರುಬ್ಬಿದ ಬಳಿಕ, ಘಮಘಮಿಸೋ 'ಹೂರಣ' ತುಂಬಿದ ಹೋಳಿಗೆ ರುಚಿಯಷ್ಟೇ ಹೊಸತನವೆನಿಸುವ, ಪಕ್ಕಾ ಗ್ರಾಮೀಣ ಸೊಗಡು ತುಂಬಿರುವ, ನಮ್ಮ ನೆಲದ ವಾಸನೆ ಇರುವ, ದೇಸೀತನ ಮೇಳೈಸಿರುವ ಸಿನಿಮಾದೂಟ ಉಣಬಡಿಸಿದ್ದಾರೆ. ನಮ್ಮೂರಲ್ಲೇ ನಡೆದಿರುವ ನಮ್ಮೂರ ಹುಡುಗ, ಹುಡುಗಿಯ ನಿಷ್ಕಲ್ಮಷ ಪ್ರೀತಿ ಕಥೆ ಎನಿಸುವಷ್ಟರಮಟ್ಟಿಗೆ ಹೊಸದೊಂದು ಹಳ್ಳಿಸೊಗಡಿನ ದೃಶ್ಯ ಕಾವ್ಯ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ - ವಿಜಯ್ ಭರಮಸಾಗರ

  'Happy Birthday' Review - Bangalore Mirror

  Two things that stand out in Mahesh Sukhadhare's new film is the use of a local dialect and the dialogues that source their words and expressions from it. This extends to the lyrics in the songs as well. Happy Birthday breaks away from the traditional 'Sandalwood Kannada' and many of the idioms and proverbs may sound new to some audience. Though the story is not extraordinary, giving it a coat of this 'new' speech creates an engaging film for most parts. The dialogues and songs are the hero and heroine of the film - Shyam Prasad S

  'Happy Birthday' Review: An Excuse for a launch - The Hindu

  That Mahesh Sukhadare's Happy Birthday is a launch pad for Sachin, son of JDS leader and former minister Cheluvarayaswamy, could not be more obvious in the film. The film has been produced by Cheluvarayaswamy's family. The character that Sachin plays (also named Sachin) is from Nagamangala in Mandya, which is his father's constituency. There are repeated references and encomiums directed at Mandya, its geography and people. And towards the end, Sachin is endorsed by ‘Rebel Star' Ambareesh who says, "Naanu Mandyada gandu, ivanu muttina chandu" and asks Kannadigas across the State to bestow their love on Sachin - Archana Nathan

  English summary
  Kannada Actor Sachin debut film 'Happy Birthday' has received mixed response from the critics. Here is the collection of 'Happy Birthday' reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more