twitter
    For Quick Alerts
    ALLOW NOTIFICATIONS  
    For Daily Alerts

    ಪತ್ರಿಕೆಗಳಲ್ಲಿ ಪ್ರಕಟವಾಗಿರುವ 'ಹೊಟ್ಟೆಗಾಗಿ...' ಚಿತ್ರದ ಕಥೆ-ವ್ಯಥೆ

    By Bharath Kumar
    |

    ಟೈಟಲ್ ಮತ್ತು ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಸಿನಿಮಾ ಕೊನೆಗೂ ತೆರೆಮೇಲೆ ಬಂದಾಗಿದೆ. ಮೇ 25 ರಂದು ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆಯಾಗಿದೆ.

    ನಿರೀಕ್ಷೆಯಂತೆ ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆದ್ರೆ, ವಿಮರ್ಶಕರನ್ನ ಮೆಚ್ಚಿಸುವಲ್ಲಿ ಸಿನಿಮಾ ಸಾಹಸ ಮಾಡಿದೆಯಂತೆ. ಚಿತ್ರದ ಕಥೆ ಮತ್ತು ಕಲಾವಿದರ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿರುವ ವಿಮರ್ಶಕರು, ಕೆಲವು ಅಂಶಗಳ ಬಗ್ಗೆ ಸ್ವಲ್ಪ ಬೇಸರ ಮಾಡಿಕೊಂಡಿದ್ದಾರೆ.

    'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ವಿಮರ್ಶೆ: ಅನಂತ್ ನಾಗ್ ಸೂಪರ್ರು.!'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ವಿಮರ್ಶೆ: ಅನಂತ್ ನಾಗ್ ಸೂಪರ್ರು.!

    ಇನ್ನುಳಿದಂತೆ ಅನಂತ್ ನಾಗ್ ಮತ್ತು ರಾಧಿಕಾ ಚೇತನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಈ ಚಿತ್ರವನ್ನ 'ಕಬಡ್ಡಿ', 'ಸಂತೆಯಲ್ಲಿ ನಿಂತ ಕಬೀರ' ಚಿತ್ರಗಳ ಖ್ಯಾತಿ ನರೇಂದ್ರ ಬಾಬು ನಿರ್ದೇಶನ ಮಾಡಿದ್ದರು. ಕರ್ನಾಟಕ ಜನಪ್ರಿಯ ಪತ್ರಿಕೆಗಳಲ್ಲಿ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದ ಬಗ್ಗೆ ಪ್ರಕಟವಾಗಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ನೋಡಿ..

    ಹೊಟ್ಟೆ-ಬಟ್ಟೆಯಲ್ಲಿ ಎಲ್ಲವೂ ಗಂಭೀರ

    ಹೊಟ್ಟೆ-ಬಟ್ಟೆಯಲ್ಲಿ ಎಲ್ಲವೂ ಗಂಭೀರ

    ''ಲಿವ್ ಇನ್ ರಿಲೇಷನ್​ಶಿಪ್ ಮತ್ತು ಮದುವೆ ನಡುವಿನ ವ್ಯತ್ಯಾಸವೇ ಇಲ್ಲಿನ ಚರ್ಚಾ ವಿಷಯ. ಕಾಪೋರೇಟ್ ಜಗತ್ತಿನ ಆಫೀಸ್, ಅಲ್ಲಿನ ವ್ಯವಹಾರಗಳ ಏರಿಳಿತ ಇವೇ ಮುಂತಾದ ವಿಷಯಗಳು ಕೆಲವೊಮ್ಮೆ ಮುನ್ನೆಲೆಗೆ ಬಂದಾಗ ಚಿತ್ರದ ಅಸಲಿ ಆಶಯ ಮರೆಯಾಯಿತೇನೋ ಎನಿಸುತ್ತದೆ. ಹಾಡುಗಳು ಚೆನ್ನಾಗಿವೆಯಾದರೂ ಕಥೆ ಮುಂದುವರಿಯುವಲ್ಲಿ ಅವುಗಳಿಂದ ಹೆಚ್ಚಿನ ಉಪಯೋಗ ಆದಂತಿಲ್ಲ. ಹಿನ್ನೆಲೆ ಸಂಗೀತ ಕೊಂಚ ಹಿಂದೇಟು ಹಾಕಿದೆ. ಪಿಎಚ್​ಕೆ ದಾಸ್ ಕ್ಯಾಮರಾ ಕಣ್ಣಿನಲ್ಲಿ ಎಲ್ಲ ದೃಶ್ಯಗಳೂ ಕಲರ್​ಫುಲ್. ವಯೋಸಹಜ ಪಾತ್ರದಲ್ಲಿ ಅನಂತ್​ನಾಗ್ ಇಷ್ಟವಾಗುತ್ತಾರೆ. ಭಾವಾಭಿವ್ಯಕ್ತಿಯ ಏರಿಳಿತಕ್ಕೆ ರಾಧಿಕಾ ಚೇತನ್ ಹೆಚ್ಚಿನ ಗಮನ ಹರಿಸಿದ್ದರೆ ಚೆನ್ನಾಗಿರುತ್ತಿತ್ತು'' -ವಿಜಯವಾಣಿ

    ಗತಕಾಲದ ಹೊಟ್ಟೆ, ಆಧುನಿಕ ಬಟ್ಟೆ ಕಹಾನಿ

    ಗತಕಾಲದ ಹೊಟ್ಟೆ, ಆಧುನಿಕ ಬಟ್ಟೆ ಕಹಾನಿ

    ''ಒಂದು ಕಡೆ, ಪತ್ನಿಯ ನೆನಪಲ್ಲೇ ಬದುಕು ದೂಡುತ್ತಿರುವ ಇಳಿ ವಯಸ್ಸಿನ ಶ್ಯಾಮ್ ಪ್ರಸಾದ್(ಅನಂತನಾಗ್). ಮತ್ತೊಂದು ಕಡೆ ಮದುವೆ, ಸಂಸಾರ ಎಂಬ ಜಂಜಡದ ಬೇಲಿಯನ್ನು ಮುರಿದು, ಲೀವ್ ಇನ್ ರಿಲೇಷನ್ ಶಿಪ್ ಒಪ್ಪಿಕೊಂಡು ಬಾಳಲು ಯತ್ನಿಸುತ್ತಿರುವ ಶ್ರಾವ್ಯ (ರಾಧಿಕಾ ಚೇತನ್). ಈ ಇಬ್ಬರ ನಡುವಿನ ತಾಕಲಾಟವೇ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರ. ಇಂತಹ ಗಂಭೀರ ಕಥೆಯನ್ನು ಆಯ್ಕೆ ಮಾಡಿಕೊಂಡು, ತೀರಾ ತೆಳು ಪದರ ಹೊಂದಿದ ಚಿತ್ರಕಥೆಯ ಮೂಲಕ ಹೇಳುತ್ತಾ ಸಾಗಿದ್ದಾರೆ ನಿರ್ದೇಶಕರು. ಸಿನಿಮಾ ಚೆನ್ನಾಗಿಲ್ಲವೆಂದೂ ಹೇಳುವುದು ಕಷ್ಟ. ಬದುಕಿನ ಹಲವು ಪಾಠಗಳನ್ನು ಅದು ಮಾಡುತ್ತದೆ. ಎರಡು ತಲೆಮಾರಿನ ಆಚಾರ ವಿಚಾರಗಳನ್ನು ಪ್ರಚುರಪಡಿಸುತ್ತದೆ. ಸಣ್ಣದೊಂದು ಮನರಂಜನೆಯನ್ನೂ ನೀಡುತ್ತದೆ.'' - ವಿಜಯ ಕರ್ನಾಟಕ

    ಹೊಟ್ಟೆಗಾಗಿ ತುಸು ಸೊಟ್ಟಗಾಗಿ...

    ಹೊಟ್ಟೆಗಾಗಿ ತುಸು ಸೊಟ್ಟಗಾಗಿ...

    ''ಕಬಡ್ಡಿ', ‘ಸಂತೆಯಲ್ಲಿ ನಿಂತ ಕಬೀರ'ಗಳಂಥ ಉಜ್ವಲ ಚಿತ್ರಗಳನ್ನು ಮಾಡಿದ್ದ ನರೇಂದ್ರಬಾಬು ‘ಹೊಟ್ಟೆಗಾಗಿ...' ಸಿನಿಮಾದಲ್ಲಿ ಮೊನಚುತನ ಕಳೆದುಕೊಂಡಿದ್ದಾರೆ .ಕಾರ್ಪೋರೆಟ್ ಜಗತ್ತಿನ ಕೃತಕ ಪರಿಸರದಲ್ಲಿ ನಡೆಯುವ ಕಥೆ ಇದು. ಆದರೆ ಅದನ್ನು ತೋರಿಸಲು ನಿರ್ದೇಶಕರು ಆಯ್ದುಕೊಂಡಿರುವ ದಾರಿ, ಪಾತ್ರಗಳು, ಸಂಭಾಷಣೆಯೂ ಅಷ್ಟೇ ಕೃತಕವಾಗಿದೆ. ಹಾಗಾಗಿ ಅಲ್ಲಿನ ಮಾತುಗಳು, ಜೋಕುಗಳು, ಭಾವುಕ ಗಳಿಗೆಗಳು ಯಾವವೂ ಮನಸ್ಸಿಗೆ ಇಳಿಯುವುದೇ ಇಲ್ಲ. ಜಾಳು ಜಾಳಾದ ಚಿತ್ರಕಥೆ ಸಿನಿಮಾವನ್ನು ಇನ್ನಷ್ಟು ಕೆಳಕ್ಕಿಳಿಸಿದೆ. ಸನ್ನಿವೇಶ ಸೃಜಿಸಬೇಕಾದ ಭಾವಕ್ಕೆ ವ್ಯತಿರಿಕ್ತವಾದ ಹಿನ್ನೆಲೆ ಸಂಗೀತ ಹಲವು ಕಡೆಗಳಲ್ಲಿ ಕಿರಿಕಿರಿ ಹುಟ್ಟಿಸುತ್ತದೆ. ಪಿ.ಕೆ. ಎಚ್‌. ದಾಸ್‌ ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ.'' - ಪ್ರಜಾವಾಣಿ

    ನಿರೀಕ್ಷೆ ಮಾರುದ್ದ; ದಕ್ಕಿದ್ದು ಗೇಣುದ್ದ

    ನಿರೀಕ್ಷೆ ಮಾರುದ್ದ; ದಕ್ಕಿದ್ದು ಗೇಣುದ್ದ

    ''"ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರವು ಹಾಲಿವುಡ್‌ನ‌ಲ್ಲಿ 2015ರಲ್ಲಿ ಬಿಡುಗಡೆಯಾದ "ದಿ ಇಂಟರ್ನ್' ಎಂಬ ಚಿತ್ರದ ಕನ್ನಡಾನುವಾದ. ಒಂದಿಷ್ಟು ಬದಲಾವಣೆಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಮೂಲ ಚಿತ್ರದ ಬಹಳಷ್ಟು ಅಂಶಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಈ ತರಹದ ಕಥೆ ಇದುವರೆಗೂ ಕನ್ನಡದಲ್ಲಿ ಬಂದಿಲ್ಲವಾದ್ದರಿಂದ, ಹೊಸದು ಎಂದು ಹೇಳಬಹುದು. ಮಿಕ್ಕಂತೆ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಹುಟ್ಟುಹಾಕಿದ್ದ ಕುತುಹೂಲ ಮತ್ತು ನಿರೀಕ್ಷೆಗಳಿಗೆ ಚಿತ್ರ ನಿಲುಕುವುದಿಲ್ಲ. ಚಿತ್ರದ ಮೂಲ ಏನಾದರೂ ಇರಲಿ, ಚಿತ್ರವನ್ನು ಕಟ್ಟುವಾಗ ಇನ್ನಷ್ಟು ಹೊಸತನ, ವೇಗ ಎಲ್ಲವೂ ಬೇಕಿತ್ತು. ಬಹುಶಃ ಒಂದೆರೆಡು ಟ್ವಿಸ್ಟ್ ಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಪ್ರೇಕ್ಷಕನನ್ನು ಹಿಡಿದಿಡುವ ಅಥವಾ ಕೂರಿಸುವ ಅಂಶಗಳು ಸಿಗುವುದು ಕಡಿಮೆಯೇ.'' - ಉದಯವಾಣಿ

    hottegagi genu battegagi review

    hottegagi genu battegagi review

    '' Hottegagi Genu Battegagi could be a decent watch for those who haven't seen the Hollywood original, but for those who have they will miss the subtleties and nuances that Myers had added in The Intern. This film, though, can entice the Anant Nag fans, for they get to see the veteran performer in a role that allows him to charm his way despite an inconsistent narrative'' - times of india

    English summary
    Ananth nag and radhika chethan starrer Kannada movie hottegagi genu battegagi critics review. movie has released on may 25th th all over karnataka.
    Saturday, May 26, 2018, 12:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X