ಬ್ಯಾಂಡ್-ವಾಲಗ ಇಲ್ಲದ 'ಜಾತ್ರೆ'ಗೆ ವಿಮರ್ಶಕರು ಫಿದಾ ಆದ್ರಾ?

By ಸೋನು ಗೌಡ

ಸಂಪೂರ್ಣ ಮನರಂಜನೆ ಜೊತೆಗೆ ಸಾಹಸ ಭರಿತ ಸಿನಿಮಾ 'ಜಾತ್ರೆ' ಡಿಸೆಂಬರ್ 11 ಶುಕ್ರವಾರದಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಕಂಡಿದೆ. ಜಾತ್ರೆಯಲ್ಲಿ ಬೆಂಡು-ಬತ್ತಾಸು, ಹೆಣ್ಮಕ್ಕಳ ಮನಸ್ಸನ್ನು ಕದಿಯುವ ಅಲಂಕಾರಿಕ-ಶೃಂಗಾರ ಸಾಮಾಗ್ರಿಗಳು.. ಒಟ್ಟಿನಲ್ಲಿ ಕಣ್ಮುಚ್ಚಿ ಒಮ್ಮೆ ಧ್ಯಾನ ಮಾಡಿದರೆ ಬಣ್ಣ-ಬಣ್ಣದ ಕ್ಯಾನ್ವಾಸ್. ಇದನ್ನು ಆಧುನಿಕವಾಗಿ 'ಜಾತ್ರೆ' ಸಿನಿಮಾದಲ್ಲಿ ತೋರಿಸಲಾಗಿದೆ.

ಸುಮಾರು 14 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ಚೊಚ್ಚಲ ನಿರ್ದೇಶಕ ರವಿತೇಜಾ ಅವರು ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡು 'ಜಾತ್ರೆ' ಸಿನಿಮಾ ಮಾಡಿದ್ದಾರೆ.[ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿ ಕಂಡಂತೆ 'ಜಾತ್ರೆ']

ನಟ ಚೇತನ್ ಚಂದ್ರ ಹಾಗು ನಟಿ ಐಶ್ವರ್ಯಾ ನಾಗ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮ್ಯೂಸಿಕ್ ಕಂಪೋಸ್ ಮಾಡಿರುವ ಬೆಂಗಳೂರಿನ ಕಲರ್ ಫುಲ್ 'ಜಾತ್ರೆ' ನಮ್ಮ ಕನ್ನಡ ಸಿನಿ ವಿಮರ್ಶಕರಿಗೆ ಹಿಡಿಸಿತೆ, ಅನ್ನೋದನ್ನ ನಾವು ನಿಮಗೆ ಹೇಳ್ತೀವಿ ನೋಡಲು ಕೆಳಗಿನ ಸ್ಲೈಡ್ ಗಳನ್ನು ಕ್ಲಿಕ್ಕಿಸಿ...

'ಕನಸುಗಳು ಬಿಕರಿಗಿವೆ' - ವಿಜಯ ಕರ್ನಾಟಕ

'ಕನಸುಗಳು ಬಿಕರಿಗಿವೆ' - ವಿಜಯ ಕರ್ನಾಟಕ

ಬಣ್ಣ-ಬಣ್ಣದ ಪೇಪರಿನಿಂದ ಸಿಂಗರಿಸಿರುವ ಎತ್ತಿನಗಾಡಿ, ಕೊಂಬುಗಳಿಗೆ ಬಣ್ಣ ಹಚ್ಚಿಸಿಕೊಂಡ ಎತ್ತುಗಳು, ಹೊಸ ಬಟ್ಟೆ ತೊಟ್ಟ ಪುಟಾಣಿ ಮಕ್ಕಳು, ಜಾತ್ರೆಯಲ್ಲಿ ಬೆಂಡು-ಬತ್ತಾಸು' ಒಟ್ಟಿನಲ್ಲಿ ಇದೆಲ್ಲಾ ಬಣ್ಣದ ಕ್ಯಾನ್ವಾಸ್. ಇದೇ ಚಿತ್ರಣವನ್ನು ಆಧುನಿಕ ಮಾದರಿಯಲ್ಲಿ ತೆರೆ ಮೇಲೆ ತರಲು ಯತ್ನಿಸಿದ್ದಾರೆ 'ಜಾತ್ರೆ' ನಿರ್ದೇಶಕ ರವಿತೇಜಾ. ಇದಕ್ಕೆ ಛಾಯಾಗ್ರಾಹಕ ಜಗದೀಶ್ ವಾಲಿ ಅವರು ಸೂಕ್ತ ರೀತಿಯಲ್ಲಿ ನೆರವಾಗಿದ್ದಾರೆ. ಇನ್ನು ಚಿತ್ರದ ಕಥೆಯ ವಿಚಾರಕ್ಕೆ ಬಂದರೆ, ಅಲ್ಲಿಯೂ ಬಣ್ಣದ ಕನಸುಗಳಿದ್ದು, ಅವು ಚದುರಿವೆ, ಬಣ್ಣದ ಸನ್ನಿವೇಶಗಳು ಕನಸಿನಲ್ಲಿ ಪ್ರಿಯವಾದರೂ ವಾಸ್ತವದಲ್ಲಿ ಅವು ಚೌಕಟ್ಟಿನಲ್ಲಿದ್ದರಷ್ಟೆ ಚೆಂದ.- ಶಶಿಧರ ಚಿತ್ರದುರ್ಗ.

ಬೆಂಡು-ಬತ್ತಾಸು ಇಲ್ಲದ ಜಾತ್ರೆ - ಕನ್ನಡ ಪ್ರಭ

ಬೆಂಡು-ಬತ್ತಾಸು ಇಲ್ಲದ ಜಾತ್ರೆ - ಕನ್ನಡ ಪ್ರಭ

'ಜಾತ್ರೆ' ಎನ್ನುವುದು ಒಂದು ಕಲರ್ ಫುಲ್ ದುನಿಯಾ. ಹಳ್ಳಿಗಳಲ್ಲಿ ಇಂದಿಗೂ ಸೇರುವ ಜಾತ್ರೆಗಳು ನಿಜಕ್ಕೂ ನೋಡುಗನಿಗೆ ಹೊಸ ಪ್ರಪಂಚದ ಅನುಭವ. ಇಂಥ ಕಲರ್ ಫುಲ್ ದುನಿಯಾವನ್ನೇ ಬೆಂಗಳೂರು ನಗರಿಗೆ ಹೋಲಿಕೆ ಮಾಡಿ ಯುವ ನಿರ್ದೇಶಕ ರವಿತೇಜಾ ನಿರ್ದೇಶಿಸಿರುವ 'ಜಾತ್ರೆ' ಬೆಂಗಳೂರು ಕಂಡವರಿಗೆ ಯಾವ ಕೋನದಲ್ಲೂ ವಿಶೇಷ ಅಂತನ್ನಿಸುವುದಿಲ್ಲ. ಬೆಂಗಳೂರೆಂಬ ಮಾಯಾನಗರಿಯಲ್ಲಿ ನಿತ್ಯ ಕಾಣುವ ವಿಭಿನ್ನ ಘಟನೆಗಳನ್ನೇ ತೆರೆಗೆ ತರುವ ಪ್ರಯತ್ನವೇ 'ಜಾತ್ರೆ'. ಅಷ್ಟು ಬಿಟ್ಟರೆ, ಆ ಘಟನೆಗಳನ್ನು ಪರಿಣಾಮಕಾರಿಯಾಗಿ ತೆರೆಗೆ ತರುವಲ್ಲಿ ಸೋತಿದೆ.- ದೇಶಾದ್ರಿ ಹೊಸ್ಮನೆ.

'ಬೆಂಗಳೂರು ದರ್ಶನ' - ಪ್ರಜಾವಾಣಿ

'ಬೆಂಗಳೂರು ದರ್ಶನ' - ಪ್ರಜಾವಾಣಿ

ಬೆಂಗಳೂರಿಗೆ ಬರುವ ನಾಯಕನಿಗೆ ಒಂದು ದಿನದಲ್ಲಿ ಏನೆಲ್ಲ ಸಾಧ್ಯವೋ ಅಷ್ಟನ್ನೂ ತೋರಿಸುವ ಯತ್ನ ಮಾಡಿದ್ದಾರೆ ನಿರ್ದೇಶಕ ರವಿತೇಜ. ಆದರೆ ಅಷ್ಟು ಎಷ್ಟು ಪರಿಪೂರ್ಣ ಎಂಬುದೇ ಪ್ರಶ್ನೆ. ಹೀಗೊಂದು ಕಥೆ ಮಾಡುವಾಗ, ಬೆಂಗಳೂರನ್ನು ಒಂದೇ ದಿನದಲ್ಲಿ ಇಡಿಯಾಗಿ ತೋರಿಸುವುದು ಸಾಧ್ಯವೇ ಎಂಬ ಪ್ರಶ್ನೆ ನಿರ್ದೇಶಕರಲ್ಲಿ ಎದ್ದಿರಲಿಲ್ಲವೇ, ಎನ್ನುವುದು ಕಾಡುತ್ತದೆ. ಜೊತೆಗೆ ಎರಡೆರಡು ಪ್ರೇಮ ಪ್ರಸಂಗಗಳನ್ನು, ಡ್ರಗ್ ಮಾಫಿಯಾವನ್ನು, ಮಾನವ ಕಳ್ಳ-ಸಾಗಾಣೆ ಹೀಗೆ ಒಂದಷ್ಟು ಘಟನೆಗಳನ್ನು ನಿರ್ವಹಿಸುವ ತೊಂದರೆಯನ್ನು ಎಳೆದುಕೊಂಡಿದ್ದಾರೆ ನಿರ್ದೇಶಕರು. - ಗಣೇಶ ವೈದ್ಯ.

'ಕೊನೆಯಿಲ್ಲದ ಯಾತ್ರೆ' - ಉದಯವಾಣಿ

'ಕೊನೆಯಿಲ್ಲದ ಯಾತ್ರೆ' - ಉದಯವಾಣಿ

'ಜಾತ್ರೆ' ಎಂಬ ಶೀರ್ಷಿಕೆಗೆ ತಕ್ಕಂತೆ ಇಡೀ ಸಿನಿಮಾವನ್ನು ಮಾಡಿರುವುದು ನಿರ್ದೇಶಕರ ಹೆಗ್ಗಳಿಕೆ. ಅದ್ಹೇಗೆ ಅಂದರೆ ಇಲ್ಲಿ ಎಲ್ಲವೂ ಇದೆ. ಆದರೆ ಯಾವುದೂ ನಿಮ್ಮ ಗಮನಕ್ಕೆ ಬರುವುದಿಲ್ಲ. ಸಂತೆಯಲ್ಲಿ ನಿಂತ ಅನುಭವ ನಿಮಗೆ ಆಗುವುದು ಗ್ಯಾರಂಟಿ. ಸಂತೆಯ ಗಜಿಬಿಜಿ ಸದ್ದಿನಂತೆ ಇಲ್ಲಿ ಸಾಕಷ್ಟು ಅಂಶಗಳು ನಿಮ್ಮ ಕಣ್ಣೆದುರು ಬಂದು ಹೋಗುತ್ತವೆ. ಆದರೆ ಯಾವೊಂದು ಅಂಶವೂ ನಿಮ್ಮನ್ನು ಕಾಡುವುದಿಲ್ಲ ಮತ್ತು ನೀರಸ ಭಾವದೊಂದಿಗೆ ಸಿನಿಮಾ ನೋಡುವ ಸರದಿ ನಿಮ್ಮದಾಗಿರುತ್ತದೆ. - ರವಿಪ್ರಕಾಶ್ ರೈ.

More from Filmibeat

English summary
Kannada Movie 'Jatre' Critics Review. Actor Chetan Chandra, Actress Aishwarya Nag Starrer 'Jatre' has received mixed response from the critics. Here is the collection of reviews by Top Kannada News Papers of Karnataka. The movie is directed by debut director Raviteja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X