For Quick Alerts
  ALLOW NOTIFICATIONS  
  For Daily Alerts

  ಹೊಸ 'ಜಾನಿ' ನೋಡಿದ ವಿಮರ್ಶಕರು ವಿಜಿಗೆ ಕೊಟ್ಟ ಮಾರ್ಕ್ಸ್ ಎಷ್ಟು.?

  By Bharath Kumar
  |

  ಕನ್ನಡದ ಕರಿಚಿರತೆ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಅಭಿನಯದ 'ಜಾನಿ ಜಾನಿ ಎಸ್ ಪಪ್ಪಾ' ಬಿಡುಗಡೆಯಾಗಿದ್ದು, ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.

  ಮೊದಲ ದಿನ ಸಿನಿಮಾ ನೋಡಿದ ಅಭಿಮಾನಿಗಳು ಮನರಂಜನೆಯ ವಿಚಾರದಲ್ಲಿ ಜಾನಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಆದ್ರೆ, ವಿಮರ್ಶಕರು ದುನಿಯಾ ವಿಜಯ್ ಅಭಿನಯಕ್ಕೆ ಪ್ರೀತಂ ಗುಬ್ಬಿ ನಿರ್ದೇಶನಕ್ಕೆ ಮನಸೋತ್ರಾ.? ಎಂಬುದು ತಿಳಿಯಬೇಕಿದೆ.

  ಹಲವು ವಿಷ್ಯಗಳಿಗೆ ಕುತೂಹಲ ಮೂಡಿಸಿದ್ದ ಜಾನಿ ಮೇಲೆ ದೊಡ್ಡ ಭರವಸೆ ಇತ್ತು. ಇದೇ ಮೊದಲ ಭಾರಿಗೆ ರಚಿತಾ ರಾಮ್-ದುನಿಯಾ ತೆರೆಮೇಲೆ ಒಂದಾಗಿದ್ದಾರೆ. 2011 ರಲ್ಲಿ ತೆರೆಕಂಡಿದ್ದ ಜಾನಿ ಚಿತ್ರದ ಮುಂದುವರೆದ ಭಾಗ. ಹೀಗಾಗಿ, ನಿರೀಕ್ಷೆ ಹೆಚ್ಚಿತ್ತು. ಇದೀಗ, ಕರ್ನಾಟಕ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ವಿಮರ್ಶೆ ಮುಂದೆ ಓದಿ....

  ಡೀಲ್‌ ಜಾನಿಯ ಡಿಡಿಎಲ್ ಜೆ

  ಡೀಲ್‌ ಜಾನಿಯ ಡಿಡಿಎಲ್ ಜೆ

  ಜಾನಿ ಜಾನಿ ಎಸ್‌ ಪಾಪಾ ಸಿನಿಮಾ ಹಳೇ ಜಾನಿಯ ಅಪ್‌ಡೇಟೆಡ್ ವರ್ಷನ್. ಅರೆಬರೆ ಇಂಗ್ಲೀಷ್ ಮಾತನಾಡಿಕೊಂಡು ವಿಜಯ್‌ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಸಿನಿಮಾದ ಪ್ರತಿ ಫ್ರೇಮ್ ನಲ್ಲಿಯೂ ಅವರಿರುವುದರಿಂದ, ಅವರಿಗೆ ಕೆಲಸ ಸ್ವಲ್ಪ ಹೆಚ್ಚಾಗಿಯೇ ಇದೆ. ಇಡೀ ಸಿನಿಮಾದಲ್ಲಿ ತಮ್ಮ ಇಮೇಜ್‌ನ್ನು ಪಕ್ಕಕ್ಕಿಟ್ಟು ಸಖತ್‌ ಸ್ಟೈಲಿಷ್ ಆಗಿ ನಟಿಸಿದ್ದಾರೆ. ನಿರ್ದೇಶಕ ಪ್ರೀತಂ ಗುಬ್ಬಿ ಸಿನಿಮಾಗಳು ಒಂದು ರೀತಿಯಲ್ಲಿ ಶಾಂತ ಸಮುದ್ರವಿದ್ದಂತೆ ಎಲ್ಲಿಯೂ, ಏರಿಳಿತಗಳಿರುವುದಿಲ್ಲ. ಅದು ಈ ಸಿನಿಮಾದಲ್ಲಿಯೂ ಕಾಣುತ್ತದೆ. ಟೋಟಲ್ ಆಗಿ ಜಾನಿ ಒಂದು ಎಂಟರ್‌ಟೇನಿಂಗ್ ಮೂವಿ ಇದರಲ್ಲಿ ಯಾವುದೇ ಲಾಜಿಕ್‌ ಹುಡುಕುವ ಹಾಗಿಲ್ಲ. ಹೋಗಬೇಕು ನೋಡಬೇಕು ನಗಬೇಕು ಬರಬೇಕು.

  ಇವ ಹಳೆಯ ಜಾನಿಯ ತದ್ರೂಪಿ

  ಇವ ಹಳೆಯ ಜಾನಿಯ ತದ್ರೂಪಿ

  ಹಿಂದಿನ ‘ಜಾನಿ'ಗಿಂತ ನಾನು ಬೇರೆ ಥರ ಎಂದು ಹೇಳಿಕೊಂಡು ಬಂದಿರುವ ಚಿತ್ರ ‘ಜಾನಿ ಜಾನಿ ಯೆಸ್ ಪಪ್ಪಾ'. ಆದರೆ, ಹಲವು ವಿಷಯಗಳಲ್ಲಿ ಈತ ಹಳೆಯ ಜಾನಿಯ ತದ್ರೂಪಿ. ಇದು ‘ಜಾನಿ ಮೇರಾ ನಾಮ್‌ ಪ್ರೀತಿ ಮೇರಾ ಕಾಮ್‌' ಚಿತ್ರದ ಮುಂದುವರಿಕೆಯ ಭಾಗ. ಇಲ್ಲಿ ಜಾನಿಯ ಸಮಾಜ ಸೇವೆಗೆ ಡಿಜಿಟಲ್‌ ಸ್ಪರ್ಶ ಸಿಕ್ಕಿದೆಯಷ್ಟೆ. ಪ್ರೀತಿಯ ಕಥೆ ಇಟ್ಟುಕೊಂಡು ಬಂದಿರುವ ಬಹುತೇಕ ಚಿತ್ರಗಳಲ್ಲಿ ಕಾಣಸಿಗುವ ಸಾಮಾನ್ಯ ಅಂಶಗಳೇ ಈ ಜಾನಿಯನ್ನು ಸುತ್ತುವರಿದಿವೆ. ಹಾಗಾಗಿ ಕಥೆಯಲ್ಲಾಗಲಿ, ಅದರ ನಿರೂಪಣೆಯಲ್ಲಾಗಲಿ ವಿಶೇಷತೆ ಇಲ್ಲ. ಈಗಾಗಲೇ ಬಳಸಿ ಸವಕಲಾಗಿರುವ ಸಿದ್ಧಸೂತ್ರಗಳನ್ನೇ ಕೊಂಚ ಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಇಂಗ್ಲಿಷ್‌ ವ್ಯಾಮೋಹಿ ಹುಡುಗಿ ಪಾತ್ರದಲ್ಲಿ ರಚಿತಾ ರಾಮ್‌ ಪಡ್ಡೆಹುಡುಗರ ಮನದಲ್ಲಿ ಮಿಂಚು ಹರಿಸುತ್ತಾರೆ. ದುನಿಯಾ ವಿಜಯ್‌ ಅವರದ್ದು ಹಳೆಯ ಜಾನಿಯ ವರಸೆ.

  ರೈನ್ ಬೋ ಕಾಲೋನಿಯಲ್ಲಿ ಜಾನಿಯ ಜಾಲಿ ರೈಡ್‌

  ರೈನ್ ಬೋ ಕಾಲೋನಿಯಲ್ಲಿ ಜಾನಿಯ ಜಾಲಿ ರೈಡ್‌

  'ಜಾನಿ ಮೇರಾ ನಾಮ್‌' ಸಿನಿಮಾದಲ್ಲಿ ಕಾಲೋನಿಯೊಂದರಲ್ಲಿ ಜಾಲಿಯಾಗಿರುವ ಹುಡುಗನಾಗಿ ವಿಜಯ್‌ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲೂ ಅದು ಮುಂದುವರಿದಿದೆ. ಕಾಲೋನಿ, ಜಾನಿ ಅಡ್ಡ, ಸಮಸ್ಯೆಗಳು, ಸೆಂಟಿಮೆಂಟ್, ಲವ್‌ ... ಈ ಅಂಶಗಳೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ವಿಜಯ್‌ ತಮ್ಮ ಆಕ್ಷನ್ ಇಮೇಜ್‌ನಿಂದ ಸಂಪೂರ್ಣವಾಗಿ ಹೊರಬಂದು ಪಕ್ಕಾ ಕಾಮಿಡಿ ಮೂಡ್ ನ‌ಲ್ಲಿ ಮಾಡಿರುವ ಸಿನಿಮಾವಿದು.

  johnny johnny yes papa movie review

  johnny johnny yes papa movie review

  Johnny is back in Rainbow Colony. This time, he has new friends and a new love interest. The film has absurd jokes and characters that sometimes fail to elicit the required laughs. There were a lot of expectations from this film, given the hype around it. Sadly, the lack of a strong story and some predictable gags make it a lackluster watch. The songs, which were a big draw to the first installment of the franchise, aren't as memorable as the ones expected either. If you're a die-hard fan of Vijay or want to watch Rachita Ram in some glamorous costumes, then this could entice you.

  English summary
  Kannada actor duniya vijay and actress rachita ram starrer johny jhony yes papa kannada movie review. the movie get mixed response from audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X