Jilka Review: ಇಂದಿನ ಜನರೇಷನ್ ನ ನೋಡಬೇಕಾದ ಕಥೆ

ಜಿಲ್ಕ, ಔಟ್ ಅಂಡ್ ಔಟ್ ಯೂತ್ ಸಿನಿಮಾ. ಇಂದಿನ ಯುವ ಜನಾಂಗಕ್ಕೆ ಸ್ಕೂಲ್, ಕಾಲೇಜ್ ಲೈಫ್ ಹಾಗೂ ಜೀವನದ ಪಾಠ ಪರಿಚಯ ಮಾಡುವ ಸಿನಿಮಾ. ಹಿರಿಯರ ಜನರೇಷನ್ ಗೂ ಇಂದಿನ ಜನರೇಷನ್ ನಡುವಿನ ಅಂತರವನ್ನು ತಿಳಿಸುವ ಒಂದೊಳ್ಳೆ ಚಿತ್ರ. ಪೂರ್ತಿ ವಿಮರ್ಶೆ ಮುಂದೆ ಓದಿ...

Rating:
3.5/5

ಚಿತ್ರ: ಜಿಲ್ಕ

ನಿರ್ದೇಶಕ: ಕವೀಶ್ ಶೆಟ್ಟಿ

ಕಲಾವಿದರು: ಕವೀಶ್ ಶೆಟ್ಟಿ, ಪ್ರಿಯಾ ಹೆಗ್ಡೆ, ಲಕ್ಷಾ ಶೆಟ್ಟಿ ಮತ್ತು ಇತರರು

ಬಿಡುಗಡೆ: ಫೆಬ್ರವರಿ 7, 2020

ಸ್ಕೂಲ್, ಕಾಲೇಜ್ ಲೈಫ್ ಅಂದ್ಮೇಲೆ ಆಟ, ತುಂಟಾಟ, ಕಿತ್ತಾಟ ಎಲ್ಲವೂ ಸಹಜ. ಪ್ರೀತಿ-ಪ್ರೇಮ-ಪ್ರಣಯವೂ ಸಾಮಾನ್ಯ. ಇಂತಹದ್ದೇ ಅಂಶಗಳನ್ನಿಟ್ಟು ಮೂಡಿಬಂದಿರುವ ಚಿತ್ರ ಜಲ್ಕ. ಅಂತಿಮ ಹಂತಕ್ಕೆ ಬರುವಷ್ಟರಲ್ಲಿ ಈ ಚಿತ್ರ ಸ್ವಲ್ಪ ವಿಶೇಷವಾಗಿ ನಿಂತುಕೊಳ್ಳುತ್ತೆ.

Kannada Movie Jilka Review

ಇಂದಿನ ಜನರೇಷನ್ ನ ಯುವಕ-ಯುವತಿಯರಿಗೆ ಒಂದೊಳ್ಳೆ ಸಂದೇಶ ನೀಡುವ ಮೂಲಕ ಮನಸ್ಸು ಮುಟ್ಟುವ ಪ್ರಯತ್ನ ಮಾಡಿದೆ. ಟೀನೆಜ್, ಕಾಲೇಜಿನಲ್ಲಿ ನಡೆಯುವ ಕಾಮಿಡಿ, ಜಗಳ, ಲವ್ ಎಲ್ಲವನ್ನು ಒಳಗೊಂಡಂತೆ ಜಿಲ್ಕ ಒಳ್ಳೆಯ ಮನರಂಜನೆಯ ಚಿತ್ರ.

ಚಿತ್ರದ ಕಥೆ....

ರಾಕಿ (ಕವೀಶ್ ಶೆಟ್ಟಿ) ಚಿಕ್ಕ ವಯಸ್ಸಿನಿಂದಲೂ ತರಲೆ ಮತ್ತು ತುಂಟ. ಸ್ಕೂಲ್ ನಲ್ಲಿ ಟೀಚರ್ ಗಳನ್ನು ಗೋಳಾಡಿಸಿ ಒದೆ ತಿಂದು, ಅಪ್ಪನಿಂದಲೂ ಒದೆ ತಿನ್ನುತ್ತಿದ್ದ. ನಂತರ ಕಾಲೇಜ್ ಗೆ ಎಂಟ್ರಿ ಕೊಡುವ ರಾಕಿ ಹುಡುಗಿ ವಿಚಾರದಲ್ಲಿ ತಪ್ಪು ಮಾಡಿದವನಿಗೆ ಹಿಗ್ಗಾಮುಗ್ಗಾ ಹೊಡೆದು ಕಾಲೇಜ್ ಹೀರೋ ಎನಿಸಿಕೊಳ್ಳುತ್ತಾನೆ. ಕಾಲೇಜ್ ಪ್ರೆಸಿಡೆಂಟ್ ಎದುರು ಹಾಕಿಕೊಂಡು, ತನಗೆ ಇಷ್ಟ ಆದವರನ್ನು ಪ್ರೆಸಿಡೆಂಟ್ ಮಾಡ್ತಾನೆ. ಈ ಸಮಯದಲ್ಲಿ ಹೀರೋಯಿನ್ ಎಂಟ್ರಿ, ಪರಿಚಯ, ಆಮೇಲೆ ಲವ್ ನಂತರ ರೋಮ್ಯಾನ್ಸ್. ಒಬ್ಬ ಯುವಕ ಮತ್ತು ಯುವತಿಗೆ ಟಿನೇಜ್ ಎಷ್ಟು ಮುಖ್ಯ, ಲವ್, ನಂಬಿಕೆ, ಸೆಕ್ಸ್, ಮದುವೆ ವಿಚಾರಗಳನ್ನು ಇಂದಿನ ಜನರೇಷನ್ ಹೇಗೆ ಸ್ವೀಕರಿಸಿದೆ ಮತ್ತು ಸಮಾಜ ಅದನ್ನು ಹೇಗೆ ಸ್ವೀಕರಿಸಬೇಕು ಎಂಬುದನ್ನು ಒಂದೊಳ್ಳೆ ಲವ್ ಸ್ಟೋರಿ ಮೂಲಕ ಪ್ರೆಸೆಂಟ್ ಮಾಡಿದ್ದಾರೆ.

Kannada Movie Jilka Review

ಕವೀಶ್ ಶೆಟ್ಟಿ ಅಭಿನಯದ ಮತ್ತು ಪಾತ್ರಕ್ಕಾಗಿ ಅವರ ಬಾಡಿ ಟ್ರಾನ್ಸ್ ಫರ್ ಮೇಶನ್ ನಿಜಕ್ಕೂ ಗಮನಾರ್ಹ. ಸ್ಕೂಲ್ ವಿದ್ಯಾರ್ಥಿಯಾಗಿ, ಕಾಲೇಜ್ ಸ್ಟೂಡೆಂಟ್ ಆಗಿ, ಜವಾಬ್ದಾರಿಯುವ ಯುವಕನಾಗಿ ಲುಕ್, ಅಭಿನಯ ಎಲ್ಲದರಲ್ಲೂ ವೈಯಕ್ತಿಕವಾಗಿ ಇಷ್ಟ ಆಗ್ತಾರೆ. ನಾಯಕಿಯರಿಬ್ಬರು ಕವೀಶ್ ಶೆಟ್ಟಿಗೆ ತಕ್ಕ ಸಾಥ್ ನೀಡಿದ್ದಾರೆ. ಉಳಿದಂತೆ ನಾಯಕನ ತಂದೆ-ತಾಯಿ, ಸ್ನೇಹಿತ, ಕಾಲೇಜ್ ಪ್ರೆಸಿಡೆಂಟ್, ಪ್ರಿನ್ಸಿಪಾಲ್ ಹೀಗೆ ಎಲ್ಲರೂ ಅವರ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ.

ನಟನೆ ಮತ್ತು ನಿರ್ದೇಶನದ ಜವಾಬ್ದಾರಿಯೂ ಕವೀಶ್ ಶೆಟ್ಟಿ ಮಾಡಿದ್ದು, ಚಿತ್ರವನ್ನು ನಿರೀಕ್ಷೆಯ ಮಟ್ಟಕ್ಕೆ ಪ್ರೇಕ್ಷಕರ ಮುಂದೆ ತರುವಲ್ಲಿ ಸಫಲರಾಗಿದ್ದಾರೆ. ಸ್ಕೂಲ್, ಟೀನೆಜ್ ಕಥೆ ಎಲ್ಲ ಚಿತ್ರಗಳಂತೆ ಎನಿಸಿದರೂ ಹೇಳಬೇಕಾದ ವಿಷಯವನ್ನು ವಿಶೇಷವಾಗಿ ಹೇಳಿರುವುದು ನಿರ್ದೇಶಕರ ಕೆಲಸ ತೋರಿಸುತ್ತದೆ. ವಿಶ್ವಜಿತ್ ರಾವ್ ಹಾಗೂ ಅಜಯ್ ಪಾಲ್ ಸಿಂಗ್ ಛಾಯಾಗ್ರಹಣ ಮಾಡಿದ್ದಾರೆ, ಪ್ರಾಂಶು ಝಾ ಸಂಗೀತ, ಗಿರಿ ಮಹೇಶ್ ಸಂಕಲನ ಒಳಗೊಂಡಿದೆ.

Kannada Movie Jilka Review

ಕೊನೆಯದಾಗಿ ಹೇಳುವುದಾದರೇ ಯುವಜನಾಂಗ ನೋಡಲೇಬೇಕಾದ ಕಥೆ. ಹಾಗಂತ ಹಿರಿಯರಿಗೆ ಇದು ಸಿನಿಮಾ ಅಲ್ಲ ಎಂದು ಹೇಳಲ್ಲ. ಯಾಕಂದ್ರೆ, ಟೀನೆಜ್ ಮೇಲೆ ಸಿನಿಮಾ ಸಾಗಿದರು ಸಂದೇಶ ಪೋಷಕರಿಗೆ. ಸಾಧ್ಯವಾದರೆ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನೋಡಿ.

More from Filmibeat

English summary
Kannada actor Kaveesh Shetty starrer Jilka movie released. here is the first review of Jilka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X