twitter
    For Quick Alerts
    ALLOW NOTIFICATIONS  
    For Daily Alerts

    'ಕಹಿ' ಚಿತ್ರದ ಬಗ್ಗೆ ವಿಮರ್ಶಕರ ಅನುಭವ ಏನು?

    ಕಹಿ' ಚಿತ್ರವನ್ನ ನೋಡಿದ ಅನುಭವವನ್ನ ವಿಮರ್ಶಕರು ಹೇಗೆ ಹಂಚಿಕೊಂಡಿದ್ದಾರೆ? ಇಲ್ಲಿದೆ ನೋಡಿ ರಾಜ್ಯದ ಖ್ಯಾತ ಸುದ್ದಿ ಪತ್ರಿಕೆಗಳ ವಿಮರ್ಶೆ

    By Bharathkumar
    |

    ನವ ನಿರ್ದೇಶಕ ಅರವಿಂದ ಶಾಸ್ತ್ರಿ ನಿರ್ದೇಶನದ 'ಕಹಿ' ಸಿನಿಮಾ ನಿನ್ನೆ (ನವೆಂಬರ್-4) ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಹೊಸಬರ ಸಸ್ಪೆನ್ಸ್ ಥ್ರಿಲ್ಲಿಂಗ್ ಕಥೆ ಪ್ರೇಕ್ಷಕರನ್ನ ರಂಜಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಕಂಡಿತ್ತು.

    ''ಕತ್ತಲ ರಾತ್ರಿಯಲ್ಲಿ ನಡೆಯುವ ಡ್ರಗ್ಸ್ ದಂಧೆ, ಅಮಾಯಕ ಹೆಣ್ಮಕ್ಕಳ ಮೇಲಾಗುವ ಅತ್ಯಾಚಾರ, ಕೊಲೆ ಸೇರಿದಂತೆ ಬೆಂಗಳೂರಿನ ಕರಾಳ ಮುಖವನ್ನೂ 'ಕಹಿ' ಚಿತ್ರದಲ್ಲಿ ಅನಾವರಣ ಮಾಡಲಾಗಿದೆ''.

    ಸೂರಜ್ ಗೌಡ, ಮಾತಂಗಿ ಪ್ರಸನ್, ಕೃಷಿ ತಾಪಂಡ, ಹರಿಶರ್ವ ಸೇರಿದಂತೆ ಹಲವರು ಚಿತ್ರದ ಮಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ಗಮನ ಸೆಳೆದಿದ್ದಾರೆ.

    ಹಾಗಾದ್ರೆ, 'ಕಹಿ' ಚಿತ್ರವನ್ನ ನೋಡಿದ ಅನುಭವವನ್ನ ವಿಮರ್ಶಕರು ಹೇಗೆ ಹಂಚಿಕೊಂಡಿದ್ದಾರೆ ಅಂತ ಇಲ್ಲಿದೆ ನೋಡಿ..

    ನಗರ ತಲ್ಲಣಗಳ ಅಚ್ಚುಕಟ್ಟಾದ ಚೌಕಟ್ಟು-ವಿಜಯ ಕರ್ನಾಟಕ

    ನಗರ ತಲ್ಲಣಗಳ ಅಚ್ಚುಕಟ್ಟಾದ ಚೌಕಟ್ಟು-ವಿಜಯ ಕರ್ನಾಟಕ

    ''ಕನ್ನಡ ಚಿತ್ರರಂಗದಲ್ಲಿ ಹೊಸಬರಿಂದ ಮಾತ್ರ ಪ್ರಯೋಗಾತ್ಮಕ ಚಿತ್ರಗಳನ್ನು ನಿರೀಕ್ಷಿಸಬಹುದು. ಈ ಸಾಲಿಗೆ ಅರವಿಂದ್ ಶಾಸ್ತ್ರಿ ಹೊಸ ಸೇರ್ಪಡೆ. ನೈಜವಾದ ಕ್ರೈಮ್ ಸ್ಟೋರಿಯ ಚಿತ್ರವಿದು. ಭಿನ್ನವಾದ ನಿರೂಪಣೆಯಿಂದ ಚಿತ್ರ ಗಮನ ಸೆಳೆಯುತ್ತದೆ. ಮಾಮೂಲಿ ಶೈಲಿಯನ್ನು ಬಿಟ್ಟು, ದಿಢೀರ್ ಅಂತ ನಾಲ್ವರ ಬದುಕಿನೊಳಗೆ ಪ್ರೇಕ್ಷಕರನ್ನು ತಂದು ಬಿಟ್ಟಂತೆ ಚಿತ್ರದ ನಿರೂಪಣೆ ಸಾಗಿದೆ. ಅರವಿಂದ್ ಮೊದಲ ಚಿತ್ರದಲ್ಲೇ ಸೂಕ್ಷ್ಮನಿರ್ದೇಶಕ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕೃಷಿ ತಾಪಂ, ಸೂರಜ್ ಗೌಡ, ಮಾತಂಗಿ, ಹರಿಶರ್ವ ಅವರ ಅಭಿನಯ ಚೆನ್ನಾಗಿದೆ. ಕಮರ್ಷಿಯಲ್ ಅಂಶಗಳ ಸೋಂಕೂ ಇಲ್ಲದ, 'ಕಹಿ' ಚಿತ್ರವನ್ನು ಎಲ್ಲರೂ ನೋಡಬಹುದಾಗಿದೆ. (ರೇಟಿಂಗ್-3.5 / 5)

    ವಿಧಿಯಾಟದ ನೆರಳಿನಲ್ಲಿ ನಗರ ಜೀವನದ ನರಕ ಯಾತನೆಗಳು-ಕನ್ನಡ ಪ್ರಭ

    ವಿಧಿಯಾಟದ ನೆರಳಿನಲ್ಲಿ ನಗರ ಜೀವನದ ನರಕ ಯಾತನೆಗಳು-ಕನ್ನಡ ಪ್ರಭ

    ''ನಾಲ್ಕು ಪ್ರಮುಖ ಪಾತ್ರಗಳ ಸುತ್ತ ವಿಭಿನ್ನ ನಿರೂಪಣೆಯಿಂದ ಕುತೂಹಲಕಾರಿ ಕ್ರೈಮ್ ಕಥೆಯೊಂದನ್ನು ಹೆಣೆದು-ಬೆಸೆದು, ಒಂದಷ್ಟು ಗಂಭೀರವಾದ ತತ್ವವನ್ನು ಕೂಡ ಚರ್ಚಿಸುವ ನಿರ್ದೇಶಕನ ಜಾಣ್ಮೆ-ಪರಿಶ್ರಮ ಸಿನೆಮಾದಲ್ಲಿ ಆಪ್ತವಾಗಿದ್ದರು, ಈ ಪಾತ್ರಗಳ ಪರಿಕಲ್ಪನೆ ಮತ್ತು ಬರವಣಿಗೆಗೆ ಹೆಚ್ಚು ಕಾಡುವ ಶಕ್ತಿಯಿದೆ. ಪ್ರಾರಂಭವೇ ಇಡೀ ಸಿನೆಮಾಗೆ ಒಂದು ತಾತ್ವಿಕ ಆಯಾಮ ಸೃಷ್ಟಿಸಿ, ಅದರಲ್ಲೇ ಅದನ್ನು ಬಂಧಿಯಾಗಿಸುತ್ತದೆ. ಇದು ಶಕ್ತಿಯೂ ಹೌದು, ಕುಂದುಕೊರತೆಯೂ! ಹರಿಶ್ರವ, ಸೂರಜ್ ಗೌಡ, ಕೃಷಿ ಮತ್ತು ಮಾತಂಗಿ ಅವರದ್ದು ಬಹಳ ನಿಖರವಾದ ಮತ್ತು ಮಾಗಿದ ನಟನೆ. ಮಿದುನ್ ಮುಕುಂದನ್ ಅವರ ಸಂಗೀತ ಮತ್ತು ಪ್ರಶಾಂತ್ ಅವರ ಛಾಯಾಗ್ರಹಣ ಪ್ಲಸ್ ಪಾಯಿಂಟ್. ಒಟ್ನಲ್ಲಿ, ನಿರ್ದೇಶಕ ಅರವಿಂದ್ ಶಾಸ್ತ್ರಿಯವರ ಈ ಪ್ರಯತ್ನ ಗಮನಾರ್ಹ ಮತ್ತು ಶ್ಲಾಘನೀಯ. ಈ ಸಿನೆಮಾ ನೋಡಿ, ಇದರ ಬಗ್ಗೆ ಚರ್ಚಿಸಿ ಮಾತಾಡುವ ಅವಶ್ಯಕತೆ ಈ ದಿನಕ್ಕೆ ಹೆಚ್ಚಿದೆ!.

    'Kahi' Movie Review-Times Of India

    'Kahi' Movie Review-Times Of India

    ''Director Arvind Sastry has brought forth an interesting amalgamation of fractured souls living absurd lives in the city. The film manages to entertain, provided you aren't the typical cinematic audience that wants stories laced with the romance-song-dance-fight routines. The casting is nicely done. Suraj Gowda act was impressive performance as a the psychopathic Raghu. The other standout performer is debutant Harisharva. Mathangi Prasan and Krishi Thapanda essay their parts well, while Aravind Iyer shines as the don Ravi. 'Kahi', instead, brings forth the darker side of human nature, but narrates it in a rather everyday manner.. after all who isn't flawed. Go watch this if you're up for something new, different and edgy. (rating- 3.5/5)

    English summary
    Kannada Movie 'Kahi' Critics Review. Kannada Actor suraj gowda, Harisharva Krishi Thapanda, Mathangi Prasan starrer 'Kahi'' has received positive response from the critics. Here is the reviews by Top News Papers of Karnataka. The movie is directed by debutant director arvinda shastry.
    Saturday, November 5, 2016, 10:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X