For Quick Alerts
  ALLOW NOTIFICATIONS  
  For Daily Alerts

  ವಿಮರ್ಶಕರ ಪ್ರಕಾರ 'ಗಯ್ಯಾಳಿಗಳು' ಗೆದ್ದುಬಿಟ್ಟರು ಕಣ್ರೀ.!

  By Harshitha
  |

  ತಮ್ಮ ಎಂದಿನ ಶೈಲಿಯ ರೌಡಿಸಂ ಆಧಾರಿತ ಸಿನಿಮಾಗಳನ್ನ ಪಕ್ಕಕ್ಕೆ ಸರಿಸಿ, ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ರಚಿಸಿರುವ ಪ್ರಸಿದ್ಧ 'ಕಿರಗೂರಿನ ಗಯ್ಯಾಳಿಗಳು' ಕಥೆ ಆಧರಿಸಿ ಅದೇ ಶೀರ್ಷಿಕೆ ಅಡಿ ನಿರ್ದೇಶಕಿ ಸುಮನಾ ಕಿತ್ತೂರು ಆಕ್ಷನ್ ಕಟ್ ಹೇಳಿರುವ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.

  ಗಯ್ಯಾಳಿಗಳ ಆರ್ಭಟಕ್ಕೆ ಕನ್ನಡ ಸಿನಿ ಪ್ರೇಕ್ಷಕರು ಶಿಳ್ಳೆ-ಚಪ್ಪಾಳೆ ಹೊಡೆದಿದ್ದಾರೆ. ಅವರಂತೆ ನಮ್ಮ ಸಿನಿಮಾ ವಿಮರ್ಶಕರೂ ಕೂಡ 'ಕಿರಗೂರಿನ ಗಯ್ಯಾಳಿಗಳಿಗೆ' ಮನಸೋತಿದ್ದಾರೆ ಅಂದ್ರೆ ನೀವು ನಂಬಲೇಬೇಕು.[ವಿಮರ್ಶೆ: 'ಗಯ್ಯಾಳಿಗಳ ದರ್ಬಾರ್' ನೀವು ನೋಡ್ಲೇಬೇಕು]

  ಬಹುತೇಕ ಎಲ್ಲಾ ಕನ್ನಡ ಸಿನಿ ವಿಮರ್ಶಕರು 'ಕಿರಗೂರಿನ ಗಯ್ಯಾಳಿಗಳು' ಚಿತ್ರಕ್ಕೆ ಭೇಷ್ ಅಂದಿದ್ದಾರೆ. ಬೇಕಾದ್ರೆ ನೀವೇ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ, ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ನೀಡಿರುವ ವಿಮರ್ಶೆಗಳನ್ನ ಓದಿ....

  ಗ್ರಾಮೀಣ ಸೊಗಡು - ಪ್ರಜಾವಾಣಿ

  ಗ್ರಾಮೀಣ ಸೊಗಡು - ಪ್ರಜಾವಾಣಿ

  'ಕಿರಗೂರಿನ ಗಯ್ಯಾಳಿಗಳು' ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಥೆಗಳಲ್ಲೊಂದು. ಈ ಕಥೆಯನ್ನು ಆಧರಿಸಿದ ನಿರ್ದೇಶಕಿ ಸುಮನ್ ಕಿತ್ತೂರು ನಿರ್ದೇಶಿಸಿರುವ ಸಿನಿಮಾ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುತ್ತದೆ. ಹಳ್ಳಿಗಳಲ್ಲಿ ಕಾಣುವ ಕಂದಾಚಾರ, ಜಾತಿಯ ಹೆಸರಿನಲ್ಲಿ ಅಲ್ಲಿನ ಜನರನ್ನು ಒಡೆದು ಲಾಭ ಪಡೆಯುವ ಹುನ್ನಾರ, ಸಾರಾಯಿ ಅಂಗಡಿಯಿಂದ ಹದಗೆಡುವ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನು ನಿರ್ದೇಶಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ.

  ಗೆದ್ದ ಗಯ್ಯಾಳಿಗಳು - ವಿಜಯ ಕರ್ನಾಟಕ

  ಗೆದ್ದ ಗಯ್ಯಾಳಿಗಳು - ವಿಜಯ ಕರ್ನಾಟಕ

  ಭೂಗತ ಜಗತ್ತಿನ ಅಂತರಾಳವನ್ನು ಅದ್ಭುತವಾಗಿ ತೆರೆಯ ಮೇಲೆ ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕಿ ಸುಮನಾ ಕಿತ್ತೂರು, ಹೊಸ ರೀತಿಯ ಕತೆಯನ್ನು ಆಯ್ಕೆ ಮಾಡಿ ಉತ್ತಮ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಹಳ್ಳಿಯ ಪರಿಸರವನ್ನು ಸಹಜವಾಗಿ ಮೂಡಿಸುವಲ್ಲಿ ಇನ್ನಷ್ಟು ಪರಿಶ್ರಮ ಬೇಕಿತ್ತು ಅನ್ನಿಸುತ್ತದೆ. ಪ್ರಾಪರ್ಟಿಗಳು ಮತ್ತು ನಟರಿಗೆ ಮಾಡಿರುವ ಮೇಕಪ್ ಮೈನಸ್ ಪಾಯಿಂಟ್. ಉಳಿದಂತೆ ಮನರಂಜನೆಗೆ ನೋಡಬೇಕೆನ್ನುವ ಪ್ರೇಕ್ಷಕರನ್ನು ಕಿರಗೂರಿನ ಗಯ್ಯಾಳಿಗಳು ನಿರಾಶೆ ಮಾಡುವುದಿಲ್ಲ. ದಾನಮ್ಮನ ಪಾತ್ರದಲ್ಲಿ ಗಯ್ಯಾಳಿ ಕಾಣಿಸದೆ ಸಪ್ಪೆ ಎನಿಸುತ್ತಾರೆ. ಸುಕೃತಾ ವಾಗ್ಲೆ ನಟನೆಯಲ್ಲಿ ಗಯ್ಯಾಳಿತನ ಕಾಣುತ್ತದೆ. ಚಿಕ್ಕ ಪಾತ್ರವಾದರೂ ತಹಸೀಲ್ದಾರ್ ಪ್ರಕಾಶ್‌ಬೆಳವಾಡಿ ಚೆನ್ನಾಗಿ ನಟಿಸಿದ್ದಾರೆ. ಸಂಪತ್, ಸುಂದರ್, ಅಚ್ಯುತ್ ನಟನೆ ಉತ್ತಮ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸುಮನಾ ಪ್ರಯತ್ನ ಮೆಚ್ಚುಗೆ ಗಳಿಸುತ್ತದೆ. - ಪದ್ಮಾ ಶಿವಮೊಗ್ಗ

  ಕಿರುಗೂರಿಗೆ ಹೋದ್ರೆ ಬೈಗುಳ ಗ್ಯಾರಂಟಿ - ಕನ್ನಡ ಪ್ರಭ

  ಕಿರುಗೂರಿಗೆ ಹೋದ್ರೆ ಬೈಗುಳ ಗ್ಯಾರಂಟಿ - ಕನ್ನಡ ಪ್ರಭ

  ಸ್ವಲ್ಪ ತ್ರಾಸಾಗುವುದು ಖಚಿತ. ಹಾಗಂತ ನೀವು ಕೊಟ್ಟ ಕಾಸಿಗೆ ಮೋಸವಿಲ್ಲ. ನಿಜವಾದ ಹಳ್ಳಿಯೊಂದಕ್ಕೆ ನೀವು ಹೋಗಲು ಬಯಸಿದ್ದರೆ 'ಕಿರಗೂರಿನ ಗಯ್ಯಾಳಿಗಳ' ದರ್ಶನ ಮಾಡಲು ಅಡ್ಡಿಯಿಲ್ಲ. ಕತೆಯ ಸಾಹಿತ್ಯವೇ ಓದುಗನ ಮುಂದೆ ರೋಚಕವಾದ ಒಂದು ಚಿತ್ರಣದ ಅನುಭವ ನೀಡುವ ಹಾಗೆ, ಅದರ ದೃಶ್ಯರೂಪಕ ಮನಮುಟ್ಟುವಂತೆ ತೆರೆಯಲ್ಲಿ ಮೂಡಿರುವುದು ಈ ಚಿತ್ರದ ವಿಶೇಷ - ದೇಶಾದ್ರಿ ಹೊಸ್ಮನೆ

  ಗಯ್ಯಾಳಿಗಳ ಕೈಲಿ ಗಾಯಾಳುಗಳಾಗಿ, ಧಾರಾಳ! - ಉದಯವಾಣಿ

  ಗಯ್ಯಾಳಿಗಳ ಕೈಲಿ ಗಾಯಾಳುಗಳಾಗಿ, ಧಾರಾಳ! - ಉದಯವಾಣಿ

  ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಮತ್ತು ಅಷ್ಟೇ ಗಾಢ ಕತೆ 'ಕಿರಗೂರಿನ ಗಯ್ಯಾಳಿಗಳು'. ಬರಹ ರೂಪದಲ್ಲಿದ್ದ ಊರನ್ನು, ಕಣ್ಮುಂದೆ ಕಾಲ್ಪನಿಕವಾಗಿ ಸುಮನಾ ಕಿತ್ತೂರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಯಾವುದೋ ದಶಕದ ಹಳ್ಳಿಯನ್ನು ಹಸಿಹಸಿಯಾಗಿ, ಹಸಿಹಸಿ ಭಾಷೆ, ಸನ್ನಿವೇಶಗಳ ಸಮೇತ ಧೈರ್ಯವಾಗಿ ಹೇಳಿದ್ದಾರೆ ನಿರ್ದೇಶಕಿ. - ವಿಕಾಸ ನೇಗಿಲೋಣಿ

  Kiragoorina Gayyaligalu Movie Review - Times of India

  Kiragoorina Gayyaligalu Movie Review - Times of India

  D Suman Kittur's most ambitious project till date is also her best work so far. This adaptation of Poornachandra Tejaswi's short stories is the best tribute anyone could have given to the writer and his body of work. The film is rustic yet colourful, with characters that stand out. The film follows the covert fight between the greed in the minds of certain village authorities and the easily wavering minds of the menfolk in the village, with the rowdy women of Kiragooru having an equally important role to play. The real hero of the film is Suman, for her narrative and adaptation transports you to this make-believe hamlet of Kiragooru. She has cleverly woven the characters and happenings and extracted the best out of everyone. When it comes to performances, Shwetha Srivatsav easily stands taller than the rest, for she delivers strongly in an author-backed role. Sukratha Wagle is the other revelation in the film. Manasa Joshi has yet another prized performance, while Sonu Gowda's silent act differentiates her from the rest of the rowdy women - Sunayana Suresh

  MOVIE REVIEW: KIRAGOORINA GAYYALIGALU - Bangalore Mirror

  MOVIE REVIEW: KIRAGOORINA GAYYALIGALU - Bangalore Mirror

  The film delights in all its attempts to be simple. Even Tejaswi along with another of his literary characters, Krishne Gowda (of the elephant fame) are talked about as characters in the film. The villagers have one accent and then the women who are married to that village have their own! Every minute detail is taken care of.

  Shwetha Srivatsav and Kishore are in the middle of most of the narrative. But even the character that appears for a few minutes leaves an impression. Each of them have lived their characters. Realistic dialogues, brilliant cinematography, unbelievable art work and an impressive background score make this film a must watch for so many reasons. - Shyam Prasad S

  Kittur's Boldness Makes it Worth While - The New Indian Express

  Kittur's Boldness Makes it Worth While - The New Indian Express

  Boldness is replete in her attempt to tell a story of what happens when women takes the law into their hands. Unlike popular route taken by the scriptwriter, she has stuck to the pulse of Tejaswai's novel, and has expanded on the subject while restricting the story to the rural landscape, which is the strength of this movie. Without any song, the background score by Sadhu Kokila gels with the theme. Cinematographer Manohar Joshi has followed the director's instructions well and his picturisation of the village environment is laudableFor the packed city population, Kiragoorina Gayyaligalu will be ‘going back to the roots' experience while the village folks will definitely relate to the film. - A Sharadhaa

  English summary
  Kannada Actresses Shwetha Srivatsav, Sonu Gowda, Sukrutha Wagle starrer 'Kiragoorina Gayyaligalu' has received positive response from the critics. Here is the collection of reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X