ವಿಮರ್ಶೆ: ರಿಯಲ್ ಸ್ಟಾರ್ ಚಿತ್ರಗಳ ಛಾಯೆಯಲ್ಲಿ 'ಕಿರೀಟ'ದ ಹೊಳಪು

By Suneel

'ಕಿರೀಟ' ಟೈಟಲ್‌ ಗೆ 'ನಾನು(ನಾನತ್ವ)' ಎಂಬ ಅರ್ಥವನ್ನು ಚಿತ್ರದಲ್ಲಿ ನೀಡಲಾಗಿದೆ. ತಲೆಗಳು ಬದಲಾಗುತ್ತಿರುತ್ತವೆ. ಆದರೆ ನಾನತ್ವ ಎಂಬುದು ಬದಲಾಗುವುದಿಲ್ಲ. ಎಲ್ಲರು ತಮ್ಮ ಸ್ವಾರ್ಥ ಸಾಧನೆಗಾಗಿ ತಮ್ಮ ಗುಣದಿಂದ ನಾನೇ ಮೇಲು ಎಂದು ಮನಸ್ಸಿನೊಳಗೆ ಅಂದುಕೊಂಡು ಸ್ವಹಿತ ಸಾಧಿಸಿಕೊಳ್ಳಲು ಮುಂದಾಗುತ್ತಾರೆ. ಈ ನಡುವೆ ಯಾರ ಮೇಲೆ ಎಷ್ಟೇ ಪ್ರೀತಿ, ಯಾರ ಮೇಲೆ ಎಷ್ಟೇ ನಂಬಿಕೆ ಇದ್ದರೂ ಕೊನೆಗೆ ಅವರವರ ಬದುಕನ್ನು ಅವರು ಸಾರ್ಥಕ ಮಾಡಿಕೊಳ್ಳುವುದೇ ಎಲ್ಲರಿಗೂ ಮುಖ್ಯವಾಗಿರುತ್ತದೆ ಎಂಬುದು ಚಿತ್ರದ ಸಾರಾಂಶ. ಇದನ್ನೇ ಕನ್ನಡ ಚಿತ್ರಗಳ ಒಂದಷ್ಟು ಸಿದ್ಧ ಸೂತ್ರಗಳ ಮೂಲಕ ನವ ನಿರ್ದೇಶಕ ಕಿರಣ್ ಚಂದ್ರ 'ಕಿರೀಟ'ದಲ್ಲಿ ಹೇಳಿ ಮೊದಲ ಚಿತ್ರದಲ್ಲಿಯೇ ಕನ್ನಡದ ಮುಂದಿನ ಯಶಸ್ವಿ ನಿರ್ದೇಶಕನಾಗುವ ಭರವಸೆ ಮೂಡಿಸಿದ್ದಾರೆ. ಚಿತ್ರದ ಸಂಪೂರ್ಣ ವಿರ್ಮಶೆ ಈ ಕೆಳಗಿನಂತಿದೆ.

Rating:
3.0/5

ಚಿತ್ರ: 'ಕಿರೀಟ'
ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ: ಕಿರಣ್ ಚಂದ್ರ
ಸಂಗೀತ: ಸಮೀರ್ ಕುಲಕರ್ಣಿ
ಛಾಯಾಗ್ರಹಣ: ಪರಮೇಶ್ ಸಿ.ಎಂ
ಸಂಕಲನ: ಶ್ರೀಕಾಂತ್
ತಾರಾಗಣ: ಸಮರ್ಥ, 'ಉಗ್ರಂ' ಮಂಜುನಾಥ್ ಗೌಡ, ಲೇಖಾ ಚಂದ್ರ, ದೀಪ್ತಿ ಕಾಪ್ಸೆ, ರೋಹಿನಿ ಸಿಂಗ್ ಮತ್ತು ಇತತರು.
ಬಿಡುಗಡೆ ದಿನಾಂಕ: ಜುಲೈ 28, 2017

'ಕಿರೀಟ' ಕಥಾಹಂದರ

'ಕಿರೀಟ' ಕಥಾಹಂದರ

ಬಿಲ್ಡರ್ ಬಳಿ ಫೈನಾನ್ಸ್ ವಸೂಲಿ ಕೆಲಸ ಮಾಡುವ ಅಶೋಕ ಆಲಿಯಾಸ್ ದೇವ್ರು, ಪುಂಡರಿಂದ ತೊಂದರೆಗೊಳಗಾದ ಅಂಕಿತಾ ಹುಡುಗಿಯನ್ನು ರಕ್ಷಿಸುತ್ತಾನೆ. ಈ ಇಬ್ಬರಿಗೂ ಲವ್ ಆಗುತ್ತೆ. ಆಕೆ ಕೈಕೊಟ್ಟು ಹೋದಾಗ ನೋವಲ್ಲಿ ಅಳುತ್ತ ನಿಂತಿರುವ ಅಶೋಕನಿಗೆ ಇನ್ನೊಬ್ಬಳು ಅನಾಥೆ ಅನಿತಾ ಕಣ್ಣೀರೊರೆಸುತ್ತಾಳೆ. ಆಕೆಗೆ ಆಶೋಕನ ಮೇಲೆ ಲವ್ ಆಗುತ್ತೆ. ನಂತರ ಬಿಲ್ಡರ್ ಜೊತೆಯ ಕಿರಿಕ್ ನಿಂದಾಗಿ ಕೆಲಸ ಕಳೆದುಕೊಂಡ ಅಶೋಕನ ಬದಲಾವಣೆ ನೋಡಿ ಈಕೆಯೂ ಆತನನ್ನು ಬಿಟ್ಟು ಹೋಗುತ್ತಾಳೆ. ಕೈಕೊಟ್ಟು ಹೋದ ಹುಡುಗಿಯರ ನೆನಪಲ್ಲಿ ದೇವದಾಸನಾಗುವುದಿಲ್ಲ, ಕುಡಿದು ಹಾಳಾಗುವುದಿಲ್ಲ ಎನ್ನುವ ಅಶೋಕನ ಜೀವನದಲ್ಲಿ ಮುಂದೇನಾಗುತ್ತಾನೆ ಎಂಬುದೇ ಇಂಟರೆಸ್ಟಿಂಗ್ ಸ್ಟೋರಿ. ಅದನ್ನು ಥಿಯೇಟರ್ ನಲ್ಲಿಯೇ ಹೋಗಿ ನೋಡಿ.

ಚಿತ್ರದ ವಿಶೇಷತೆ

ಚಿತ್ರದ ವಿಶೇಷತೆ

ಮೂರು ಶೇಡ್‌ನಲ್ಲಿ ಕಾಣಿಸಿಕೊಳ್ಳುವ ಚಿತ್ರದ ನಾಯಕನಿಗೆ ಇಲ್ಲಿ ಮೂವರು ನಾಯಕಿಯರು. ಮೂವರು ನಾಯಕಿಯರ ಬದುಕಿನ ಜೊತೆ ನಡೆಯುವ ನಾಯಕನ ಕಥೆಯೊಂದಿಗೆ ಜೀವನದಲ್ಲಿ ಪ್ರೀತಿ, ಬದುಕು ನಡುವಿನ ಪಾಠಗಳನ್ನು ಹೇಳಲಾಗಿದೆ. ಅದರಲ್ಲಿ ವಿಶೇಷತೆ ಏನಂದ್ರೆ ಚಿತ್ರ ನಾಯಕನ ಪಾತ್ರ, ಕಥೆ, ಸಂಭಾಷಣೆ ಎಲ್ಲದರಿಂದಲೂ ಉಪೇಂದ್ರ ರವರ 'ಉಪೇಂದ್ರ' ಸಿನಿಮಾವನ್ನು ನೆನಪಿಸುತ್ತದೆ. ಚಿತ್ರವನ್ನು ಪೂರ್ಣ ನೋಡಿದ ಪ್ರೇಕ್ಷಕ ಉಪೇಂದ್ರ ರವರ ಚಿತ್ರ ನೋಡಿದ ಅನುಭವ ಸಿಕ್ತು ಎಂದು ಹೇಳುವಲ್ಲಿ ಸಂಶಯವಿಲ್ಲ.

ನಟ ಸಮರ್ಥ್ ಅಭಿನಯ ಹೇಗಿದೆ?

ನಟ ಸಮರ್ಥ್ ಅಭಿನಯ ಹೇಗಿದೆ?

ಸಾಯಿ ಕುಮಾರ್ ಅವರಿಗೆ 'ಡೈಲಾಗ್ ಕಿಂಗ್' ಎಂಬ ಹೆಸರು ನೀಡಿರದೇ ಇದ್ದರೇ ನಟ ಸಮರ್ಥ್ ಗೆ ಆ ಹೆಸರು ಸೂಚಿಸಬಹುದಿತ್ತೇನೋ. ಸಿನಿಮಾ ಪೂರ್ಣ ಸಮರ್ಥ್ ಡೈಲಾಗ್‌ಗಳೇ ಹೆಚ್ಚು ಸೌಡ್‌ ಮಾಡುತ್ತವೆ. ಭರ್ಜರಿ ಆಗಿ ಫೈಟಿಂಗ್ ಮಾಡಿರುವ ನಟ ಒಂದಷ್ಟು ರಿಯಲ್ ಸ್ಟಂಟ್‌ಗಳನ್ನು ಮಾಡಿ ಅನುಭವಿ ನಟರಿಗೂ ಕಡಿಮೆ ಇಲ್ಲದಂತೆ ಎದುರಾಳಿಗಳ ಜೊತೆ ಹೋರಾಡಿದ್ದಾರೆ. ಪ್ರೇಕ್ಷಕರು, ಸಮರ್ಥ್ ಅಭಿನಯದಿಂದಲೇ ಹೆಚ್ಚು ಮನರಂಜನೆ ಪಡೆಯುತ್ತಾನೆ.

ಮೂವರು ನಟಿಯರು ಮತ್ತು ಇತರರು

ಮೂವರು ನಟಿಯರು ಮತ್ತು ಇತರರು

ಲೇಖಾ ಚಂದ್ರ ಕ್ಯೂಟ್ ಕಾಲೇಜು ಹುಡುಗಿಯಾಗಿ, ದೀಪ್ತಿ ಕಾಪ್ಸೆ ತನ್ನ ಜೀವನವನ್ನು ತಾನೇ ಸಾಗಿಸಲು ಕಷ್ಟಪಡುವ ಅನಾಥ ಹುಡುಗಿಯಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರೋಹಿಣಿ ಸಿಂಗ್ ರವರು ತಮ್ಮ ಗ್ಲಾಮರ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ನಿರ್ದೇಶಕ ಕಿರಣ್ ಚಂದ್ರ ಆಕ್ಟ್ ಮಾಡಿದ್ದರೇ ಚೆನ್ನಾಗಿರುತ್ತಿತ್ತು...

ನಿರ್ದೇಶಕ ಕಿರಣ್ ಚಂದ್ರ ಆಕ್ಟ್ ಮಾಡಿದ್ದರೇ ಚೆನ್ನಾಗಿರುತ್ತಿತ್ತು...

ಕತೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕಿರಣ್ ಚಂದ್ರ ಟ್ಯಾಲೆಂಟ್ ಗಮನಿಸಿದರೆ, ಅವರೇ ನಾಯಕನಾಗಿ ಅಭಿನಯಿಸಿದ್ದರೇ ಚಿತ್ರ ಇನ್ನೂ ಚೆನ್ನಾಗಿರುತ್ತಿತ್ತೇನೋ ಅನ್ನೋ ಅಲೋಚನೆ ಬರುತ್ತದೆ. ಕಾರಣ ರಿಯಲ್ ಸ್ಟಾರ್ ಉಪೇಂದ್ರ ರವರ ಸಿನಿಮಾಗಳ ಕಂಪು 'ಕಿರೀಟ'ದಲ್ಲಿ ಎದ್ದು ಕಾಣುತ್ತದೆ. ಕನ್ನಡಕ್ಕೆ ಮತ್ತೊಬ್ಬ ಭರವಸೆಯ ಡೈರೆಕ್ಟರ್ ಸಿಕ್ಕಿದ್ದಾರೆ ಎನ್ನಬಹುದು.

ಚಿತ್ರದ ಮೈನಸ್ ಪಾಯಿಂಟ್

ಚಿತ್ರದ ಮೈನಸ್ ಪಾಯಿಂಟ್

ಚಿತ್ರದ ವಿಸ್ಯುವಲ್ ಎಫೆಕ್ಟ್ ತೀರ ಮಂಕಾಗಿದ್ದು, ಛಾಯಾಗ್ರಹಣದಲ್ಲಿ ಮತ್ತು ಸಂಕಲನದಲ್ಲಿ ಚುರುಕುತನ ಹೆಚ್ಚಿನ ಪ್ರಮಾಣದಲ್ಲೇ ಬೇಕಿತ್ತು. ಸುಂದರವಾದ ಲೊಕೇಶನ್‌ಗಳ ದೃಶ್ಯಗಳಲ್ಲೂ ಸಹ ಕ್ಯಾಮೆರಾ ಕೈಚಳಕ ಕೈತಪ್ಪಿದೆ.

ಸಂಗೀತ

ಸಂಗೀತ

ಸಮೀರ್ ಕುಲಕರ್ಣಿ ರವರ ಸಂಗೀತ ಅಷ್ಟಕ್ಕೆ ಅಷ್ಟೆ. ಚಿತ್ರದ ಮೊದಲ ಹಾಡಿನ ಸಾಹಿತ್ಯದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ.ರಾಜ್ ಕುಮಾರ್, ಪ್ರಭಾಕರ್, ಶಂಕರ್ ನಾಗ್ ರವರ ಹೆಸರನ್ನು ಬಳಸಿ ಸಾಂಗ್ ಮಾಡಲಾಗಿದೆ. ಆದ್ದರಿಂದ ಆ ಒಂದು ಹಾಡು ಮಾತ್ರ ಪ್ರೇಕ್ಷಕರಿಂದ ಚಪ್ಪಾಳೆ, ಸಿಳ್ಳೆ ಗಿಟ್ಟಿಸಿಕೊಳ್ಳುತ್ತದೆ. ಅದನ್ನು ಬಿಟ್ಟರೇ ಯಾವುದೇ ಹಾಡು ನೆನಪಲ್ಲಿ ಉಳಿಯುವುದಿಲ್ಲ.

ಫೈನಲ್ ಸ್ಟೇಟ್‌ಮೆಂಟ್

ಫೈನಲ್ ಸ್ಟೇಟ್‌ಮೆಂಟ್

'ಕಿರೀಟ'ದಲ್ಲಿ ಭರ್ಜರಿ ಡೈಲಾಗ್ ಗಳು, ಸಮರ್ಥ್ ರವರ ಅಭಿನಯ ಮತ್ತು ರೋಚಕ ಫೈಟಿಂಗ್, ಪ್ರೀತಿಯಲ್ಲಿ ಸೋತವರಿಗೆ ಒಂದಷ್ಟು ಹಿತವೆನಿಸುವ ಮಾತುಗಳು ಇಷ್ಟವಾಗುತ್ತವೆ. ಈ ವೀಕೆಂಡ್ ಮನೆರಂಜನೆಗಾಗಿ ಕುಟುಂಬ ಸಮೇತ ಎಲ್ಲರೂ ತಪ್ಪದೇ ನೋಡಬಹುದಾದ ಸಿನಿಮಾ 'ಕಿರೀಟ'

More from Filmibeat

English summary
Actor Samartha starrer Kannada Movie 'Kireeta' has hit the screens today(July 28). The Movie gets positive response from the audience. 'Kireeta; Directed by Kiran Chandra. 'Kireeta' movie review is here..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X