twitter
    For Quick Alerts
    ALLOW NOTIFICATIONS  
    For Daily Alerts

    'ಕೃಷ್ಣ ರುಕ್ಕು' ಪ್ರೀತಿಗೆ ವಿಮರ್ಶಕರು ಏನಂದ್ರು

    By Suneetha
    |

    ಚಂದನವನದ 'ಕೃಷ್ಣ' ಅಂತಾನೇ ಖ್ಯಾತಿ ಪಡೆದಿರುವ ನಟ ಅಜೇಯ್ ರಾವ್ ಅವರು ಮತ್ತೊಮ್ಮೆ 'ಕೃಷ್ಣ' ಅನ್ನೋ ಲೇಬಲ್ ಹೊತ್ತು ಬಂದಿದ್ದಾರೆ. 'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಹಾಗೂ 'ಕೃಷ್ಣ ಲೀಲಾ' ಎಂಬ ಸಾಲು ಸಾಲು 'ಕೃಷ್ಣ' ರನ್ನು ತೆರೆ ಮೇಲೆ ತಂದ ಅಜೇಯ್ ಅವರು ಮತ್ತೆ 'ಕೃಷ್ಣ' ನ ಸಂಗ ಮಾಡಿದ್ದಾರೆ.

    ಈ ಬಾರಿ 'ಕೃಷ್ಣ'ನ ಸಂಗಕ್ಕೆ ಉತ್ತಮ ನಿದರ್ಶನ ಅಂದರೆ 'ಕೃಷ್ಣ ರುಕ್ಕು'. ನಿರ್ದೇಶಕ ಅನಿಲ್ ಕುಮಾರ್ ಆಕ್ಷನ್-ಕಟ್ ಹೇಳಿರುವ 'ಕೃಷ್ಣ ರುಕ್ಕು' ಸಿನಿಮಾ ನಿನ್ನೆ(ಫೆಬ್ರವರಿ 26) ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆ ಕಂಡಿದೆ.[ವಿಮರ್ಶೆ: ಉಡಾಫೆ ಕೃಷ್ಣ, ಬಜಾರಿ ರುಕ್ಕು ಕಥೆ ಚೆನ್ನಾಗಿದೆ]

    ಚಿತ್ರದಲ್ಲಿ ಮುಗ್ದೆ ಮತ್ತು ಬಜಾರಿಯಾಗಿ ಬೇಬಿ ಡಾಲ್ ಅಮೂಲ್ಯ ನಟಿಸಿದರೆ, ಉಡಾಫೆ ಮಾಡುವ ಕೃಷ್ಣನ ಪಾತ್ರದಲ್ಲಿ ಅಜೇಯ್ ರಾವ್ ಮಿಂಚಿದ್ದರು. ತೆಲುಗಿನ 'ಉಯ್ಯಾಲಾ ಜಂಪಾಲ' ಸಿನಿಮಾದ ರೀಮೇಕ್ ಆದ 'ಕೃಷ್ಣ-ರುಕ್ಕು'ಗೆ ['ಕೃಷ್ಣ-ರುಕ್ಕು' ರೋಮ್ಯಾನ್ಸ್ ನೋಡಲು ನೀವು ರೆಡಿನಾ?] ಖ್ಯಾತ ವಿಮರ್ಶಕರು ವಿಭಿನ್ನ ಕಮೆಂಟ್ ಮಾಡಿದ್ದಾರೆ. ವಿಮರ್ಶಕರ, ವಿಮರ್ಶೆಯ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

    ಭಾವನೆಗಳ ಬೆನ್ನೇರಿದ 'ಕೃಷ್ಣ-ರುಕ್ಕು' - ವಿಜಯ ಕರ್ನಾಟಕ

    ಭಾವನೆಗಳ ಬೆನ್ನೇರಿದ 'ಕೃಷ್ಣ-ರುಕ್ಕು' - ವಿಜಯ ಕರ್ನಾಟಕ

    ಎಲ್ಲರಂತಲ್ಲ ಕೃಷ್ಣ ರುಕ್ಕು. ಇಬ್ಬರಿಗೂ ಬಲು ಸೊಕ್ಕು. ಸದಾ ಕೋಳಿ ಜಗಳದಲ್ಲೇ ಕಾಲ ಕಳೆಯುವ ಇವರಿಬ್ಬರ ನಡುವೆ ಪ್ರೀತಿ ಪ್ರೇಮವು ಗುಪ್ತ ಗಾಮಿನಿ. ಈ ಹಿಂದಿನ ಕೃಷ್ಣನ ಪ್ರೇಮ ಕಥೆಗಳಿಗಿಂತ ವಿಭಿನ್ನವಾಗಿ ಕೃಷ್ಣ ರುಕ್ಕು ಲವ್ ಸ್ಟೋರಿಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಅನಿಲ್ ಕುಮಾರ್. ಪ್ರೀತಿ ಎಂದರೆ ಹೇಳಿಕೊಳ್ಳುವುದಲ್ಲ. ಪ್ರದರ್ಶನ ಮಾಡುವುದೂ ಅಲ್ಲ. ಅದು ಭಾವನೆಗೆ ಸಂಬಂಧಿಸಿದ್ದು ಎಂದು ಸಮರ್ಥವಾಗಿ ನಿರೂಪಿಸಿದ್ದಾರೆ. -ಮಹಾಬಲೇಶ್ವರ ಕಲ್ಕಣಿ.

    'ಕೃಷ್ಣನ ಕೊಳಲಿನ ಕರೆ' -ಪ್ರಜಾವಾಣಿ

    'ಕೃಷ್ಣನ ಕೊಳಲಿನ ಕರೆ' -ಪ್ರಜಾವಾಣಿ

    ರುಕ್ಕು ಕೃಷ್ಣನ ಸೋದರ ಮಾವನ ಮಗಳು. ಚಿಕ್ಕಂದಿನಿಂದ ಇಬ್ಬರೂ ಕಚ್ಚಾಡಿಕೊಂಡು ಬೆಳೆದವರು. ‘ರುಕ್ಕು ತನಗೆ ಒಲಿಯಲಿ' ಎಂದು ಕೃಷ್ಣ ಇನ್ನಾರನ್ನೋ ಪ್ರೇಮಿಸುವ ನಾಟಕವಾಡುತ್ತಾನೆ. ಪ್ರತ್ಯುತ್ತರವಾಗಿ ರುಕ್ಕು ಬೇರೊಬ್ಬನನ್ನು ಪ್ರೀತಿಸುತ್ತಾಳೆ. ತಾನು ಪ್ರೀತಿಸಿದವ ಮೋಸಗಾರ ಎಂದು ರುಕ್ಕುಗೆ ತಿಳಿಯುತ್ತಲೇ ಕೃಷ್ಣ ಹತ್ತಿರವಾಗುತ್ತಾನೆ. ಈ ಮಧ್ಯೆ ರುಕ್ಕುವಿನ ತಂದೆ ಮಗಳಿಗೆ ಗಂಡು ಹುಡುಕುತ್ತಾರೆ. ಕೃಷ್ಣ-ರುಕ್ಕು ಉಪಾಯದಿಂದ ಮದುವೆ ಮುರಿಯುತ್ತಾರೆ. ಈ ನಡುವೆ ಕೃಷ್ಣನೇ ಹುಡುಕಿದ ಗಂಡಿನ ಕೈಯಿಂದ ರುಕ್ಕು ತಾಳಿ ಕಟ್ಟಿಸಿಕೊಳ್ಳುವ ದಿನವೂ ಬಂದೇ ಬಿಡುತ್ತದೆ. ಮುಂದೇನಾಗುತ್ತದೆ? ರುಕ್ಕು ಕೈ ಹಿಡಿಯುವವರು ಯಾರು ಎನ್ನುವುದು ಚಿತ್ರದ ಕುತೂಹಲಕರ ಘಟ್ಟ.

    'ಕನ್ನಡದ ಮರದಲ್ಲಿ ತೆಲುಗಿನ ಉಯ್ಯಾಲೆ' - ಕನ್ನಡ ಪ್ರಭ

    'ಕನ್ನಡದ ಮರದಲ್ಲಿ ತೆಲುಗಿನ ಉಯ್ಯಾಲೆ' - ಕನ್ನಡ ಪ್ರಭ

    ಯಾವಾಗಲೂ ಕಚ್ಚಾಡುವ ಕೃಷ್ಣ ಮತ್ತು ರುಕ್ಕುರನ್ನು ಬಾಳಸಂಗಾತಿಯಂತೆ ನೋಡಬೇಕೆಂಬುದು ಎರಡು ಮನೆಯ ಹಿರಿ ಜೀವಗಳ ಆಸೆ. ಆದರೆ, ಅದಕ್ಕೆ ಸೋದರ ಮಾವನ ಅಡ್ಡಗಾಲು. ಗಂಡ ಕಳೆದುಕೊಂಡವಳ ಮನೆಗೆ ತನ್ನ ಮಗಳು ಸೊಸೆಯಾಗಬಾರದು ಎನ್ನುವುದರ ಜತೆಗೆ ಕೃಷ್ಣನ ವಿಚಾರದಲ್ಲಿ ದೊಡ್ಡ ಇಗೋ ಬೆಳೆಸಿಕೊಂಡಿರುವ ಸೋದರ ಮಾವ. ಅಲ್ಲದೆ ಕೃಷ್ಣನಿಗೂ ರುಕ್ಕು ಮೇಲೆ ಅಂಥ ಒಳ್ಳೆಯ ಅಭಿಪ್ರಾಯವಿಲ್ಲ ಹೀಗಾಗಿ ರುಕ್ಕು ಜತೆಗಿನ ಹುಡುಗಾಟಿಕೆಯ ಸರಸ ಜಗಳದಂತೆ ಕಂಡು ಅದು ವಿರಸಕ್ಕೆ ಬರುವ ಹೊತ್ತಿಗೆ ಪ್ರೀತಿ ಚಿಗುರುತ್ತದೆ. - ಆರ್.ಕೇಶವಮೂರ್ತಿ.

    'ರುಕ್ಕು ಚೀರಾಟ ಕೃಷ್ಣನ್ ಹೋರಾಟ' - ವಿಜಯವಾಣಿ

    'ರುಕ್ಕು ಚೀರಾಟ ಕೃಷ್ಣನ್ ಹೋರಾಟ' - ವಿಜಯವಾಣಿ

    ಆತ ಅತ್ತೆ ಮಗ ಕೃಷ್ಣ, ಈಕೆ ಮಾವನ ಮಗಳು ರುಕ್ಕು. ಇಬ್ಬರ ನಡುವೆ ಸದಾ ಕಚ್ಚಾಟ. ಪರಸ್ಪರ ಹೇಳಿಕೊಳ್ಳದಿದ್ದರೂ ಒಳಗೊಳಗೆ ಅನುರಾಗದ ಸುಳಿದಾಟ. ಆಕೆಗೆ ಆತನೇ ಬೇರೊಬ್ಬ ವರನನ್ನು ಹುಡುಕಿ ಮದುವೆ ಮಾಡಲು ಮುಂದಾಗುವ ಸುಮಧುರ ಪರದಾಟ. ಇಡೀ ಚಿತ್ರ ಸಾಗುವುದು ಮಲೆನಾಡಿನ ಒಂದು ಪುಟ್ಟ ಹಳ್ಳಿಯಲ್ಲಿ. ಒಂದೇ ಊರನ್ನು ಮತ್ತೆ ಮತ್ತೆ ಸುತ್ತಿ ಸುಸ್ತಾದಂತೆ, ಕಥೆ ಕೂಡ ಎಲ್ಲೂ ಹೋಗದೆ ಬಸವಳಿದು ಪ್ರೇಕ್ಷಕನನ್ನು ಸುಸ್ತು ಹೊಡೆಸುತ್ತದೆ.

    'A LOVE-HATE STORY ABOUT A COUPLE AND THEIR FAMILIES- Bangloremirrir.com

    'A LOVE-HATE STORY ABOUT A COUPLE AND THEIR FAMILIES- Bangloremirrir.com

    Krishna-Rukku is a romantic film which explores the love-hate relationship between two youngsters and their closely-related families. The girl and boy who have grown up together realise very late that their relationship is that of love. By the time they realise it, they are about to go separate ways. - By Shyam Prasad S.

    English summary
    Kannada movie 'Krishna Rukku' Critics Review. Kannada Actor Ajay Rao, Kannada Actress Amoolya starrer 'Krishna Rukku' has received mixed response from the critics. here is the collection of reviews by Top News Papers of Karnataka. The movie is directed by 'Dilwala' fame Anil Kumar.
    Saturday, February 27, 2016, 12:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X