twitter
    For Quick Alerts
    ALLOW NOTIFICATIONS  
    For Daily Alerts

    ಆರ್.ಚಂದ್ರು 'ಲಕ್ಷ್ಮಣ'ನಿಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

    By Suneetha
    |

    ತೆಲುಗಿನ 'ಆತನೊಕ್ಕಡೆ' ರೀಮೇಕ್ ಮಾಡಿರುವ ಆರ್.ಚಂದ್ರು ಅವರು ನವ ನಟ ಅನೂಪ ಅವರನ್ನು ಹಾಕಿಕೊಂಡು ಪಕ್ಕಾ ಮಾಸ್ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ಜಬರ್ದಸ್ತ್ ಫೈಟ್ ದೃಶ್ಯಗಳಿದ್ದರಿಂದ ನಟ ಅನೂಪ್ ಅವರು ಆಕ್ಷನ್ ಹೀರೋ ಎನಿಸಿಕೊಂಡಿದ್ದಾರೆ.

    'ಲಕ್ಷ್ಮಣ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅನೂಪ್ ಅವರ ತಂದೆ ಪಾತ್ರ ವಹಿಸಿದ್ದು, ನಟಿ ಮೇಘನಾ ರಾಜ್ ಅವರು ನಾಯಕಿಯಾಗಿ ಸಾಥ್ ಕೊಟ್ಟಿದ್ದರು.['ಲಕ್ಷ್ಮಣ' ವಿಮರ್ಶೆ: ಕನ್ನಡ ಚಿತ್ರರಂಗಕ್ಕೆ ಸಿಕ್ಕ ಭರವಸೆಯ 'ಆಕ್ಷನ್ ಹೀರೋ']

    ಅದ್ದೂರಿ ಸಾಹಸ ದೃಶ್ಯಗಳನ್ನೊಳಗೊಂಡಿದ್ದ 'ಲಕ್ಷ್ಮಣ' ಚಿತ್ರ ಪ್ರೇಕ್ಷಕರಿಗೆ ತೆಲುಗು ಚಿತ್ರಗಳನ್ನು ನೆನಪಿಸಿದೆ ಅಂತಾನೇ ಹೇಳಬಹುದು. ನಟಿ ಶ್ರೀದೇವಿ, 'ಬಾಹುಬಲಿ' ಖ್ಯಾತಿಯ ತೆಲುಗು ನಟ ಕೋಟೆ ಪ್ರಭಾಕರ್, ಬಹುಭಾಷಾ ನಟ ಪ್ರದೀಪ್ ರಾವತ್ ಮುಂತಾದವರು ಮಿಂಚಿದ್ದ 'ಲಕ್ಷ್ಮಣ' ಚಿತ್ರಕ್ಕೆ ವಿಮರ್ಶಕರು ವಿಭಿನ್ನ ಕಾಮೆಂಟ್ ಮಾಡಿದ್ದಾರೆ.[ಸ್ಯಾಂಡಲ್ ವುಡ್ ನಲ್ಲಿ ಅನೂಪ್ ನಿಂತ: ಗಲ್ಲಾಪೆಟ್ಟಿಗೆಯಲ್ಲಿ 'ಲಕ್ಷ್ಮಣ' ಗೆದ್ದ]

    ಆರ್.ಚಂದ್ರು ಸಾರಥ್ಯದ 'ಲಕ್ಷ್ಮಣ' ಚಿತ್ರಕ್ಕೆ ಖ್ಯಾತ ವಿಮರ್ಶಕರುಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ...

    'ಈತ ಮಾಸ್ ಲಕ್ಷ್ಮಣ' - ವಿಜಯ ಕರ್ನಾಟಕ

    'ಈತ ಮಾಸ್ ಲಕ್ಷ್ಮಣ' - ವಿಜಯ ಕರ್ನಾಟಕ

    ಇದು ಪಕ್ಕಾ ಮಾಸ್ ಸಿನಿಮಾ ಆಗಿದ್ದರಿಂದ, ಕತೆಯ ಬಗ್ಗೆ ಕೇಳುವ ಹಾಗಿಲ್ಲ. ರೌಡಿಗಳನ್ನು ಮಟ್ಟ ಹಾಕುವುದೇ ನಾಯಕನ ಕೆಲಸವಾಗಿದ್ದರಿಂದ, ಅನೂಪ್ ಅದನ್ನು ಸಮರ್ಥವಾಗಿ ಮಾಡಿದ್ದಾರೆ. ಡಾನ್ಸ್ ಮತ್ತು ಸಾಹಸ ಸನ್ನಿವೇಶಗಳಲ್ಲಿ ಆಸಕ್ತಿ ತೋರಿಸಿದಂತೆ ನಟನೆಯಲ್ಲೂ ಅವರು ಶ್ರಮ ವಹಿಸಬೇಕಿತ್ತು. ಅಂಜಲಿ ಪಾತ್ರವನ್ನು ಮೇಘನಾ ರಾಜ್ ಚೆನ್ನಾಗಿ ನಿಭಾಯಿಸಿದ್ದಾರೆ. ಅದರಲ್ಲೂ 'ರಾಧಾ...' ಹಾಡಿನಲ್ಲಿ ಇವರನ್ನು ನೋಡುವುದೇ ಸೊಗಸು. ರವಿಚಂದ್ರನ್ ಕೈಯಲ್ಲಿ ಗನ್ ಇದ್ದರೂ, ಅದು ಹೂವಿನಂತೆ ಕಂಡರೆ ಅಚ್ಚರಿ ಇಲ್ಲ. ಆ ರೀತಿ ಮುದ್ದು ಮುದ್ದಾಗಿ ಕಂಡಿದ್ದಾರೆ ಕ್ರೇಜಿಸ್ಟಾರ್. -ಶರಣು ಹುಲ್ಲೂರು. Rating:2.5/5

    'ಮೀರಲಾಗದ ಲಕ್ಷ್ಮಣ ರೇಖೆ' - ಪ್ರಜಾವಾಣಿ

    'ಮೀರಲಾಗದ ಲಕ್ಷ್ಮಣ ರೇಖೆ' - ಪ್ರಜಾವಾಣಿ

    ಚಿತ್ರ ಆರಂಭವಾಗುವುದೇ ಕೊಲೆಯೊಂದಿಗೆ; ಅದೂ ಪೊಲೀಸ್ ಅಧಿಕಾರಿ ಜಗದೀಶ್ ಹತ್ಯೆ! ಆ ಕೃತ್ಯ ಮಾಡುವುದು ಒಬ್ಬ ಸುಂದರ ಯುವತಿ. ಅಂತ್ಯದಲ್ಲಿ ಆಕೆ ಗುಂಡೇಟು ತಿಂದು ನೆಲಕ್ಕೆ ಉರುಳುತ್ತಾಳೆ. ಇವೆರಡು ಸನ್ನಿವೇಶಗಳ ನಡುವಿನ ಎರಡೂವರೆ ತಾಸುಗಳಲ್ಲಿ ಬೀಳುವ ಹೆಣಗಳಿಗೆ ಲೆಕ್ಕವಿಟ್ಟವರಾರು? ಮಧ್ಯಂತರಕ್ಕೂ ಸ್ವಲ್ಪ ಹೊತ್ತು ಮುಂಚೆ ಮಚ್ಚು ಹಿಡಿದು ನಿಲ್ಲುವ ಲಕ್ಷ್ಮಣ, ವೈರಿಗಳ ರುಂಡ ಚೆಂಡಾಡುತ್ತಾನೆ. ಅದಕ್ಕೆ ಕಾರಣವೂ ಆಗಲೇ ಗೊತ್ತಾಗಿರುತ್ತದೆ. ಮುಂದಿನದೆಲ್ಲ ಬಾಂಬು- ಗುಂಡುಗಳ ಕಹಿಘಾಟು,ಮಚ್ಚು- ಲಾಂಗುಗಳ ದಾಳಿ..-ಆನಂದತೀರ್ಥ ಪ್ಯಾಟಿ.

    'ಲಕ್ಷ್ಮಣರೇಖೆ ದಾಟಿದವರ ದುಷ್ಟಶಿಕ್ಷಣ' - ಉದಯವಾಣಿ

    'ಲಕ್ಷ್ಮಣರೇಖೆ ದಾಟಿದವರ ದುಷ್ಟಶಿಕ್ಷಣ' - ಉದಯವಾಣಿ

    ಒಂದೇ ಸ್ವಭಾವದ ಇಬ್ಬರು ಸಿಗೋದು ಲವ್ ಮಾಡೋದು, ಮದುವೆಯಾಗೋದು, ಕೊನೆಗೆ ದೂರವಾಗೋದು..ಈ ತರಹದ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. ಆದರೆ 'ಲಕ್ಷ್ಮಣ' ಚಿತ್ರದ ವಿಶೇಷತೆ ಏನೆಂದರೆ, ಒಂದೇ ಸ್ವಭಾವದವರು ಪರಸ್ಪರ 'ಐ ಲವ್ ಯೂ' ಅಂತ ಹೇಳಿಕೊಳ್ಳುವುದಕ್ಕೂ ಆಗುವುದಿಲ್ಲ. ಹಾಗಿರುತ್ತದೆ ಅವರಿಬ್ಬರ ಹಿನ್ನಲೆ. ಅವಳು ಮೈಸೂರಿಗೆ ಹೋಗಿ ಒಬ್ಬ ರಿಟೈರ್ಡ್ ಪೊಲೀಸ್ ಅಧಿಕಾರಿಯನ್ನು ಕೊಂದು ಬಂದಿರುತ್ತಾಳೆ. ಅವನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಯಾರನ್ನೋ ಕೊಲ್ಲುವುದಕ್ಕೆ ಬಂದಿರುತ್ತಾನೆ. ಹೀಗೆ ಇಬ್ಬರಿಗೂ ಒಂದು ಉದ್ದೇಶವಿರುತ್ತದೆ. ಆ ಉದ್ದೇಶ ಈಡೇರಿಸಿಕೊಳ್ಳುವುದಕ್ಕೆ ಇಬ್ಬರೂ ಸದ್ದಿಲ್ಲದೆ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಆದರೆ, ಯಾಕೆ? ಅದು ಗೊತ್ತಾಗಬೇಕಿದ್ದರೆ 'ಲಕ್ಷ್ಮಣ' ಚಿತ್ರವನ್ನು ನೋಡಬೇಕು. - ಚೇತನ್ ನಾಡಿಗೇರ್.

    'ರಕ್ತದ ಕೋಡಿ, ಪ್ರೀತಿಯ ಮೋಡಿ' - ಕನ್ನಡಪ್ರಭ

    'ರಕ್ತದ ಕೋಡಿ, ಪ್ರೀತಿಯ ಮೋಡಿ' - ಕನ್ನಡಪ್ರಭ

    ಕನ್ನಡದ ನೆಲಕ್ಕೆ ರಿಮೇಕ್ ಚಿತ್ರಗಳ ಪ್ರಯೋಗ ಅಷ್ಟಾಗಿ ಒಗ್ಗುವುದು ಕಷ್ಟ. ನೇಟಿವಿಟಿಗೆ ತಕ್ಕಂತೆ ಕತೆ ಬದಲಾಗಿದೆ, ತಾಂತ್ರಿಕತೆ ಅದ್ದೂರಿಯಾಗಿದೆ ಎಂದು ಎಷ್ಟೇ ಹೇಳಿಕೊಂಡರೂ ಇಲ್ಲಿತನಕ ರಿಮೇಕ್ ಮಾಡಿದವರ ಕತೆ ಖಾಲಿ ಹುತ್ತಕ್ಕೆ ಕೈ ಹಾಕಿದಂತೆ. ಈ ನಡುವೆಯೇ ನಿರ್ದೇಶಕ ಆರ್.ಚಂದ್ರು ಕನ್ನಡಕ್ಕೆ ಮತ್ತೊಂದು ರೀಮೇಕ್ ಚಿತ್ರ ತಂದಿದ್ದಾರೆ. ಆದರೂ 'ಲಕ್ಷ್ಮಣ' ರಿಮೇಕ್ ಪರಿಧಿ ದಾಟಿ ಪ್ರೇಕ್ಷಕನಿಗೆ ಹಿಡಿಸುವಂತೆ ತೆರೆಯಲ್ಲಿ ಮೂಡಿಬಂದಿದ್ದು ವಿಶೇಷ. ಅಂದಹಾಗೆ ಕನ್ನಡದ 'ಲಕ್ಷ್ಮಣ' ತೆಲುಗಿನ 'ಅತನೊಕ್ಕಡೆ' ರಿಮೇಕ್. ನಿರ್ಮಾಣದಲ್ಲಿ ಅದ್ದೂರಿ ಇಲ್ಲದಿದ್ದರೂ ಚಿತ್ರದ ಕತೆಯಲ್ಲಿಯೇ ನಿರ್ದೇಶಕ ಸುರೇಂದ್ರ ರೆಡ್ಡಿ ಆಟವಾಡಿ ಗೆದ್ದಿದ್ದಾರೆ. - ದೇಶಾದ್ರಿ ಹೊಸ್ಮನೆ. Rating: 3/5

    English summary
    Kannada movie 'Lakshmana' Critics Review. Kannada Actor Anup Revanna, Kannada Actress Meghana Raj, Kannada Actor Ravichandran starrer 'Lakshmana' has received mixed response from the critics. Here is the collection of reviews by Top News Papers of Karnataka. The movie is directed by R Chandru.
    Saturday, June 25, 2016, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X