twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ನಗಿಸುತ್ತಲೇ ಜೀವನ ಪಾಠ ಹೇಳುವ 'ಲೌಡ್ ಸ್ಪೀಕರ್'

    By Bharath Kumar
    |

    'ಲೌಡ್ ಸ್ಪೀಕರ್' ಬರಿ ಸಿನಿಮಾ ಮಾತ್ರವಲ್ಲ, ಇಂದಿನ ಪೀಳಿಗೆಗೆ ಜೀವನ ಪಾಠ ಮಾಡುವ ವೇದಿಕೆ. ಮೊಬೈಲ್ ಲೌಡ್ ಸ್ಪೀಕರ್ ಆನ್ ಮಾಡಿ ಮಾತಾಡಿದ್ರೆ ಅದರಿಂದ ಆಗುವ ಪರಿಣಾಮಗಳೇನು ಎಂಬುದನ್ನ ಒಂದೊಳ್ಳೆ ಮನರಂಜನೆಯ ಮೂಲಕ ತೆರೆಮೇಲೆ ತರಲಾಗಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ....

    Rating:
    3.5/5

    ಚಿತ್ರ: ಲೌಡ್ ಸ್ಟೀಕರ್
    ನಿರ್ದೇಶಕ: ಶಿವ ತೇಜಸ್
    ನಿರ್ಮಾಪಕ: ಡಾ ರಾಜು ಕೆ
    ಸಂಗೀತ ನಿರ್ದೇಶನ: ಹರ್ಷವರ್ಧನ್ ರಾಜ್
    ಕಲಾವಿದರು: ಅಭಿಷೇಕ್ ಜೈನ್, ಅನುಷಾ, ಕಾರ್ತಿಕ್ ರಾವ್, ಕಾವ್ಯ ಶಾ, ವಿಜಯ್ ಈಶ್ವರ್, ರಂಗಾಯಣ ರಘು ಮತ್ತು ಇತರರು.
    ಬಿಡುಗಡೆ: ಆಗಸ್ಟ್ 10, ಜುಲೈ

    ಚಿಕ್ಕದಾಗಿ ಮತ್ತು ಚೊಕ್ಕದಾಗಿದೆ

    ಚಿಕ್ಕದಾಗಿ ಮತ್ತು ಚೊಕ್ಕದಾಗಿದೆ

    'ಲೌಡ್ ಸ್ಪೀಕರ್' ಸಿನಿಮಾ ಸರಳವಾಗಿ ತುಂಬಾ ಚೊಕ್ಕವಾಗಿ ಮೂಡಿ ಬಂದಿದೆ. ಇದೊಂದು ರೆಗ್ಯುಲರ್ ಸಿನಿಮಾ ಎನಿಸಿದ್ರು, ಯಾವುದೇ ಅತಿರೇಕವಿಲ್ಲದೇ, ಡಬ್ಬಲ್ ಮೀನಿಂಗ್ ಡೈಲಾಗ್ ಗಳಿಲ್ಲದೇ, ಕಥೆಗೆ ಪೂರಕವಾದ ಅಂಶಗಳನ್ನಿಟ್ಟು ಚಿತ್ರಕಥೆ ಮಾಡಿದ್ದಾರೆ. ಒಂದೊಳ್ಳೆ ಸಂದೇಶವನ್ನ ಮನರಂಜನೆಯ ಮೂಲಕ ನೀಡುವುದರಲ್ಲಿ 'ಲೌಡ್ ಸ್ಪೀಕರ್' ಯಶಸ್ವಿಯಾಗಿದೆ.

    ಕಿಕ್ ಕೊಡುತ್ತೆ 'ಡೇಂಜರಸ್ ಗೇಮ್'

    ಕಿಕ್ ಕೊಡುತ್ತೆ 'ಡೇಂಜರಸ್ ಗೇಮ್'

    ಇದು ಮೂರು ಜೋಡಿಗಳು ಮತ್ತು ಎಲ್ಲರಿಗೂ ಕಾಮನ್ ಫ್ರೆಂಡ್ ಆಗಿದ್ದ ವ್ಯಕ್ತಿ ಸೇರಿ ಒಟ್ಟು ಏಳು ಜನರ ಮಧ್ಯೆ ನಡೆಯುವ ಕಥೆ. ಈ ಏಲು ಜನರು ಸೇರಿ ಒಂದು ಅಪಾಯಕಾರಿ ಗೇಮ್ ಆಡ್ತಾರೆ. ಅದರ ಹೆಸರೇ ಲೌಡ್ ಸ್ಪೀಕರ್. ಈ ಏಳು ಜನರಲ್ಲಿ ಯಾರಿಗೇ ಫೋನ್ ಬಂದ್ರು, ಮೆಸೆಜ್ ಬಂದ್ರು ಎಲ್ಲರ ಮುಂದೆ ಸ್ಪೀಕರ್ ಆನ್ ಮಾಡಿ ಮಾತನಾಡಬೇಕು. ಹೀಗೆ ಶುರುವಾಗುವ ಆಟ ಹೇಗೆ ಏಳು ಜನರ ಜೀವನವನ್ನ ಬದಲಿಸುತ್ತೆ ಎಂಬುದೇ ಕಥೆ.

    ನಗಿಸುವ ಪಾತ್ರಗಳು

    ನಗಿಸುವ ಪಾತ್ರಗಳು

    ಲೌಡ್ ಸ್ಪೀಕರ್ ಚಿತ್ರದಲ್ಲಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಅಭಿಷೇಕ್ ಜೈನ್, ಅನುಷಾ, ಕಾರ್ತಿಕ್ ರಾವ್, ಕಾವ್ಯ ಶಾ, ಸುಮಂತ್ ಭಟ್, ದಿಶಾ ದಿನಕರ್ ಎಲ್ಲರೂ ಅವರವರ ಪಾತ್ರವನ್ನ ಉತ್ತಮವಾಗಿ ಪೋಷಿಸಿದ್ದಾರೆ. ಅದರಲ್ಲೂ ರಮನಾಥ್ ನಿರ್ವಹಿಸಿರುವ ನಟ ಅಂತೂ ಇಡೀ ಚಿತ್ರಕ್ಕೆ ಕಾಮಿಡಿ ಟಾನಿಕ್ ಇದ್ದಾಗೆ. ತಮ್ಮ ವಿಭಿನ್ನ ಪಾತ್ರ ಮತ್ತು ಮ್ಯಾನರಿಸಂನಿಂದ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಹಿರಿಯ ನಟ ದತ್ತಣ್ಣ ಒಂದು ದೃಶ್ಯದಲ್ಲಿ ಬಂದರೂ ಪ್ರೇಕ್ಷಕರಿಗೆ ಮಸ್ತ್ ಕಿಕ್ ಕೊಡ್ತಾರೆ. ಪೊಲೀಸ್ ಪಾತ್ರದಲ್ಲಿ ರಂಗಾಯಣ ರಘು ಅವರು ಚಿತ್ರಕ್ಕೆ ಸಾಥ್ ನೀಡಿದ್ದಾರೆ.

    ಕೌಟುಂಬಿಕ ಮೌಲ್ಯ ಹೆಚ್ಚಿದೆ

    ಕೌಟುಂಬಿಕ ಮೌಲ್ಯ ಹೆಚ್ಚಿದೆ

    ಗಂಡ-ಹೆಂಡತಿಯ ಸಂಬಂಧ, ತಂದೆ-ತಾಯಿಯ ಮಹತ್ವ, ಅತ್ತೆ-ಮಾವನ ಮಹತ್ವದ ಬಗ್ಗೆ ಭಾವನಾತ್ಮಕವಾಗಿ ತೋರಿಸಲಾಗಿದೆ. ಪರಸ್ಪರ ವ್ಯಕ್ತಿಗಳ ನಡುವೆ ಅದು ಗಂಡಾಗಲಿ ಅಥವಾ ಹೆಣ್ಣಾಗಲಿ ನಂಬಿಕೆ ಮತ್ತು ಪ್ರೀತಿಯೇ ಮುಖ್ಯ ಎಂಬುದನ್ನ 'ಸಲಿಂಗಕಾಮಿ' ಪಾತ್ರವನ್ನ ಸೃಷ್ಟಿಸಿ ಅದರ ಮೂಲಕ ಗಮನ ಸೆಳೆದಿದ್ದಾರೆ.

    ಈ ಸಂದೇಶ ಎಲ್ಲರಿಗೂ ತಲುಪಬೇಕು

    ಈ ಸಂದೇಶ ಎಲ್ಲರಿಗೂ ತಲುಪಬೇಕು

    ಈಗಿನ ತಂತ್ರಜ್ಞಾನ ಕಲ್ಪನೆಗೂ ಮೀರಿ ಬೆಳೆದಿದೆ. ಇಂದಿನ ಪೀಳಿಗೆಯಂತೂ ಮೊಬೈಲ್ ಇಲ್ಲದೇ ಒಂದು ಕ್ಷಣವೂ ಇರುವುದಿಲ್ಲ. ಮೊಬೈಲ್ ಎನ್ನುವುದು ಕೇವಲ ಫೋನ್ ಮಾತ್ರವಲ್ಲ, ಪ್ರತಿಯೊಬ್ಬ ಮನುಷ್ಯನ ಖಾಸಗಿ ವಿಷ್ಯಗಳನ್ನ ಸಂಗ್ರಹಿಸಿಡುವ ಖಜಾನೆ. ಮದುವೆ ಆಗಿದ್ದರೂ ಪರಸ್ಪರ ಗಂಡ-ಹೆಂಡತಿ ಇಬ್ಬರಿಗೂ ಗೊತ್ತಿಲ್ಲದ ವಿಚಾರಗಳು ಈ ಮೊಬೈಲ್ ನಲ್ಲಿರುತ್ತೆ. ವಯಸ್ಸಾದ ಮುದುಕನೂ, ಬೆಳೆಯುತ್ತಿರುವ ಮಕ್ಕಳು ಮೊಬೈಲ್ ಗೆ ಹೊಂದಿಕೊಂಡಿರುತ್ತಾರೆ. ಇದರಿಂದ ಸಂಬಂಧಗಳ ಮೌಲ್ಯ ಕುಸಿಯುತ್ತಿದೆ. ನಂಬಿಕೆ ಅಳಸುತ್ತಿದೆ, ಜೀವನ ಶೈಲಿ ಬದಲಾಗುತ್ತಿದೆ ಎಂಬುದನ್ನ ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ.

    ತಾಂತ್ರಿಕವಾಗಿ ಸಿನಿಮಾ

    ತಾಂತ್ರಿಕವಾಗಿ ಸಿನಿಮಾ

    ನಿರ್ದೇಶಕ ಶಿವ ತೇಜಸ್ ಸರಳ ಅಂಶವನ್ನ ಸ್ವಲ್ಪ ವಿಭಿನ್ನವಾಗಿ ಹೇಳಿರುವುದು ಜನರಿಗೆ ತಲುಪುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಸುಮ್ ಸುಮ್ಮನೇ ಹಾಡುಗಳಿಲ್ಲದಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್. ಬಹುತೇಕ ಒಂದೇ ಮನೆಯಲ್ಲಿ ಚಿತ್ರದ ಶೂಟಿಂಗ್ ಆಗಿದೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಸಾಥ್ ನೀಡಿದೆ. ನಿರ್ಮಾಣದಲ್ಲಿ ದುಬಾರಿ ಕಾಣದಿದ್ದರೂ ನೀಟ್ ಆಗಿರುವುದು ನೋಡಬಹುದು.

    ಒಮ್ಮೆ ನೋಡಲು ಮಿಸ್ ಮಾಡ್ಕೊಬೇಡಿ

    ಒಮ್ಮೆ ನೋಡಲು ಮಿಸ್ ಮಾಡ್ಕೊಬೇಡಿ

    'ಲೌಡ್ ಸ್ಪೀಕರ್' ಚಿತ್ರವನ್ನ ಮೊದಲ ಸಲ ನೋಡುವ ಅನುಭವ ತುಂಬಾ ಚೆನ್ನಾಗಿರುತ್ತೆ. ಕೆಲವು ಗಂಭೀರ ವಿಷ್ಯಗಳು ಕೂಡ ಕಾಮಿಡಿಯಾಗಿಯೇ ಪ್ರೆಸೆಂಟ್ ಮಾಡಿರುವುದ್ರಿಂದ ನೋಡುಗರಿಗೆ ಬೋರ್ ಮಾಡಲ್ಲ. ಅಲ್ಲಿಗೆ ಮನರಂಜನೆ ಪಕ್ಕಾ. ಉಳಿದೆಲ್ಲವೂ ಇದು ಸಾಮನ್ಯ ಎನ್ನಬಹುದು. ಎರಡು ಗಂಟೆ ಆರಾಮಾಗಿ ಕೂತು ಸಿನಿಮಾ ನೋಡಲು ಯಾವುದೇ ಅಂಜಿಕೆ ಬೇಡ. ಆದ್ರೆ, ಸಿನಿಮಾದಂತೆ ಗೇಮ್ ಆಡೋಕೆ ಹೋಗ್ಬೇಡಿ, ಹೋದ್ರೆ ಎಡವಟ್ಟಾಗೋದು ಪಕ್ಕಾ.

    English summary
    Kannada Actor Abhishek jain, Kavya sha, anusha, rangayana raghu starrer starrer shiva tejas directorial Kannada Movie Loudspeaker review.
    Thursday, August 9, 2018, 14:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X