For Quick Alerts
  ALLOW NOTIFICATIONS  
  For Daily Alerts

  ಲವ್ ಇನ್ ಮಂಡ್ಯ ವಿಮರ್ಶೆ: ಒಪ್ಕೊಂಡ್ ಬಿಟ್ರು ಕಣ್ಲಾ

  |

  ಇದು ಕರ್ಣನ ಕಥೆಯಾದರೂ ಇಲ್ಲಿ ನಾಯಕ ನಟ ಯಾವ ತ್ಯಾಗವನ್ನೂ ಮಾಡಲ್ಲ, ದೇವದಾಸು ಆಗಲ್ಲ. ಮಂಡ್ಯದ ಕರ್ಣನೊಬ್ಬನ ಕಥೆ ಇದು. ಅವನ ಹೆಸರಷ್ಟೇ ಕರ್ಣ. ಉಳಿದಂತೆ ಮಹಾಭಾರತದ ಕರ್ಣನಿಗಾಗಲಿ, ಕರ್ನಾಟಕದ ಕರ್ಣನಿಗಾಗಲಿ ಸುತಾರಾಂ ಸಂಬಂಧವಿಲ್ಲ.

  ಗೀತ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅರಸು ಅಂತಾರೆ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಇದು. ಚಿತ್ರದಲ್ಲಿ ತಕ್ಕಮಟ್ಟಿಗೆ ಮಂಡ್ಯ ಭಾಷೆಯ ಸೊಗಡಿದೆ, ಪಡ್ಡೆಗಳ ಮೈಯಲ್ಲಿ ಕರೆಂಟ್ ಹರಿಸುವ ಹಾಡಿದೆ, ಕಚಗುಳಿ ಇಡುವ ಸನ್ನಿವೇಶಗಳಿವೆ, ತಂಪೆರೆವ ಛಾಯಾಗ್ರಹಣವೂ ಇದೆ.

  love-in-mandya1

  ಆದರೆ ಮಂಡ್ಯದಲ್ಲಿ ಶುರುವಾಗುವ ಲವ್ ಕೊನೆಯಾಗುವುದು ಮಾತ್ರ ಹೊಸೂರಿನಲ್ಲಿ. ಚಿತ್ರದ ಮೊದಲರ್ಧ ಮಂಡ್ಯದ ಹಳ್ಳಿಯೊಂದರಲ್ಲಿ ಗಿರಕಿ ಹೊಡೆದರೆ, ಇನ್ನರ್ಧ ಹೊಸೂರಿಗೆ ಹೊರಳುತ್ತದೆ. ಆರಂಭದಲ್ಲಿ ಲವ್ ಇನ್ ಮಂಡ್ಯ ಆದರೆ ಕೊನೆಕೊನೆಗೆ ಲವ್ ಇನ್ ಹೊಸೂರು ಆಗುತ್ತದೆ.

  ಚಿತ್ರದಲ್ಲಿ ನೈಜತೆಗೆ ಹೆಚ್ಚು ಒತ್ತು ನೀಡಲು ಸಾಕಷ್ಟು ಶ್ರಮಿಸಿದ್ದಾರೆ ನಿರ್ದೇಶಕ ಅರಸು. ಹಾಗಾಗಿ ಹೊಸೂರಿನ ಸನ್ನಿವೇಶಗಳಲ್ಲಿ ಹೆಚ್ಚಾಗಿ ತಮಿಳು ಭಾಷೆ ಇಣುಕುತ್ತದೆ. ಪ್ರೇಕ್ಷಕರಿಗೆ ಇದು ಕೊಂಚ ಇರುಸು ಮುರುಸು ಉಂಟು ಮಾಡಿದರೂ ಮಂಡ್ಯದ ಕನ್ನಡ ಭಾಷೆಗಿಂತಲೂ ಹೆಚ್ಚಾಗಿ ತಮಿಳೇ ಕಿವಿಗೆ ಬೀಳುವಂತಾಗಿದೆ.

  love-in-mandya2

  ಇದೊಂದು ಹದಿಹರೆಯದ ಮನಸುಗಳ ಪ್ರೇಮಕಥೆ. ಕೇಬಲ್ ಆಪರೇಟರ್ ಕರ್ಣನೇ (ನೀನಾಸಂ ಸತೀಶ್) ಚಿತ್ರದ ಹೀರೋ. ಮನೆಮನೆಗೆ ಕೇಬಲ್ ಕನೆಕ್ಷನ್ ಕೊಡುತ್ತಾ ಸುಸು ಯಾನೆ ಸುಷ್ಮಾ (ಸಿಂಧು ಲೋಕನಾಥ್) ಜೊತೆಗೆ ಲವ್ ಕನೆಕ್ಷನ್ ಆಗುತ್ತದೆ. ಕಡೆಗೆ ಇಬ್ಬರೂ ಗುಟ್ಟಾಗಿ ಮದುವೆಯಾಗಿ ಹೊಸೂರಿನಲ್ಲಿ ತಲೆಮರೆಸಿಕೊಳ್ಳುತ್ತಾರೆ.

  ಹೊಸೂರಿನಲ್ಲಿ ಒಂದಷ್ಟು ತಿರುವುಗಳನ್ನು ಪಡೆದುಕೊಳ್ಳುವ ಕಥೆ ಕಡೆಗೆ ಸುಖಾಂತ್ಯವಾಗುತ್ತದೆ. ಇದಿಷ್ಟು ಸರಳ ಕಥೆಯನ್ನು ಇಟ್ಟುಕೊಂಡು ಅರಸು ಅವರು ಸುಮಾರು ಎರಡು ಗಂಟೆಗಳ ಕಾಲ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನಾತ್ಮಕ ಸರಕನ್ನೇ ನೀಡಿದ್ದಾರೆ.

  ಚಿತ್ರದಲ್ಲಿ ಅಬ್ಬರದ ಫೈಟ್ಸ್ ಆಗಲಿ, ನಾಯಕ ನಟನ ವಿಜೃಂಭಣೆಯಾಗಲಿ ಇಲ್ಲದಂತೆ ಆದಷ್ಟು ನೈಜವಾಗಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ಅರಸು ಅಂತಾರೆ. ಚಿತ್ರದ ಪ್ರಮುಖ ಆಕರ್ಷಣೆಯಾಗಿ ಹಾಡುಗಳು ನಿಲ್ಲುತ್ತವೆ. ಅದರಲ್ಲೂ ಕರೆಂಟು ಹೋದ ಟೈಮಲಿ, ಒಪ್ಕೊಂಡ್ ಬುಟ್ಲು ಕಣ್ಲಾ ಹಾಗೂ ಊರು ಕೇರಿ ಬುಟ್ಟು ಹಾಡುಗಳ ಮೇಕಿಂಗ್ ಚೆನ್ನಾಗಿದೆ.

  love-in-mandya3

  ಕರೆಂಟು ಹೋದ ಹಾಡಿನಲ್ಲಂತೂ ಸಿಂಧು ಲೋಕನಾಥ ಅವರು ಮೈಚಳಿ ಬಿಟ್ಟು ಕುಣಿದಿದ್ದಾರೆ. ಮಂಡ್ಯದ ಹುಡುಗಿ ಪಾತ್ರಕ್ಕೆ ಅವರು ಹೇಳಿ ಮಾಡಿಸಿದಂತೆ ಅಭಿನಯಿಸಿದ್ದಾರೆ. ಇನ್ನು ಕರ್ಣನಾಗಿ ಸತೀಶ್ ಸಹ ಅಷ್ಟೇ ನೈಜ ಅಭಿನಯ ನೀಡಿದ್ದಾರೆ.

  Rating:
  3.5/5
  Star Cast: ಸತೀಶ್ ನೀನಾಸಂ, ಸಿಂಧು ಲೋಕನಾಥ್
  Director: ಅರಸು ಅಂತಾರೆ

  ಸುಜ್ಞಾನ್ ಅವರ ಛಾಯಾಗ್ರಹಣ ಕಣ್ಣಿಗೆ ತಂಪೆರೆದರೆ, ಅನೂಪ್ ಸೀಳಿನ್ ಅವರ ಸಂಗೀತ ಕಿವಿಗಳನ್ನು ತಣಿಸುತ್ತದೆ. ಚಿತ್ರದ ಸಂಭಾಷಣೆ ತಕ್ಕಮಟ್ಟಿಗೆ ಓಕೆ ಎನ್ನಬಹುದು. ಒಟ್ಟಾರೆಯಾಗಿ ಈ ಸೀದಾಸಾದಾ ಲವ್ ಸ್ಟೋರಿಯನ್ನು ಪ್ರೇಕ್ಷಕರು ಅಪ್ಕೊಂಡ್ ಬುಟ್ರು ಕಣ್ಲಾ.

  love-in-mandya4

  English summary
  Kannada movie love in mandya review. Love In Mandya is the story of a simple boy from a small village in Mandya, who falls in love with a girl. But like every love story, there are twists and turns in the plot with some hilarious events.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X