For Quick Alerts
  ALLOW NOTIFICATIONS  
  For Daily Alerts

  ವಿಮರ್ಶಕರಿಗೆ 'ಲವ್ ಯು ಆಲಿಯ' ಇಷ್ಟವಾಯ್ತಾ?

  By Harshitha
  |

  ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿರುವ ಸ್ಟೈಲಿಶ್ ಸಿನಿಮಾ 'ಲವ್ ಯು ಆಲಿಯ' ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಪ್ರತಿ ಫ್ರೇಮ್ ಕೂಡ ರಿಚ್ ಆಗಿ ಕಾಣುವ 'ಲವ್ ಯು ಆಲಿಯ' ಸಿನಿಮಾ ಪ್ರೇಕ್ಷಕ ಮಹಾಪ್ರಭು ಕಣ್ಣಿಗಂತು ಹಬ್ಬ,

  ಪಡ್ಡೆಗಳ ಎದೆ ಬಡಿತ ಏರಿಸುವುದಕ್ಕೆ ಸನ್ನಿ ಲಿಯೋನ್ ಹಾಡು ಚಿತ್ರದಲ್ಲಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ತ್ರೀ ರೋಗ ತಜ್ಞರಾಗಿ ಕಾಣಿಸಿಕೊಂಡಿರುವುದು ಈ ಚಿತ್ರದಲ್ಲೇ. ಬಹುಭಾಷಾ ನಟಿ ಭೂಮಿಕಾ ಚಾವ್ಲಾ, ಸುಧಾರಾಣಿ, ಶಕೀಲಾ, ಸಾಧು ಕೋಕಿಲ ಸೇರಿದಂತೆ ಸ್ಟಾರ್ ಕಲಾವಿದರೇ ಚಿತ್ರದಲ್ಲಿದ್ದಾರೆ.

  ಇಷ್ಟೆಲ್ಲಾ ಇರುವ 'ಲವ್ ಯು ಆಲಿಯ' ಚಿತ್ರದ ಬಗ್ಗೆ ವಿಮರ್ಶಕರು ಏನಂತಾರೆ? ಇಂದ್ರಜಿತ್ ಲಂಕೇಶ್ ರವರ ಹೊಸ ಚಿತ್ರ ವಿಮರ್ಶಕರಿಗೆ ಇಷ್ಟವಾಯ್ತಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು 'ಲವ್ ಯು ಆಲಿಯ' ಚಿತ್ರದ ಬಗ್ಗೆ ಪ್ರಕಟಿಸಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ...

  ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ - ಪ್ರಜಾವಾಣಿ

  ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ - ಪ್ರಜಾವಾಣಿ

  ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಸಿನಿಮಾಗಳು ಅಲಂಕಾರ ಮಾಡಿಕೊಂಡ ಹೆಣ್ಣಿನ ತರಹ. ಅಡಿಯಿಂದ ಮುಡಿಯವರೆಗೂ ಫಳಫಳ ಹೊಳೆಯುತ್ತಿರುತ್ತವೆ. ಪ್ರತಿ ದೃಶ್ಯಗಳಲ್ಲೂ ಬಣ್ಣಗಳ ಘಮಘಮ. ‘ಲವ್‌ ಯು ಆಲಿಯಾ' ಕೂಡ ಈ ಶೈಲಿಯಿಂದ ಹೊರತಾಗಿಲ್ಲ. ಇಲ್ಲಿ ಎಲ್ಲವೂ ಶ್ರೀಮಂತ; ಕಥೆ ಒಂದನ್ನು ಬಿಟ್ಟು! ‘ಸಮುದ್ರದ ನಂಟಸ್ತನ, ಉಪ್ಪಿಗೆ ಬಡತನ' ಎಂಬ ಗಾದೆ ಇದಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ! ವಿಚ್ಛೇದಿತ ತಂದೆತಾಯಿಯನ್ನು ನೋಡಿ ತನಗೂ ಮದುವೆ ಬೇಡ ಎನ್ನುತ್ತಾಳೆ ಹುಡುಗಿ. ಮದುವೆ ವ್ಯವಸ್ಥೆಯಲ್ಲಿ ಅವಳಿಗೆ ನಂಬಿಕೆ ಹೋಗಿದೆ. ಮದುವೆಯಲ್ಲಿ ನಂಬಿಕೆ ಬರಲು ಅವಳ ತಂದೆತಾಯಿಯನ್ನು ಒಂದಾಗಿಸುವ ಕೆಲಸವನ್ನು ಹುಡುಗ ಶುರುಮಾಡುತ್ತಾನೆ. ಆ ಪ್ರಯತ್ನದಲ್ಲಿ ನಡೆವ ಘಟನಾವಳಿಗಳೇ ಸಿನಿಮಾ ಆಗಿದೆ. - ಸಂದೀಪ ನಾಯಕ

  ಲವ್ ಯು ಆಲಿಯ: ಪ್ರೀತಿಯಲ್ಲಿ ಕ್ಷಮೆ ಇರಲಿ.. - ವಿಜಯ ಕರ್ನಾಟಕ

  ಲವ್ ಯು ಆಲಿಯ: ಪ್ರೀತಿಯಲ್ಲಿ ಕ್ಷಮೆ ಇರಲಿ.. - ವಿಜಯ ಕರ್ನಾಟಕ

  ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಲವ್ ಯೂ ಆಲಿಯಾ' ಚಿತ್ರ ಹಲವು ಕಾರಣಗಳಿಂದಾಗಿ ಇಷ್ಟವಾಗುತ್ತದೆ. ಅಪರೂಪದ ಸಿನಿ ತಾರೆಯರು ಚಿತ್ರದಲ್ಲಿದ್ದಾರೆ. ಚಿತ್ರಕತೆಯಲ್ಲಿ ಹಲವು ತಿರುವುಗಳಿವೆ. ಇಡೀ ಸಿನಿಮಾ ಕಲರ್‌ಫುಲ್ ಆಗಿ ಮೂಡಿ ಬಂದಿದೆ. ಅಲ್ಲದೇ ಪ್ರತಿ ದೃಶ್ಯವನ್ನೂ ಶ್ರೀಮಂತವಾಗಿ ತೋರಿಸಿದ್ದಾರೆ ನಿರ್ದೇಶಕರು. ಹೀಗಾಗಿ ಆಲಿಯಾಳನ್ನು ಶ್ರೀಮಂತ ಮನೆತನದ ಸುಂದರಿ ಹುಡುಗಿಗೆ ಹೋಲಿಸಬಹುದು. - ಶರಣು ಹುಲ್ಲೂರು

  ಮದ್ದೂರು ವಡೆಯಲ್ಲ ಕೆಟ್ಟ ನಿಪ್ಪಟ್ಟು - ಕನ್ನಡ ಪ್ರಭ

  ಮದ್ದೂರು ವಡೆಯಲ್ಲ ಕೆಟ್ಟ ನಿಪ್ಪಟ್ಟು - ಕನ್ನಡ ಪ್ರಭ

  ಹಲವಾರು ವರ್ಷಗಳ ನಂತರ ಚಲನಚಿತ್ರ ನಿರ್ದೇಶನಕ್ಕೆ ಹಿಂದಿರುಗಿರುವ ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನ ಛಾತಿಯಲ್ಲಿ ಯಾವುದೇ ಬದಲಾವಣೆ ಅಥವಾ ಬೆಳವಣಿಗೆ ನಿರೀಕ್ಷಿಸಿದ್ದರೆ ನಿರಾಸೆ ಕಟ್ಟಿಟ್ಟ ಬುತ್ತಿ. ತಮ್ಮ ಎಂದಿನ ಶೈಲಿಯ ಕೊಳಕು ಹಾಸ್ಯ, ಎಕ್ಸಾಟಿಕ್ ಪ್ರದೇಶಗಳಲ್ಲಿ ಚಿತ್ರೀಕರಣ, ಅತಿ ಸಾಧಾರಣ ಚಿತ್ರಕಥೆ ಮತ್ತು ನಿರೂಪಣಾ ಶೈಲಿಯನ್ನು ಮುಂದುವರೆಸಿರುವ ನಿರ್ದೇಶಕನಿಗೆ ಈ ಬಾರಿ ಕೈಕೊಟ್ಟಿರುವುದು ಹಿತವಲ್ಲದ ಸಂಗೀತ. ಎಂದಿನಂತೆ ಅತಿ ದೊಡ್ಡ ಸಿರಿವಂತ ಕುಟುಂಬಗಳ ಪಾತ್ರಗಳನ್ನು ಸೃಷ್ಟಿಸಿರುವ ಲಂಕೇಶ್, ಬಹುತೇಕ ಎಲ್ಲರ ಬಾಯಲ್ಲೂ ಬೋಧನೆಯ ಮಳೆಗರೆದಿದ್ದಾರೆ. ಎಲ್ಲರೂ ಪ್ರೀಚ್ ಮಾಡುವವರೇ ಇಲ್ಲಿ. ಮೊದಲಾರ್ಧ ನಟ ರವಿಶಂಕರ್ ಸುತ್ತ ಹೆಣೆದಿರುವ ಹಾಸ್ಯ ಸನ್ನಿವೇಶ ಕೆಟ್ಟ ಕಾಮಿಡಿ ಸೀರಿಯಲ್ ನಂತೆ ಪ್ರೇಕ್ಷಕನನ್ನು ಇರಿಯುತ್ತದೆ. ರವಿಶಂಕರ್ ತಮ್ಮ ಕೆಟ್ಟ ನಟನೆಯ ಕಹಳೆಯನ್ನು ಮತ್ತೆ ಮೊಳಗಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಈ ಕೆಟ್ಟ ಹಾಸ್ಯದ ಖೋ ಸಾಧುಕೋಕಿಲರಿಗೆ ಬಂದು ಕಿರಿಕಿರಿ ಇಮ್ಮಡಿಯಾಗುತ್ತದೆ. - ಗುರುಪ್ರಸಾದ್ ನಾರಾಯಣ

  Luv U Alia is About Relationship Lessons - The New Indian Express

  Luv U Alia is About Relationship Lessons - The New Indian Express

  Often, with abundance comes indiscipline. An excess of anything can dent a film, a filmmaker's reputation and even an actor's credibility. But if one is in complete control, then all is good. Luv U Alia evidences that director Indrajit Lankesh knew his story, the direction that it had to take and before beginning his film with an ensemble cast of some of the biggest names in Sandalwood, he packed in dollops of discipline. And the result is out for all to see. A contemporary family drama, Luv U Alia does not come across as a mishmash of characters, but has a streamlined narration that takes you through the nuances of love, marriage and divorce. - A Sharadhaa

  Movie Review: Luv U Alia

  Movie Review: Luv U Alia

  Director Indrajit Lankesh wants to live up to his name as the 'stylish director.' If he were ever to make a film on the civic problems of Bengaluru, there is no doubt that even slums will look lavish. And when you give him good-looking stars, you can only expect glamour and lavishness to ooze out of every frame. That is Luv U Alia for you. Though Ravichandran and Bhoomika are the central characters to the plot, the film is more about the romantic track between Chandan and Sangeetha. The director makes sure that he brings big names for even small roles. So you have Sudeep, Sudharani, Nikesha Patel, Shakeela and Sunny Leone dropping in. - Shyam Prasad S

  English summary
  Indrajit Lankesh directorial Kannada Movie 'Luv U Alia' has received mixed response from the critics. Here is the collection of reviews from Karnataka's leading News Papers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X