ಟ್ವಿಟ್ಟರ್ ವಿಮರ್ಶೆ: 'ನಟರಾಜ ಸರ್ವೀಸ್' ಮನರಂಜನೆಗೆ ಮೋಸ ಇಲ್ಲ.!

By Harshitha

ಕಾಮಿಡಿ ಕಿಲಾಡಿ ಶರಣ್ ಮತ್ತು ಮಯೂರಿ ಅಭಿನಯದ, ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವೀಸ್' ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಜನ ಸಾಮಾನ್ಯರಿಗೆ 'ಚಿಲ್ಲರೆ' ಸಮಸ್ಯೆ ಎದುರಾಗಿದ್ದರೂ, 'ನಟರಾಜ ಸರ್ವೀಸ್' ಚಿತ್ರಕ್ಕೆ ಭರ್ಜರಿ ಓಪನ್ನಿಂಗ್ ಸಿಕ್ಕಿದೆ ಅಂದ್ರೆ ನೀವು ನಂಬಲೇಬೇಕು.

ಶರಣ್ ಕಾಮಿಡಿ ಕಮಾಲ್ ಗೆ ಸಿನಿ ಪ್ರಿಯರು ಅಕ್ಷರಶಃ ಕ್ಲೀನ್ ಬೌಲ್ಡ್ ಆಗಿದ್ದಾರೆ. ಪವನ್ ಒಡೆಯರ್ ರವರ ನಿರೂಪಣೆ ಶೈಲಿ ಬೊಂಬಾಟ್ ಅಂತಿದ್ದಾರೆ ಪ್ರೇಕ್ಷಕರು.

'ನಟರಾಜ ಸರ್ವೀಸ್' ಚಿತ್ರವನ್ನ ಮೊದಲ ದಿನ ಮೊದಲ ಶೋ ಕಣ್ತುಂಬಿಕೊಂಡಿರುವ ಸಿನಿ ಪ್ರಿಯರು ಟ್ವಿಟ್ಟರ್ ನಲ್ಲಿ ನೀಡಿರುವ ವಿಮರ್ಶೆಗಳತ್ತ ಒಮ್ಮೆ ಕಣ್ಣಾಡಿಸೋಣ ಬನ್ನಿ.....

ಶರಣ್ ಇದ್ದಾರೆ ಅಂದ್ರೆ ಮಜಾ

ಶರಣ್ ಇದ್ದಾರೆ ಅಂದ್ರೆ ಮಜಾ

'ಶರಣ್ ಮ್ಯಾನರಿಸಂ ನೋಡುವುದೇ ಮಜಾ' - ಪ್ರಿಯಾಂಕಾ

ಕಾಮಿಡಿ ಟೈಮಿಂಗ್ ಸೂಪರ್

ಕಾಮಿಡಿ ಟೈಮಿಂಗ್ ಸೂಪರ್

''ನಟರಾಜ ಸರ್ವೀಸ್' ಚಿತ್ರದ ಮೊದಲಾರ್ಧ ಮನರಂಜನೆ ತುಂಬಿದೆ. ಶರಣ್ ರವರ ಕಾಮಿಡಿ ಟೈಮಿಂಗ್ ಸೂಪರ್'' - ನಮ್ ಸಿನಿಮಾ.ಕಾಮ್

ನಿರೀಕ್ಷೆ ಹುಸಿ ಮಾಡಿಲ್ಲ

ನಿರೀಕ್ಷೆ ಹುಸಿ ಮಾಡಿಲ್ಲ

''ಬಿಡುಗಡೆಗೂ ಮುನ್ನ 'ನಟರಾಜ ಸರ್ವೀಸ್' ಮೂಡಿಸಿದ್ದ ನಿರೀಕ್ಷೆ ಹುಸಿ ಮಾಡಿಲ್ಲ. ಶರಣ್ ರವರ ಆಕ್ಟಿಂಗ್ ಮತ್ತು ಕಾಮಿಡಿ ಟೈಮಿಂಗ್ ಬಗ್ಗೆ ಕೆಮ್ಮಂಗಿಲ್ಲ. ಪವನ್ ಒಡೆಯರ್ ರವರ ನಿರೂಪಣಾ ಶೈಲಿ ಚೆನ್ನಾಗಿದೆ. ಫ್ಯಾಮಿಲಿ ಎಂಟರ್ ಟೈನರ್'' - ಮಯೂರ್ ಸ್ಟುಡಿಯೋಸ್

ಲತ್ತೆ ರಾಣಿ.!

ಲತ್ತೆ ರಾಣಿ.!

''ನಟರಾಜ ಸರ್ವೀಸ್' ಹೆಸರಿನ ಬದಲು ಲತ್ತೆ ರಾಣಿ ಅಂತ ಟೈಟಲ್ ಇಡಬೇಕಿತ್ತು. ಹೀರೋಯಿನ್ ಗೆ ಒಳ್ಳೆ ಸ್ಕೋಪ್ ಇದೆ'' - ಸಾಗರ್ ಮೈಸೂರು.

ಫಸ್ಟ್ ಹಾಫ್ ಸೂಪರ್

ಫಸ್ಟ್ ಹಾಫ್ ಸೂಪರ್

''ನಟರಾಜ ಸರ್ವೀಸ್' ಚಿತ್ರದ ಮೊದಲಾರ್ಧ ಸೂಪರ್'' - ಪ್ರಿನ್ಸ್

More from Filmibeat

English summary
Kannada Actor Sharan starrer 'Nataraja Service' has hit the screens today (November 17th). 'Nataraja Service' is receiving positive response in Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X