twitter
    For Quick Alerts
    ALLOW NOTIFICATIONS  
    For Daily Alerts

    ಸಮೀರನ ಮುಗ್ಧತೆ ಕಂಡು ಮಗುವಾದರು ವಿಮರ್ಶಕರು

    By Naveen
    |

    ''ಈ ಸಿನಿಮಾ ಮುಗ್ಧತೆ ಇರುವವರಿಗೆ ಇಷ್ಟ ಆಗುತ್ತದೆ, ಅಥವಾ ಈ ಸಿನಿಮಾ ನೋಡಿದವರು ಮುಗ್ಧರಾಗುತ್ತಾರೆ.'' ಇದು 'ಒಂದಲ್ಲಾ ಎರಡಲ್ಲಾ' ಸಿನಿಮಾ ಬಿಡುಗಡೆಗೆ ಮೊದಲು ನಿರ್ದೇಶಕ ಡಿ ಸತ್ಯ ಪ್ರಕಾಶ್ ಹೇಳಿದ ಮಾತು. ಅದೇ ರೀತಿ ಈಗ ಈ ಮಾತು ನಿಜವಾಗಿದೆ.

    ಬಹಳ ನಿರೀಕ್ಷೆ ಹುಟ್ಟಿಸಿದ್ದ 'ಒಂದಲ್ಲಾ ಎರಡಲ್ಲಾ' ಸಿನಿಮಾ ನಿನ್ನೆ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರೇಕ್ಷಕರು ಅಪ್ಪಿಕೊಂಡಿದ್ದಾರೆ. ಇದೊಂದು ಒಳ್ಳೆಯ ಸಿನಿಮಾ. ಎಲ್ಲರೂ ನೋಡಲೇ ಬೇಕಾದ ಸಿನಿಮಾ ಎಂದಿದ್ದಾರೆ. ಅದೇ ರೀತಿ ವಿಮರ್ಶಕರ ಮುಂದೆ ಕೂಡ ಸಮೀರ ಪಾಸ್ ಆಗಿದ್ದಾರೆ. ಸಿನಿಮಾ ನೋಡಿದ ವಿಮರ್ಶಕರು ಸಮೀರನ ಮುಗ್ಧತೆ ಕಂಡು ಮಗುವಾಗಿ ಬಿಟ್ಟಿದ್ದಾರೆ.

    ವಿಮರ್ಶೆ: 'ಒಂದಲ್ಲಾ ಎರಡಲ್ಲಾ' ಎಷ್ಟು ಬಾರಿ ಬೇಕಾದರೂ ನೋಡಬಹುದಾದ ಚಿತ್ರ.!ವಿಮರ್ಶೆ: 'ಒಂದಲ್ಲಾ ಎರಡಲ್ಲಾ' ಎಷ್ಟು ಬಾರಿ ಬೇಕಾದರೂ ನೋಡಬಹುದಾದ ಚಿತ್ರ.!

    ಅಂದಹಾಗೆ ಕನ್ನಡ ದಿನ ಪತ್ರಿಕೆಗಳಲ್ಲಿ ಬಂದ 'ಒಂದಲ್ಲಾ ಎರಡಲ್ಲಾ' ಸಿನಿಮಾದ ವಿಮರ್ಶೆ ಮುಂದಿದೆ ಓದಿ...

    ಸಮೀರನೆಂಬ ಮುಗ್ಧತೆಯ ಮೋಡಿಗಾರ - ವಿಜಯವಾಣಿ

    ಸಮೀರನೆಂಬ ಮುಗ್ಧತೆಯ ಮೋಡಿಗಾರ - ವಿಜಯವಾಣಿ

    'ರಾಮಾ ರಾಮಾ ರೇ'ಯಂಥ ವಿಭಿನ್ನ ಸಿನಿಮಾ ನೀಡಿದ ಮೇಲೆ ನಿರ್ದೇಶಕ ಡಿ. ಸತ್ಯಪ್ರಕಾಶ್ ಮುಂದೆ ಎಂತಹ ಸಿನಿಮಾ ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವಾಗಿ ‘ಒಂದಲ್ಲಾ ಎರಡಲ್ಲಾ' ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಸಾಮಾನ್ಯವಾಗಿ ಗೆಲುವಿನ ಸೂತ್ರ ಕಂಡುಕೊಂಡ ನಿರ್ದೇಶಕ, ಪುನಃ ಅದೇ ಸೂತ್ರಕ್ಕೆ ಕಟ್ಟುಬೀಳುವುದು ವಾಡಿಕೆ. ಸತ್ಯ ಅಂಥದ್ದೆನ್ನೆಲ್ಲ ಮೀರಿ ‘ಒಂದಲ್ಲಾ ಎರಡಲ್ಲಾ'ವನ್ನು ತೆರೆಗೆ ತಂದಿದ್ದಾರೆ. ಆಧುನಿಕ ಕಾಲದ ಪುಣ್ಯಕೋಟಿ ಕಥೆಯಂತೆ ಈ ಸಿನಿಮಾ ಮಾಡಿದ್ದಾರೆ. ಇಡೀ ಸಿನಿಮಾವನ್ನು ಪ್ರೇಕ್ಷಕನಿಗೆ ಆಪ್ತವಾಗೋಕೆ ಒಂದಲ್ಲಾ ಎರಡಲ್ಲಾ.. ಸಾಕಷ್ಟು ಅಂಶಗಳಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಚರ್ಚೆಯಲ್ಲಿರುವ ವಿಷಯಗಳನ್ನು ನಿರ್ದೇಶಕರು ಸವರಿಕೊಂಡು ಹೋಗುತ್ತಾರೆ. ಮುಗ್ಧತೆಯ ವಿರಾಟ್ ದರ್ಶನ ಮಾಡಿಸುತ್ತಾರೆ.'' - ಅವಿನಾಶ್ ಜಿ ರಾಮ್

    ಮುಗ್ಧತೆಯೇ ಮೈವೆತ್ತ ಸಿನಿಮಾ ಒಂದಲ್ಲಾ ಎರಡಲ್ಲಾ ಚಿತ್ರ ವಿಮರ್ಶೆ - ವಿಜಯ ಕರ್ನಾಟಕ

    ಮುಗ್ಧತೆಯೇ ಮೈವೆತ್ತ ಸಿನಿಮಾ ಒಂದಲ್ಲಾ ಎರಡಲ್ಲಾ ಚಿತ್ರ ವಿಮರ್ಶೆ - ವಿಜಯ ಕರ್ನಾಟಕ

    ''ನಿರ್ದೇಶಕ ಸತ್ಯಪ್ರಕಾಶ್ ಗೆ ಸಿನಿಮಾ ಚೌಕಟ್ಟಿನೊಳಗೆ ಬದುಕನ್ನು ತೋರಿಸುವುದು ಚೆನ್ನಾಗಿ ಸಿದ್ಧಿಸಿದೆ. ಈ ಬಾರಿ ಎಂಟು ವರ್ಷದ ಬಾಲಕನ ಬದುಕಿನ ಸೂಕ್ಷ್ಮಎಳೆಗಳನ್ನು ಬಿಚ್ಚಿಟ್ಟು ಮಾನವೀತೆಗೆ ತಮ್ಮದೇ ಆದ ಭಾಷ್ಯ ಬರೆದಿದ್ದಾರೆ. ಸಮೀರ (ರೋಹಿತ್)ನಿಗೆ ಭಾನು ಎಂಬ ಹಸುವನ್ನು ಕಂಡರೆ ಸಿಕ್ಕಾಪಟ್ಟೆ ಪ್ರೀತಿ. ಐಸ್‌ಪೈಸ್ ಆಡುವಾಗ ಭಾನು, ಸಮೀರನಿಂದ ತಪ್ಪಿಸಿಕೊಳ್ಳುತ್ತಾಳೆ. ಇದರಿಂದ ಸಮೀರನ ಇಡೀ ಕುಟುಂಬವೇ ಆತಂಕಗೊಳ್ಳುತ್ತದೆ. ಈ ತಾಕಲಾಟದಲ್ಲಿ ಸಮೀರ ತಾನೇ ಭಾನುವನ್ನು ಹುಡುಕಲು ಹೊರಟು ಕೊನೆಗೆ ತಾನೂ ತಪ್ಪಿಸಿಕೊಳ್ಳುತ್ತಾನೆ. ಇವನನ್ನು ಹುಡುಕಿಕೊಂಡು ಮನೆಯವರೂ ಹೊರಡುತ್ತಾರೆ. ಅಂತಿಮವಾಗಿ ಈ ಭಾನು, ಸಮೀರನಿಗೆ ಸಿಗುತ್ತಾಳಾ? ಮನೆಯವರಿಗೆ ಸಮೀರ ಸಿಗುತ್ತಾನಾ ಇಲ್ಲವಾ ಎಂಬುದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು. ಮುಸ್ಲಿಂ ಕುಟುಂಬದೊಂದಿಗೆ ಒಂದು ಹಸು ಭಾವನಾತ್ಮಕವಾಗಿ ಹೇಗೆ ಅಂಟಿಕೊಂಡಿರುತ್ತದೆ ಎಂಬ ಅಂಶವೇ ಈ ಸಿನಿಮಾದ ಪ್ರಾಣವಾಯು.'' - ಹರೀಶ್ ಬಸವರಾಜು

    ಒಳ್ಳೆ ಸಿನಿಮಾ ಮಾಡಿದ್ರು ಆಗ್ತಿದೆ ಅನ್ಯಾಯ : 'ಒಂದಲ್ಲಾ ಎರಡಲ್ಲಾ' 56 ಶೋಗಳು ರದ್ದು! ಒಳ್ಳೆ ಸಿನಿಮಾ ಮಾಡಿದ್ರು ಆಗ್ತಿದೆ ಅನ್ಯಾಯ : 'ಒಂದಲ್ಲಾ ಎರಡಲ್ಲಾ' 56 ಶೋಗಳು ರದ್ದು!

    ಪುಣ್ಯಕೋಟಿ ಕಥೆಯಲ್ಲಿ ಸೌಹಾರ್ದ ಸಂದೇಶ - ಉದಯವಾಣಿ

    ಪುಣ್ಯಕೋಟಿ ಕಥೆಯಲ್ಲಿ ಸೌಹಾರ್ದ ಸಂದೇಶ - ಉದಯವಾಣಿ

    ''ಈ ಕಥೆಯಲ್ಲಿ ಮೂರು ಅಂಶಗಳನ್ನು ಪ್ರಮುಖವಾಗಿ ಗುರುತಿಸಬಹುದು. ಹಿಂದು-ಮುಸ್ಲಿಂ ಕುಟುಂಬವೊಂದರ ನಡುವಿನ ಬಾಂಧವ್ಯ, ಮುಗ್ಧ ಬಾಲಕನಿಗೆ ಹೋದಲ್ಲೆಲ್ಲಾ ಸಹಾಯ ಮಾಡುವ ಮತ್ತು ಆತನ ಮುಗ್ಧತೆಗೆ ಕರಗುವ ಜನ, ಮಗನನ್ನು ಕಳೆದುಕೊಂಡಿರುವ ತಂದೆಯ ವೇದನೆ .... ಹೀಗೆ ಮೂರು ಪ್ರಮುಖ ಅಂಶಗಳನ್ನು ಬಿಚ್ಚಿಡುತ್ತಾ "ಒಂದಲ್ಲಾ ಎರಡಲ್ಲಾ' ಚಿತ್ರ ಸಾಗುತ್ತದೆ. ಇಲ್ಲಿ ನಿರ್ದೇಶಕರು ಯಾವುದೇ ಒಂದು ಜಾತಿ-ಧರ್ಮವನ್ನು ಮೊದಲಿಗೆ ವಿಜೃಂಭಿಸಿ, ಆ ನಂತರ ಅವರ ಬಾಂಧವ್ಯವನ್ನು ತೋರಿಸಿಲ್ಲ. ಇಲ್ಲಿ ನಿರ್ದೇಶಕರು ಪುಣ್ಯಕೋಟಿಯ ಕಥೆಯನ್ನು ಇವತ್ತಿನ ಕಾಲಕ್ಕೆ ಅನ್ವಯವಾಗುವಂತೆ ಹೇಳಿದ್ದಾರೆ. ಅಲ್ಲಿ ಸತ್ಯ ಗೆದ್ದರೆ, ಇಲ್ಲಿ ಮುಗ್ಧತೆ ಗೆಲ್ಲುತ್ತದೆ. ಇಲ್ಲೂ ನಿರ್ದೇಶಕರು ಹುಲಿ ಮತ್ತು ಹಸುವನ್ನು ಸಾಂಕೇತಿಕವಾಗಿ ಬಳಸಿಕೊಂಡಿದ್ದಾರೆ.'' - ರವಿಪ್ರಕಾಶ್ ರೈ

    ಹುಡುಕಾಟದಲ್ಲಿ ಸಿಕ್ಕಿದ್ದು ಕಾಣಿಯಾದವರಲ್ಲ! - ಕನ್ನಡ ಪ್ರಭ

    ಹುಡುಕಾಟದಲ್ಲಿ ಸಿಕ್ಕಿದ್ದು ಕಾಣಿಯಾದವರಲ್ಲ! - ಕನ್ನಡ ಪ್ರಭ

    ''ನನ್ನ ಭಾನು ಸಿಕ್ತಾಳಾ? ಮನ ಕಲಕುವಂತೆ ಚಿತ್ರದ ಉದ್ದಕ್ಕೂ ಕೇಳುವ ಈ ಪ್ರಶ್ನೆ ಬರೀ ಪ್ರಶ್ನೆಯಲ್ಲ ಹಸು ಮತ್ತು ಸಮೀರನ ನಡುವಿನ ಪ್ರೀತಿ ಭಾವನಾತ್ಮಕ ಸಂಬಂಧ, ಅದನ್ನು ಬಿಟ್ಟಿರಲಾಗದ ಆತನ ನೋವು, ಸಂಕಟ ಇನ್ನೂ ಸಿಗುವುದಿಲ್ಲವೇ ಎನ್ನುವ ಯಾತನೆ ಅದು. ಅದರ ಹಿಂದೆ ಪ್ರಾಣಿ ಮತ್ತು ಮನುಷ್ಯನ ಸಂಬಂಧದ ನೀತಿ ಕಥೆ ಇದೆ. ಆ ಕತೆ ವರ್ತಮಾನದ ಬದುಕಿನ ತಾಕಲಾಟ ಪರದಾಟ ಹೊಡೆದಾಟ ಒದ್ದಾಟ ಎಲ್ಲವನ್ನೂ ಧ್ವನಿಸುತ್ತದೆ. ಸ್ಟಾರ್ ಗಳೇ ಇಲ್ಲದ ಸಿನಿಮಾ ಇದು, ಇಲ್ಲಿ ಕತೆಯ ಸೂಪರ್ ಸ್ಟಾರ್. ಪ್ರೇಕ್ಷಕರು ಒಂದು ಕ್ಷಣವೂ ಕದಲದಂತೆ ನೋಡಿಕೊಳ್ಳುವ ಚೆಂದದ ಕಥೆ ಸಿನಿಮಾದಲ್ಲಿದೆ. ಮನಮುಟ್ಟುವ ಸಂಭಾಷಣೆ ಇದೆ. ಒಂದೊಂದು ದೃಶ್ಯವೂ ಅರ್ಥಪೂರ್ಣವಾಗಿದೆ ಎಷ್ಟು ಬೇಕೋ ಅಷ್ಟು ಕಾಮಿಡಿ ಇದೆ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಇದು'' - ದೇಶಾದ್ರಿ ಹೊಸ್ಮನೆ

    'ಒಂದಲ್ಲಾ ಎರಡಲ್ಲಾ' ಸಿನಿಮಾ ವಿಮರ್ಶೆ - ಟೈಮ್ಸ್ ಆಫ್ ಇಂಡಿಯ

    'ಒಂದಲ್ಲಾ ಎರಡಲ್ಲಾ' ಸಿನಿಮಾ ವಿಮರ್ಶೆ - ಟೈಮ್ಸ್ ಆಫ್ ಇಂಡಿಯ

    The story of Ondalla Eradalla is simple -- it explores the bond between a young boy Sameera and his pet cow Bhanu. They are partners in crime and do all fun things together. During one such hide-and-seek adventure, Bhanu goes missing and Sameera's world comes crumbling down. The rest of the film follows his journey towards finding Bhanu, where he meets interesting characters who make the viewers realise the futility of many societal practices.

    This film helps one realise how it is alright to have that innocence and gives hope. Watch it, enjoy and laugh with Sameera if you believe the child in you is still alive.

    English summary
    Read Kannada Movie 'Ondalla Eradalla' critics review. Ondalla Eradalla revolves around a little boy Sameera. This movie has a good message for society.
    Saturday, August 25, 2018, 13:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X