For Quick Alerts
  ALLOW NOTIFICATIONS  
  For Daily Alerts

  ಸರಳ ಸುಂದರ 'ಮೊಟ್ಟೆ' ಕಥೆ ನೋಡಿ ವಿಮರ್ಶಕರು ಏನಂದ್ರು ನೋಡಿ..

  By Suneel
  |

  ಮದುವೆ ವಯಸ್ಸಿಗೆ ಬಂದಿರುವ ಅದರಲ್ಲೂ ತಲೆ ಬೋಳಾಗಿರುವ ಹುಡುಗರ ಗೋಳಿನ ಕಥೆಯಾಧಾರಿತ ಸೂಪರ್ ಕಾಮಿಡಿ ಎಂಟರ್ ಟೈನರ್ ಸಿನಿಮಾ 'ಒಂದು ಮೊಟ್ಟೆಯ ಕಥೆ' ಚಿತ್ರ ತೆರೆಕಂಡಿದೆ. ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡುವ ಸಿನಿಮಾ ಎನಿಸಿಕೊಂಡ ಈ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

  ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

  ನಿರ್ದೇಶಕರಿಂದ ಹಿಡಿದು ಪಾತ್ರಧಾರಿಗಳು ಸಹ ಹೆಚ್ಚು ಹೊಸಬರೇ ಇರುವ 'ಒಂದು ಮೊಟ್ಟೆಯ ಕಥೆ' ಸರಳ ಮತ್ತು ಸುಂದರವಾಗಿ ಮೂಡಿಬಂದಿದ್ದು ಪ್ರೇಕ್ಷಕ ಮಹಾಪ್ರಭುಗಳಿಗೆ ತುಂಬಾ ಇಷ್ಟವಾಗಿದೆ. ಹಾಗೆಯೇ ಈ ಚಿತ್ರ ನಮ್ಮ ವಿಮರ್ಶಕರಿಗೂ ಇಷ್ಟವಾಗಿದ್ಯಾ? ಮೊಟ್ಟೆಯ ಕಥೆ ಬಗ್ಗೆ ಅವರ ಅಭಿಪ್ರಾಯವೇನು? ಅದಕ್ಕೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಒಂದು ಮೊಟ್ಟೆಯ ಕಥೆ' ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ..

  ಸಹಜ ಸರಳ 'ಮೊಟ್ಟೆ'ಯ ಕಥೆ: ಪ್ರಜಾವಾಣಿ

  ಸಹಜ ಸರಳ 'ಮೊಟ್ಟೆ'ಯ ಕಥೆ: ಪ್ರಜಾವಾಣಿ

  ಹೆಚ್ಚು ಹೊಸಬರೇ ಇರುವ ಕಾರಣ ಚಿತ್ರ ತಾಜಾ ಅನಿಸುತ್ತದೆ. ಸಿದ್ಧಸೂತ್ರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಬದುಕಿಗೆ ಬೇಕಿರುವ ಸಂದೇಶವೊಂದನ್ನು ನೀಡಲಾಗಿದೆ. ಸರಳ ಕಥೆಯನ್ನು ಸಹಜ ರೂಪದಲ್ಲಿ ತೀರಾ ಕಸರತ್ತುಗಗಳನ್ನು ಮಾಡದೆ ತೆರೆಗೆ ತರಲಾಗಿದೆ. ಇದರಿಂದ ಬೇರೆ ಬೇರೆ ರೀತಿ ಅರ್ಥೈಸಿಕೊಳ್ಳುವ ಅವಕಾಶಗಳೂ ಮುಕ್ತವಾಗಿವೆ. ಕೊನೆಗೆ ಸುಂದರಿಯನ್ನು ಹುಡುಕುವ ಜೊತೆಯಲ್ಲೇ ವ್ಯಕ್ತಿಯಲ್ಲಿರುವ ಅಂತರಂಗದ ಸೌಂದರ್ಯವನ್ನು ಗುರುತಿಸಿ ಎನ್ನುವ ಅಂಶ ಬಹಳ ಸೊಗಸಾಗಿದೆ. ಚಿತ್ರ ಮೌನದ ಮಹತ್ವವನ್ನು ಅರ್ಥ ಮಾಡಿಸಿದೆ. ನಗೆಯ ಜೊತೆಯಲ್ಲೇ ಈ ಸಿನಿಮಾದ ನೆಪದಲ್ಲಿ ಮಂಗಳೂರಿನ ಕನ್ನಡವನ್ನು ತುಸುಮಟ್ಟಿಗೆ ಸವಿಯಬಹುದು. 'ಇದು ಬೇಕಿತ್ತಾ' ಎನ್ನುವ ಸನ್ನಿವೇಶಗಳು ಇವೆ. ಮನೆಮಂದಿಯೆಲ್ಲ ಕುಳಿತು ನೋಡುವ ಚಿತ್ರ - ವಿಜಯ್ ಜೋಷಿ

  ತೆಳು ಹಾಸ್ಯದಿಂದ ಮನಸ್ಸಿನಲ್ಲಿ ಉಳಿಯುವ ಮೊಟ್ಟೆ: ವಿಜಯ ಕರ್ನಾಟಕ

  ತೆಳು ಹಾಸ್ಯದಿಂದ ಮನಸ್ಸಿನಲ್ಲಿ ಉಳಿಯುವ ಮೊಟ್ಟೆ: ವಿಜಯ ಕರ್ನಾಟಕ

  ಕನ್ನಡದಲ್ಲಿ ಟ್ರೆಂಡ್ ಸೆಟ್ ಮಾಡುವ ಸಿನಿಮಾ. ಜಗತ್ತಿನಲ್ಲಿ ಯಾರು ಪರಿಪೂರ್ಣರಲ್ಲ. ಎಲ್ಲರ ಜೀವನದಲ್ಲೂ ಅವರದ್ದೇ ಆದ ಸಮಸ್ಯೆಗಳು, ಆಸೆಗಳು ಇರುತ್ತವೆ. ಎಲ್ಲರ ಜೀವನ ಒಳಹೊಕ್ಕು ನೋಡಿದರೆ ಇದು ಅರ್ಥವಾಗುತ್ತದೆ ಎನ್ನುವುದು ಸಿನಿಮಾ ಸಾರಾಂಶ. ಪ್ರತಿ ದೃಶ್ಯದಲ್ಲೂ ಪ್ರೇಕ್ಷಕನನ್ನು ನಗಿಸುತ್ತಾ ಬೋಳು ತಲೆಯವರು ಅನುಭವಿಸುವ ಅವಮಾನ, ಕಷ್ಟ, ಮುಜುಗರವನ್ನು ತೆರೆಮೇಲೆ ಅಚ್ಚುಕಟ್ಟಾಗಿ ತರಲಾಗಿದೆ. ಸಂಭಾಷಣೆ, ಮಂಗಳೂರು ಭಾಷೆ, ಲೋಕೇಶನ್ ಚಿತ್ರಕ್ಕೆ ಪ್ಲಸ್ ಪಾಯಿಂಟ್. ರಾಜ್ ಬಿ.ಶೆಟ್ಟಿ ನಿರ್ದೇಶಕನಾಗಿ, ನಟನಾಗಿ ಎಲ್ಲ ವಿಭಾಗಗಳಲ್ಲಿಯೂ ಗೆದ್ದಿದ್ದಾರೆ. ಕ್ಯಾಮೆರಾ-ಸಂಕಲನ ಮಾಡಿರುವ ಪ್ರವೀಣ್ ಶ್ರೀಯಾನ್, ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಚಿತ್ರದ ಮತ್ತಿಬ್ಬರು ಹೀರೋಗಳು ಎನ್ನಬಹುದು. ಪ್ರತಿಯೊಬ್ಬರು ನೋಡಲೇಬೇಕಾದ ಸಿನಿಮಾ -ಹರೀಶ್ ಬಸವರಾಜ್

  ಸರಳ ಮೊಟ್ಟೆಯ ಸಖತ್ ರಂಜನೆ: ವಿಜಯವಾಣಿ

  ಸರಳ ಮೊಟ್ಟೆಯ ಸಖತ್ ರಂಜನೆ: ವಿಜಯವಾಣಿ

  ಶುರುವಿನಿಂದ ಕೊನೆಯವರೆಗೂ ಹಾಸ್ಯದ ಹಳಿ ಮೇಲೆ ಮೊಟ್ಟೆಯ ಕಥೆ ಸಾಗುತ್ತದೆ. ನಿರೂಪಣೆ ತುಂಬ ಸರಳ ಮತ್ತು ಸುಂದರವಾಗಿರುವುದು ಪ್ಲಸ್ ಪಾಯಿಂಟ್. ಎಲ್ಲರೂ ತಮ್ಮ ಪಾತ್ರಗಳಿಗೆ ಸ್ಟ್ರಾಂಗ್ ಆಗಿಯೇ ಜೀವ ತುಂಬಿದ್ದಾರೆ. ಪಾತ್ರಕ್ಕೆ ಹೇಳಿ ಮಾಡಿಸಿದಂತಿರುವ ರಾಜ್ ಬಿ.ಶೆಟ್ಟಿ ನಟನೆ ಮತ್ತು ನಿರ್ದೇಶನ ಎರಡರಲ್ಲೂ ಭರವಸೆ ಮೂಡಿಸುತ್ತಾರೆ. ಹುಡುಗಿಯ ಪ್ರೇಮಕ್ಕಾಗಿ ಪೇಚಾಡುವ ಪರಿ ಪ್ರೇಕ್ಷಕರಿಗೆ ಹೆಚ್ಚು ಕಚಗುಳಿ ಇಡುತ್ತದೆ. ರಾಜ್ ಸಿನಿಮಾ ಹಾಡುಗಳನ್ನು ಚಿತ್ರಕ್ಕೆ ಬಳಸಿರುವುದು ಚಿತ್ರಕಥೆಗೆ ಪೂರಕವಾಗಿದೆ. ನಿರ್ದೇಶಕರ ಆಶಯಕ್ಕೆ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಂಗೀತ ಚಿತ್ರಕ್ಕೆ ಒಂದು ಹೊಸ ಮೆರಗನ್ನು ನೀಡಿದೆ. ಹಾಡುಗಳು ನೋಡಲು ಕೇಳಲು ಎರಡಕ್ಕೂ ಇಷ್ಟವಾಗುತ್ತವೆ. ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿದೆ. ಸಂಕಲನ ಮತ್ತು ಛಾಯಾಗ್ರಹಣ ಅಂದವಾಗಿದೆ. - ಅವಿನಾಸ್ ಜಿ. ರಾಮ್

  Ondu Motteya Kathe Movie Review: The Times of India

  Ondu Motteya Kathe Movie Review: The Times of India

  There are very few times that one gets to laugh, cry and experience all the emotions as a tale unfolds onscreen. Debutant actor-filmmaker Raj B Shetty has achieved that in this bittersweet comedy that deals with the life of a bald man. The film is much like the realistic tales narrated by Iranian filmmakers and their ilk. The people are real and the settings aren't manicured. This film, instead, ensures one feels with the characters. The indie film has been shot beautiful are and has a terrific background score to supplement the tale.

  English summary
  Raj.B.Shetty starrer and directorial 'Ondu Motteya Kathe' has received positive response from Critics. 'Ondu Motteya Kathe' Movie Critics review is here..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X