»   » 'ರಾಜಕುಮಾರ' ನೋಡಿ 100% ಗುಣಗಾನ ಮಾಡಿದ ಪ್ರೇಕ್ಷಕರು

'ರಾಜಕುಮಾರ' ನೋಡಿ 100% ಗುಣಗಾನ ಮಾಡಿದ ಪ್ರೇಕ್ಷಕರು

Posted By:
Subscribe to Filmibeat Kannada

ರಿಲೀಸ್ ಗೂ ಮುಂಚೆನೇ ದಾಖಲೆಗಳನ್ನ ಉಡೀಸ್ ಮಾಡಿರುವ 'ರಾಜಕುಮಾರ' ಇಂದು (ಮಾರ್ಚ್ 24) ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಚಿತ್ರದ ಟ್ರೈಲರ್, ಟೀಸರ್, ಹಾಡುಗಳು, ಮೇಕಿಂಗ್ ಹೀಗೆ ಪ್ರತಿಯೊಂದು ಹಂತದಲ್ಲೂ ಕುತೂಹಲ, ನಿರೀಕ್ಷೆ ಹೆಚ್ಚಿಸಿಸುತ್ತಾ ಬಂದ 'ರಾಜಕುಮಾರ' ಕಥೆ ಏನೂ ಎಂಬುದು ಪರದೆ ಮೇಲೆ ಬಹಿರಂಗವಾಗಿದೆ.['ರಾಜಕುಮಾರ'ನಿಗೆ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ]

ಮಧ್ಯರಾತ್ರಿಯಿಂದಲೇ ಪ್ರದರ್ಶನ ಶುರು ಮಾಡಿರುವ 'ರಾಜಕುಮಾರ' ಚಿತ್ರವನ್ನ, ಈಗಾಗಲೇ ಫಸ್ಟ್ ಡೇ, ಫಸ್ಟ್ ಶೋನೇ ನೋಡಿ ಖುಷಿ ಪಟ್ಟಿದ್ದಾರೆ ಚಿತ್ರಪ್ರೇಮಿಗಳು. ಹಾಗಾದ್ರೆ, ಮೊದಲ ದಿನ 'ರಾಜಕುಮಾರ'ನನ್ನ ನೋಡಿದ ಅಭಿಮಾನಿ ದೇವರುಗಳು ಏನಂದ್ರು? ಇಲ್ಲಿದೆ ನೋಡಿ ಟ್ವಿಟ್ಟರ್ ನಲ್ಲಿ ನೀಡಿರುವ ವಿಮರ್ಶೆಗಳು.

'ರಾಜಕುಮಾರ' ಸೂಪರ್!

'ರಾಜಕುಮಾರ' ಚಿತ್ರದ ಕಾಮಿಡಿ, ಕಥೆ ಮತ್ತು ಇಂಟರ್ ವಲ್ ದೃಶ್ಯದ ಬಗ್ಗೆ ಸಿನಿಮಾ ನೋಡಿದ ಅಭಿಮಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[ಕರ್ನಾಟಕದ ಗಡಿಯಾಚೆ 'ರಾಜಕುಮಾರ'ನ ರಾಜ್ಯಭಾರ]

ರಾಜಕುಮಾರ 'ಪರಿಪೂರ್ಣ ಸಿನಿಮಾ'

ಒಂದು ಚಿತ್ರದಲ್ಲಿರಬೇಕಾದ ಎಲ್ಲ ಅಂಶಗಳನ್ನ 'ರಾಜಕುಮಾರ' ಹೊಂದಿದೆಯಂತೆ. ಹೀಗಾಗಿ, ಪ್ರೇಕ್ಷಕರನ್ನ ಕೂಡ ಹಿಡಿದಿಡುತ್ತೆ.['ರಾಜಕುಮಾರ' vs 'ರಾಯುಡು': ಇದು ರಾಷ್ಟ್ರಮಟ್ಟದ ಸ್ಟಾರ್ ವಾರ್]

ಅಪ್ಪು ಡ್ಯಾನ್ಸ್ ನೋಡಲು ಖುಷಿ

ರಾಜಕುಮಾರ ಚಿತ್ರದಲ್ಲಿ ಅಪ್ಪು ಅವರ ಡ್ಯಾನ್ಸ್ ನೋಡಲು ಸಖತ್ ಖುಷಿಯಾಗುತ್ತೆ ಎಂದು ಸಿನಿಮಾ ನೋಡಿದ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

''ಅಪ್ಪು ಡ್ಯಾನ್ಸ್ ಗೆ ಸರಿಸಾಟಿ ಉಂಟೆ''

ರಾಜಕುಮಾರ ಚಿತ್ರದಲ್ಲಿ ಅಪ್ಪು ಅವರ ಡ್ಯಾನ್ಸ್ ಅಭಿಮಾನಿಗಳನ್ನ ಥ್ರಿಲ್ ಉಂಟು ಮಾಡಿದೆ ಎನ್ನುವುದಕ್ಕೆ ಈ ಟ್ವೀಟ್ ಸಾಕ್ಷಿ.

ಸಂತೋಷ್ ನಿರ್ದೇಶನ ಅದ್ಭುತ

ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನ ಹಾಗೂ ಚಿತ್ರಕಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಪ್ಪು ಆಕ್ಟಿಂಗ್ ಅಷ್ಟೇ ಅಮೋಘವಾಗಿದೆಯಂತೆ.['ರಾಜಕುಮಾರ' ಸಿನಿಮಾ ನೋಡೋರಿಗೆ ಶಿವಣ್ಣನಿಂದ ಬೊಂಬಾಟ್ ಸರ್ಪ್ರೈಸ್!]

ಇಂಡಸ್ಟ್ರಿಗೆ ಹಿಟ್ ನೀಡುತ್ತೆ

ತಡರಾತ್ರಿ 1.30 ಕ್ಕೆ ರಾಜಕುಮಾರ ಸಿನಿಮಾ ನೋಡಿದ ಹೊಸಪೇಟೆಯ ಅಭಿಮಾನಿಯೊಬ್ಬರು ರಾಜಕುಮಾರ ಸೂಪರ್ ಹಿಟ್ ಎಂದು ಟ್ವೀಟ್ ಮಾಡಿದ್ದಾರೆ.

English summary
Kannada Actor Puneeth Rajkumar Starrer Raajakumara Movie has hit the screens today (March 24th). 'Raajakumara' is receiving Good response in Twitter. The Movie Directed by Santhosh Anandram. here is the twitter review of 'Raajakumara'

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X